ಲೇಖಕರು: ಶ್ರೀಕಂಠಶಾಸ್ತ್ರಿ, ಜ್ಯೋತಿಷ್ಯರು
ಗ್ರಹಗಳ ಈ ವಕ್ರ ಸಂಚಾರಕ್ಕೆ ವಿಶೇಷ ಫಲಗಳನ್ನು ಶಾಸ್ತ್ರ ನಿರೂಪಿಸಿದೆ. ವಕ್ರಿಣಸ್ತು ಮಹಾವೀರ್ಯಾ: ಎಂಬ ಆಧಾರದಂಎತ ಒಂದು ಗ್ರಹ ವಕ್ರ ಕ್ರಮದಲ್ಲಿ ಸಂಚರಿಸುವಾಗ ಮಹಾಬಲವನ್ನು ಹೊಂದಿ ಕೆಲವು ರಾಶಿಗಳವರಿಗೆ ವಿಶೇಷ ಫಲವನ್ನು ತಂದುಕೊಡುವುದುಂಟು. ವಕ್ರಗತ: ಸ್ವೋಚ್ಛಫಲಂ ವಿದದ್ಯಾತ್ ಎಂಬ ಮತ್ತೊಂದು ಶಾಸ್ತ್ರಾಧಾರದಂತೆ ಒಂದು ಗ್ರಹ ಉಚ್ಛಸ್ಥಾನದಲ್ಲಿರುವಾಗ ಯಾವ ಫಲವನ್ನು ಕೊಡುತ್ತವೋ ಅಂಥ ಫಲವನ್ನೇ ವಕ್ರಗತಿಯಲ್ಲಿರುವಾಗಲೂ ಕೊಡುತ್ತವೆ. ಹೀಗಾಗಿ ಗ್ರಹಗಳ ವಕ್ರತ್ವ ಒಂದು ರೀತಿಯಲ್ಲಿ ಶುಭಫಲವನ್ನೇ ತಂರುತ್ತವೆ. ಅದರಲ್ಲಿ ಶನೈಶ್ಚರನೂ ಹೊರತಾಗಿಲ್ಲ. ಇಷ್ಟುದಿನ ಕೆಲವರಿಗೆ ಅಧಿಕಾರಬಲ, ಸ್ಥಾನ ಬದಲಾವಣೆ, ಆರೋಗ್ಯ ಸುಧಾರಣೆ, ಸಾಲ ನಿವಾರಣೆ, ವೃತ್ತಿ ಸುಧಾರಣೆ, ಮಾನಸಿಕ ನೋವುಗಳಿಗೆ ಮುಕ್ತಿಯೂ ಸೇರಿದಹಾಗೆ ಅನೇಕ ಶುಭಫಲವನ್ನು ತಂದಿದ್ದಾನೆ.