ಈ ದಿನ ಹಾಲು, ಹಣ್ಣು ತಿನ್ನಬೇಕು. ದಿನವಿಡೀ ಭಗವಂತನ ಧ್ಯಾನ ಮಾಡಿ, ಸಂಜೆ ಪೂಜೆ ಮುಗಿಸಿ ರಾತ್ರಿ ಜಾಗರಣೆ ಮಾಡ್ತಾರೆ. ಏನೂ ತಿನ್ನಬಾರದು, ಕುಡಿಯಬಾರದು ಅಂತ ಪಂಡಿತರು ಹೇಳ್ತಾರೆ. ವೈಕುಂಠ ಏಕಾದಶಿ ದಿನ ವಿಷ್ಣು ಸಹಸ್ರನಾಮ ಪಠಿಸಿದ್ರೆ ಅಥವಾ ಕೇಳಿದ್ರೆ ಪುಣ್ಯ ಸಿಗುತ್ತೆ ಅಂತಾರೆ. ಉಪವಾಸ ನಿಯಮಗಳ ಪ್ರಕಾರ ವೈಕುಂಠ ಏಕಾದಶಿ ದಿನ ಬ್ರಹ್ಮಚರ್ಯ ಪಾಲಿಸಬೇಕು. ಏಕಾದಶಿ ಹಿಂದಿನ ರಾತ್ರಿ ನೆಲದ ಮೇಲೆ ಮಲಗಬೇಕು. ಏಕಾದಶಿ ದಿನ ಯಾರನ್ನೂ ಬೈಯ್ಯಬಾರದು, ಒಳ್ಳೆ ಯೋಚನೆಗಳನ್ನ ಇಟ್ಟುಕೊಳ್ಳಬೇಕು ಅಂತ ಪಂಡಿತರು ಹೇಳ್ತಾರೆ.