Debt relief remedies: ಕೇವಲ 7 ನಾಣ್ಯಗಳು ಮತ್ತು 7 ಲವಂಗಗಳನ್ನು ಬಳಸಿ 21 ದಿನಗಳ ಕಾಲ ಮಾಡುವ ಈ ಸರಳ ಕ್ರಮದಿಂದ ಹೇಗೆ ಆರ್ಥಿಕ ಬದಲಾವಣೆ ಕಾಣಬಹುದು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಬಹಳ ಸರಳ ವಿಧಾನ ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಸಾಲದ ಸುಳಿಯಲ್ಲಿ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೀರಾ? ಹಾಗಿದ್ದರೆ ಈ ಆಧ್ಯಾತ್ಮಿಕ ಪರಿಹಾರ ನಿಮಗಾಗಿ. ಕೇವಲ ಕೆಲವು ವಸ್ತುಗಳನ್ನು ಬಳಸಿ ಮಾಡುವ ಈ ಸರಳ ವಿಧಾನವು ನಿಮ್ಮ ಆರ್ಥಿಕ ಸ್ಥಿತಿಯನ್ನು ಬದಲಿಸಬಹುದು ಎಂಬ ನಂಬಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
25
ಏನಿದು ವಿಶೇಷ ಪರಿಹಾರ?
ಏನಿದು ವಿಶೇಷ ಪರಿಹಾರ? ಈ ವಿಧಾನಕ್ಕೆ ಬೇಕಾಗಿರುವುದು ಕೇವಲ ಮೂರು ವಸ್ತುಗಳು..
7 ನಾಣ್ಯ: ಅದು ಒಂದು ರೂಪಾಯಿ, ಎರಡು ರೂಪಾಯಿ ಅಥವಾ ಹತ್ತು ರೂಪಾಯಿಯ ಯಾವುದೇ ನಾಣ್ಯಗಳಾಗಿರಬಹುದು.
7 ಲವಂಗ: ಇವು ಪೂರ್ಣವಾಗಿರಬೇಕು (ಮುರಿದಿರಬಾರದು).
ಸ್ವಲ್ಪ ಸಕ್ಕರೆ: ಸಿಹಿಯ ಸಂಕೇತವಾಗಿ ಸ್ವಲ್ಪ ಸಕ್ಕರೆಯನ್ನು ಬಳಸಬೇಕು.
35
ಮಾಡುವ ವಿಧಾನ ಮತ್ತು ಸಮಯ
ಮಾಡುವ ವಿಧಾನ ಮತ್ತು ಸಮಯ ಈ ವಿಶೇಷ ಪ್ರಕ್ರಿಯೆಯನ್ನು ಶುಕ್ರವಾರ ಸಂಜೆ ಅಂದರೆ ಗೋಧೂಳಿ ಮುಹೂರ್ತದಲ್ಲಿ (ಸಂಜೆ ಸುಮಾರು 5:30 ಗಂಟೆಗೆ) ಮಾಡಬೇಕು. ಒಂದು ಸಣ್ಣ ಬಟ್ಟಲು ಅಥವಾ ಬಟ್ಟೆಯಲ್ಲಿ ಈ ಏಳು ನಾಣ್ಯಗಳು, ಏಳು ಲವಂಗಗಳು ಮತ್ತು ಸಕ್ಕರೆಯನ್ನು ಹಾಕಿ ದೇವರ ಮುಂದೆ ಇಡಬೇಕು. ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗಲಿ ಎಂದು ಸಂಕಲ್ಪ ಮಾಡಿಕೊಳ್ಳಬೇಕು.
21 ದಿನಗಳ ಕಾಲ ಇರಿಸಿ ಹೀಗೆ ಸಿದ್ಧಪಡಿಸಿದ ಈ ವಸ್ತುಗಳನ್ನು ಸತತವಾಗಿ 21 ದಿನಗಳ ಕಾಲ ದೇವರ ಮನೆಯಲ್ಲಿಯೇ ಇರಿಸಬೇಕು. ಈ ರೀತಿ ಮಾಡುವುದರಿಂದ ಧನಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ ಮತ್ತು ಎಷ್ಟೇ ಸಾಲವಿದ್ದರೂ ಅದು ಕ್ರಮೇಣವಾಗಿ ಕಡಿಮೆ ಆಗುತ್ತಾ ಬರುತ್ತದೆ ಎಂಬುದು ಈ ಪರಿಹಾರದ ಹಿಂದಿನ ಆಶಯವಾಗಿದೆ.
55
ಇನ್‌ಸ್ಟಾಗ್ರಾಂ ಬಳಕೆದಾರರ ಅನುಭವ
ಇನ್‌ಸ್ಟಾಗ್ರಾಂ ಬಳಕೆದಾರರ ಅನುಭವ ವಿಶೇಷವೆಂದರೆ ಓರ್ವ ಇನ್‌ಸ್ಟಾಗ್ರಾಂ ಬಳಕೆದಾರರು ಈ ಕ್ರಮವನ್ನು ತಾವೇ ಸ್ವತಃ ಪಾಲಿಸಿದ್ದು, ಇದರಿಂದ ತಮಗೆ ಅದ್ಭುತವಾದ ಪ್ರಯೋಜನವಾಗಿದೆ ಎಂದು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅವರ ಈ ಅನುಭವದ ಮಾತುಗಳು ಈಗ ಅನೇಕರ ಗಮನ ಸೆಳೆದಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಈ ಪರಿಹಾರವನ್ನು ಪ್ರಯತ್ನಿಸಿ ನೋಡುತ್ತಿದ್ದಾರೆ. ನಂಬಿಕೆ ಮತ್ತು ಭಕ್ತಿಯಿಂದ ಮಾಡುವ ಇಂತಹ ಸಣ್ಣ ಪ್ರಯತ್ನಗಳು ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಲ್ಲವು ಎಂಬುದು ಅನೇಕರ ವಿಶ್ವಾಸ.
ಗಮನಿಸಿ: ಇದು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದ ವರದಿಯಾಗಿದೆ. ನಂಬಿಕೆ ಮತ್ತು ಶ್ರದ್ಧೆ ನಿಮ್ಮ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು.