2026ರ ಶ್ರೀ ಪರಾಭವನಾಮ ಯುಗಾದಿಯ ನಂತರ ಮೀನ ರಾಶಿಯವರಿಗೆ ಅತ್ಯಂತ ಅದೃಷ್ಟದ ಸಮಯ ಶುರುವಾಗಲಿದೆ. ನೀವು ಎದುರಿಸುತ್ತಿದ್ದ ಮಾನಸಿಕ ಚಿಂತೆ, ಆರ್ಥಿಕ ಸಂಕಷ್ಟಗಳು ದೂರವಾಗಿ, ಜೀವನದಲ್ಲಿ ಹೊಸ ಬೆಳಕು ಮೂಡಲಿದೆ.
ವೃತ್ತಿಜೀವನದಲ್ಲಿ ಅದ್ಭುತ ಬೆಳವಣಿಗೆ ಕಾಣುವಿರಿ. ಉದ್ಯೋಗಿಗಳಿಗೆ ಬಡ್ತಿ (Promotions) ಮತ್ತು ಸಂಬಳ ಹೆಚ್ಚಳ ಖಚಿತ. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಸಂಪೂರ್ಣ ಪ್ರಶಂಸೆ ಸಿಗಲಿದೆ. ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರದವರಿಗೆ ವಿದೇಶಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ.
26
ಹೊಸ ವ್ಯಾಪಾರ ಮಾಡುವವರಿಗೆ ಗುಡ್ ನ್ಯೂಸ್
ಹೊಸ ವ್ಯಾಪಾರ ಶುರು ಮಾಡಲು ಇದು ಸುವರ್ಣಾವಕಾಶ. ನಿಂತುಹೋಗಿದ್ದ ಪ್ರಾಜೆಕ್ಟ್‌ಗಳು ಮತ್ತೆ ವೇಗ ಪಡೆಯಲಿವೆ. ಪಾಲುದಾರಿಕೆ ವ್ಯವಹಾರಗಳು ಲಾಭ ತಂದುಕೊಡಲಿವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ.
36
ಕುಟುಂಬದಲ್ಲಿ ಶುಭಸುದ್ದಿ
ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ. ಅವಿವಾಹಿತರಿಗೆ ಈ ವರ್ಷ ಕಂಕಣ ಬಲ ಕೂಡಿಬರಲಿದೆ. ಆರೋಗ್ಯ ಸ್ಥಿರವಾಗಿರುತ್ತದೆ. ಹಳೆಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಆದರೆ, ಕೆಲಸದ ಒತ್ತಡದಿಂದ ಸ್ವಲ್ಪ ದೈಹಿಕ ಆಯಾಸ ಇರಬಹುದು. ಕಣ್ಣಿನ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ.
ಈ ವರ್ಷ ಆದಾಯ (12) ಮತ್ತು ವೆಚ್ಚ (12) ಸಮನಾಗಿರಲಿದೆ. ಆದಾಯ ಚೆನ್ನಾಗಿದ್ದರೂ, ಖರ್ಚುಗಳೂ ಅದೇ ಮಟ್ಟದಲ್ಲಿರುತ್ತವೆ. ಆದರೆ, ಈ ಖರ್ಚುಗಳು ಹೆಚ್ಚಾಗಿ ಆಸ್ತಿ ಖರೀದಿ ಅಥವಾ ಶುಭಕಾರ್ಯಗಳಿಗೆ ಆಗುತ್ತವೆ. ಶೇರು ಮಾರುಕಟ್ಟೆ ಮತ್ತು ರಿಯಲ್ ಎಸ್ಟೇಟ್‌ನಲ್ಲಿನ ಹೂಡಿಕೆಗಳು ದೀರ್ಘಾವಧಿಯಲ್ಲಿ ಲಾಭ ತರುತ್ತವೆ.
56
ಈ ಕೆಲಸಗಳನ್ನು ಮಾಡಿ
ಇನ್ನಷ್ಟು ಶುಭ ಫಲಿತಾಂಶಗಳಿಗಾಗಿ ಮೀನ ರಾಶಿಯವರು ಈ ಪರಿಹಾರಗಳನ್ನು ಪಾಲಿಸಬಹುದು. ನಿಮ್ಮ ರಾಶ್ಯಾಧಿಪತಿ ಗುರು ಆಗಿರುವುದರಿಂದ, ಪ್ರತಿ ಗುರುವಾರ ದತ್ತಾತ್ರೇಯ ಅಥವಾ ಸಾಯಿಬಾಬಾರ ದರ್ಶನ ಮಾಡುವುದು ಶ್ರೇಯಸ್ಕರ.
66
ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ
ಬಡ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುವುದು ಅಥವಾ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ. ಪ್ರತಿದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಎಲ್ಲಾ ಅಡೆತಡೆಗಳು ದೂರವಾಗಿ ಜಯ ಲಭಿಸುತ್ತದೆ.