ಸಂಖ್ಯಾಶಾಸ್ತ್ರದ ಪ್ರಕಾರ, ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ಅಸಾಧಾರಣ ಬುದ್ಧಿವಂತಿಕೆ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಗುರು, ಬುಧ, ಮತ್ತು ಶುಕ್ರನಂತಹ ಗ್ರಹಗಳ ಪ್ರಭಾವದಿಂದ, ಇವರು ತಮ್ಮ ಮಾತಿನ ಚಾತುರ್ಯದಿಂದ ಇತರರನ್ನು ಸುಲಭವಾಗಿ ಪ್ರಭಾವಿಸಿ, ನಂಬಿಕೆ ಗಳಿಸುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಇವರ ಮಾತುಗಳಲ್ಲಿ ಆಕರ್ಷಣೆ ಇರುತ್ತದೆ. ಯಾರೊಂದಿಗೆ ಹೇಗೆ ಮಾತನಾಡಬೇಕು? ಹೇಗೆ ತಮ್ಮತ್ತ ಸೆಳೆಯಬೇಕು ಎಂಬುದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇತರರ ನಂಬಿಕೆಯನ್ನು ಗಳಿಸುವುದರಲ್ಲಿ ಇವರು ಮುಂದಿರುತ್ತಾರೆ.
27
ಮಹಾ ಜಾಣರು
ವ್ಯಕ್ತಿಯ ವ್ಯಕ್ತಿತ್ವ, ಆಲೋಚನಾ ಶೈಲಿ ಹುಟ್ಟಿದ ದಿನಾಂಕದೊಂದಿಗೆ ಸಂಬಂಧ ಹೊಂದಿದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಕೆಲ ದಿನಾಂಕಗಳಲ್ಲಿ ಹುಟ್ಟಿದವರನ್ನು 'ಮಹಾ ಜಾಣರು' ಎಂದು ತಮಾಷೆಯಾಗಿ ಕರೆಯುತ್ತಾರೆ.
ಯಾಕಂದ್ರೆ ಇವರು ತಮ್ಮ ಮಾತು, ಆಕರ್ಷಣೆ, ಬುದ್ಧಿವಂತಿಕೆಯಿಂದ ಯಾರನ್ನಾದರೂ ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ತಾರೆ. ಎದುರಿಗಿರುವವರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಇವರಿಗೆ ಚೆನ್ನಾಗಿ ಗೊತ್ತು. ಯಾವ ಸಂದರ್ಭದಲ್ಲಿ ಯಾವ ಮಾತು ಮಾತನಾಡಿದರೆ ಪರಿಣಾಮ ಬೀರುತ್ತದೆ ಎಂದು ಇವರು ಚೆನ್ನಾಗಿ ಊಹಿಸುತ್ತಾರೆ.
37
3, 5, 6, 12, 14, 21, 23, 27
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 3, 5, 6, 12, 14, 21, 23, 27 ರಂದು ಜನಿಸಿದವರ ವ್ಯಕ್ತಿತ್ವ ವಿಶೇಷವಾಗಿರುತ್ತದೆ. ಕಠಿಣ ವಿಷಯವನ್ನು ಸಹ ಇವರು ಸುಲಭವಾಗಿ, ಮೃದುವಾಗಿ ಹೇಳುವ ಸಾಮರ್ಥ್ಯ ಹೊಂದಿರುತ್ತಾರೆ. ಇವರ ಮಾತಿನ ಆಕರ್ಷಣೆಯಿಂದಾಗಿ ಯಾರೇ ಆದರೂ ಇವರ ಪ್ರಭಾವಕ್ಕೆ ಒಳಗಾಗುತ್ತಾರೆ. ಅದರಲ್ಲೂ 3, 12, 21 ರಂದು ಜನಿಸಿದವರು ಗುರುಗ್ರಹದ ಪ್ರಭಾವ ಹೊಂದಿರುತ್ತಾರೆ. ಇವರ ಮಾತುಗಳಲ್ಲಿ ಜ್ಞಾನ, ಚಾತುರ್ಯ, ವಿಶ್ವಾಸ ಕಾಣಿಸುತ್ತದೆ. ಹಾಗಾಗಿಯೇ ಇವರು ಸುಲಭವಾಗಿ ಇತರರ ನಂಬಿಕೆ ಗಳಿಸುತ್ತಾರೆ.
5, 14, 23 ರಂದು ಜನಿಸಿದವರು ಬುಧ ಗ್ರಹದ ಆಧಿಪತ್ಯದಲ್ಲಿರುತ್ತಾರೆ. ಬುಧನು ಸಂಭಾಷಣೆ, ಬುದ್ಧಿ, ನಿರ್ಧಾರ ಶಕ್ತಿಯಲ್ಲಿ ಪ್ರತಿಭೆ ನೀಡುವ ಗ್ರಹ. ಇವರು ಒಂದು ನಿಮಿಷ ಮಾತನಾಡಿದರೆ ಸಾಕು, ಎದುರಿಗಿರುವವರ ಮನಸ್ಸನ್ನು ಯಾವ ದಿಕ್ಕಿನಲ್ಲಿ ತಿರುಗಿಸಬೇಕೆಂದು ತಕ್ಷಣ ಅರ್ಥಮಾಡಿಕೊಳ್ಳುತ್ತಾರೆ. ಇವರು ತುಂಬಾ ಚುರುಕಾಗಿರುತ್ತಾರೆ. ಯಾರು ಏನು ಯೋಚಿಸುತ್ತಿದ್ದಾರೆ, ಏನು ಬಯಸುತ್ತಿದ್ದಾರೆ, ಯಾವ ಮಾತು ಆಡಿದರೆ ಅವರ ಬಲ ಅಥವಾ ದೌರ್ಬಲ್ಯ ಹೊರಬರುತ್ತದೆ ಎಂಬುದನ್ನು ಸುಲಭವಾಗಿ ಗ್ರಹಿಸುತ್ತಾರೆ.
57
ಶುಕ್ರ ಗ್ರಹ
6, 15, 24 ರಂದು ಜನಿಸಿದವರ ಮೇಲೆ ಶುಕ್ರ ಗ್ರಹದ ಪ್ರಭಾವವಿರುತ್ತದೆ. ಇವರಿಗೆ ಆಕರ್ಷಣೆ ಹೆಚ್ಚು. ಇವರು ಮಾತನಾಡಿದರೆ ಎದುರಿಗಿರುವವರು ಕೇಳುವುದು ಮಾತ್ರವಲ್ಲ, ಇವರೊಂದಿಗೆ ಮಾತನಾಡಲು, ಸ್ನೇಹ ಮುಂದುವರಿಸಲು ಬಯಸುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದವರು ಸಂಬಂಧಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಪ್ರೀತಿ, ಸ್ನೇಹ, ಕೆಲಸದಲ್ಲಿ ಎಲ್ಲೂ ಎಲ್ಲೆ ಮೀರುವುದಿಲ್ಲ. ಅದಕ್ಕಾಗಿಯೇ ಇವರ ಮಾತುಗಳಿಗೆ ಇತರರು ತಕ್ಷಣವೇ ಇಂಪ್ರೆಸ್ ಆಗುತ್ತಾರೆ.
67
ಚಂದ್ರನ ಪ್ರಭಾವ
ಯಾವುದೇ ತಿಂಗಳ 27 ರಂದು ಜನಿಸಿದವರ ಮೇಲೆ ಚಂದ್ರನ ಪ್ರಭಾವ ಹೆಚ್ಚು. ಇವರು ಭಾವನೆಗಳನ್ನು ಓದುವುದರಲ್ಲಿ ಕಿಂಗ್ ಇದ್ದಂತೆ. ಎದುರಿಗಿರುವವರ ಕಣ್ಣುಗಳಲ್ಲಿ ಯಾವ ನೋವಿದೆ, ಯಾವ ಆಸೆಯಿದೆ, ಯಾವ ಭಯವಿದೆ ಎಂಬುದನ್ನು ಸುಲಭವಾಗಿ ಗ್ರಹಿಸುತ್ತಾರೆ. ಈ ಗುಣದಿಂದಾಗಿ ಇವರು ಇತರರನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.
ಈ ದಿನಾಂಕಗಳಲ್ಲಿ ಜನಿಸಿದವರ ಮತ್ತೊಂದು ವಿಶೇಷವೆಂದರೆ, ಸುತ್ತಮುತ್ತಲಿನವರ ಮನೋಭಾವನೆಗಳೇನು? ಯಾರು ನಿಜವಾಗಿಯೂ ತಮಗೆ ಹತ್ತಿರವಾಗಿದ್ದಾರೆ? ಯಾರು ನಟಿಸುತ್ತಿದ್ದಾರೆ? ಎಂಬುದನ್ನು ಸಹ ಇವರು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.
ತಮಗೆ ಅಗತ್ಯವಿರಲಿ, ಇಲ್ಲದಿರಲಿ, ಇತರರೊಂದಿಗೆ ಮನಸಾರೆ ಮಾತನಾಡುತ್ತಾರೆ. ಈ ಗುಣದಿಂದಾಗಿ ಇವರು ರಾಜಕೀಯ, ವ್ಯಾಪಾರ, ಸಾರ್ವಜನಿಕ ಸಂಪರ್ಕ, ಮಾಧ್ಯಮದಂತಹ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಾರೆ.