ಸಂಖ್ಯಾಶಾಸ್ತ್ರದ ಪ್ರಕಾರ, ನಮ್ಮ ಹುಟ್ಟಿದ ದಿನಾಂಕ ಕೇವಲ ವ್ಯಕ್ತಿತ್ವವನ್ನಷ್ಟೇ ಅಲ್ಲ, ಹಣದ ವಿಚಾರದಲ್ಲಿ ನಮ್ಮ ಅದೃಷ್ಟವನ್ನೂ ಹೇಳುತ್ತದೆ. ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದವರಿಗೆ ಆರ್ಥಿಕವಾಗಿ ಭರ್ಜರಿ ಅವಕಾಶಗಳು ಒಲಿದು ಬರುತ್ತವೆ. ಆ ಲಕ್ಕಿ ದಿನಾಂಕಗಳು ಯಾವುವು ಅಂತ ಇಲ್ಲಿ ನೋಡೋಣ.
ಸಂಖ್ಯಾಶಾಸ್ತ್ರದ ಪ್ರಕಾರ, ಹುಟ್ಟಿದ ದಿನಾಂಕ ವ್ಯಕ್ತಿಗಳ ಜೀವನದ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪ್ರಭಾವ ಬೀರುತ್ತದೆ. ಕೆಲವು ದಿನಾಂಕಗಳಲ್ಲಿ ಹುಟ್ಟಿದವರಿಗೆ ಹಣಕಾಸಿನ ವಿಚಾರದಲ್ಲಿ ಅದ್ಭುತ ಅವಕಾಶಗಳು ಸಿಗುತ್ತವೆ. ಹಣ ಸಂಪಾದಿಸುವಾಗ ಇವರು ತುಂಬಾ ಬುದ್ಧಿವಂತಿಕೆಯಿಂದ ಹೆಜ್ಜೆ ಇಡುತ್ತಾರೆ. ಜೀವನದಲ್ಲಿ ಬೇಗ ಸೆಟಲ್ ಆಗುವ ಅವಕಾಶ ಇವರಿಗೆ ಹೆಚ್ಚಿರುತ್ತದೆ. ಆರ್ಥಿಕವಾಗಿ ಅದೃಷ್ಟವಂತರು ಎಂದು ಕರೆಸಿಕೊಳ್ಳುವ ಆ ದಿನಾಂಕಗಳು ಯಾವುವು ಅಂತ ಇಲ್ಲಿ ತಿಳಿಯೋಣ.
25
ಮೂಲಸಂಖ್ಯೆ 1
ಯಾವುದೇ ತಿಂಗಳ 1, 10, 19 ಅಥವಾ 28ನೇ ತಾರೀಖು ಹುಟ್ಟಿದವರ ಮೂಲಸಂಖ್ಯೆ 1 ಆಗಿರುತ್ತದೆ. ಈ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ನಾಯಕತ್ವದ ಗುಣಗಳು ಹೆಚ್ಚಿರುತ್ತವೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಇವರು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಹೊಸ ವಿಷಯಗಳನ್ನು ಟ್ರೈ ಮಾಡಲು ಇವರು ಎಂದಿಗೂ ಹಿಂದೇಟು ಹಾಕುವುದಿಲ್ಲ. ಉದ್ಯೋಗದ ಜೊತೆಗೆ ಸ್ವಂತ ಬ್ಯುಸಿನೆಸ್ ಮಾಡಬೇಕು ಎಂಬ ಆಲೋಚನೆ ಇವರಲ್ಲಿ ಹೆಚ್ಚಿರುತ್ತದೆ. ಹಣದ ವಿಚಾರದಲ್ಲೂ ಒಂದು ಗುರಿ ಇಟ್ಟುಕೊಂಡು ಅದಕ್ಕಾಗಿ ಕಷ್ಟಪಡುವ ಸ್ವಭಾವ ಇವರದ್ದು. ಹಾಗಾಗಿ ಈ ದಿನಾಂಕಗಳಲ್ಲಿ ಹುಟ್ಟಿದವರು ಆರ್ಥಿಕವಾಗಿ ಬಲವಾಗಿ ಬೆಳೆಯುತ್ತಾರೆ.
35
ಮೂಲಸಂಖ್ಯೆ 2
ಯಾವುದೇ ತಿಂಗಳ 2, 11, 20 ಅಥವಾ 29ನೇ ತಾರೀಖು ಹುಟ್ಟಿದವರ ಮೂಲಸಂಖ್ಯೆ 2 ಆಗಿರುತ್ತದೆ. ಈ ದಿನಾಂಕಗಳಲ್ಲಿ ಹುಟ್ಟಿದವರು ಭಾವನೆಗಳ ಜೊತೆಗೆ ಉತ್ತಮ ಆಲೋಚನಾ ಶಕ್ತಿಯನ್ನೂ ಹೊಂದಿರುತ್ತಾರೆ. ಇವರು ಆತುರಪಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಬದಲಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮುಂದೆ ಸಾಗುತ್ತಾರೆ. ವಿಶೇಷವಾಗಿ ಹಣವನ್ನು ಎಲ್ಲಿ ಖರ್ಚು ಮಾಡಬೇಕು, ಎಲ್ಲಿ ಉಳಿಸಬೇಕು ಎಂಬ ವಿಚಾರದಲ್ಲಿ ಇವರು ತುಂಬಾ ಎಚ್ಚರಿಕೆಯಿಂದ ಇರುತ್ತಾರೆ. ಇತರರೊಂದಿಗೆ ಸೇರಿ ಕೆಲಸ ಮಾಡುವುದು ಹಾಗೂ ಪಾಲುದಾರಿಕೆ ಅವಕಾಶಗಳನ್ನು ಬಳಸಿಕೊಳ್ಳುವುದು ಇವರಿಗೆ ಲಾಭ ತಂದುಕೊಡುತ್ತದೆ.
ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಖು ಹುಟ್ಟಿದವರ ಮೂಲಸಂಖ್ಯೆ 3 ಆಗಿರುತ್ತದೆ. ಈ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಕ್ರಿಯೇಟಿವಿಟಿ ಸ್ವಲ್ಪ ಜಾಸ್ತಿನೇ ಇರುತ್ತದೆ. ಸಾಮಾನ್ಯ ದಾರಿಗಿಂತ ವಿಭಿನ್ನವಾಗಿ ಯೋಚಿಸಿ ಅವಕಾಶಗಳನ್ನು ಹುಡುಕುವ ಸ್ವಭಾವ ಇವರದ್ದು. ಮೀಡಿಯಾ, ಕಲೆ, ಸಂವಹನ, ಶಿಕ್ಷಣ ಹಾಗೂ ಬ್ಯುಸಿನೆಸ್ ಕ್ಷೇತ್ರಗಳಲ್ಲಿ ಇವರು ಹಣ ಸಂಪಾದಿಸುವ ಅವಕಾಶಗಳು ಹೆಚ್ಚು. ಇವರು ತಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡರೆ ಅತ್ಯುತ್ತಮ ಆರ್ಥಿಕ ಸ್ಥಿತಿಯನ್ನು ತಲುಪಬಹುದು ಎಂದು ಸಂಖ್ಯಾಶಾಸ್ತ್ರ ಸೂಚಿಸುತ್ತದೆ.
55
ಮೂಲಸಂಖ್ಯೆ 5
ಯಾವುದೇ ತಿಂಗಳ 5, 14 ಅಥವಾ 23ನೇ ತಾರೀಖು ಹುಟ್ಟಿದವರ ಮೂಲಸಂಖ್ಯೆ 5 ಆಗಿರುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರು ಬದಲಾವಣೆಗಳನ್ನು ಬೇಗನೆ ಒಪ್ಪಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ ಎಂದು ನ್ಯೂಮರಾಲಜಿ ಹೇಳುತ್ತದೆ. ಹೊಸ ಅವಕಾಶಗಳು ಬಂದಾಗ ಅವುಗಳನ್ನು ಪರಿಶೀಲಿಸಿ ಮುಂದೆ ಸಾಗಲು ಇವರು ಆಸಕ್ತಿ ತೋರುತ್ತಾರೆ. ಬ್ಯುಸಿನೆಸ್, ಮಾರ್ಕೆಟಿಂಗ್, ಸಂವಹನ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಇವರು ಸದಾ ಆಕ್ಟಿವ್ ಆಗಿರುತ್ತಾರೆ. ಒಂದೇ ಆದಾಯದ ಮೂಲವನ್ನು ನೆಚ್ಚಿಕೊಳ್ಳದೆ ಹೊಸ ಅವಕಾಶಗಳನ್ನು ಹುಡುಕುವುದು ಇವರ ಸ್ಪೆಷಾಲಿಟಿ. ಇದೇ ಗುಣ ಇವರನ್ನು ವಿಪರೀತವಾಗಿ ಹಣ ಸಂಪಾದಿಸುವಂತೆ ಮಾಡುತ್ತದೆ.