ಕುಂಭದಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ: 3 ರಾಶಿಗಳಿಗೆ ಲಕ್ಷ್ಮಿ ಕಟಾಕ್ಷದಿಂದ ಜೀವನದಲ್ಲಿ ಸಮೃದ್ಧಿ

Published : Feb 05, 2026, 08:40 PM IST

ಶನಿಯ ಕುಂಭ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳಲಿದೆ. ಈ ಪ್ರಭಾವಿ ರಾಜಯೋಗವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ, ವಿಶೇಷವಾಗಿ 3 ರಾಶಿಯವರಿಗೆ ಆರ್ಥಿಕ ಲಾಭ, ವೃತ್ತಿ ಬೆಳವಣಿಗೆ ಮತ್ತು ಸಮೃದ್ಧಿಯನ್ನು ತರಲಿದೆ.

PREV
15
ಲಕ್ಷ್ಮಿ ನಾರಾಯಣ ಯೋಗ

ಶೀಘ್ರದಲ್ಲಿಯೇ ಶನಿಯ ಕುಂಭ ರಾಶಿಯಲ್ಲಿ ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳಲಿದೆ. ಈ ವಿಶೇಷವಾದ ಯೋಗ ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಇದೊಂದು ಪ್ರಭಾವಿ ರಾಜಯೋಗವಾಗಿದ್ದು, ಈ ಸಮಯದಲ್ಲಿ ಜನಿಸಿದವರು ವಿಶೇಷ ಯೋಗಗಳನ್ನು ಪಡೆದುಕೊಳ್ಳುತ್ತಾರೆ. ಈ ಯೋಗದಿಂದ ಯಶಸ್ಸು ಸಹ ಅವರದ್ದಾಗುತ್ತದೆ

25
ಈ ಯೋಗದಿಂದ ಏನೆಲ್ಲಾ ಲಾಭ?

ಜ್ಯೋತಿಷಿಗಳ ಪ್ರಕಾರ, ಗ್ರಹಗಳ ರಾಜಕುಮಾರನಾಗಿರುವ ಬುಧ, ಶನಿಯ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಬುಧ ಮತ್ತು ಶುಕ್ರ ಒಂದೇ ರಾಶಿಯಲ್ಲಿದ್ದಾಗ ಲಕ್ಷ್ಮೀ ನಾರಾಯಣ ಯೋಗ ರಚನೆಯಾಗುತ್ತದೆ. ಈ ಯೋಗದಿಂದ ಆರ್ಥಿಕ ಲಾಭ, ವ್ಯವಹಾರ ಬೆಳವಣಿಗೆ, ಹೊಸ ಅವಕಾಶಗಳು ಲಭ್ಯವಾಗುತ್ತವೆ. ಈ ವಿಶೇಷವಾದ ಲಕ್ಷ್ಮೀ ನಾರಾಯಣ ಯೋಗ ಮೂರು ರಾಶಿಚಕ್ರಗಳಿಗೆ ಗಸಂಪತ್ತು, ಸಮೃದ್ಧಿ, ಆಕರ್ಷಣೆ ಮತ್ತು ಉದ್ಯೋಗಾವಕಾಶಗಳನ್ನು ನೀಡುತ್ತದೆ.

35
ಕನ್ಯಾ ರಾಶಿ

ಲಕ್ಷ್ಮಿ ನಾರಾಯಣ ಯೋಗದಿಂದ ಕನ್ಯಾ ರಾಶಿಯವರ ಜೀವನದಲ್ಲಿ ತೃಪ್ತಿಕರ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ಅಂದುಕೊಂಡಿದೆಲ್ಲಾ ಆಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

  • ಹೂಡಿಕೆಗೆ ಇದು ಸೂಕ್ತ ಸಮಯವಾಗಿದ್ದು, ಇದರಿಂದ ಸಿಗುವ ಲಾಭ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
  • ಪ್ರಯಾಣದ ಯೋಗ ಕೂಡಿ ಬರಲಿದ್ದು, ದೀರ್ಘಕಾಲದ ಯೋಜನೆಗಳು ಚಾಲ್ತಿಗೆ ಬರಲಿವೆ
  • ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳು ಸಿಗಲಿವೆ
  • ಪ್ರೇಮವಿವಾಹ ಸೇರಿದಂತೆ ಇತರೆ ಆಸೆಗಳು ಈಡೇರಲಿವೆ.
  • ಹೊಸ ಯೋಜನೆ ಅಥವಾ ಕೆಲಸ ಪ್ರಾರಂಭಿಸಬಹುದು.
45
ಧನು ರಾಶಿ

ಕಲಾಕ್ಷೇತ್ರದಲ್ಲಿರೋರಿಗೆ ಗೆಲುವಿನ ಸಿಹಿ ಸಿಗಲಿದೆ. ನಿಮ್ಮ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಲಿವೆ.

  • ವಿದೇಶ ಪ್ರವಾಸದ ಕನಸು ಈಡೇರಲಿದೆ.
  • ಅಪೇಕ್ಷಿತ ಫಲಿತಾಂಶಗಳಿಂದ ಸಕಾರಾತ್ಮಕ ಭಾವನೆ ಮೂಡಿ, ನಿಮ್ಮ ಮೇಲಿನ ಒತ್ತಡಗಳು ಕಡಿಮೆಯಾಗಲಿವೆ.
  • ಹಣಕಾಸಿನ ವಿಷಯಗಳಲ್ಲಿ ಸ್ಥಿರತೆ ಉಂಟಾಗಿ ಆರ್ಥಿಕ ನೆಮ್ಮದಿ ನಿಮ್ಮದಾಗುತ್ತದೆ.
55
ಕುಂಭ ರಾಶಿ

ಲಕ್ಷ್ಮೀ ನಾರಾಯಣ ರಾಜಯೋಗ ಸಂಯೋಗವು ಕುಂಭ ರಾಶಿಯಲ್ಲಿ ರೂಪುಗೊಳ್ಳಲಿದೆ, ಆದ್ದರಿಂದ ಇದರ ಅತ್ಯಂತ ಹೆಚ್ಚು ಪ್ರಭಾವ ಇರುತ್ತದೆ. ಕುಂಭ ರಾಶಿಯವರು ಹೆಚ್ಚು ಲಾಭಗಳನ್ನು ಪಡೆಯುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ,

  • ಪ್ರೇಮ ವಿವಾಹ ಅಥವಾ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ.
  • ವೈಯಕ್ತಿಕ ಜೀವನ ಸಮತೋಲಿತ ಮತ್ತು ಸಿಹಿಯಾಗಿರುತ್ತೆ
  • ಶಿಕ್ಷಣ ವಿಷಯದಲ್ಲಿ ನಿಮ್ಮಿಷ್ಟದ ಕಾಲೇಜಿನ ಅಡ್ಮಿಷನ್ ಸಿಗಬಹುದು. ಶಿಕ್ಷಣದಲ್ಲಿ ಪ್ರಗತಿ ಕಾಣುತ್ತಾರೆ.
  • ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ.
  • ಭವಿಷ್ಯಕ್ಕಾಗಿ ಸ್ಪಷ್ಟ ತಂತ್ರವನ್ನು ರೂಪಿಸಲು ನಿಮಗೆ ಸಾಧ್ಯವಾಗುತ್ತದೆ.
  • ನಿಮಗೆ ಇದ್ದಕ್ಕಿದ್ದಂತೆ ಅದೃಷ್ಟ ಸಿಗಬಹುದು.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಬಣ್ಣದೋಕುಳಿಗೆ ಅಡ್ಡಿಯಾಗಲಿದ್ಯಾ ಚಂದ್ರಗ್ರಹಣ? ಈ ಮೂರು ರಾಶಿಗೆ ಸಂಕಷ್ಟದ ಕರಿ ನೆರಳು

Read more Photos on
click me!

Recommended Stories