Kottiyoor Temple: ಸತಿದೇವಿ ಪ್ರಾಣ ಬಿಟ್ಟ ಸ್ಥಳದಲ್ಲಿ ನೂಕು ನುಗ್ಗುಲು, ಗೂಂಡಾಗಿರಿ, ಕನ್ನಡಿಗರಿಗೆ ಕ್ಯಾರೆ ಎನ್ನಲ್ಲ!

Published : Jun 07, 2026, 02:49 PM IST

Kottiyoor temple opening date 2026 for public: ಕೇರಳದ ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲೆ ಕೊಟ್ಟಿಯೂರು ಮಹಾದೇವ ದೇವಸ್ಥಾನವಿದೆ. ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈಗ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿದ್ದು ಲಕ್ಷಾಂತರ ಜನರು ಹೋಗುತ್ತಿದ್ದಾರೆ.

PREV
15
ಈ ದೇವಸ್ಥಾನದಲ್ಲಿ ಈಗ ಆಗ್ತಿರೋ ಸಮಸ್ಯೆ ಏನು?

ಕರ್ನಾಟಕದಿಂದ ಕೂಡ ಈ ದೇವಸ್ಥಾನಕ್ಕೆ ಜನರು ಹೋಗುತ್ತಿದ್ದಾರೆ. 1000 ರೂಪಾಯಿ ಕೊಟ್ಟು ವಿಶೇಷ ಟಿಕೆಟ್‌ ತಗೊಂಡರೂ ಕೂಡ ಮೂರು ಗಂಟೆಗಳ ಕಾಲ ನಿಂತು ದೇವರ ದರ್ಶನ ಪಡೆಯಬೇಕಂತೆ. ಇನ್ನು ಉಚಿತ ದರ್ಶನ ಪಡೆಯಲು 7-8 ಗಂಟೆಗಳ ಕಾಲ ಕಾಯಬೇಕಂತೆ. ಈ ದೇವಸ್ಥಾನಕ್ಕೆ ಹೋದ ಅನೇಕರು ವಿಡಿಯೋ ಮಾಡಿದ್ದು, “ಎಲ್ಲಿ ನೋಡಿದರೂ ನೂಕು ನುಗ್ಗುಲು, ವ್ಯವಸ್ಥೆ ಸರಿ ಇಲ್ಲ, ಮಾನವೀಯತೆ ಇಲ್ಲ, ಕರ್ನಾಟಕದವರನ್ನು ವಿಚಿತ್ರವಾಗಿ ನೋಡ್ತಾರೆ, ಗೂಂಡಾಗಳ ತರ ವರ್ತಿಸ್ತಾರೆ, ಸೇಫ್ಟಿ ಇಲ್ಲ, ಯಾರೂ ಈ ದೇವಸ್ಥಾನಕ್ಕೆ ಬರಬೇಡಿ ಎಂದು ವಿಡಿಯೋ ಮೂಲಕ ಹೇಳುತ್ತಿದ್ದಾರೆ.

25
ಇದರ ಹಿನ್ನಲೆ ಏನು?

ಇದು ದಕ್ಷ ಯಜ್ಞ ನಡೆದ ಸ್ಥಳವಾಗಿದೆ. ದಕ್ಷ ಪ್ರಜಾಪತಿಯು ಶಿವನನ್ನು ಅವಮಾನಿಸಲು ಆಯೋಜಿಸಲಾಗಿದ್ದ ಯಜ್ಞ ಇದಾಗಿತ್ತು. ಇಲ್ಲಿ ಸತೀದೇವಿಯು ಯಜ್ಞಕುಂಡಕ್ಕೆ ಹಾರಿ ಜೀವ ಬಿಟ್ಟಳು, ಆಮೇಲೆ ಶಿವನು ಸಿಟ್ಟಾಗಿ ದಕ್ಷನ ತಲೆ ಕಡಿದನು ಎಂದು ಹೇಳಲಾಗಿದೆ.

35
ಎರಡು ದೇವಸ್ಥಾನವಿದೆ!

ಇಕ್ಕರೆ ಕೊಟ್ಟಿಯೂರು

ಇದು ನದಿಯ ಒಂದು ದಂಡೆಯ ಮೇಲಿದ್ದು, ವರ್ಷದ ಬಹುಪಾಲು ದಿನಗಳಲ್ಲಿ ಇಲ್ಲಿ ಪೂಜೆ ಆಗುತ್ತದೆ

ಅಕ್ಕರೆ ಕೊಟ್ಟಿಯೂರು

ಇದು ನದಿಯ ಇನ್ನೊಂದು ದಂಡೆಯ ಮೇಲಿದ್ದು, ವಾರ್ಷಿಕ ಉತ್ಸವದಲ್ಲಿ ಪೂಜೆ ಆಗುತ್ತದೆ. ಇಲ್ಲಿ ಯಾವುದೇ ಶಾಶ್ವತ ಗರ್ಭಗುಡಿಯೂ ಇಲ್ಲ, ಕಟ್ಟಡವೂ ಇಲ್ಲ. ನದಿಯ ಮಧ್ಯದಲ್ಲಿರುವ ಸ್ವಯಂಭೂ ಶಿವಲಿಂಗಕ್ಕೆ (ಮಣಿತ್ತರ) ಅಲ್ಲಿಯೇ ಪೂಜೆ ಆಗುವುದು.

45
ಹೂವಿನ ಪ್ರಸಾದಕ್ಕೆ ಬೇಡಿಕೆ

ಪ್ರತಿವರ್ಷ ಮೇ-ಜೂನ್ ತಿಂಗಳಲ್ಲಿ 27 ದಿನಗಳ ವೈಶಾಖ ಮಹೋತ್ಸವ ನಡೆಯುವುದು. ಈ ಟೈಮ್‌ ಬಿಟ್ಟು ಬೇರೆ ದಿನಗಳಲ್ಲಿ ಈ ದೇವಸ್ಥಾನಕ್ಕೆ ಹೋಗಲು ಆಗೋದಿಲ್ಲ. ಹುಲ್ಲಿನಿಂದ ಪೆಂಡಾಲ್‌ ಮಾಡಿ ಪೂಜೆ ಮಾಡ್ತಾರೆ. ಉತ್ಸವ ಮುಗಿದಕೂಡಲೇ ಇದನ್ನು ತೆಗೆಯುತ್ತಾರೆ. ಒಂದು ರೀತಿಯ ಬಿದಿರಿನಿಂದ ಮಾಡುವ ಕರಕುಶಲ ಹೂವು ( 'ಓಡಪೂವು' ) ಇಲ್ಲಿನ ಪ್ರಸಾದವಾಗಿದೆ. ಸ್ವಯಂಭೂ ಲಿಂಗಕ್ಕೆ ನಿರಂತರವಾಗಿ ಜಲಾಭೀಷೇಕ, ತುಪ್ಪದ ಅಭಿಷೇಕ ಮಾಡುತ್ತಾರೆ.

55
ಯಾಕೆ ಇಷ್ಟೆಲ್ಲ ಜನರು ದೇವಸ್ಥಾನಕ್ಕೆ ಹೋಗ್ತಾರೆ?

ಈ ಉತ್ಸವ ನೋಡಿದರೆ ಜೀವನದ ಕಷ್ಟ ಮಾಯವಾಗುತ್ತದೆ, ಇನ್ನು ಓಡಪೂವು ಹೂವನ್ನು ಮನೆಯಲ್ಲಿ ಇಟ್ಟರೆ ಐಶ್ವರ್ಯ ಸಿಗುವುದು ಎಂಬ ನಂಬಿಕೆ ಇದೆ.

Read more Photos on
click me!

Recommended Stories