ತಾತ-ಮುತ್ತಜ್ಜಿಯಿಂದ ಬಂದ ಬಂಗಾರ ಕೊಟ್ಟು ಹೊಸ ಚಿನ್ನ ಖರೀದಿಸುವುದು ಅಶುಭವೇ? ಹಳೆ ಚಿನ್ನ ಮಾರಿದರೆ ಏನಾಗುತ್ತೆ?

Ravi Janekal   | ANI
Published : Nov 13, 2026, 11:38 AM IST

ಇಂದು ಪ್ರತಿಯೊಬ್ಬರ ಮನೆಯಲ್ಲೂ ಚಿನ್ನವಿದೆ. ಕೆಲವರು ಹಳೆಯ ಚಿನ್ನ ಕೂಡಿಟ್ಟಿದ್ದರೆ, ಇನ್ನು ಕೆಲವರು ಹೊಸದಾಗಿ ಖರೀದಿಸಿದ್ದಾರೆ. ತಲತಲಾಂತರದಿಂದ ಬಂದ ಹಳೆಯ ಚಿನ್ನ ಇರುವವರು ಮಾರಾಟ ಮಾಡಬಾರದೆ? ಹಳೆಯ ಚಿನ್ನ ಮಾರಿದರೆ ಅಥವಾ ಎಕ್ಸ್ಚೇಂಜ್ ಮಾಡಿದರೆ ಏನಾಗುತ್ತೆ? ಧಾರ್ಮಿಕ ನಂಬಿಕೆಗಳೇನು? ತಿಳಿಯಿರಿ.

PREV
13
ಹಳೆಯ ಚಿನ್ನ ಎಕ್ಸ್‌ಚೇಂಜ್ ಮಾಡುವುದು ಅಶುಭವೇ?

ಬಡವರು-ಶ್ರೀಮಂತರೆನ್ನದೆ ಭಾರತೀಯರ ಸಾಮಾನ್ಯ ಮನೆಗಳಲ್ಲೂ ತಲತಲಾಂತರದಿಂದ ಬಂದ ಬಂಗಾರ ಇದ್ದೇ ಇರುತ್ತೆ. ಬಂಗಾರ ಇಲ್ಲದ ಮನೆಯೇ ಇಲ್ಲ ಎನ್ನಬಹುದು. ನಮ್ಮ ಹಿರಿಯರು ಬಹಳ ಬುದ್ಧಿವಂತರು, ಮುಂದಾಲೋಚನೆಯುಳ್ಳವರು ಆಗಿದ್ದರು. ಹೀಗಾಗಿ ಕಷ್ಟಪಟ್ಟು ದುಡಿದ ಹಣದಿಂದ ಚಿನ್ನ ಖರೀದಿಸುತ್ತಿದ್ದರು. ಇದು ಚಿನ್ನದ ಮೇಲಿನ ವ್ಯಾಮೋಹದಿಂದಲ್ಲ, ಬದಲಾಗಿ ಚಿನ್ನ ಖರೀದಿಸುವುದರಿಂದ ಕಷ್ಟಕಾಲಕ್ಕೆ ಬರುತ್ತೆ ಎಂಬ ದೂರದೃಷ್ಟಿ ಅವರಲ್ಲಿತ್ತು.

ಖರೀದಿಸಿದ ಬಂಗಾರ ಧರಿಸಿದ್ದಕ್ಕಿಂತ ಭದ್ರವಾಗಿ ಟ್ರಂಕ್‌ಗಳಲ್ಲಿ ಮುಚ್ಚಿಟ್ಟಿದ್ದೇ ಹೆಚ್ಚು. ಮದುವೆ, ಹಬ್ಬ ಕಾರ್ಯಕ್ರಮಗಳ ಹೊರತಾಗಿ ಬಂಗಾರವನ್ನು ಎಂದು ಪ್ರದರ್ಶನ ಮಾಡಿದವರಲ್ಲ. ಆದರೆ ಅಂದು ಕಡಿಮೆ ಬೆಲೆಯಲ್ಲಿ ಖರೀದಿಸಿದ್ದ ಚಿನ್ನ ಇಂದು ಅದರ ಬೆಲೆ ಗಗನಕ್ಕೇರಿದೆ. ಅಲ್ಲದೆ ಎಷ್ಟೋ ಕುಟುಂಬಗಳಲ್ಲಿ ಮೊದಲ ತಲೆಮಾರಿನವರು ಕೂಡಿಟ್ಟಿದ್ದ ಬಂಗಾರ, ಮಕ್ಕಳು, ಮೊಮ್ಮಕ್ಕಳು ಕೈ ಸೇರಿ ಇದೀಗ ಹಳೆಯ ಚಿನ್ನ ಮಾರಾಟ ಮಾಡಿ ಹೊಸ ಚಿನ್ನದ ಆಭರಣ ಮಾಡಿಸಲು ಮುಂದಾಗುತ್ತಿದ್ದಾರೆ.

23
ಹಳೆಯ ಚಿನ್ನ ಕೊಟ್ಟು ಹೊಸದು ಖರೀದಿಸುವುದು ಅಶುಭವೇ?

ಆದರೆ ಹಳೆಯ ಚಿನ್ನದ ಆಭರಣಗಳನ್ನು ಹೊಸ ಚಿನ್ನಾಭರಣಕ್ಕೆ ವಿನಿಮಯ ಅಥವಾ ಎಕ್ಸ್‌ಚೇಂಜ್ ಮಾಡೊಳ್ಳುವುದು ಶುಭ ತರುತ್ತದೆಯೇ? ಈ ವರ್ಷ ಜನೆವರಿಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಆದರೆ ಸದ್ಯ ಚಿನ್ನದ ದರ ಇಳಿಕೆಯಾಗಿದೆ. ಈ ನಡುವೆ ಜನರು ಹಳೆಯ ಚಿನ್ನದ ಆಭರಣಗಳನ್ನು ಹೊಸ ಚಿನ್ನಾಭರಣಕ್ಕೆ ಎಕ್ಸ್‌ಚೇಂಜ್ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಅಂದಾಜು ಹೇಳುತ್ತಿರುವುದಲ್ಲ. ವಿಶ್ವ ಚಿನ್ನದ ಮಂಡಳಿ ನಡೆಸಿದ ಇತ್ತೀಚಿನ ಸಮೀಕ್ಷೆಯಿದು.

ಹೌದು ಇತ್ತೀಚೆಗೆ ವಿಶ್ವ ಚಿನ್ನದ ಮಂಡಳಿ ಸಮೀಕ್ಷೆ ನಡೆಸಿತು. ಅದರ ಪ್ರಕಾರ, ಶೇ.76ರಷ್ಟು ಜನರು ತಮ್ಮ ಮನೆಯಲ್ಲಿಟ್ಟಿದ್ದ ಹಳೆಯ ಚಿನ್ನದ ಆಭರಣಗಳನ್ನು ಕೊಟ್ಟು ಹೊಸ ಆಭರಣ ಕೊಳ್ಳುವ ಮೂಲಕ ಎಕ್ಸ್‌ಚೇಂಜ್ ಮಾಡಿಕೊಳ್ಳಲು ಹೆಚ್ಚು ಆಸಕ್ತಿ ತೋರಿಸಿದ್ದಾರಂತೆ. ಅಂದರೆ ಇಂದಿನ ತಲೆಮಾರಿನವರಿಗೆ ಇದು ಧಾರ್ಮಿಕ ನಂಬಿಕೆ ವಿಷಯವಲ್ಲ ಬದಲಾಗಿ ಎಲ್ಲವನ್ನು ಹಣ ಹೂಡಿಕೆ, ಬಜೆಟ್ ಲೆಕ್ಕದಲ್ಲಿ ನೋಡುತ್ತಿದ್ದಾರೆ.

ಭಾರತೀಯ ಪ್ರಾಚೀನ ಧಾರ್ಮಿಕ ಗ್ರಂಥಗಳು ಪ್ರಸ್ತು ಚಿಲ್ಲರೆ ವಿನಿಮಯಗಳಿಗೆ ಯಾವುದೇ ನಿಯಮ ಹೇಳಿಲ್ಲ. ಆದರೆ ಧಂತೇರಸ್ ಅಥವಾ ದೀಪಾವಳಿ ಹಬ್ಬದಲ್ಲಿ ಹಳೆಯ ಚಿನ್ನಾಭರಣ ನೀಡುವುದು ತಲತಲಾಂತರದಿಂದ ಮನೆಯಲ್ಲಿದ್ದ ಲಕ್ಷ್ಮೀದೇವಿಯನ್ನು ಓಡಿಸಿದಂತೆ, ಅಂದರೆ ನೀವು ಯಾವಾಗ ಹಳೆಯ ಚಿನ್ನವನ್ನು ಮಾರಾಟ ಮಾಡಿದಿರೋ ಆಗ ನಿಮಗೆ ದುರಾದೃಷ್ಟ ಅಂಟಿಕೊಳ್ಳುತ್ತದೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ. ಆದರೆ ಈ ಹೇಳಿಕೆ ವೈಜ್ಞಾನಿಕವಾಗಿ ಸಾಬೀತಾಗಿರುವ ನಿಯಮವಲ್ಲ ಎಂಬುದು ಗಮನಿಸಬೇಕು.

ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಈ ಹಬ್ಬವು ಸಂಪತ್ತನ್ನು ಹೆಚ್ಚಿಸುವ, ಮನೆಗೆ ಶುಭ ತರುವ ಹಬ್ಬವಾಗಿದೆ. ಇಂತಹ ವೇಳೆ ಮನೆಯಲ್ಲಿನ ಹಣ, ಚಿನ್ನದ ಒಡವೆ, ಅದರಲ್ಲೂ ಹಳೆಯ ಕಾಲದ ಒಡವೆ ಮಾರುವುದಾಗಲಿ, ಎಕ್ಸ್‌ಚೇಂಜ್ ಮಾಡುವುದಾಗಲಿ ಶುಭ ತರುವುದಿಲ್ಲ ಎಂದು ನಂಬುತ್ತಾರೆ.

33
ಹಳೆಯ ಚಿನ್ನ ಮಾರಾಟ ಮಾಡುವ ಮುನ್ನ..

ನಿಮ್ಮ ಮನೆಯಲ್ಲಿ ಹಿರಿಯರ ಕಾಲದಿಂದಲೂ ಬಂದ ಬಂಗಾರದ ಆಭರಣಗಳಿದ್ದರೆ ಅದನ್ನು ಮಾರಾಟ ಮಾಡುವ ಅಥವಾ ಎಕ್ಸ್‌ಚೇಂಜ್ ಮಾಡಬೇಕಾದ ಅನಿವಾರ್ಯತೆ ಇದ್ದರೆ ಅದಕ್ಕೂ ಮೊದಲು ಹಳೆಯ ಚಿನ್ನದ ಶುದ್ಧತೆ, ಕರಗುವ ವೆಚ್ಚ ಕಡಿತ, ತೂಕ, ವಿನಿಮಯ ದರ, ಉತ್ಪಾದನಾ ಶುಲ್ಕಗಳು, ಅಂತಿಮ ಬಿಲ್ ಎಷ್ಟಾಗುತ್ತೆ. ಎಲ್ಲವನ್ನೂ ಪ್ರತ್ಯೇಕವಾಗಿ ತಿಳಿದುಕೊಂಡ ಬಳಿಕವೇ ಎಕ್ಸ್‌ಚೇಂಜ್ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಿ. ಸಾಮಾನ್ಯವಾಗಿ ಹಬ್ಬದ ಸೀಸನ್‌ಗಳಲ್ಲಿ ಹೊಸ ಮತ್ತು ಹಳೆಯ ಚಿನ್ನ ಎರಡರಲ್ಲೂ ಬೆಲೆ ಏರಿಕೆ ಇರುತ್ತದೆ.

ಗಮನಿಸಿ: ಈ ಲೇಖನವು ಆಧ್ಯಾತ್ಮಿಕವಾದಿಗಳು, ಧಾರ್ಮಿಕ ಗ್ರಂಥಗಳ ಮಾಹಿತಿಯನ್ನಾಧರಿಸಿದ ಪ್ರಾಥಮಿಕ ಮಾಹಿತಿಯಾಗಿದೆ ಚಿನ್ನ ಮಾರಾಟ ಅಥವಾ ವಿನಿಮಯ ಮಾಡಿಕೊಳ್ಳುವ ಮುನ್ನ ಚಿನ್ನದ ವ್ಯಾಪಾರಿಗಳೊಂದಿಗೆ ಮಾತನಾಡಿದ ಬಳಿಕವೇ ನಿರ್ಧರಿಸಿ.

Read more Photos on
click me!

Recommended Stories