ವಾಸ್ತುಶಾಸ್ತ್ರವನ್ನು ನಂಬುತ್ತೀರೋ, ಬಿಡುತ್ತೀರೋ ನಿಮಗೆ ಬಿಟ್ಟಿದ್ದು. ಆದರೆ ಬೆಡ್ರೂಮ್ನಲ್ಲಿ ಈ ವಸ್ತುಗಳು ಇದ್ದರೆ ನಿದ್ದೆಗೆ ಭಂಗದ ಜೊತೆಗೆ ಸಮಸ್ಯೆಗಳೂ ಎದುರಾಗುತ್ತವೆ. ಏನದು ಎನ್ನುವ ಡಿಟೇಲ್ಸ್ ಇಲ್ಲಿ ಕೊಡಲಾಗಿದೆ ನೋಡಿ...
ವಾಸ್ತುವನ್ನು ತಲೆತಲಾಂತರಗಳಿಂದಲೂ ನಂಬಿಕೊಂಡು ಬಂದಿರುವ ದೊಡ್ಡ ವರ್ಗವೇ ಇದೆ. ವಾಸ್ತುವಿಗೂ ವಿಜ್ಞಾನಕ್ಕೂ ಸಂಬಂಧವಿದೆ ಎಂದು ಹೇಳುತ್ತಾರೆ. ಇದೇ ಕಾರಣಕ್ಕೆ ಕೋಟಿ ಕೋಟಿ ಬೆಲೆಬಾಳುವ ಮನೆಗಳನ್ನು ಕಟ್ಟಿದವರು ಯಾವುದೋ ಸಮಸ್ಯೆ ಉಂಟಾಗಿ ಕೊನೆಗೆ ವಾಸ್ತುದೋಷದಿಂದ ಹಾಗೆ ಆಗಿದೆ ಎಂದು ತಿಳಿದು ಕೆಡುವುದನ್ನು ನೋಡಬಹುದು, ಇಲ್ಲವೇ ನವೀಕರಣ ಮಾಡುವುದನ್ನು ನೋಡಬಹುದು. ವಾಸ್ತುವನ್ನು ನಂಬುವುದಿಲ್ಲ ಎಂದು ಹೇಳುವ ಜನರು ಇದ್ದಾರೆಯಾದರೂ, ಹಾಗೆ ಹೇಳಿದವರ ಪೈಕಿ ಹಲವರು ಮರೆಯಲ್ಲಿಯೇ ವಾಸ್ತುವನ್ನು ಪಾಲಿಸುವುದು ಗುಟ್ಟಾಗೇನೂ ಉಳಿದಿಲ್ಲ.
27
ವಾಸ್ತುವಿನ ಬಗ್ಗೆ ತಿಳಿವಳಿಕೆ
ಅದೇನೇ ಇದ್ದರೂ, ವಾಸ್ತುವಿನ ಪ್ರಕಾರ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿದರೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಬಹುದು ಎನ್ನುವ ಮಾತಿದೆ. ಅದೇ ರೀತಿ ತಪ್ಪಾದ ದಿಕ್ಕಿನಲ್ಲಿ ತಪ್ಪಾದ ಕೋಣೆಯೋ, ವಸ್ತುವೋ ಇಟ್ಟರೆ ಆ ಮನೆಗಳಲ್ಲಿ ಆಗುವ ದುರಂತಗಳು, ಸಮಸ್ಯೆಗಳು, ಹಣದ ಕೊರತೆ... ಹೀಗೆ ಅನೇಕವುಗಳನ್ನು ನೋಡಿದವರೂ ಇದ್ದಾರೆ. ಇದೀಗ ಎಲ್ಲಕ್ಕಿಂತಲೂ ಮುಖ್ಯವಾಗಿ, ದಂಪತಿಯಲ್ಲಿ ಸಾಮರಸ್ಯ ಮೂಡುವ, ದಾಪಂತ್ಯ ಜೀವನಕ್ಕೆ ಅಗತ್ಯವಾಗಿ ಬೇಕಾದಂಥ ಬೆಡ್ರೂಮ್ನ ವಾಸ್ತುವಿನ ಬಗ್ಗೆ ಕೆಲವೊಂದು ಸಲಹೆ ನೀಡಿದ್ದಾರೆ ಖ್ಯಾತ ವಾಸ್ತುಶಾಸ್ತ್ರಜ್ಞೆ.
37
ಕನ್ನಡಿ ಇರಲೇಬಾರದು
ಮುಖ್ಯವಾಗಿ ಬೆಡ್ರೂಮ್ನಲ್ಲಿ ಕನ್ನಡಿಯನ್ನು ಇಡಲೇಬಾರದು. ಅದರಲ್ಲಿಯೂ ಮುಖ್ಯವಾಗಿ ಹಾಸಿಗೆಯ ಸಮೀಪವಂತೂ ಅದು ಇರಲೇಬಾರದು ಎನ್ನುತ್ತದೆ ವಾಸ್ತುಶಾಸ್ತ್ರ. ಏಕೆಂದರೆ ಇದು ನಿದ್ರೆಗೆ ಭಂಗ, ಅಶಾಂತಿ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ, ಬಹುತೇಕ ಎಲ್ಲರ ಮನೆಗಳಲ್ಲಿ ಬೆಡ್ರೂಮ್ನಲ್ಲಿ ವಾರ್ಡ್ರೋಬ್ ಇದ್ದು, ಅದಕ್ಕೆ ಕನ್ನಡಿ ಇದ್ದೇ ಇರುತ್ತದೆ.
ಇದು ಒಂದು ವೇಳೆ ಇದ್ದಿದ್ದೇ ಹೌದಾದರೆ, ತಕ್ಕಮಟ್ಟಿಗೆ ವಾಸ್ತು ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದಾಗಿದೆ. ಸಾಧ್ಯವಾದರೆ ಕನ್ನಡಿಯನ್ನು ತೆಗೆದುಹಾಕಬೇಕು. ಒಂದು ವೇಳೆ ಅದು ಅಸಾಧ್ಯವಾದರೆ, ಹಾಸಿಗೆಯನ್ನು ಪ್ರತಿಬಿಂಬಿಸದಂತೆ ನೋಡಿಕೊಳ್ಳಬೇಕು. ಅದಕ್ಕಿಂತಲೂ ಮುಖ್ಯವಾದದ್ದು ಎಂದರೆ ಕನ್ನಡಿಯನ್ನು ಒಂದು ಬಟ್ಟೆ ಇಲ್ಲವೇ ಪೇಪರ್ನಿಂದ ಮುಚ್ಚಿಬಿಡಬೇಕು.
57
ಗಡಿಯಾರದ ಬಗ್ಗೆ ತಿಳಿಯಿರಿ
ಇನ್ನು ಗಡಿಯಾರ. ದಕ್ಷಿಣದ ಗೋಡೆಯ ಮೇಲೆ ಗಡಿಯಾರ ಇರಬಾರದು. ಬಣ್ಣವನ್ನು ಆಯ್ಕೆ ಮಾಡುವಾಗ ಗಾಢಬಣ್ಣವನ್ನು ಹಚ್ಚಬಾರದು. ಇದರಿಂದ ಕೂಡ ಬದುಕಿನಲ್ಲಿ ಸಮಸ್ಯೆ ಬರುತ್ತದೆ. ಲೈಟ್ ಆಗಿರುವ ಹಳದಿ ಬಣ್ಣದ ಬಲ್ಬ್ ಹಾಕಿದರೆ ಒಳ್ಳೆಯದು. ಸುವಾಸನೆ ಇದ್ದರೆ ತುಂಬಾ ಒಳಿತು.
67
ಗಿಡಗಳು ಬೇಡ
ಬೆಡ್ರೂಮ್ನಲ್ಲಿ ಗಿಡಗಳನ್ನು ಇರಿಸಲೇಬಾರದು. ನೀರಿನ ಮೂಲವೂ ಅಲ್ಲಿ ಇರಬಾರದು. ಬೌಲ್ನಲ್ಲಿ ನೀರು ಇಟ್ಟು, ಹೂವಿನ ಪಕಳೆ ಎಲ್ಲವನ್ನೂ ಇಡುತ್ತಾರೆ. ಅದನ್ನೂ ಇಡಬಾರದು.
77
ಒಂಟಿಯಾಗಿರೋ ಫೋಟೋ
ಒಂದು ವೇಳೆ ಮದುವೆಯಾಗಿದ್ದರೆ ಒಂಟಿಯಾಗಿರುವ ಫೋಟೋ ಹಾಕಬಾರದು. ದಂಪತಿಯ ಫೋಟೋ ಇರಬೇಕು.