ಸೆಪ್ಟೆಂಬರ್ 22 ರಿಂದ ಆರಂಭವಾಗುವ ನವರಾತ್ರಿ ಹಬ್ಬವು ಈ ಬಾರಿ 10 ದಿನಗಳ ಕಾಲ ನಡೆಯಲಿದ್ದು, ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ, ಈ ಸಮಯದಲ್ಲಿ ಈ ಒಂದು ಚಿಕ್ಕ ಕೆಲಸ ಮಾಡಿದ್ರೆ, ಜೀವನದಲ್ಲಿ ಹಣದ ಕೊರತೆ ನೀಗಿ, ಸಂತೋಷ ನೆಲೆಸುತ್ತದೆ. ಏನದು ನೋಡಿ!
ಇವತ್ತಿನಿಂದ ಅಂದರೆ ಸೆಪ್ಟೆಂಬರ್ 22ರಿಂದ ನವರಾತ್ರಿಯ ಉತ್ಸವ ಆರಂಭವಾಗಿದೆ. ನವರಾತ್ರಿ ಎಂದರೆ 9 ರಾತ್ರಿ. ಆದರೆ ಈ ಬಾರಿಯ ವಿಶೇಷತೆ ಎಂದರೆ 10 ದಿನ ಉತ್ಸವ ನಡೆಯಲಿದೆ. ಇದರ ಅರ್ಥ ಅಕ್ಟೋಬರ್ 2ರವರೆಗೆ ನವರಾತ್ರಿ ಇರಲಿದೆ.
27
ದುರ್ಗೆಗೆ ವಿಶೇಷ ಪೂಜೆ
ಈ ದಿನದಿಂದು ವಿಶೇಷವಾಗಿ ದುರ್ಗೆಗೆ ಪೂಜೆ ಸಲ್ಲುತ್ತದೆ. ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂಬುದು ಇತಿಹಾಸದ ಉಲ್ಲೇಖ. ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.
37
ಚಿಕ್ಕ ಕೆಲಸ ಮಾಡಿದ್ರೆ ಜೀವನ ಜಿಂಗಾಲಾಲಾ
ನವರಾತ್ರಿಯ ಸಮಯದಲ್ಲಿ ಈ ಒಂದು ಚಿಕ್ಕ ಕೆಲಸ ಮಾಡಿದ್ರೆ ಜೀವನ ಪೂರ್ತಿ ಹಣದ ಕೊರತೆ ಎದುರಾಗುವುದೇ ಇಲ್ಲವಂತೆ. ಹಾಗೆಂದು ಖ್ಯಾತ ಜ್ಯೋತಿಷಿ ಭಾವನಾ ಉಪಾಧ್ಯಾಯ ಅವರು ತಿಳಿಸಿದ್ದಾರೆ. ಅತುಲ್ ಅಗರ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಜೀವನ ಪೂರ್ತಿ ಸಂತೋಷದಿಂದ ಇರಬೇಕಾದರೆ, ಹಣದ ಕೊರತೆ ಇರಬಾರದು ಎಂದಾದರೆ ಈ ಒಂದು ಕೆಲಸ ಮಾಡಿ ಎಂದು ಅವರು ಹೇಳಿದ್ದಾರೆ.
ಅದೇನೆಂದರೆ, ನಿಮ್ಮ ಪತ್ನಿಗೆ ನವರಾತ್ರಿಯ 9 ದಿನಗಳೂ (ಈ ಬಾರಿ 10 ದಿನ) ಚಿಕ್ಕ ಚಿಕ್ಕ ಉಡುಗೊರೆ ತಂದುಕೊಡಿ ಎಂದು ಅವರು ಹೇಳಿದ್ದಾರೆ. ದುಬಾರಿ ಬೆಲೆಬಾಳುವ ಉಡುಗೊರೆ ಬೇಡ. ಪತ್ನಿಗೆ ಖುಷಿಕೊಡುವ ಚಿಕ್ಕ ಚಿಕ್ಕ ಉಡುಗೊರೆ ಕೊಟ್ಟರೂ ಜೀವನದಲ್ಲಿ ಸಂತೋಷ ನೆಲೆಸಲಿದೆ ಎನ್ನುವುದು ಅವರ ಮಾತು. ನವರಾತ್ರಿ ಎಂದರೆ ದೇವಿಯ ಪರ್ವ ಆಗಿರುವ ಕಾರಣ, ಹೆಣ್ಣಿಗೆ ಈ ರೀತಿ ಮಾಡಬೇಕು ಎನ್ನುವುದು ಅವರ ಮಾತು.
57
ನವರಾತ್ರಿ ಮಹತ್ವ
ಇನ್ನು ನವರಾತ್ರಿ ಕುರಿತು ಹೇಳುವುದಾದರೆ, ಮೊದಲೇ ಹೇಳಿದಂತೆ ಇದು ದೇವಿಯ ಪೂಜೆ. ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ, ಎರಡನೇ ದಿನ ಆಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜಾ, ಮೂರನೇ ದಿನ ತದಿಗೆ - ಮಹಿಷಾಸುರ ಮರ್ಧಿನಿ ದುರ್ಗಾಪೂಜಾ,ನಾಲ್ಕನೇ ದಿನ ಚತುರ್ದಶಿ - ಶೈಲ ಜಾತಾ ದುರ್ಗಾಪೂಜಾ.
67
ವಿಶೇಷ ದಿನಗಳಲ್ಲಿ ಏನಿರುತ್ತೆ?
ಐದನೇ ದಿನ ಪಂಚಮಿ - ದೂಮೃಹಾ ದುರ್ಗಾಪೂಜಾ, ಆರನೇ ದಿನ ಶಷ್ಠಿ - ಚಂಡ-ಮುಂಡ ಹಾ ದುರ್ಗಾಪೂಜಾ, ಏಳನೇ ದಿನ ಸಪ್ತಮಿ - ರಕ್ತ ಬೀಜ ಹಾ ದುರ್ಗಾಪೂಜಾ, ಎಂಟನೇ ದಿನ ಅಷ್ಟಮಿ - ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ), ಒಂಬತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ.
77
ಸಪ್ತಮಿಯಂದು ದುರ್ಗಾಪೂಜಾ
ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ, ಪವಿತ್ರಗ್ರಂಥಗಳನ್ನು, ಚಿನ್ನ, ಬೆಳ್ಳಿ ಪೂಜೆಗಿಡಲಾಗುತ್ತದೆ. ಹಾಗೂ ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಅಂದೇ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ ಇದಕ್ಕೆ ಸರಸ್ವತಿ ಪೂಜೆ ಎಂದೂ ಕರೆಯುತ್ತಾರೆ.