ಪ್ರತಿಯುತಿ ದೃಷ್ಟಿ ಯೋಗ 2026: ಜನವರಿ 2026ರಲ್ಲಿ ಗುರು-ಸೂರ್ಯರ ವಿಶೇಷ ಸಂಯೋಗ! ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗುವ 4 ರಾಶಿಗಳು!

Published : Dec 20, 2025, 08:21 AM IST

ಸೂರ್ಯ ಮತ್ತು ಗುರು ಗ್ರಹಗಳಿಂದ ಪ್ರತಿಯುತಿ ದೃಷ್ಟಿ ಯೋಗವು ರೂಪುಗೊಳ್ಳಲಿದೆ. ಈ ಯೋಗದಿಂದಾಗಿ 4  ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ಅವರ ಆರೋಗ್ಯ, ಆರ್ಥಿಕ ಸಮಸ್ಯೆಗಳು ದೂರವಾಗಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಕಾಣಲಿದ್ದಾರೆ.

PREV
15
ಪ್ರತಿಯುತಿ ದೃಷ್ಟಿ ಯೋಗದ ರಚನೆ

ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಗುರು ಮಂಗಳಕರ ಗ್ರಹಗಳು. ಈ ಗ್ರಹಗಳ ಚಲನೆ ರಾಶಿ ಚಕ್ರಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಜನವರಿ 10, 2026 ರಂದು ಇವೆರಡರ ನಡುವೆ 180 ಡಿಗ್ರಿ ಅಂತರವಿದ್ದು, ಪ್ರತಿಯುತಿ ದೃಷ್ಟಿ ಯೋಗ ರೂಪುಗೊಳ್ಳಲಿದೆ. ಇದು ಕೆಲವು ರಾಶಿಗಳ ಅದೃಷ್ಟವನ್ನು ಬೆಳಗಿಸಲಿದೆ. ಹಲವು ದಿನಗಳಿಂದ ಅನುಭವಿಸುತ್ತಿದ್ದ ಆರೋಗ್ಯ, ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

25
ಸಿಂಹ ರಾಶಿ

ಸೂರ್ಯನು ಆಳುವ ಸಿಂಹ ರಾಶಿಯವರಿಗೆ ಈ ಯೋಗವು ಲಾಭ ತರಲಿದೆ. ಇದು 7ನೇ ಮನೆಯಲ್ಲಿ ರೂಪುಗೊಳ್ಳುವುದರಿಂದ ಕೌಟುಂಬಿಕ ಸಂಬಂಧಗಳು ಉತ್ತಮವಾಗಿರುತ್ತವೆ. ಮಕ್ಕಳಿಂದ ಶುಭ ಸುದ್ದಿ, ಶಿಕ್ಷಣದಲ್ಲಿ ಪ್ರಗತಿ. ಹೂಡಿಕೆಗೆ ಉತ್ತಮ ಸಮಯವಾಗಿದ್ದು, ಲಾಭದ ಪ್ರಮಾಣ ಅಧಿಕವಾಗಿರಲಿದೆ. ಸಿಂಹ ರಾಶಿಯವರು ರಾಜರಂತೆ ಜೀವನ ನಡೆಸುತ್ತಾರೆ.

35
ತುಲಾ ರಾಶಿ

ತುಲಾ ರಾಶಿಯವರಿಗೆ ಈ ಯೋಗವು ಆರ್ಥಿಕ ಸಂಕಷ್ಟದಿಂದ ಪರಿಹಾರ ನೀಡಲಿದೆ. ಹೊಸ ಆದಾಯದ ಮೂಲಗಳು ಹೆಚ್ಚಾಗಲಿವೆ. ಈ ರಾಶಿಯವರಿಗೆ ಬಯಸಿದ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಮದುವೆ ತಡವಾಗುತ್ತಿದ್ದವರಿಗೆ ಶುಭ ಸುದ್ದಿ ಅಂದ್ರೆ ಕಂಕಣಭಾಗ್ಯ ಕೂಡಿ ಬರಲಿದೆ.

45
ಧನು ರಾಶಿ

ಗುರು ಅಧಿಪತಿಯಾಗಿರುವ ಧನು ರಾಶಿಯವರಿಗೆ ಈ ಸಂಯೋಗವು ಹೊಸ ಉತ್ಸಾಹ ತರಲಿದೆ. ವಿದೇಶ ಪ್ರಯಾಣ ಯೋಗ ಬರಲಿದೆ. ಅನಾರೋಗ್ಯದಿಂದ ಮುಕ್ತಿ ಸಿಗಲಿದ್ದು, ಜೀವನದಲ್ಲಿ ಉತ್ಸಾಹ ಮರಳಿ ಬರಲಿದೆ. ಕೆಲಸಗಳಲ್ಲಿ ತಂದೆಯಿಂದ ಬೆಂಬಲ ಸಿಗಲಿದೆ. ಪೂರ್ವಜರ ಆಸ್ತಿ ಲಾಭ ದೊರೆಯಲಿದೆ. ಹೊಸ ವ್ಯಾಪಾರ ಆರಂಭಿಸಲು ಇದು ಉತ್ತಮ ಸಮಯವಾಗಿದೆ.

55
ಕುಂಭ ರಾಶಿ

ಕುಂಭ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ಉದ್ಯೋಗದಲ್ಲಿ ಬಡ್ತಿ, ಸಂಬಳ ಹೆಚ್ಚಳ ಸಾಧ್ಯತೆಗಳಿವೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸುಧಾರಿಸುತ್ತದೆ. ಸ್ವಂತ ವ್ಯಾಪಾರದಲ್ಲಿ ಲಾಭ ಸಿಗಲಿದೆ. ಮದುವೆ, ಮಕ್ಕಳ ಭಾಗ್ಯದ ಶುಭ ಸುದ್ದಿ ಬರಲಿದೆ. ಇದರಿಂದ ಮನೆಯಲ್ಲಿ ನೆಮ್ಮದಿ ಜೊತೆ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ.

Read more Photos on
click me!

Recommended Stories