ಸಕ್ಕರೆ ಖಾಯಿಲೆ ವಾಸಿಯಾಗಬೇಕೆಂದ್ರೆ ಈ ಮಂದಿರಕ್ಕೆ ಭೇಟಿ ನೀಡಿ...

First Published Mar 3, 2020, 2:39 PM IST

ಸಕ್ಕರೆ ಖಾಯಿಲೆಯನ್ನು ಗುಣಪಡಿಸುವ ದೇವರು ಬಗ್ಗೆ ನೀವು ಕೇಳಿದ್ದೀರಾ? ಡಯಾಬಿಟಿಸ್ ಯಾ ಸಕ್ಕರೆ ಖಾಯಿಲೆ ಇತ್ತೀಚಿನ ದಿನಗಳಲ್ಲಿ ಕಾಮನ್. ಈ ಖಾಯಿಲೆ ಬಂದವರು ಅಸ್ಪತ್ರೆಗೆ ಹೋಗುವುದೂ ಅಷ್ಟೇ ಸಾಮಾನ್ಯ. ಆದರೆ ಸಕ್ಕರೆ ಖಾಯಿಲೆ ಗುಣಪಡಿಸುವ ಒಂದು ದೇವಸ್ತಾನ ಸಹ ಇದೆ. ತಮಿಳುನಾಡಿನ ಪುರಾತನ ವೆನ್ನಿ ಕರುಬೇಶ್ವರ ದೇವಸ್ಥಾನ ಸಕ್ಕರೆ ಖಾಯಿಲೆಯನ್ನು ಗುಣಪಡಿಸುವ ಎಂದು ನಂಬಲಾಗುತ್ತದೆ. 

ವೆನ್ನಿ ಕರುಂಬೇಶ್ವರ ದೇವಸ್ಥಾನವು ತಮಿಳನಾಡಿನ ತಿರುವರೂರು ಜಿಲ್ಲೆಯಾ ನೀಡಾಮಂಗಳಂ ಸಮೀಪದ ಕೊವಿಲ್ ವೆನ್ನಿ ಎಂಬಲ್ಲಿದೆ.
undefined
ತಿರುವೆನ್ನಿ ಈ ಸ್ಥಳದ ಐತಿಹಾಸಿಕ ಹೆಸರಾಗಿತ್ತು. ಮಾರ್ಚ್ ಮತ್ತು ಏಪ್ರಿಲ್ ತಿಂಗಳ 2,3,4 ನೇ ದಿನದಂದು ಸೂರ್ಯನ ಕಿರಣಗಳು ನೇರವಾಗಿ ದೇವರ ಮೇಲೆ ಬೀಳುತ್ತದೆ ಎಂದು ಹೇಳಲಾಗುತ್ತದೆ.
undefined
ಈ ದೇವಸ್ಥಾನದ ಶಿವನನ್ನು ಕರುಂಬೇಶ್ವರ ಮತ್ತು ಪಾರ್ವತಿಯನ್ನು ಸೌಂದರ ನೈಗಿ ಎಂದು ಕರೆಯಲಾಗುತ್ತದೆ.
undefined
ಈ ದೇವಸ್ಥಾನದಲ್ಲಿ ಶಿವಲಿಂಗ ವೆನ್ನಿ ಕರುಂಬೇಶ್ವರ ಹೆಸರಿನಿಂದ ಸಕ್ಕರೆ ಖಾಯಿಲೆಯನ್ನು ಗುಣಪಡಿಸುವ ದೇವರು ಎಂದೇ ಪ್ರಸಿದ್ಧ.
undefined
ಈ ದೇವಾಲಯದ ಶಿವಲಿಂಗವು ಕಬ್ಬಿನ ರಾಶಿಗಳಿಂದ ಆವೃತವಾಗಿರುವ ಹಾಗೆ ಗೋಚರಿಸುತ್ತದೆ.
undefined
ಇಲ್ಲಿನ ದೇವರು ಕಬ್ಬು (ಕರುಂಬು) ಮತ್ತು ಜಾಜಿ (ವೆನ್ನಿ) ಮರಗಳಿಂದ ಆವೃತವಾಗಿತ್ತು ಎಂಬ ನಂಬಿಕೆ ಇದೆ.
undefined
ದೇವರು ಸಕ್ಕರೆ ಖಾಯಿಲೆಯನ್ನು ಕಡಿಮೆ ಅಥವಾ ಗುಣಪಡಿಸುವನು ಎಂಬುದು ಈ ದೇವಸ್ಥಾನದ ಮಹಿಮೆ. ರವೆ ಮತ್ತು ಸಕ್ಕರೆಯ ವಿಶೇಷ ಮಿಶ್ರಣವನ್ನು ದೇವರಿಗೆ ಡಯಾಬಿಟಿಸ್‌ನ್ನು ಗುಣಪಡಿಸಲು ಅರ್ಪಿಸಲಾಗುತ್ತದೆ.
undefined
ರವೆ ಮತ್ತು ಸಕ್ಕರೆಯ ವಿಶೇಷ ಮಿಶ್ರಣವನ್ನು ದೇವಸ್ಥಾನದ ಸುತ್ತ ಇರುವೆಗಳಿಗಾಗಿ ಹರಡಲಾಗುತ್ತದೆ. ಇರುವೆಗಳು ಸಕ್ಕರೆಯನ್ನು ತಿನ್ನುವುದರಿಂದ ನಮ್ಮ ದೇಹದ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.
undefined
ಸಕ್ಕರೆ ಪೊಂಗಲ್‌ ಇಲ್ಲಿನ ಪ್ರಸಾದ. ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.
undefined
click me!