ಜ್ಯೋತಿಷ ಶಾಸ್ತ್ರವು ಒಂದು ವಿಜ್ಞಾನವಾಗಿದ್ದು, ಆಗರ್ಭ ಶ್ರೀಮಂತರು ಹಠಾತ್ತನೆ ಬೀದಿಪಾಲಾಗಲು ಕಾರಣಗಳನ್ನು ವಿವರಿಸುತ್ತದೆ. ಸಾಡೇಸಾತಿ, ಜಾತಕದಲ್ಲಿ ಶನಿ, ಮಂಗಳ, ರಾಹು-ಕೇತುಗಳಂತಹ ಗ್ರಹಗಳ ಕೆಟ್ಟ ಸ್ಥಾನ ಕಾನೂನು ಸಂಕಷ್ಟ, ಆರ್ಥಿಕ ನಷ್ಟ ತರಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಜ್ಯೋತಿಷವನ್ನು ವಿಜ್ಞಾನ ಎಂದು ಕರೆಯುತ್ತಾರೆ. ಏಕೆಂದರೆ ಜ್ಯೋತಿಷ ಶಾಸ್ತ್ರಕ್ಕೂ, ವಿಜ್ಞಾನಕ್ಕೂ ಅಪಾರ ನಂಟಿದೆ. ಆದರೆ ಇಂದು ದುಡ್ಡಿನ ಆಸೆಗೆ ಬಿದ್ದು, ಬಹುತೇಕ ಮಂದಿ ಜ್ಯೋತಿಷಿಗಳಾಗಿ, ಇಲ್ಲದ ಅನಾಚಾರ ಮಾಡುತ್ತಿರುವ ಕಾರಣಕ್ಕೆ ಈ ವಿಜ್ಞಾನಕ್ಕೆ ಕೆಟ್ಟ ಹೆಸರು ಬರುತ್ತಿದೆ. ಜ್ಯೋತಿಷ ಶಾಸ್ತ್ರವನ್ನೇ ನಂಬದ ಸ್ಥಿತಿ ಉಂಟಾಗಿದೆ. ಆದರೆ ಎಂದೋ ಆಗುವ ಗ್ರಹಣ, ಪ್ರಕೃತಿ ವಿಕೋಪ ಇವೆಲ್ಲವುಗಳ ಬಗ್ಗೆಯೂ ಇದೇ ಜ್ಯೋತಿಷ ಶಾಸ್ತ್ರವನ್ನು ಆಧರಿಸಿಯೇ ಸಹಸ್ರಾರು ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದರು ಎಂದರೆ ಇದರ ಮಹತ್ವ ತಿಳಿಯುತ್ತದೆ.
26
ಆಗರ್ಭ ಶ್ರೀಮಂತರು ರಾತ್ರೋರಾತ್ರಿ ಬೀದಿಪಾಲು
ಇದೀಗ ಇಲ್ಲಿ ಹೇಳ್ತಿರೋದು, ಕೆಲವು ಆಗರ್ಭ ಶ್ರೀಮಂತರು ರಾತ್ರೋರಾತ್ರಿ ಬೀದಿಪಾಲಾಗುವುದನ್ನು, ಜೈಲು ಸೇರುವುದನ್ನು, ಎಲ್ಲವನ್ನೂ ಕಳೆದುಕೊಂಡು ಬಿಕಾರಿಯಂತೆ ಆಗುವುದನ್ನು ಹಲವು ಬಾರಿ ನೋಡುತ್ತಿರುತ್ತೇವೆ. ಇಂಥ ರಾಜಕಾರಣಿಗಳು, ಉದ್ಯಮಿಗಳ, ಸಿನಿಮಾ ತಾರೆಯರ ವಿಷಯ ಎಲ್ಲರಿಗೂ ತಿಳಿದದ್ದೇ. ಹಾಗಿದ್ದರೆ ಇದಕ್ಕೆ ಕಾರಣ ಏನು ಎನ್ನುವುದನ್ನು ಜ್ಯೋತಿಷದಲ್ಲಿ ವಿವರಿಸಲಾಗಿದೆ.
36
ಸೀರಿಯಲ್ ಉದಾಹರಣೆ
ಇದಕ್ಕೆ ಸೀರಿಯಲ್ ಪ್ರೇಮಿಗಳಿಗೆ ಸೀರಿಯಲ್ದ್ದೇ ಉದಾಹರಣೆ ಕೊಡುವುದಾದರೆ ಸದ್ಯ ಅಮೃತಧಾರೆ (Amruthadhaare Serial) ಸೀರಿಯಲ್ನಲ್ಲಿ ವಿಲನ್ ಶಕುಂತಲಾ ದೇವಿ ಬೀದಿಪಾಲಾಗಿದ್ದಾಳೆ. ರಾಣಿಯಾಗಿ ಮೆರೆದಿದ್ದ ಅವಳನ್ನು ಸ್ವಂತ ಮಗನೇ ಒದ್ದು ಹೊರಕ್ಕೆ ಹಾಕಿದ್ದಾನೆ. ಈಗ ಅವಳ ಸ್ಥಿತಿ ಭಿಕ್ಷುಕಿಯಂತಾಗಿದೆ. ಇನ್ನು ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ನಲ್ಲಿ ರಾಜಕಾರಣಿ ವೀರು ಕಥೆನೂ ಹಾಗೆಯೇ ಆಗಿದೆ. ಇಲ್ಲಿ ಅವನಿಗೆ ಈಗ ತನ್ನ ಅಕ್ಕ ವಿಜಯಾಂಬಿಕಾ ವಿಲನ್ ಎನ್ನೋದು ತಿಳಿದಿದೆ. ಆದರೆ ಅದು ತಿಳಿಯುವಷ್ಟರಲ್ಲಿ ಅವಳು ಇಡೀ ಆಸ್ತಿಯ ಸಹಿಯನ್ನು ಹಾಕಿಸಿಕೊಂಡುಬಿಟ್ಟಿದ್ದಳು. ಅಕ್ಕನ ಮೇಲಿನ ವ್ಯಾಮೋಹದಿಂದ ಎಲ್ಲಾ ಪೇಪರ್ಗಳಿಗೂ ಸಹಿ ಹಾಕಿ ಈಗ ಬೀದಿಗೆ ಬಂದಿದ್ದಾನೆ.
ಇದು ಸೀರಿಯಲ್ ವಿಷ್ಯವಾಯ್ತು. ಆದರೆ ರಿಯಲ್ ಲೈಫ್ನಲ್ಲಿ ಹೀಗೆ ಆಗಲು ಕಾರಣವೇನು ಎನ್ನುವುದನ್ನು ನೋಡುವುದಾದರೆ, ಸಾಡೇಸಾತಿ ಪ್ರಭಾವ ಇದಕ್ಕೆ ಕಾರಣ. ಏಳೂವರೆ ವರ್ಷ ಈ ಪ್ರಭಾವ ಇರುತ್ತದೆ. ಆದರೆ ಎರಡನೆಯ ಹಂತದಲ್ಲಿ ಅಂದರೆ ಮೊದಲ ಎರಡೂವರೆ ವರ್ಷಗಳ ಬಳಿಕ ಶನಿ ವಿಪರೀತ ತೊಂದರೆ ಕೊಡುತ್ತಾನೆ. ಮನುಷ್ಯನಿಗೆ ಜೀವನದ ನಿಜವಾದ ಅರ್ಥ ಏನು ಎನ್ನುವುದು ಇದೇ ಸಂದರ್ಭದಲ್ಲಿ ಕಲಿಸುತ್ತಾನೆ ಶನಿ. ಆ ಸಮಯದಲ್ಲಿಯೇ ಇದಾಗಲೇ ಸಾಕಷ್ಟು ರಾಜಕಾರಣಿಗಳು, ಸಿನಿಮಾ ತಾರೆಯರು ಜೈಲು ಸೇರಿದ್ದರೆ, ಉದ್ಯಮಿಗಳು ದೇಶಬಿಟ್ಟು ಹೋಗಿದ್ದಾರೆ.
56
ಜಾತಕದಲ್ಲಿ ಹೀಗಿದ್ದರೆ...
ಇನ್ನು ಜಾತಕದ ವಿಷಯಕ್ಕೆ ಬರುವುದಾದರೆ ಗ್ರಹಗಳ ಸ್ಥಾನದಿಂದ ಇಂಥ ಭಯಾನಕ ದಿನಗಳು ಬರುತ್ತವೆ. ಶನಿ ಮತ್ತು ಮಂಗಳ ಗ್ರಹಗಳು ಪಾಪಗ್ರಹಳಾಗಿ ಮಾರ್ಪಟ್ಟರೆ ಅಂದರೆ ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೆ ಅಥವಾ ಪ್ರಬಲವಾಗಿದ್ದರೆ, ವ್ಯಕ್ತಿಯು ಕಾನೂನು ಸಂಕಷ್ಟ, ಬಂಧನ ಅಥವಾ ಜೀವನದಲ್ಲಿ ತೀವ್ರವಾದ ಅಡಚಣೆಗಳನ್ನು ಎದುರಿಸುತ್ತಾನೆ. ವ್ಯಯ ಸ್ಥಾನದಲ್ಲಿ ರವಿ ಅಂದರೆ 12ನೇ ಮನೆಗೆ ಬಂದಾಗ ಕೆಲಸಗಳು ಅರ್ಧಕ್ಕೆ ನಿಲ್ಲುವುದು, ಸ್ಥಿರತೆ ಇಲ್ಲದಿರುವುದು ಮತ್ತು ಆರ್ಥಿಕ ನಷ್ಟ ಜೊತೆಗೆ ಬೀದಿ ಪಾಲಾಗುವ ಪರಿಸ್ಥಿತಿ ಉಂಟಾಗಬಹುದು.
66
ವ್ಯಯ ಸ್ಥಾನದಲ್ಲಿ ಮಂಗಳನಿದ್ದರೆ ಏನಾಗುತ್ತದೆ?
ವ್ಯಯ ಸ್ಥಾನದಲ್ಲಿ ಮಂಗಳನಿದ್ದರೆ ದಾಂಪತ್ಯ ಜೀವನದಲ್ಲಿ ತೊಂದರೆ ಅಥವಾ ಸಂಗಾತಿಯ ಮರಣ ಸಂಭವಿಸಬಹುದು. ಗ್ರಹಗಳು ಸೂರ್ಯನಿಗೆ ಹತ್ತಿರವಾಗಿದ್ದಾಗ ಗ್ರಹಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ನಿಷ್ಕ್ರಿಯವಾಗುತ್ತವೆ. ಇದರಿಂದ ಆ ಗ್ರಹದ ಶುಭ ಫಲಗಳು ಸಿಗುವುದಿಲ್ಲ. ರಾಹು-ಕೇತುಗಳನ್ನು ನೆರಳು ಗ್ರಹಗಳು ಎನ್ನಲಾಗುತ್ತದೆ. ರಾಹು ದುರ್ಬಲನಾಗಿದ್ದರೆ ಮೆದುಳಿನ ತೊಂದರೆ, ಬುದ್ಧಿಭ್ರಮಣೆ, ಆರ್ಥಿಕ ನಷ್ಟ ಬರಬಹುದು. ಕೇತು ದುರ್ಬಲನಾಗಿದ್ದರೆ ಕಾಲುಗಳ ನೋವು, ನರಗಳ ದೌರ್ಬಲ್ಯ ಮತ್ತು ಹಠಾತ್ ರೋಗಗಳು ಬರಬಹುದು. ಶನಿ ದುರ್ಬಲವಾಗಿದ್ದರೆ ದೈಹಿಕ ದೌರ್ಬಲ್ಯ, ನೋವು, ಕೂದಲಿನ ಸಮಸ್ಯೆ ಮತ್ತು ಅಪಘಾತಗಳ ಭಯವಿರುತ್ತದೆ.