ಕುಂಕುಮವಿಟ್ಟು ಬಂಗಾಳದಲ್ಲಿ ಮುಸ್ಲಿಂ ಮಹಿಳೆ ಕಾಳಿ ದರ್ಶನ: ಬಾಂಗ್ಲಾದೇಶದಲ್ಲಿ ಅಲ್ಲೋಲ ಕಲ್ಲೋಲ

Published : May 15, 2026, 08:02 PM IST

ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಖಾನ್ ಪಶ್ಚಿಮ ಬಂಗಾಳದ ಕಾಳಿ ದೇಗುಲಕ್ಕೆ ಭೇಟಿ ನೀಡಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಹಿಂದೆ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಭೇಟಿಗೆ ಯತ್ನಿಸಿದಾಗ ಬಾಂಗ್ಲಾದೇಶದಿಂದ ಜೀವ ಬೆದರಿಕೆಗಳು ಬಂದಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ.

PREV
16
ದೀದಿ ಆಡಳಿತ ಅಂತ್ಯ

ಪಶ್ಚಿಮ ಬಂಗಾಳದಲ್ಲಿ ಹದಿನೈದು ವರ್ಷಗಳ ದೀದಿ ಆಡಳಿತ ಅಂತ್ಯವಾಗಿದೆ. ಬಿಜಪಿ ಅಧಿಕಾರಕ್ಕೆ ಬರುತ್ತಲೇ ಬಂದಾಗಿದ್ದ ಎಲ್ಲಾ ದೇಗುಲಗಳು ತೆರೆದಿವೆ. ಹಿಂದೂಗಳು ನಿರ್ಭೀತಿಯಿಂದ ತಮ್ಮ ದೇವರ ದರ್ಶನ ಪಡೆಯುತ್ತಿದ್ದಾರೆ. ಮಮತಾ ಬ್ಯಾನರ್ಜಿ ಕೆಳಕ್ಕೆ ಇಳಿಯುತ್ತಲೇ ಖುದ್ದು ಕಾಂಗ್ರೆಸ್‌ ಕಾರ್ಯಕರ್ತರೇ ಕೇಕೇ ಹಾಕಿ, ಟಿಎಂಸಿ ವಶಪಡಿಸಿಕೊಂಡಿದ್ದ ಕಾಂಗ್ರೆಸ್‌ ಕಚೇರಿಯನ್ನು ಒಡೆದು ಹರ್ಷೋದ್ಗಾರದಿಂದ ತಮ್ಮ ವಶಕ್ಕೆ ಪಡೆದು ಸರಸ್ವತಿ ಪೂಜೆಯನ್ನೂ ಸಲ್ಲಿಸಿದ್ದಾರೆ!

26
ಮುಸ್ಲಿಂ ಮಹಿಳೆ ಭೇಟಿ

ಇದರ ನಡುವೆಯೇ ಇದೀಗ ಕಾಳಿ ಮಾತೆಯ ದೇಗುಲದಲ್ಲಿ ಕುಂಕುಮವಿಟ್ಟು ಮುಸ್ಲಿಂ ಮಹಿಳೆಯೊಬ್ಬರು ಪಶ್ಚಿಮ ಬಂಗಾಳದಲ್ಲಿ ಭೇಟಿ ಕೊಟ್ಟರೆ, ಅತ್ತ ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿದೆಯಂತೆ!

36
ಭೇಟಿ ಕೊಟ್ಟವರು ಸುಪ್ರೀಂ ವಕೀಲೆ

ಅಂದಹಾಗೆ ಹೀಗೆ ಭೇಟಿ ಕೊಟ್ಟವರು ಸುಪ್ರೀಂಕೋರ್ಟ್‌‌ನ ಖ್ಯಾತ ವಕೀಲೆ ನಾಜಿಯಾ ಖಾನ್‌. ಇದಾಗಲೇ ನಾಜಿಯಾ ಖಾನ್‌ ಅವರು, ಹಿಂದೂ ಧರ್ಮದವರಿಗೂ ಅವರ ಧರ್ಮಪಾಲನೆ ಮಾಡಲು ಬೆದರಿಕೆಯೊಡ್ಡುತ್ತಿರುವವರು, ಮತಾಂತರ ಮಾಡಿಹಿಂದೂಗಳ ಶೋಷಣೆ ಮಾಡುತ್ತಿರುವವರಿಗೆ ಚಳಿ ಬಿಡಿಸಿದ್ದಾರೆ. ಪ್ರತಿಯೊಂದಕ್ಕೂ ಸಾಕ್ಷಿಯನ್ನು ಮುಂದಿಟ್ಟು ಮಾತನಾಡುವ ಅವರನ್ನು ಕಂಡರೆ ಭಯಬೀಳುವ ದೊಡ್ಡ ವರ್ಗವೇ ಇದೆ.

46
ಬಂಗಾಳದ ದೇಗುಲಕ್ಕೆ ಹೋದ್ರೆ ಬಾಂಗ್ಲಾದಿಂದ ಬೆದರಿಕೆ

ಇದೀಗ ನಾಜಿಯಾ ಅವರ ಹಲವು ದಶಕಗಳ ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಈ ಮೊದಲು ಕಾಳಿ ಮಂದಿರಕ್ಕೆ ಭೇಟಿ ನೀಡಲು ಮುಂದಾದಾಗ, ಪಶ್ಚಿಮ ಬಂಗಾಳದ ಸರ್ಕಾರ ಅದನ್ನು ಅಲ್ಲಿಯ ಗೂಂಡಾಗಳಿಗೆ ತಿಳಿಸುತ್ತಿತ್ತು. ಅದು ಎಷ್ಟು ವೇಗದಲ್ಲಿ ಹರಡುತ್ತಿತ್ತು ಎಂದರೆ, ಬಾಂಗ್ಲಾದೇಶದಿಂದ ನನಗೆ ಜೀವ ಬೆದರಿಕೆ ಬರುತ್ತಿತ್ತು. ಒಮ್ಮೆಯೂ ಕಾಳಿಯ ದರ್ಶನ ಮಾಡಲು ಬಿಟ್ಟಿರಲಿಲ್ಲ ಎಂದಿದ್ದಾರೆ.

56
ಗೂಂಡಾಗಳ ಛೂ ಬಿಡ್ತಿದ್ದ ಮಮತಾ

ಒಬ್ಬ ಮುಸ್ಲಿಂ ಲೇಡಿ ಕಾಳಿ ಮಂದಿರಕ್ಕೆ ಭೇಟಿ ನೀಡುವುದನ್ನು ಬಾಂಗ್ಲಾದೇಶದವರು ಒಪ್ಪದೇ ಇರುವುದು ಒಂದೆಡೆಯಾದರೆ, ಖುದ್ದು ಮಮತಾ ಬ್ಯಾನರ್ಜಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗೂಂಡಾಗಳನ್ನು ಛೂ ಬಿಡುತ್ತಿದ್ದ ಬಗ್ಗೆ ನಾಜಿಯಾ ಮಾತನಾಡಿದ್ದಾರೆ.

66
ಹಲವು ವರ್ಷಗಳ ಕನಸು ನನಸು

ಇದೀಗ ಹಲವು ವರ್ಷಗಳ ತಮ್ಮ ಕನಸು ನನಸಾಗಿದೆ ಎಂದು ನಾಜಿಯಾ ಖಾನ್‌ ಹೇಳಿದ್ದಾರೆ. ಕಾಳಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡೆ. ಇದರಿಂದ ನನ್ನ ಹಲವು ವರ್ಷಗಳ ಕನಸು ನನಸಾಗಿದೆ ಎಂದಿದ್ದಾರೆ.

Read more Photos on
click me!

Recommended Stories