ಮನೆಯ ನೈಋತ್ಯ ಭಾಗದಲ್ಲಿ ಟಾಯ್ಲೆಟ್ ಇರಕೂಡದು. ಆದಷ್ಟು ಅವನ್ನು ಮನೆಯಿಂದ ಪ್ರತ್ಯೇಕವಾಗಿರಿಸಿದರೆ ಒಳಿತು. ಇದು ಖಾಲಿ ಜೇಬಿಗೆ ಕಾರಣವಾಗುತ್ತದೆ.
ಗರುಡ ಪುರಾಣದಲ್ಲಿ, ಶ್ರೀ ಮಹಾವಿಷ್ಣುವು ಜನರು ಖಂಡಿತವಾಗಿಯೂ ತ್ಯಜಿಸಬೇಕಾದ ಐದು ಅಭ್ಯಾಸಗಳನ್ನು ವಿವರಿಸಿದ್ದಾರೆ. ನೀವು ಈ ಅಭ್ಯಾಸಗಳನ್ನು ಅನುಸರಿಸಿದರೆ, ನೀವು ಖಂಡಿತವಾಗಿಯೂ ಬಡತನಕ್ಕೆ ಹೋಗುತ್ತೀರಿ. ಹಾಗಾದ್ರೆ ಗುರುಡ ಪುರಾಣದಲ್ಲಿ ಹೇಳಿದ ಅಭ್ಯಾಸಗಳು ಯಾವವು?
ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ತಡವಾಗಿ ಏಳುವುದು, ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ, ಬೆಳಗ್ಗೆ ತಡವಾಗಿ ಏಳುವುದು ಕೆಟ್ಟ ಅಭ್ಯಾಸ. ಈ ಅಭ್ಯಾಸ ಇರುವವರು ಜೀವನದಲ್ಲಿ ಎಂದೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇಂಥವರು ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಹೇಳುತ್ತದೆ.