ಈ ರಾಶಿಯವರ ಜೀವನದಲ್ಲಿ ಅಡಗಿರುತ್ತೆ ಯಶಸ್ಸಿನ ಮಂತ್ರ; ಹಾಗಾಗಿ ಇವರು ತುಂಬಾನೇ ಸ್ಪೆಷಲ್

Published : Dec 08, 2024, 11:45 AM IST

ವೃಷಭ ರಾಶಿಯವರು ಶಾಂತ ಸ್ವಭಾವ, ಬುದ್ಧಿವಂತಿಕೆ ಮತ್ತು ಪರಿಶ್ರಮದಿಂದ ಗುರುತಿಸಿಕೊಳ್ಳುತ್ತಾರೆ. ಜಾತಕದಲ್ಲಿ ಗ್ರಹಗಳು ಬಲಿಷ್ಠವಾಗಿದ್ದರೆ ಅಪಾರ ಯಶಸ್ಸು ಗಳಿಸುತ್ತಾರೆ. ಇವರ ಅದೃಷ್ಟ ಸಂಖ್ಯೆಗಳು 2, 6 ಮತ್ತು 7.

PREV
17
ಈ ರಾಶಿಯವರ ಜೀವನದಲ್ಲಿ ಅಡಗಿರುತ್ತೆ ಯಶಸ್ಸಿನ ಮಂತ್ರ; ಹಾಗಾಗಿ ಇವರು ತುಂಬಾನೇ ಸ್ಪೆಷಲ್

ದ್ವಾದಶ ರಾಶಿಗಳಲ್ಲಿ ಕೆಲವು ರಾಶಿ ಚಕ್ರಗಳು ತುಂಬಾನೇ ವಿಶೇಷವಾಗಿರುತ್ತವೆ. ಹಾಗಾಗಿ ಇಂತಹ ರಾಶಿಗಳ ಜನರನ್ನು ತುಂಬಾನೇ ವಿಶೇಷ ಎಂದು ಪರಿಗಣಿಸಲಾಗುತ್ತದೆ.  ಈ ರಾಶಿಯವರ ಜಾತಕದಲ್ಲಿ ಗ್ರಹಗಳು ಬಲಿಷ್ಠವಾಗಿದ್ದು, ಇವರ ಜೀವನದಲ್ಲಿ ಯಶಸ್ಸು ಅಡಗಿರುತ್ತದೆ.

27

ಈ ರಾಶಿಯವರು ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ. ಯಾವುದೇ ಕೆಲಸವನ್ನು ಬಹಳ ಬುದ್ದಿವಂತಿಕೆಯಿಂದ ಮಾಡುವ ಮೂಲಕ ಅದರ ಸಂಪೂರ್ಣ ಸಫಲತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಈ ರಾಶಿಯವರ ಎಲ್ಲೇ ಇದ್ರೂ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತಾರೆ.

37

ಜಾತಕದಲ್ಲಿ ಗ್ರಹಗಳು ಬಲಿಷ್ಠವಾಗಿದ್ದ ಸಂದರ್ಭದಲ್ಲಿ ಅಪಾರ ಯಶಸ್ಸು ಈ ರಾಶಿಯ ಜನರಿಗೆ ಸಿಗುತ್ತದೆ. ನಾವು ಹೇಳುತ್ತಿರೋದು ವೃಷಭ ರಾಶಿಯವರ ಬಗ್ಗೆ. ಈ ರಾಶಿಯವರು ತುಂಬಾನೇ ಸ್ಪೆಷಲ್ ಆಗಿರುತ್ತಾರೆ.  ವೃಷಭ ರಾಶಿಯ ಗುಣಲಕ್ಷಣಗಳು ಮತ್ತು ಅದೃಷ್ಟ ಸಂಖ್ಯೆಗಳು ಇಲ್ಲಿವೆ.

47

ವೃಷಭ ರಾಶಿಯ ಜನರು ಪುಸ್ತಕ ಓದುವಿಕೆ, ಗಾಯನ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಯನ್ನು  ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, 2, 6 ಮತ್ತು 7 ವೃಷಭ ರಾಶಿಯವರ ಅದೃಷ್ಟದ ಸಂಖ್ಯೆಗಳಾಗಿರುತ್ತವೆ.

57

ಪರಿಶ್ರಮದಲ್ಲಿ ನಂಬಿಕೆ ಹೊಂದಿರುವ ವೃಷಭ ರಾಶಿಯವರು, ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಹಾಗಾಗಿ ಗೆಲುವು ಇವರದ್ದಾಗಿರುತ್ತದೆ. ಪರಿಶ್ರಮವೇ ಇವರ ಯಶಸ್ವಿ ಜೀವನದ ಕೀಲಿಯಾಗಿರುತ್ತದೆ. ಎಂದಿಗೂ ತಮ್ಮ ಕೆಲಸಗಳನ್ನು ನಿರ್ಲಕ್ಷ್ಯ ಮಾಡೋದಿಲ್ಲ.  ಎಲ್ಲರ ಜೊತೆಯಲ್ಲಿಯೂ ಅತ್ಯಂತ ಸ್ನೇಹದಿಂದ ಇರುತ್ತಾರೆ.

67

ವೃಷಭ ರಾಶಿಯವರು ಶಾಂತ ಮತ್ತು ತಾಳ್ಮೆಯ ಸ್ವಭಾವದವರಾಗಿರುತ್ತಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ ಪ್ರತಿಯೊಂದು ಮಾತನ್ನು ಯೋಚಿಸಿ ಮಾತನಾಡುತ್ತಾರೆ. ಇವರಾಡುವ ಪ್ರತಿ ಮಾತಿಗೂ ಸಮಾಜದಲ್ಲಿ ಒಂದು ತೂಕವಿರುತ್ತದೆ. ಶಾಂತ ಸ್ಥಳದಲ್ಲಿ ಇರಲು ಬಯಸೋ ಜನರು ಸಕಾರಾತ್ಮಕ ಯೋಚನೆಗಳಿಂದಲೇ ಗುರುತಿಸಿಕೊಳ್ಳುತ್ತಿರುತ್ತಾರೆ.

77

ವೃಷಭ ರಾಶಿಯವರು ಹಣಕಾಸಿನ ವಿಷಯದಲ್ಲಿಯೂ ಎಚ್ಚರಿಕೆಯ ಹೆಜ್ಜೆಯನ್ನಿರಿಸುತ್ತಾರೆ. ಹಣ ಹೂಡಿಕೆ ಮತ್ತು ಉಳಿತಾಯದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಹೊಂದಿರುತ್ತಾರೆ. ಆದ್ದರಿಂದ ಐಷಾರಾಮಿ ಜೀವನ ಇವರದ್ದಾಗಿರುತ್ತದೆ.

Disclaimer: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರೋ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories