Xiaomi Watch S1, S1 Active SpO2 ಟ್ರ್ಯಾಕಿಂಗ್ 117 ಸ್ಪೋರ್ಟ್ಸ್ ಮೋಡ್‌ಗಳೊಂದಿಗೆ ಲಾಂಚ್!‌

By Suvarna NewsFirst Published Mar 16, 2022, 12:52 PM IST
Highlights

Xiaomi 12 ಸರಣಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಶಾಓಮಿ ಹೊಸ ಸ್ಮಾರ್ಟ್‌ವಾಚಗಳನ್ನು ಬಿಡುಗಡೆ ಮಾಡಿದೆ.

Tech Desk: Xiaomi Watch S1, Xiaomi Watch S1 Active ಮಂಗಳವಾರ ಜಾಗತಿಕವಾಗಿ ಶಾಓಮಿ ಬಿಡುಗಡೆ ಮಾಡಿದೆ.  Xiaomi 12 ಸರಣಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಶಾಓಮಿ ಹೊಸ ಸ್ಮಾರ್ಟ್‌ವಾಚಗಳನ್ನು ಬಿಡುಗಡೆ ಮಾಡಿದೆ.   ಸ್ಮಾರ್ಟ್‌ವಾಚ್‌ಗಳು 200 ವಾಚ್ ಫೇಸ್‌ಗಳನ್ನು ನೀಡುತ್ತವೆ ಮತ್ತು ಬಳಕೆಯಲ್ಲಿರುವಾಗ 12 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಶಾಓಮಿ ವಾಚ್ S1 ಬೆಲೆಯನ್ನು $ 269 (ಸರಿಸುಮಾರು ರೂ. 20,500) ಗೆ ನಿಗದಿಪಡಿಸಲಾಗಿದ್ದು ವಾಚ್ S1 ಆಕ್ಟಿವ್ $199 (ಸುಮಾರು ರೂ. 15,100) ಬೆಲೆಯೊಂದಿಗೆ ಬಿಡುಗಡೆಯಾಗಿದೆ. 

ಶಾಓಮಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದಲ್ಲಿ Xiaomi 12 ಸರಣಿಯ ಜೊತೆಗೆ ವಾಚ್ S1 ಮತ್ತು Xiaomi ಬಡ್ಸ್ 3 ಅನ್ನು ಬಿಡುಗಡೆ ಮಾಡಿತ್ತು. ಸ್ಮಾರ್ಟ್ ವಾಚ್ CNY 1,049 (ಸುಮಾರು ರೂ. 12,300) ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿತ್ತು. ‌

ಇದನ್ನೂ ಓದಿಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದಿಸಿ ಜಾಗತಿಕ ರಫ್ತಿಗೆ ಚೀನಾ ಕಂಪನಿ Xiaomi, Oppo, Vivo ಚಿಂತನೆ!

ಶಾಓಮಿ ವಾಚ್ S1  ನೀಲಿ, ಕಪ್ಪು, ಕಂದು ಬಣ್ಣಗಳ ಮೂರು ಆಯ್ಕೆಗಳೊಂದಿಗೆ ಮತ್ತು ಬೆಳ್ಳಿ, ಕಪ್ಪು ಎರಡು ಫ್ಲೋರೋರಬ್ಬರ್ ಪಟ್ಟಿಯ ಆಯ್ಕೆಗಳೊಂದಿಗೆ ಖರೀದಿಸಬಹುದು ಶಾಓಮಿ ವಾಚ್ S1 ಆಕ್ಟಿವ್ ಮೂರು ಫ್ರೇಮ್ ಬಣ್ಣಗಳಲ್ಲಿ ಬರುತ್ತದೆ - ಮೂನ್ ವೈಟ್, ಸ್ಪೇಸ್ ಬ್ಲಾಕ್ ಮತ್ತು ಓಷನ್ ಬ್ಲೂ - ಮತ್ತು ಮೂನ್ ವೈಟ್, ಸ್ಪೇಸ್ ಬ್ಲ್ಯಾಕ್, ಓಷನ್ ಬ್ಲೂ, ಹಳದಿ, ಹಸಿರು ಮತ್ತು ಕಿತ್ತಳೆ ಸೇರಿದಂತೆ ಪಟ್ಟಿಗಳಿಗೆ ಆರು ಬಣ್ಣದ ಆಯ್ಕೆಗಳನ್ನು ನೀಡುತ್ತದೆ. ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್‌ಗಳು ಮತ್ತು ಇಯರ್‌ಬಡ್‌ಗಳ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಇನ್ನೂ ಘೋಷಿಸಲಾಗಿಲ್ಲ.

Xiaomi Watch S1, Xiaomi Watch S1 Active ಫೀಚರ್ಸ್: ಶಾಓಮಿ ಹೊಸ ಸ್ಮಾರ್ಟ್‌ವಾಚ್‌ಗಳು 1.43-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿವೆ, ಆದರೆ S1 ಸಫೈರ್‌ ಗ್ಲಾಸ ಗಾಜಿನ ರಕ್ಷಣೆಯೊಂದಿಗೆ ರೆಫೈನ್‌ಡ್ ಸ್ಟೇನ್‌ಲೆಸ್-ಸ್ಟೀಲ್ ಫ್ರೇಮನ್ನು ಹೊಂದಿದೆ.  Xiaomi Wactch S1 ಆಕ್ಟಿವ್ ಮೆಟಲ್ ಬೆಜೆಲ್‌ಗಳನ್ನು ಹೊಂದಿದೆ.‌

ಇದನ್ನೂ ಓದಿಟ್ರಿಪಲ್‌ ಕ್ಯಾಮೆರಾ ಸೆಟಪ್‌ನೊಂದಿಗೆ Xiaomi 12 ಸರಣಿಯ 3 ಸ್ಮಾರ್ಟ್‌ಫೋನ್‌ ಲಾಂಚ್‌!

Xiaomi Watch S1, Xiaomi Watch S1 Active 200 ವಾಚ್ ಫೇಸ್‌ಗಳಿಗೆ ಬೆಂಬಲವನ್ನು ನೀಡುತ್ತವೆ, ಇದನ್ನು ಕನೆಕ್ಟ್‌ ಮಾಡಿದೆ Android ಅಥವಾ iOS ಸ್ಮಾರ್ಟ್‌ಫೋನ್ ಮೂಲಕ ಕಸ್ಟಮೈಸ್ ಕೂಡ ಮಾಡಬಹುದು. ಎರಡೂ ಸ್ಮಾರ್ಟ್‌ವಾಚ್ Strava ಮತ್ತು Apple Health ಅಪ್ಲಿಕೇಶನ್‌ಗೆ ಬೆಂಬಲ ನೀಡುತ್ತಿದೆ. ಸ್ಮಾರ್ಟ್‌ವಾಚ್ 5ATM (50 ಮೀಟರ್) ವರೆಗೆ ನೀರು-ನಿರೋಧಕವಾಗಿವೆ ಎಂದು ಕಂಪನಿ ತಿಳಿಸಿದೆ. 

ಸ್ಮಾರ್ಟ್‌ವಾಚ್‌ಗಳು ಹೃದಯ ಬಡಿತ ಸಂವೇದಕ, ಫೆಮೇಲ್‌ ಹೆಲ್ತ್ ಟ್ರ್ಯಾಕಿಂಗ್ ಮತ್ತು ನಿದ್ರೆಯ ಮಾನಿಟರಿಂಗ್ ಜೊತೆಗೆ SpO2 ಮಾನಿಟರಿಂಗನ್ನು ಹೊಂದಿವೆ. ಅಲ್ಲದೆ, Xiaomi Watch S1 ಸರಣಿಯು 117 ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ. Xiaomi Watch S1 ಮತ್ತು Xiaomi Watch S1 Active ಬ್ಲೂಟೂತ್ v5.2 ಸಂಪರ್ಕದೊಂದಿಗೆ ಬರುತ್ತದೆ ಮತ್ತು ನಿಖರವಾದ ಸ್ಥಳ ಟ್ರ್ಯಾಕಿಂಗ್‌ಗಾಗಿ ಆನ್‌ಬೋರ್ಡ್ GNSS ಪೊಸಿಷಿನಿಂಗ್ ಬೆಂಬಲವನ್ನು ಹೊಂದಿದೆ. 

ಬಳಕೆದಾರರಿಗೆ ಹ್ಯಾಂಡ್ಸ್-ಫ್ರೀ ಧ್ವನಿ ಅನುಭವಕ್ಕಾಗಿ ಸ್ಮಾರ್ಟ್‌ವಾಚ್‌ಗಳು ಅಮೆಜಾನ್ ಅಲೆಕ್ಸಾವನ್ನು ಬೆಂಬಲವನ್ನು ಸಹ ಹೊಂದಿವೆ. ಇದಲ್ಲದೆ, ಸ್ಮಾರ್ಟ್ ವಾಚ್‌ಗಳು ಟಚ್‌ಲೆಸ್ ಪಾವತಿಗಳನ್ನು ಮಾಡಲು ಎನ್‌ ಎಫ್‌ಸಿಗೆ ಬೆಂಬಲವನ್ನು ನೀಡುತ್ತವೆ.

ಸ್ಮಾರ್ಟ್‌ವಾಚ್ ಒಂದೇ ಚಾರ್ಜ್‌ನಲ್ಲಿ ಒಟ್ಟು  12 ಗಂಟೆಗಳವರೆಗೆ ರನ್‌ಟೈಮ್‌ನ ನೀಡುತ್ತವೆ  ಎಂದು ಕಂಪನಿಯು  ಕ್ಲೈಮ್ ಮಾಡಿದೆ. ಬ್ಯಾಟರಿ-ಸೇವರ್ ಮೋಡ್‌ನಲ್ಲಿ ಬಳಸಿದಾಗ ಅವುಗಳು 24 ಗಂಟೆಗಳ ರನ್‌ಟೈಮನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. 

click me!