* ರಿಯಲ್‌ಮಿ 9 5ಜಿ ಸ್ಮಾರ್ಟ್‌ಫೋನ್ ಜತೆಗೆ ಟೆಕ್‌ಲೈಫ್ ವಾಚ್ 100 ಕೂಡ ಲಾಂಚ್
* ಹೊಸ ಫೀಚರ್‌ಗಳನ್ನು ಒಳಗೊಂಡಿರುವ ಈ ವಾಚ್ ಆರಂಭದಲ್ಲಿ 1,999 ರೂ.ಗೆ ಲಭ್ಯವಿದೆ
* ಈ ವಾಚ್ 1.69 ಇಂಚ್ ಕಲರ್ ಡಿಸ್‌ಪ್ಲೇ ಹೊಂದಿದ್ದು, ಅದು 530 ನಿಟ್ಸ್ ಬ್ರೈಟ್‌ನೆಸ್ ಒದಗಿಸುತ್ತದೆ.
Tech Desk: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನದೇ ಸ್ಪೇಸ್ ಕ್ರಿಯೇಟ್ ಮಾಡಿಕೊಳ್ಳುತ್ತಿರುವ ಚೀನಾ ಮೂಲದ ರಿಯಲ್‌ಮಿ ಕಂಪನಿಯು, ಫೋನುಗಳ ಜತೆಗೆ ಇತರ ಸಾಧನಗಳ ಮೂಲಕವೂ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದೆ. ಕಂಪನಿಯು ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ರಿಯಲ್ ಟೆಕ್ ಲೈಫ್ (Real TechLife Watch S100), ಟೆಕ್‌ಲೈಫ್ ಬಡ್ಸ್ ಎನ್100 (TechLife Buds N100) ಲಾಂಚ್ ಮಾಡಿದೆ. ಅಂದ ಹಾಗೆ, ರಿಯಲ್ ಟೆಕ್ ಲೈಫ್ ವಾಚ್ ಎಸ್ 100 ಸಾಕಷ್ಟು ಹೊಸ ಫೀಚರ್‌ಗಳು, ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಸಿಗಲಿದೆ.
ಬಣ್ಣದ ಡಿಸ್‌ಪ್ಲೇ, ವಾಟರ್ ರೆಸಿಸ್ಟಂಟ್, ದೀರ್ಘ ಕಾಲಿನ ಬ್ಯಾಟರಿ ಬಾಳಿಕೆ ಇತ್ಯಾದಿ ಸೇರಿದಂತೆ ಅನೇಕ ಹೊಸ ಫೀಚರ್‌ಗಳನ್ನು ಪಡೆಯಬಹುದಾಗಿದೆ. ಇದರ ಜತೆಗೆ, ಕಂಪನಿಯು ಟೆಕ್‌ಲೈಫ್ ಬಡ್ಸ್ ಎನ್ 100 ಕೂಡ ಲಾಂಚ್ ಮಾಡಿದ್ದು, ಇದು ನೆಕ್‌ಬ್ಯಾಂಡ್ ಸ್ಟೈಲ್ ಇಯರ್‌ಬಡ್ಸ್ ಆಗಿದ್ದು, 17 ಗಂಟೆಗಳ ಕಾಲ ಪ್ಲೇಬ್ಯಾಕ್ ಟೈಮ್ ನೀಡುತ್ತದೆ. ಕಂಪನಿಯು ತನ್ನ ರಿಯಲ್ ಮಿ 9 5ಜಿ ಸ್ಮಾರ್ಟ್‌ಫೋನ್ ಜತೆಗೆ ಈ ವಾಚ್ ಮತ್ತು ಇಯರ್ ಬಡ್ಸ್ ಕೂಡ ಬಿಡುಗಡೆ ಮಾಡಿದೆ ಎಂಬುದನ್ನ ಗಮನಿಸಬೇಕು.
undefined
ಇದನ್ನೂ ಓದಿ: Apple iPad Air Gen 5: ಆಪಲ್ ಐಪ್ಯಾಡ್ ಏರ್ ಜೆನ್ 5 ಬಿಡುಗಡೆ, ಏನೆಲ್ಲ ವಿಶೇಷ, ಬೆಲೆ ಎಷ್ಟಿದೆ?
ಏನೆಲ್ಲ ಫೀಚರ್‌ಗಳಿವೆ?: ಈಗಾಗಲೇ ಹೇಳಿದಂತೆ ರಿಯಲ್‌ಮಿ ಟೆಕ್‌ಲೈಫ್ ವಾಚ್ ಎಸ್ 100 (Realme TechLife watch S100) ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿವೆ. ಈ ವಾಚ್ 1.69 ಇಂಚ್ ಕಲರ್ ಡಿಸ್‌ಪ್ಲೇ ಹೊಂದಿದ್ದು, ಅದು 530 ನಿಟ್ಸ್ ಬ್ರೈಟ್‌ನೆಸ್ ಒದಗಿಸುತ್ತದೆ. ಇದು 24x7 ಹಾರ್ಟ್ ಬೀಟ್ ಮಾನಿಟರಿಂಗ್ ಅನ್ನು ತಲುಪಿಸಲು ಫೋಟೋಪ್ಲೆಥಿಸ್ಮೋಗ್ರಫಿ (Photoplethysmography -PPG) ಸೆನ್ಸರ್ ಅನ್ನು ಹೊಂದಿದೆ. ಚರ್ಮದ ಉಷ್ಣಾಂಶ ಮತ್ತು ರಕ್ತದ ಆಮ್ಲಜನಕದ ಮಟ್ಟಗಳು (SpO2) ಪರೀಕ್ಷಿಸುವ ಸಾಮರ್ಥ್ಯವನ್ನು ಈ ವಾಚ್ ಹೊಂದಿದೆ ಎನ್ನಲಾಗುತ್ತಿದೆ.
ಹಾಗಂತ ಇದನ್ನು ಯಾವುದೇ ಮೆಡಿಕಲ್ ಸಾಧನಗಳ ಬದಲಿಗೆ ಸಿದ್ಧಮಾಡಲಾಗಿದೆ ಎಂದು ಭಾವಿಸಿಕೊಳ್ಳಬಾರದು. ಈ ಸ್ಮಾರ್ಟ್‌ವಾಚ್ ಕೂಡ ಇತರ ಸ್ಮಾರ್ಟ್‌ವಾಚ್‌ಗಳ ರೀತಿಯಲ್ಲೇ ಆರೋಗ್ಯ ಕೇಂದ್ರೀತ ಫೀಚರ್‌ಗಳನ್ನು ಹೊಂದಿದ್ದು, ಬಳಕೆದಾರರಿಗೆ ತಕ್ಕಮಟ್ಟಿಗೆ ಹೆಲ್ತ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ. ಜತೆಗೆ ಈ ಸ್ಮಾರ್ಟ್ ವಾಚ್ ಚಟುವಟಿಕೆಯ ಟ್ರ್ಯಾಕಿಂಗ್‌ಗಾಗಿ ಮೂರು-ಅಕ್ಷದ ವೇಗವರ್ಧಕವನ್ನು ಸಹ ಒಳಗೊಂಡಿದೆ ಎಂದು ಹೇಳಬಹುದು.
ಇದನ್ನೂ ಓದಿ: iPhone 13, 13 Pro Green Version ಪ್ರೀ ಆರ್ಡರ್ ಆರಂಭ, ಬೆಲೆ ಎಷ್ಟು?
ರಿಯಲ್ ಮಿ ಟೆಕ್‌ಲೈಫ್ ವಾಚ್ ಎಸ್ 100(Realme TechLife Watch S100) IP68-ಪ್ರಮಾಣೀಕೃತ ಮೆಟಾಲಿಕ್-ಫಿನಿಶ್ ಬಿಲ್ಡ್‌ನಲ್ಲಿ ಬರುತ್ತದೆ, ಇದು ಗರಿಷ್ಠ 1.5 ಮೀಟರ್‌ಗಳವರೆಗೆ ನೀರಿನ ಪ್ರತಿರೋಧವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಬ್ಲೂಟೂತ್ v5.1 ಸಂಪರ್ಕವನ್ನು ಹೊಂದಿದೆ ಮತ್ತು ಕನಿಷ್ಠ Android 5.0 ಅಥವಾ iOS 11 ನಲ್ಲಿ ಚಾಲನೆಯಲ್ಲಿರುವ ಸಾಧನಗಳನ್ನು ಬೆಂಬಲಿಸುತ್ತದೆ. ಸ್ಮಾರ್ಟ್‌ವಾಚ್ 260mAh ಬ್ಯಾಟರಿಯನ್ನು ಒಳಗೊಂಡಿದೆ. ಇದನ್ನು ಒಂದೇ ಚಾರ್ಜ್‌ನಲ್ಲಿ 12 ದಿನಗಳ ಬಳಕೆಯನ್ನು ತಲುಪಿಸಲು ರೇಟ್ ಮಾಡಲಾಗಿದೆ. ಜೊತೆಗೆ, ಇದು 251x35.8x11.6mm ಅಳತೆ ಮತ್ತು 34 ಗ್ರಾಂ ತೂಗುತ್ತದೆ.
ಬೆಲೆ ಎಷ್ಟು?: ಇನ್ನು ಈ ಸಾಧನಗಳ ಬೆಲೆಗಳ ಬಗ್ಗೆ ಹೇಳುವುದಾದರೆ, ರಿಯಲ್‌ಮಿ ಟೆಕ್‌ಲೈಫ್ ವಾಚ್ ಎಸ್100 (Realme TechLife S100) ಸ್ಮಾರ್ಟ್‌ವಾಚ್‌ನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 2,499 ರೂ.ನಿಂದ ಆರಂಭವಾಗುತ್ತದೆ. ಹೀಗಿದ್ದಾಗ್ಯೂ, ಕಂಪನಿಯು ಆರಂಭಿಕ ಬೆಲೆಯಾಗಿ ಗ್ರಾಹಕರಿಗೆ 1,999 ರೂ.ಗೆ ಮಾರಾಟ ಮಾಡಲಿದೆ. ಗ್ರಾಹಕರು ಈ ಸಾಧನಗಳನ್ನು ಫ್ಲಿಪ್‌ಕಾರ್ಟ್ (Flipkart), ರಿಯಲ್‌ಮಿ ಡಾಟ್ ಕಾಂ (Realme.com) ಮತ್ತು ಆಯ್ದ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಮಾರ್ಚ್ 14ರಿಂದಲೇ ಈ ಸಾಧನಗಳು ಗ್ರಾಹಕರಿಗೆ ಮಾರಾಟಕ್ಕೆ ಸಿಗಲಿವೆ.