Boat Wave Pro 47 ಸ್ಮಾರ್ಟ್ ವಾಚ್ ಲಾಂಚ್, ಗಮನಸೆಳೆಯುವ ಫೀಚರ್‌ಗಳು!

By Suvarna News  |  First Published Mar 14, 2022, 3:38 PM IST

*ಭಾರತದಲ್ಲೇ ಉತ್ಪಾದನೆಯಾಗಿ ಲಾಂಚ್ ಆದ ಬೋಟ್ ಕಂಪನಿಯ ಮೊದಲ ವಾಚ್
*ದಿನದ 24 ಗಂಟೆಯೂ ಹೆಲ್ತ್ ಮಾನಿಟರಿಂಗ್ ಮಾಡಿಕೊಳ್ಳಲು ಸಾಧ್ಯವಾಗಲಿದೆ.
*30 ನಿಮಿಷದಲ್ಲಿ ಇಡೀ ಬ್ಯಾಟರಿ ಚಾರ್ಜ್. 7 ದಿನಗಳವರೆಗೂ ಬಾಳಿಕೆ ಬರುತ್ತದೆ


Tech Desk: ಆಡಿಯೋ ಮತ್ತು ವೀಯರಬಲ್‌ ಸಾಧನಗಳ ಮಾರಾಟದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಬೋಟ್ (Boat) ಇದೀಗ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್ ವಾಚ್ ಲಾಂಚ್ ಮಾಡಿದೆ. ಅಂದ ಹಾಗೆ, ಈಗ ಲಾಂಚ್ ಮಾಡಿರುವ ಕಂಪನಿ ಭಾರತದಲ್ಲಿ ಉತ್ಪಾದನೆ ಮಾಡುತ್ತಿರುವ ಮೊದಲ ಸ್ಮಾರ್ಟ್ ವಾಚ್. ಬೋಟ್ ವೇವ್ ಪ್ರೋ 47 (Boat Wave Pro 47), ಭಾರತದಲ್ಲಿ ಉತ್ಪಾದನೆಯಾಗಿ ಇದೀಗ ಮಾರುಕಟ್ಟೆಗೆ ಲಗ್ಗ ಇಟ್ಟಿರುವ ಸ್ಮಾರ್ಟ್ ವಾಚ್. ಸ್ವದೇಶಿ ಕಂಪನಿಯಾಗಿರುವ ಬೋಟ್, ಸ್ಮಾರ್ಟ್‌ ವೀಯರೇಬಲ್ ಸಾಧನಗಳು ಮಾತ್ರವಲ್ಲದೇ, ಆಡಿಯೋ ಸಾಧನಗಳಲ್ಲೂ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ ಮತ್ತು ಅದರಲ್ಲಿ ತಜ್ಞತೆಯನ್ನು ಪಡೆದುಕೊಂಡಿದೆ.

ಈಗ ಭಾರತದಲ್ಲೇ ತಯಾರಾದ ಸ್ಮಾರ್ಟ್‌ವಾಚ್ ಲಾಂಚ್ ಮಾಡುವ ಮೂಲಕ ತನ್ನ ವೀಯರೇಬಲ್ ಉತ್ಪನ್ನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಈಗ ಬಿಡುಗಡೆಯಾಗಿರುವ ಬೋಟ್ ವೇವ್ ಪ್ರೋ 47 (Boat Wave Pro 47) ಸಾಕಷ್ಟು ಆಶ್ಚರ್ಯಕರ ಫೀಚರ್‌ಗಳನ್ನು ಒಳಗೊಂಡಿವೆ. ಇವು  ಗ್ರಾಹಕರ ಅಗತ್ಯಗಳನ್ನು ಪೂರೈಸುವ ಗುಣವನ್ನು ಹೊಂದಿವೆ ಎಂಬುದು ಕಂಪನಿಯ ಹೇಳಿಕೆಯಾಗಿದೆ. ಈ ಹೊಸ ಸ್ಮಾರ್ಟ್ ‌ವಾಚ್‌ನಲ್ಲಿ ಬಳಕೆದಾರರು ದಿನದ ಇಪ್ಪತ್ತನಾಲ್ಕು ಗಂಟೆ ಹೆಲ್ಟ್ ಮಾನಿಟರಿಂಗ್, ಕಸ್ಟ್‌ಮೈಸ್ಡ್ ಫಿಟ್ನೆಸ್ ಪ್ಲ್ಯಾನ್ಸ್, ಲೈವ್ ಕ್ರಿಕೆಟ್ ಸ್ಕೋರ್ ಇತ್ಯಾದಿ ಸಂಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಈ ಹೊಸ ಫೀಚರ್‌ಗಳು ಗ್ರಾಹಕರಿಗೆ ಇಷ್ಟವಾಗುವ ಸಾಧ್ಯತೆ ಇದೆ. 

Tap to resize

Latest Videos

undefined

ಇದನ್ನೂ ಓದಿ: Realme TechLife Watch S100 ಲಾಂಚ್, ಫೀಚರ್‌ಗಳೇನು, ಬೆಲೆ ಎಷ್ಟು?

ಏನೆಲ್ಲ ವಿಶೇಷತೆಗಳಿವೆ?: ಭಾರತದಲ್ಲೇ ಉತ್ಪಾದನೆಯಾಗಿ ಲಾಂಚ್ ಆದ ಬೋಟ್‌ನ ಮೊದಲ ಸ್ಮಾರ್ಟ್‌ವಾಚ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬೋಟ್ ವೇವ್ ಪ್ರೋ 47 ಸ್ಮಾರ್ಟ್‌ವಾಚ್ ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ 1.69 ಇಂಚ್ ಎಚ್‌ಡಿ ಡಿಸ್‌ಪ್ಲೇ ಇದ್ದು, ಅದು ಸ್ಕ್ವೇರ್ ಡಯಲ್ ಒಳಗೊಂಡಿದೆ. ರೆಸ್ಪಾನ್ಸಿವ್ ಕ್ಯಾಪಾಕ್ಟಿವ್ ಟಚ್ ಇಂಟರ್ಫೇಸ್ ಕಾಣಬಹುದು. ಈ ಡಿಸ್‌ಪ್ಲೇ ನಿಮೆಗ 500+ ನೀಟ್ಸ್ ಬ್ರೈಟ್ನೆಸ್ ಮತ್ತು ಇದರ ಡಯಲ್ 100ಕ್ಕೂ ಅಧಿಕ ಕ್ಲೌಡ್ ಬೇಸ್ಡ್ ವಾಚ್ ಫೇಸ್‌ಗಳಿಗೆ ಸಪೋರ್ಟ್ ಮಾಡುತ್ತದೆ. ಬ್ರೈಟ್ ಕಲರ್, ಥೀಮ್‌ಗಳು ಇತ್ಯಾದಿಗಳನ್ನು ಇಲ್ಲಿ ಕಾಣಬಹುದು. 

ಈಗ ಬಿಡುಗಡೆಯಾಗಿರುವ ಬೋಟ್ ವೇವ್ ಪ್ರೋ 47 ಸ್ಮಾರ್ಟ್‌ವಾಚ್ ವಿಶೇಷವೊಂದಿದೆ. ಏನೆಂದರೆ, ಬಳಕೆದಾರರೇ ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಗ್ರಾಹಕರು ಗೂಗಲ್ ಪ್ಲೇ ಸ್ಟೋರ್‌ (Google Play Store) ಮತ್ತು ಆಪಲ್ ಆಪ್‌ (Apple App) ಸ್ಟೋರ್‌ನಲ್ಲಿರುವ ಬೋಟ್ ಕ್ರೆಸ್ಟ್ (Boat Crest) ಆಪ್ ಡೌನ್‌ಲೋಡ್ ಮಾಡಿಕೊಂಡು, ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಿಕೊಳ್ಳಬಹುದು.

ಇದನ್ನೂ ಓದಿBSNL New Plan: 329 ರೂ. ಭಾರತ ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್, ಇಂಟರ್ನೆಟ್ ವೇಗ ಎಷ್ಟು, ಏನೆಲ್ಲ ಸಿಗುತ್ತೆ?

ಆರೋಗ್ಯ ಮತ್ತು ಫಿಟ್ನೆಸ್‌ಗೆ ಸಂಬಂಧಿಸಿದಂತೆ ಸಾಕಷ್ಟು ಫೀಚರ್‌ಗಳನ್ನು ಇದರಲ್ಲಿ ಕಾಣಬಹುದಾಗಿದೆ. ಇದರಲ್ಲಿ 24 ಗಂಟೆಯೂ ಹಾರ್ಟ್ ರೇಟ್ ಮಾನಿಟರಿಂಗ್, ಉಷ್ಣಾಂಶ ಮಾನಿಟರಿಂಗ್, ರಕ್ತದಲ್ಲಿನ ಆಮ್ಲಜನಿಕ ಪತ್ತೆ ಸೇರಿದಂತೆ ಇನ್ನಿತರ ಸಂಗತಿಗಳನ್ನುತಿಳಿದುಕೊಳ್ಳಬಹುದಾಗಿದೆ. ಬಹು ಸ್ಪೋರ್ಟ್ಸ್ ಮೋಡ್‌ನೊಂದಿ ಈ ಸ್ಮಾರ್ಟ್‌ವಾಚಿನಲ್ಲಿ ನೀವು ಡೈಲಿ ಆಕ್ಟಿವಿಟಿ ಟ್ರ್ಯಾಕರ್ ಕೂಡ ಇರುವುದನ್ನು ಕಾಣಬಹುದಾಗಿದೆ. ಇನ್ನು ಬ್ಯಾಟರಿ ಬಗ್ಗೆ ಹೇಳುವುದಾದರೆ, ಈ ಬ್ಯಾಟರಿ ಫುಲ್ ಚಾರ್ಜ್ ಆಗಲು ಕೇವಲ 30 ನಿಮಿಷ ಸಾಕು. ಒಮ್ಮೆ ಚಾರ್ಜ್ ಆದರೆ ಗರಿಷ್ಠ 7 ದಿನಗಳ ಕಾಲ ಬಳಸಬಹುದಾಗಿದೆ.

ಬೆಲೆ ಎಷ್ಟು?: ಬೋಟ್ ವೇವ್ ಪ್ರೋ 47 ಸ್ಮಾರ್ಟ್‌ವಾಚ್ ಒಟ್ಟು ಮೂರು ಬಣ್ಣಗಳಲ್ಲಿ ಆಯ್ಕೆಗೆ ದೊರೆಯಲಿದೆ. ಆಕ್ಟಿವ್ ಬ್ಲ್ಯಾಕ್, ದೀಪ್ ಬ್ಲ್ಯೂ ಮತ್ತು ಪಿಂಕ್ ಬಣ್ಣಗಳ ಆಯ್ಕೆಯ ಸಿಗಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ವಾಚ್ ಬೆಲೆ 3199 ರೂ. ಇದ್ದು, ಕಂಪನಿ ಅಧಿಕೃತ ಜಾಲತಾಣದಿಂದ ಖರೀದಿಸಬಹುದಾಗಿದೆ. 

click me!