ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್!

By Suvarna NewsFirst Published Jan 30, 2021, 12:22 PM IST
Highlights

ಯಾವುದೇ ಕೇಬಲ್, ಚಾರ್ಜಿಂಗ್ ಸ್ಟ್ಯಾಂಡ್ ಇಲ್ಲದೇ ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಚಾರ್ಜ್ ಆಗುವಂಥ ತಂತ್ರಜ್ಞಾನವನ್ನು ಶಿಯೋಮಿ ಅಭಿವೃದ್ಧಿಪಡಿಸಿದೆ. ಈ ಹೊಸ ತಂತ್ರಜ್ಞಾನದ  ಮೂಲಕ ಮನೆಯಲ್ಲಿ ನೀವು ಒಂದಕ್ಕಿಂತ ಹೆಚ್ಚು ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಕಂಪನಿ ಇನ್ನು ಈ ತಂತ್ರಜ್ಞಾನವನ್ನು ಸಾರ್ವಜನಿಕ ಬಳಕೆಗೆ ಬಿಟ್ಟಿಲ್ಲ.

ನಿಮ್ಮ ಮನೆಯ ಕೋಣೆಯೊಂದರಲ್ಲಿ ಯಂತ್ರವೊಂದಿದೆ. ಆ ಯಂತ್ರದ ಮೂಲಕ ನಿಮ್ಮ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಸ್ತಂತುವಾಗಿ ಮತ್ತು ಚಾರ್ಜಿಂಗ್ ಸ್ಟ್ಯಾಂಡ್ ಇಲ್ಲದೇ ಚಾರ್ಜ್ ಮಾಡಿಕೊಳ್ಳುತ್ತೀರಿ!

ಈ ಕಲ್ಪನೆ ಚೆನ್ನಾಗಿದೆಯಲ್ಲ. ಹಾಲಿವುಡ್ ಮೂವಿಯಲ್ಲಿ ಬರುವ ಫ್ಯಾಂಟಿಸಿ ಅನ್ನಿಸ್ತಾ  ಇದೆಯಲ್ಲ. ಆದರೆ, ಈ ಮೇಲೆ ಹೇಳಿದ್ದು ಅಸಲಿ ಕತೆ. ಹೌದು, ಯಾವುದೇ ಕೇಬಲ್, ಚಾರ್ಚಿಂಗ್ ಸ್ಟ್ಯಾಂಡ್ ಇಲ್ಲದೇ ಸ್ಮಾರ್ಟ್‌ಫೋನ್ ಅನ್ನು ಚಾರ್ಜಿಂಗ್ ಮಾಡಬಹುದು. ಅಂಥ ತಂತ್ರಜ್ಞಾನವನ್ನು ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ದೈತ್ಯ ಕಂಪನಿ ಶಿಯೋಮಿ ಶುಕ್ರವಾರ ಜಗತ್ತಿಗೆ ಅನಾವರಣ ಮಾಡಿದೆ.

ಫೆ.4ಕ್ಕೆ ರಿಯಲ್‌ಮಿ X7 5G ಬಿಡುಗಡೆ; ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್?

ಶಿಯೋಮಿ ಅನಾವರಣ ಮಾಡಿದ ತಂತ್ರಜ್ಞಾನ ಹೆಸರು ಎಂಐ ಏರ್ ಜಾರ್ಜ್ ಟೆಕ್ನಾಲಜಿ. ವೈರ್‌ಲೆಸ್ ಚಾರ್ಜಿಂಗ್ ಪದ್ಧತಿಗಳಲ್ಲೇ ಶಿಯೋಮಿಯ ಈ ಏರ್ ಚಾರ್ಜ್ ಟೆಕ್ನಾಲಜಿ ಕ್ರಾಂತಿಕಾರ ಎನಿಸಿಕೊಳ್ಳಲಿದೆ. ಎಂಐ ಏರ್ ಚಾರ್ಜ್ ತಂತ್ರಜ್ಞಾನವು ಯಾವುದೇ ಕೇಬಲ್‌ಗಳು ಅಥವಾ ವೈರ್‌ಲೆಸ್ ಚಾರ್ಜಿಂಗ್ ಸ್ಟ್ಯಾಂಡ್‌ ಇಲ್ಲದೇ ಎಲೆಕ್ಟ್ರಾನಿಕ್ ಸಾಧನಗಳನ್ನು ದೂರದಿಂದಲೇ ಚಾರ್ಜ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಈಗ ಹೊಸ ತಂತ್ರಜ್ಞಾನದೊಂದಿಗೆ ನಾವು ಅಧಿಕೃತವಾಗಿ ಚಾರ್ಜ್ ಶಕೆಗೆ ಪಾದರ್ಪಣೆ ಮಾಡುತ್ತಿದ್ದೇವೆ ಎಂದು ಶಿಯೋಮಿ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.

ಸ್ಪೇಷ್ ಪೋಜಿಷನ್ ಮತ್ತು ಎನರ್ಜಿ ಟ್ರಾನ್ಷಿಮಿಷನ್‌ನಲ್ಲಿ ಶಿಯೋಮಿಯ ದೂರದಿಂದಲೇ ಚಾರ್ಚಿಂಗ್ ಮಾಡುವ ತಂತ್ರಜ್ಞಾನದ ಮುಖ್ಯ ಸಂಗತಿಯು ಅಡಗಿದೆ. ಶಿಯೋಮಿಯ ಸ್ವಯಂ-ಅಭಿವೃದ್ಧಿಪಡಿಸಲಾದ ಪ್ರತ್ಯೇಕ ಚಾರ್ಜಿಂಗ್ ಆಸರೆಗಂಬವು ಐದು ಹಂತದ ಹಸ್ತಕ್ಷೇಪ ಆಂಟೆನಾಗಳನ್ನು ಒಳಗೊಂಡಿದೆ ಮತ್ತು ಇದು ಸ್ಮಾರ್ಟ್‌ಫೋನ್‌ನ ಸ್ಥಳವನ್ನು ನಿಖರವಾಗಿ ಪತ್ತೆ ಮಾಡುತ್ತದೆ. 144 ಆಂಟೆನಾಗಳಿಂದ ಕೂಡಿದ ಒಂದು ಹಂತದ ನಿಯಂತ್ರಣ ರಚನೆಯು ಮಿಲಿಮೀಟರ್ ಅಗಲದ ತರಂಗಗಳನ್ನು ನೇರವಾಗಿ ಫೋನ್‌ಗೆ ಬೀಮ್‌ಫಾರ್ಮಿಂಗ್ ಮೂಲಕ ರವಾನಿಸುತ್ತದೆ.

ರೂ.11ರ ಪ್ಲ್ಯಾನ್‌‌‌‌ನಲ್ಲಿ 1GB ಡೇಟಾ: 2.51 ಕೋಟಿ ಚಂದಾದಾರರು!

ಇದೇ ವೇಳೆ, ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಶಿಯೋಮಿಯು ಬಿಲ್ಟ್ ಇನ್ ಬೀಕನ್ ಆಂಟೆನಾ ಮತ್ತು ಸ್ವೀಕರಿಸುವ ಆಂಟೆನಾ ಅರೇ ನೊಂದಿಗೆ ಆಂಟೆನಾ ಶ್ರೇಣಿಯನ್ನು ಸಹ ಅಭಿವೃದ್ಧಿಪಡಿಸಿದೆ.  ಬೀಕನ್ ಅಂಟೆನಾ ಪೋಜಿಷನ್ ಮಾಹಿತಿಯನ್ನು ಕಡಿಮೆ ಶಕ್ತಿಯನ್ನು ಸ್ವೀಕರಿಸುವುದರೊಂದಿಗೆ ಸಾದರಪಡಿಸುತ್ತದೆ. ಇನ್ನು 14 ಆಂಟೆನಾಗಳಿಂದ ಕೂಡಿದ ರಿಸಿವಿಂಗ್ ಆಂಟೆನಾ ಚಾರ್ಜಿಂಗ್ ಆಸರೆಗಂಬದಿಂದ ಹೊರಸೂಸಲ್ಪಟ್ಟ ಮಿಲಿಮೀಟರ್ ತರಂಗಗಳ ಸಂಕೇತವನ್ನು ರೆಕ್ಟಿಫೈಯರ್ ಸರ್ಕ್ಯೂಟ್ ಮೂಲಕ ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಮತ್ತು ವೈಜ್ಞಾನಿಕ ಚಾರ್ಜಿಂಗ್ ಅನುಭವವನ್ನು ವಾಸ್ತವನ್ನಾಗಿಸುತ್ತದೆ. ಹೀಗೆ ಯಾವುದೇ ಕೇಬಲ್ ಇಲ್ಲದೇ ಮತ್ತೆ ಚಾರ್ಜಿಂಗ್ ಸ್ಟ್ಯಾಂಡ್ ಇಲ್ಲದೇ ಎಂಐ ಏರ್ ಚಾರ್ಜರ್ ಮೂಲಕ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮಾಡಬಹುದು.

ಸದ್ಯಕ್ಕೆ ಶಿಯೋಮಿ ರಿಮೋಟ್ ಚಾರ್ಜಿಂಗ್ ಟೆಕ್ನಾಲಜಿ ಕೆಲವೇ ಮೀಟರ್‌ ಸುತ್ತಳತೆಯಲ್ಲಿ 5 ವ್ಯಾಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದ್ದು ಒಂದೇ ಸಾಧನಕ್ಕೆ ಚಾರ್ಚಿಂಗ್ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿ ಏಕಕಾಲಕ್ಕೆ ಬಹು ಸಾಧನಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಆದರೆ ಅವು 5 ವ್ಯಾಟ್ ಸಾಧನಗಳಿಗೆ ಸಪೋರ್ಟ್ ಮಾಡುವಂತಿರಬೇಕು. ಹಾಗೆಯೇ, ಯಾವುದೇ  ಭೌತಿಕ ಅಡ್ಡಿಗಳು ರಿಮೋಟ್ ಚಾರ್ಜಿಂಗ್ ದಕ್ಷತೆಯನ್ನು ಕುಂದಿಸುವುದಿಲ್ಲ.

Mi Notebook 14 (IC) ಬಿಡುಗಡೆ, ಬೆಲೆ ಎಷ್ಟಿದೆ ಗೊತ್ತಾ?

ಸದ್ಯಕ್ಕೆ ಎಂಐ ಏರ್ ಚಾರ್ಜ್ ತಂತ್ರಜ್ಞಾನವನ್ನು ಇನ್ನೂ ಸಾರ್ವಜನಿಕ ಬಳಕೆಗೆ ಅನುಮತಿ ನೀಡಿಲ್ಲ. ಕಂಪನಿ ಇನ್ನೂ ಇದನ್ನು ಬಳಸಿ ಪರೀಕ್ಷಿಸುವ ಹಂತದಲ್ಲಿದೆ. ಎಂಐ ಏರ್ ಚಾರ್ಜ್ ತಂತ್ರಜ್ಞಾನದಿಂದಾಗಿ ಆರೋಗ್ಯ ಸಮಸ್ಯೆಗಳು ಏನಾದರೂ ಉಂಟಾಗಿಯವೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಲ್ಲ. ಇಷ್ಟು ಮಾತ್ರವಲ್ಲದೇ ವಿಸ್ತೃತವಾದ ಮಾಹಿತಿಯನ್ನು ಕಂಪನಿಯೂ ಪೂರ್ತಿಯಾಗಿ ಬಿಟ್ಟುಕೊಟ್ಟಿಲ್ಲ. ಆದರೆ, ಇದೊಂದು ಕ್ರಾಂತಿಕಾರಕ ತಂತ್ರಜ್ಞಾನವು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂಬರುವ ದಿನಗಳಲ್ಲಿ ಇದರ ಉಪಯೋಗದ ಸಾಧ್ಯ ಸಾಧ್ಯತೆಗಳು ಹೆಚ್ಚಬಹುದು.

click me!