ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ವಾಶಿಂಗ್ ಮಶಿನ್‌ಗಳಂತಹ ವಿವಿಧ ವರ್ಗಗಳಲ್ಲಿ ಆಕರ್ಷಕ ಕೊಡುಗೆಗಳನ್ನು ರಿಲಯನ್ಸ್ ಡಿಜಿಟಲ್ ಇಂಡಿಯಾ ಘೋಷಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು(ಜ.21): ಈ ಗಣರಾಜ್ಯದ ದಿನದಂದು, ರಿಲಾಯನ್ಸ್ ಡಿಜಿಟಲ್ ತನ್ನ ಆಕರ್ಷಕ ‘ಡಿಜಿಟಲ್ ಇಂಡಿಯಾ ಸೇಲ್’ ಮೂಲಕ ವಾಪಸಾಗಿದೆ. ಡಿಜಿಟಲ್ ಇಂಡಿಯಾ ಸೇಲ್ ವಿಶೇಷ ಡೀಲ್‌ಗಳು ಮತ್ತು ಅದ್ಭುತ ಕೊಡುಗೆಗಳನ್ನು 2021 ಜನವರಿ 22 ರಿಂದ 26 ರ ವರೆಗೆ ವಿಶಾಲ ಶ್ರೇಣಿಯ ಎಲೆಕ್ಟ್ರಾನಿಕ್ಸ್‌ನಲ್ಲಿ ಒದಗಿಸುತ್ತಿದೆ.
ರಿಲಯನ್ಸ್ ಡಿಜಿಟಲ್‌ನಲ್ಲಿ ಭರ್ಜರಿ ಆಫರ್; Apple ಐಪ್ಯಾಡ್, ವಾಚ್ ಪ್ರಿ ಬುಕಿಂಗ್!.
ಗಣರಾಜ್ಯ ದಿನದ ಸಂಭ್ರಮಾಚರಣೆಯನ್ನು ಆರಂಭಿಸಲು, ರಿಲಾಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಸಿಟಿ, ಐಸಿಐಸಿ ಮತ್ತು ಕೊಟಾಕ್ ಮಹಿಂದ್ರಾ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಇಎಂಐ/ಇಎಂಐ ಹೊರತಾದ ವಹಿವಾಟುಗಳ ಮೇಲೆ ಗರಿಷ್ಠ ರೂ. 10,000/-* ರವರೆಗೆ 10% ಇನ್‌ಸ್ಟಂಟ್ ರಿಯಾಯಿತಿಯನ್ನು ರಿಲಾಯನ್ಸ್ ಡಿಜಿಟಲ್ ಒದಗಿಸುತ್ತದೆ. ಕ್ಯಾಶ್‌ಬ್ಯಾಕ್ ಒದಗಿಸಲು ಕಾರ್ಡ್‌ಲೆಸ್ ಇಎಂಐ ವಹಿವಾಟು ಸೇರಿದಂತೆ ಕೊಟಾಕ್ ಮಹಿಂದ್ರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ ಗೃಹಬಳಕೆ ಸಾಮಗ್ರಿಯ ಸಾಲ ವಹಿವಾಟುಗಳ ಮೇಲೆ ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ರಿಲಯನ್ಸ್ ಡಿಜಿಟಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 ಲಾಂಚ್
ಡಿಜಿಟಲ್ ಇಂಡಿಯಾ ಸೇಲ್‌ನೊಂದಿಗೆ, ಟೆಲಿವಿಷನ್‌ಗಳು, ಹೋಮ್ ಅಪ್ಲೈಯನ್ಸ್‌ಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಅಕ್ಸೆಸರಿಸ್, ವೇರಬಲ್‌ಗಳು ಮತ್ತು ಇನ್ನೂ ಹೆಚ್ಚಿನವುಗಳು ಸೇರಿದಂತೆ ವಿವಿಧ ಉತ್ಪನ್ನ ವಿಭಾಗಗಳಲ್ಲಿ ಉತ್ತಮ ಬೆಲೆಗಳನ್ನು ಮತ್ತು ಇಎಂಐ ಆಯ್ಕೆಗಳನ್ನು ಗ್ರಾಹಕರು ಆನಂದಿಸಬಹುದು. ರಿಲಾಯನ್ಸ್ ಡಿಜಿಟಲ್ ಸ್ಟೋರ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಅಥವಾ ರಿಲಾಯನ್ಸ್ ವೆಬ್‌ಸೈಟ್ ಮೂಲಕ ಗ್ರಾಹಕರು ಪಡೆಯಬಹುದು ಮತ್ತು ಇನ್‌ಸ್ಟಾ ಡೆಲಿವರಿ (3 ಗಂಟೆಗಳೊಳಗೆ ಡೆಲಿವರಿ) ಮತ್ತು ಸ್ಟೋರ್ ಪಿಕ್ ಅಪ್ ಆಯ್ಕೆಗಳನ್ನು ತಮ್ಮ ಸಮೀಪದ ಸ್ಟೋರ್‌ಗಳಿಂದ ಗ್ರಾಹಕರು ಪಡೆಯಬಹುದು.
ಹೊಸವರ್ಷಕ್ಕೆ ಜಿಯೋ ಬಂಪರ್ ಕೊಡುಗೆ.. ಇಮ್ಮುಂದೆ ಎಲ್ಲಾ ಫ್ರೀ..ಫ್ರೀ
ಡಿಜಿಟಲ್ ಇಂಡಿಯಾ ಸೇಲ್ ವೇಳೆ, ರಿಲಾಯನ್ಸ್ ಡಿಜಿಟಲ್ ವಿವಿಧ ವಿಭಾಗಗಳಲ್ಲಿ ಆಕರ್ಷಕ ಕೊಡುಗೆಗಳನ್ನು ರಿಲಾಯನ್ಸ್ ಡಿಜಿಟಲ್ ಹೊಂದಿದೆ. ಇತ್ತೀಚಿನ ಗ್ಯಾಜೆಟ್‌ಗಳಿಗಾಗಿ ಹುಡುಕುತ್ತಿರುವ ಗ್ರಾಹಕರಿಗೆ ಡಿಜಿಟಲ್ ಇಂಡಿಯಾ ಸೇಲ್ ಉತ್ತಮ ತಾಣವಾಗಿದೆ. ರೂ. 49,650/-* ರಿಂದ ಆರಂಭವಾಗುವ ಐಫೋನ್ 12 ಮತ್ತು ರೂ. 15,999/- ರಿಂದ ಆರಂಭವಾಗುವ ಸ್ಯಾಮ್‌ಸಂಗ್ ವಾಚ್ ಎಲ್‌ಟಿಇ (42 ಎಂಎಂ) ಕೆಲವು ಅದ್ಭುತ ಕೊಡುಗೆಗಳಾಗಿವೆ. ಆಕರ್ಷಕ ದರ ರೂ. 39,999/- ರಲ್ಲಿ ಜನಪ್ರಿಯ ಸ್ಯಾಮ್‌ಸಂಗ್ ಎಸ್20 ಎಫ್‌ಇ 256 ಜಿಬಿ ಇದೆ.
ಡಿಜಿಟಲ್ ಇಂಡಿಯಾ ಸೇಲ್‌ನಲ್ಲಿ ವಿಶಾಲ ಶ್ರೇಣಿಯ ಲ್ಯಾಪ್‌ಟಾಪ್‌ಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ಒದಗಿಸಲಾಗಿದೆ. ಅತ್ಯಂತ ಜನಪ್ರಿಯ ಡೆಲ್ ಇನ್‌ಸ್ಪಿರಾನ್ 5490 ಥಿನ್ ಆಂಡ್ ಲೈಟ್ ಡಿಸೈನ್, 10 ಜೆನ್ ಕೋರ್ ಐ5 ಪ್ರೊಸೆಸರ್, 512 ಎಸ್‌ಎಸ್‌ಡಿ ಸ್ಟೊರೇಜ್, 8ಜಿಬಿ ರ್ಯಾಮ್, 2ಜಿಬಿ ಡೆಡಿಕೇಟ್ ಮಾಡಿದ ಗ್ರಾಫಿಕ್ಸ್ ಮೆಮೊರಿ ಮತ್ತು ಮೊದಲೇ ಇನ್‌ಸ್ಟಾಲ್ ಮಾಡಿದ ಮೈಕ್ರೋಸಾಫ್ಟ್ ಆಫೀಸ್, ಈಗ ವಿಶೇಷವಾಗಿ ರಿಲಾಯನ್ಸ್ ಡಿಜಿಟಲ್‌ನಲ್ಲಿ ಲಭ್ಯವಿದ್ದು, ಹಿಂದೆಂದೂ ಕಾಣದ ಬೆಲೆ ರೂ. 61,999/- ರಲ್ಲಿ ಲಭ್ಯವಿದೆ. ಮೈಕ್ರೋಸಾಫ್ಟ್ ಪ್ರೀ ಇನ್‌ಸ್ಟಾಲ್ ಮಾಡಿದ ಇಂಟೆಲ್‌ನ ಇತ್ತೀಚಿನ 10ನೇ ಜೆನ್ ಐ3 ಲ್ಯಾಪ್‌ಟಾಪ್‌ಗಳು ರೂ. 33,999/- ರಲ್ಲಿ ಲಭ್ಯ. ಆಸುಸ್ ಇಬುಕ್ 2 ವರ್ಷದ ವಾರಂಟಿಯೊಂದಿಗೆ ರೂ. 18,999/- ರಲ್ಲಿ ಮತ್ತು ಕೇವಲ ರೂ. 1,000/- ದಲ್ಲಿ ರೂ. 7,799/- ಮೌಲ್ಯದ ಮೈಕ್ರೋಸಾಫ್ಟ್ ಹೋಮ್ ಮತ್ತು ಸ್ಟೂಡೆಂಟ್ (ಎಂಎಸ್ ಆಫೀಸ್) 2019 ಅನ್ನು ಪಡೆಯಬಹುದು. ಹಾಗೂ, ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೇಲೆ 10% ಕೊಡುಗೆ ಲಭ್ಯವಿದೆ.
2 ವರ್ಷದ ವಾರಂಟಿ ಸಹಿತ 32 ಇಂಚು ಸ್ಮಾರ್ಟ್ ಟಿವಿಗಳ ಮೇಲೆ ಆಕರ್ಷಕ ಕೊಡುಗೆಯನ್ನು ಗ್ರಾಹಕರು ಪಡೆಯಬಹುದಾಗಿದ್ದು, ಆರಂಭಿಕ ಬೆಲೆ ರೂ. 12,490/- ಇರಲಿದೆ. ಹಾಗೆಯೇ, 2 ವರ್ಷದ ವಾರಂಟಿ ಸಹಿತ ಸ್ಯಾಮ್‌ಸಂಗ್ 50” ಕ್ಯೂಎಲ್‌ಇಡಿ ಸ್ಮಾರ್ಟ್ ಟಿವಿ ರೂ. 64,990/-* ರಲ್ಲಿ ಲಭ್ಯವಿದೆ ಹಾಗೂ ಆಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆಗಳು ಲಭ್ಯವಿರಲಿದೆ. ಎಲ್‌ಜಿ ಒಎಲ್‌ಇಡಿ ಟಿವಿಗಳನ್ನು ಖರೀದಿ ಮಾಡುವ ಗ್ರಾಹಕರು 3 ವರ್ಷದ ವಾರಂಟಿ ಸಹಿತ ರೂ. 64,990/- ವರೆಗೆ ಉಚಿತ ಕೊಡುಗೆಗಳನ್ನು ಪಡೆಯಲಿದ್ದಾರೆ ಮತ್ತು 3 ತಿಂಗಳುಗಳ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪಡೆಯುತ್ತಾರೆ. 2 ವರ್ಷದ ವಾರಂಟಿ ಹೊಂದಿರುವ 55” ಯುಎಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಗಳನ್ನು ರೂ. 34,990/- ದಿಂದ ಪಡೆಯಬಹುದಾಗಿದ್ದು, ರೂ. 10,000/- ವರೆಗೆ ಉಚಿತ ಕೊಡುಗೆಗಳು ಲಭ್ಯವಿವೆ.
ವಾಶಿಂಗ್ ಮಶಿನ್ ಮೇಲಿನ ಕೊಡುಗೆಗಳೆಂದರೆ, ರೂ. 19,000/- ರಿಂದ ಕೆಲ್ವಿನೇಟರ್ 6 ಕಿಲೋ ಫ್ರಂಟ್ ಲೋಡ್, ರೂ. 13,990 ಸ್ಯಾಮ್‌ಸಂಗ್ 6.5 ಕಿಲೋ ಟಾಪ್ ಲೋಡ್, ಹೈಯರ್ 195 ಲೀ. ಡಿಸಿ ಮೇಲೆ ರೂ. 11,990/- ರಿಂದ ಆರಂಭಿಸಿ, ಪ್ಯಾನಾಸೋನಿಕ್ ಎಸ್‌ಬಿಎಸ್ ರೂ. 49,990/- ಮತ್ತು 1.5 ಟನ್ 3 ಸ್ಟಾರ್ ಎಸಿ ರೂ. 29,990/- ಎಲ್‌ಜಿ 1.5 ಟನ್ 3 ಸ್ಟಾರ್ ರೂ. 33,990/- ಗೆ ಲಭ್ಯವಿದೆ.
ಡಿಜಿಟಲ್ ಇಂಡಿಯಾ ಸೇಲ್ ಅನುಭವವು ಈ ವರ್ಷ ಇನ್ನಷ್ಟು ಪುರಸ್ಕಾರಯುತವಾಗಿದ್ದು, ಸುಲಭ ಹಣಕಾಸು ವ್ಯವಸ್ಥೆ ಮತ್ತು ಇಎಂಐ ಆಯ್ಕೆಗಳು ಇವೆ.
*ಎಲ್ಲ ಕೊಡುಗೆ ಮತ್ತು ಬೆಲೆಗಳ ಮೇಲೆ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.