ಅತ್ಯಂತ ಹಗುರ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗುವ ಸರ್ಫೇಸ್ ಲ್ಯಾಪ್ ಟಾಪ್ ಭಾರತದಲ್ಲಿ ಬಿಡುಗಡೆಯಾಗಿದೆ. ಮೈಕ್ರೋಸಾಫ್ಟ್ ಬ್ರ್ಯಾಂಡ್ ಕಾರಣ ಯಾವುದೇ ಆತಂಕವಿಲ್ಲದೆ ಈ ಲ್ಯಾಪ್‌ಟಾಪ್ ಖರೀದಿಸಬಹುುದು. ಅತ್ಯುತ್ತಮ ಕಾರ್ಯಕ್ಷಮತೆ, ಉತ್ತಮ ಬ್ಯಾಟರಿ ಬಾಳಿಕೆ ಮತ್ತು ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳು ಈ ಲ್ಯಾಪ್‌ಟಾಪ್‌ನಲ್ಲಿದೆ.
ಬೆಂಗಳೂರು(ಜ.22) : ಮೈಕ್ರೋಸಾಫ್ಟ್ ನ ಹೊಚ್ಚ ಹೊಸದಾದ ಸರ್ಫೇಸ್ ಲ್ಯಾಪ್ ಟಾಪ್ ಗೋ ಭಾರತದಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಅಧಿಕೃತ ರೀಟೇಲರ್ ಮತ್ತು ಆನ್ ಲೈನ್ ಪಾರ್ಟ್ನರ್ ಗಳಲ್ಲಿ ಈ ಲ್ಯಾಪ್ ಟಾಪ್ ಜನವರಿ 22 ರಿಂದ ಲಭ್ಯವಾಗುತ್ತಿದೆ. ಇದರ ಬೆಲೆ 63,499 ರೂಪಾಯಿಗಳಾಗಿದೆ. ಪ್ರತಿದಿನದ ಉತ್ತಮ ಅನುಭವಕ್ಕೆ ಪೂರಕವಾಗಿ ಈ ಲ್ಯಾಪ್ ಟಾಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ನಮ್ಮ ಸರ್ಫೇಸ್ ಲ್ಯಾಪ್ ಟಾಪ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತಹ ಈ ಲ್ಯಾಪ್ ಟಾಪ್ ಅತ್ಯಂತ ಆಕರ್ಷಕ ರೂಪದಲ್ಲಿ ವಿನ್ಯಾಸಗೊಂಡಿದೆ.
ವಿಂಡೋಸ್ ಡೆಸ್ಕ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆ್ಯಪ್‌ಗಳು ಸೇರ್ಪಡೆ..?
Surface Laptop Go i5/4/64GB = 63,499 ರೂ
Surface Laptop Go i5/8/128GB = 76,199 ರೂ
Surface Laptop Go i5/8/256GB = 92,999 ರೂ
Surface Laptop Go i5/16/256GB= 110,999 ರೂ
ಅತ್ಯುತ್ತಮ ಕಾರ್ಯಕ್ಷಮತೆ, ಬ್ಯಾಟರಿ ಬಾಳಿಕೆ, ಮೌಲ್ಯ ಮತ್ತು ಶೈಲಿಯನ್ನು ಒಗ್ಗೂಡಿಸಿ ಈ ಸರ್ಫೇಸ್ ಲ್ಯಾಪ್ ಟಾಪ್ ಗೋ ಪ್ರೀಮಿಯಂ ಅನ್ನು ವಿನ್ಯಾಸಗೊಳಿಸಲಾಗಿದೆ. ಪೋರ್ಟಬಲ್ ಪ್ರೊಫೈಲ್ ನೊಂದಿಗೆ ಅಲ್ಟ್ರಾ-ಲೈಟ್ ಆಗಿರುವ ಈ ಲ್ಯಾಪ್ ಟಾಪ್, ಕಲಿಯಲು ಅಥವಾ ಕೆಲಸ ಮಾಡಲು ಅತ್ಯುತ್ತಮ ಎನಿಸಿದೆ. ಲ್ಯಾಪ್ ಟಾಪ್ ನ ಕ್ಯಾಮೆರಾ, ಸ್ಪೀಕರ್ ಗಳು ಮತ್ತು ಮೈಕ್ ಗಳನ್ನು ಹಿಂದಿಗಿಂತಲೂ ಹೆಚ್ಚು ಬಳಸಲಾಗುತ್ತಿದೆ. ಕುಟುಂಬಗಳು, ವಿದ್ಯಾರ್ಥಿ ಸಮುದಾಯಗಳು ಮತ್ತು ವ್ಯವಹಾರಗಳಿಗೆ ಈ ಸರ್ಫೇಸ್ ಲ್ಯಾಪ್ ಟಾಪ್ ಗೋ ಪ್ರೀಮಿಯಂ ಸರ್ಫೇಸ್ ಲುಕ್ ಮತ್ತು ಅತ್ಯದ್ಭುತವಾದ ಮೌಲ್ಯವನ್ನು ನೀಡುತ್ತದೆ.
ಭಾರತದಲ್ಲಿ ಡೈನಾಮಿಕ್ಸ್ 365 ಪ್ರಾಜೆಕ್ಟ್ ಪ್ರಕಟಿಸಿದ ಮೈಕ್ರೋಸಾಫ್ಟ್!
ಹೈಬ್ರಿಡ್ ಕೆಲಸ ಮತ್ತು ಕಲಿಕೆಯ ವಾತಾವರಣದ ವಾಸ್ತವತೆಯು ನಮ್ಮ ಮುಂದಿದೆ. ಇದರಿಂದ ನಮ್ಮೆಲ್ಲರಿಗೂ ನಮ್ಮದೇ ಆದ ಕೆಲಸ, ಶಾಲೆ ಮತ್ತು ಜೀವನಕ್ಕೆ ಸಂಪರ್ಕ ಕಲ್ಪಿಸಿಕೊಳ್ಳುವಲ್ಲಿ ಪಿಸಿ ಒಂದು ಅವಿಭಾಜ್ಯ ಅಂಗದಂತೆ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಪಿಸಿ ಈಗ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಸಾಧನವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ, ತನ್ನ ಕೆಲಸದ ಶೈಲಿ ಮತ್ತು ಸ್ಥಳಕ್ಕಾಗಿ ಮೇಲ್ಮೈಯನ್ನು ವಿನ್ಯಾಸಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಹೊಸ ಸರ್ಫೇಸ್ ಲ್ಯಾಪ್ ಟಾಪ್ ಗೋ ಮೂಲಕ ನಾವು ಮನೆಯ ಅಥವಾ ಸಂಸ್ಥೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಳಸಬೇಕಾದ ಅತ್ಯುತ್ತಮ ಎನಿಸುವ ಲ್ಯಾಪ್ ಟಾಪ್ ಅನ್ನು ನೀಡಲು ನಾವು ಬಯಸುತ್ತೇವೆ. ಈ ಸರ್ಫೇಸ್ ಲ್ಯಾಪ್ ಟಾಪ್ ಗೋ ನಮ್ಮ ಹಗುರವಾದ ಮತ್ತು ಹೆಚ್ಚು ನಿಭಾಯಿಸಬಹುದಾದ ಸರ್ಫೇಸ್ ಲ್ಯಾಪ್ ಟಾಪ್ ಆಗಿದ್ದು, ಇದು ಅತ್ಯುತ್ಕೃಷ್ಠವಾದ ಕಾರ್ಯಕ್ಷಮತೆ, ಬ್ಯಾಟರಿ ಬಾಳಿಕೆ ಮತ್ತು ಶೈಲಿಯ ಪರಿಪೂರ್ಣವಾದ ಸಮತೋಲನವನ್ನು ಹೊಂದಿದೆ ಎಂದು ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯ ಅಧಿಕಾರಿ ರಾಜೀವ್ ಸೋಧಿ ಹೇಳಿದರು.`
ಸ್ಟೀವ್ ಜಾಬ್ಸ್ ಕಂಡರೆ ಹೊಟ್ಟೆಕಿಚ್ಚಾಗಿತ್ತು: ಬಿಲ್ ಗೇಟ್ಸ್
ಸ್ಲೀಕ್ ಡಿಸೈನ್ ಮತ್ತು ಸ್ಟಾಂಡೌಟ್ ವ್ಯಾಲ್ಯೂ: ಇದು ಅತ್ಯಂತ ಹಗುರವಾದ ಸರ್ಫೇಸ್ ಲ್ಯಾಪ್ ಟಾಪ್ ಆಗಿದೆ. ಇದು ಕೇವಲ 1.11 ಕೆಜಿ ತೂಕ ಹೊಂದಿದ್ದು, ಇದರಲ್ಲಿ 12.4 ಇಂಚುಗಳ ಪಿಕ್ಸೆಲ್ ಸೆನ್ಸ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಇದೆ. ಇದರ ಪೂರ್ಣ ಗಾತ್ರದ ಕೀಬೋರ್ಡ್ 1.3 ಎಂಎಂ ಆಗಿದ್ದು, ನಿಖರವಾದ ಮತ್ತು ಆರಾಮದಾಯಕವಾದ ಟೈಪಿಂಗ್ ಅನುಭವವನ್ನು ನೀಡುತ್ತದೆ. ಇದರ ಬ್ಯಾಟರಿ ಇಡೀ ದಿನ ಬರುತ್ತದೆ ಮತ್ತು ವೇಗದಲ್ಲಿ ಚಾರ್ಜ್ ಆಗಲಿದೆ. ಈ ಲ್ಯಾಪ್ ಟಾಪ್ ಪ್ಲಾಟಿನಂ ಬಣ್ಣದಲ್ಲಿ ಲಭ್ಯವಿದೆ.
ಕೊರೋನಾ ನಿರ್ವಹಣೆ: ಪಿಎಂ ಮೋದಿ ಕಾಳಜಿಗೆ ಬಿಲ್‌ಗೇಟ್ಸ್ ಮೆಚ್ಚುಗೆ!..
ಅತ್ಯುತ್ತಮ ವೈಶಿಷ್ಟ್ಯತೆಗಳು ಮತ್ತು ವಿಶ್ವಾಸಾರ್ಹತೆಯ ಭದ್ರತೆ: ಬಳಕೆದಾರರು ತಾವು ಇಷ್ಟಪಡುವ ವಿಂಡೋಸ್, ವಿಂಡೋಸ್ ಹಲೋದ ಅನುಕೂಲಕರವಾದ ಭದ್ರತೆ ಮತ್ತು ಆಯ್ದ ಮಾದರಿಗಳಲ್ಲಿ ಫಿಂಗರ್ ಪ್ರಿಂಟ್ ರೀಡರ್ ಪವರ್ ಬಟನ್ ನೊಂದಿಗೆ ಒನ್ ಟನ್ ಸೈನ್-ಇನ್ ಅನ್ನು ಒಳಗೊಂಡಿದೆ. ಒನ್ ಟಚ್ ಸೈನ್ –ಇನ್ ಒನ್ ಡ್ರೈವ್ ಪರ್ಸನಲ್ ವಾಲ್ಟ್ ಫೈಲ್ ಗಳಿಗೆ ವೇಗವಾಗಿ ಸುರಕ್ಷಿತವಾದ ಅಕ್ಸೆಸ್ ಅನ್ನು ಒಳಗೊಂಡಿದ್ದು, ತ್ವರಿತ ಉತ್ಪಾದಕತೆಯನ್ನು ನೀಡುತ್ತದೆ. ಮ್ಯೂಸಿಕ್ ಮತ್ತು ಸ್ಟ್ರೀಮಿಂಗ್ ವಿಡಿಯೋ ಮತ್ತು ಅಂತರ್ ನಿರ್ಮಿತ ಸ್ಟುಡಿಯೋ ಮೈಕ್ ಗಳು, ಓಮ್ನಿಸೋನಿಕ್ ಸ್ಪೀಕರ್ ಗಳು ಮತ್ತು ಡಾಲ್ಬಿ ಆಡಿಯೋ ಹಾಗೂ 720ಪಿ ಎಚ್ ಡಿ ಕ್ಯಾಮೆರಾಗಳಿಗೆ ಅದ್ಭುತವಾದ ಧ್ವನಿ ವಿಡಿಯೋ ಕರೆಗಳನ್ನು ಮಾಡುವ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದೆ. ಇನ್ನು ಮೈಕ್ರೋಸಾಫ್ಟ್ ಎಂಡ್ ಪಾಯಿಂಟ್ ಮ್ಯಾನೇಜರ್ ಮತ್ತು ಡಿವೈಸ್ ಪರ್ಮ್ ವೇರ್ ಕಾನ್ಫಿಗರೇಶನ್ ಇಂಟರ್ಫೇಸ್ ನೊಂದಿಗೆ ಪ್ರತಿ ಸಂಸ್ಥೆಯ ಐಟಿ ಪರಿಸರ ವ್ಯವಸ್ಥೆಗೆ ಪೂರಕವಾದ ಕ್ಲೌಡ್-ಫಸ್ಟ್ ಸಾಧನವನ್ನು ನಿಯೋಜನೆ ಮಾಡಲಾಗಿದೆ