ಲಾಕ್‌ಡೌನ್ ಸಂದರ್ಭದಲ್ಲಿ ಸಮಯದ ಸದ್ಬಳಕೆಗೆ ಅವಕಾಶ ಖ್ಯಾತ ಫೋಟೋಗ್ರಫರ್‌ಗಳಿಂದ ಆನ್‌ಲೈನ್ ಕ್ಲಾಸ್ ನಿಕಾನ್ ಇಂಡಿಯಾ ಕಂಪನಿಯಿಂದ ಕಾರ್ಯಕ್ರಮ
ಬೆಂಗಳೂರು (ಏ. 11): ನಿಕಾನ್ ಇಂಡಿಯಾ ಕಂಪನಿಯು ಈ ತಿಂಗಳ ಅಂತ್ಯದವರೆಗೆ ಆನ್ ಲೈನ್ ಮೂಲಕ ಉಚಿತ ಫೋಟೋಗ್ರಫಿ ತರಗತಿಗಳನ್ನು ಆಯೋಜಿಸಿದೆ.
ಖ್ಯಾತ ಫೋಟೋಗ್ರಾಫರ್, Académie des beaux-arts Photography ಪುರಸ್ಕೃತ ರಘು ರೈ ಮತ್ತು ಇನ್ನೂ ಹಲವಾರು ಹೆಸರಾಂತ ಛಾಯಾಗ್ರಾಹಕರು ಈ ಆನ್ ಲೈನ್ ಫೋಟೋಗ್ರಫಿ ತರಗತಿಯನ್ನು ನಡೆಸಿಕೊಡುವ ನಿಟ್ಟಿನಲ್ಲಿ ನಿಕಾನ್ ಇಂಡಿಯಾ ಜತೆಗೆ ಕೈಜೋಡಿಸಿದ್ದಾರೆ. ಉತ್ಸಾಹಿ ಛಾಯಾಗ್ರಾಹಕರಿಗೆ ಛಾಯಾಗ್ರಹಣದ ಕೌಶಲ್ಯಗಳನ್ನು ಹೇಳಿಕೊಟ್ಟು ಅವರನ್ನು ಪ್ರೋತ್ಸಾಹಿಸಲಿದ್ದಾರೆ.
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಮನೆಯಲ್ಲಿ ಸುರಕ್ಷಿತವಾಗಿರುವ ಜೊತೆಗೆ, ಛಾಯಾಗ್ರಹಣದಲ್ಲಿ ಆಸಕ್ತಿ ಇರುವ ಉತ್ಸಾಹಿ ಯುವಕ-ಯುವತಿಯರು ಆನ್ ಲೈನ್ ತರಗತಿಯಲ್ಲಿ ಭಾಗವಹಿಸಬಹುದಾಗಿದೆ.
ವಿವಾಹ, ವೈಲ್ಡ್ ಲೈಫ್, ಫೋಕಲ್ ಲೆಂತ್ ನ ಇಫೆಕ್ಟ್, ಇಂಟೀರಿಯರ್ & ಆರ್ಕಿಟೆಕ್ಚರ್, ಸ್ಟ್ರೀಟ್, ಪೋಟ್ರೇಟ್, ಫುಡ್ & ಪೆಟ್ ಫೋಟೋಗ್ರಫಿ ಸೇರಿದಂತೆ ಇನ್ನೂ ಹಲವಾರು ವಿಷಯಗಳ ಮೇಲೆ ಕ್ಲಾಸ್ ನಡೆಯಲಿದೆ.
ವೃತ್ತಿಪರ ಛಾಯಾಗ್ರಾಹಕರು ಫೋಟೋಗ್ರಫಿ ಬಗ್ಗೆ ಆಳವಾದ ಜ್ಞಾನವನ್ನು ತರಗತಿಗಳ ಮೂಲಕ ಶಿಬಿರಾರ್ಥಿಗಳಿಗೆ ನೀಡಲಿದ್ದಾರೆ. ಈ ಮೂಲಕ ಸ್ಟನ್ನಿಂಗ್ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆಯಲು ಬಳಕೆದಾರರಿಗೆ ಅನುಕೂಲ ಮಾಡಿಕೊಡಲಿದೆ.
ಕೆಲವು ತರಗತಿಗಳಲ್ಲಿ ಪ್ರಶ್ನೋತ್ತರಕ್ಕೂ ಅವಕಾಶ ಇರಲಿದ್ದು, ಶಿಬಿರಾರ್ಥಿಗಳ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ತಜ್ಞರು ಉತ್ತರ ನೀಡಲಿದ್ದಾರೆ. ತರಗತಿಗಳ ಶಿಬಿರಾರ್ಥಿಗಳಿಗೆ ಪರಿಣತರು ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೇ, ಆಸಕ್ತಿ ಇರುವ ಸಮುದಾಯಕ್ಕೆ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಬಗ್ಗೆ ಕೆಲವು ಆಸಕ್ತಿದಾಯಕ ಟಿಪ್ಸ್ ಅನ್ನು ನೀಡಲಿದ್ದಾರೆ.
ತರಗತಿಗಳು ನಿಕಾನ್ ನ ಅಧಿಕೃತ ಇನ್ ಸ್ಟಾಗ್ರಾಂ, ಫೇಸ್ ಬುಕ್ ಮತ್ತು ಯೂಟ್ಯೂಬ್ ಪೇಜ್ ಗಳಲ್ಲಿ ಲೈವ್ ವಿಡಿಯೋ ಸ್ಟ್ರೀಮಿಂಗ್ ನಲ್ಲಿ ಲಭ್ಯವಿವೆ.
ಇದಲ್ಲದೇ, ಬಳಕೆದಾರರು ತಾವು ಸೆರೆಹಿಡಿದ ಛಾಯಾಚಿತ್ರಗಳನ್ನು Capture with Nikon ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಇಡೀ ಜಗತ್ತಿಗೆ ಆ ಚಿತ್ರಗಳನ್ನು ತೋರಿಸಬಹುದಾಗಿದೆ. ಇದೇ ವೇಳೆ, ಬಳಕೆದಾರರು ಪರಿಣತರೊಂದಿಗೆ ಸಂಪರ್ಕ ಸಾಧಿಸಬಹುದು, ಇತರರ ಕೆಲಸಗಳನ್ನು ಅನ್ವೇಷಿಸಬಹುದು ಮತ್ತು ಆಕರ್ಷಕ ಬಹುಮಾನಗಳು ಮತ್ತು ಪ್ರಯೋಜನಗಳನ್ನು ಪಡೆಯಬಹುದಾಗಿದೆ. "
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.