ಡಿಸ್ಕವರಿ ಚಾನಲ್‌ ಪ್ರಿಯರಿಗೆ ಡಿಸ್ಕವರಿ ಪ್ಲಸ್‌ ಆ್ಯಪ್‌

By Suvarna News  |  First Published Mar 19, 2020, 6:33 PM IST

ಡಿಸ್ಕರಿ ಚಾನೆಲ್ ನೂತನ ಆ್ಯಪ್ ಬಿಡುಗಡೆ ಮಾಡಿದೆ. ಡಿಸ್ಕವರಿ ವಾಹಿನಿಯ ಕಾರ್ಯಕ್ರಮಗಳನ್ನು ಈ ಆ್ಯಪ್‌ನಲ್ಲಿ ನೋಡಬಹುದು. ನೂತನ ಆ್ಯಪ್ ವಿಶೇಷತೆ ಇಲ್ಲಿದೆ. 


ಭಾರತೀಯ ಒಟಿಟಿ ವೇದಿಕೆಗೆ ‘ಡಿಸ್ಕವರಿ ಪ್ಲಸ್‌’ ಹೊಸದಾಗಿ ಸೇರ್ಪಡೆಯಾಗುತ್ತಿದೆ. ವಿಜ್ಞಾನ, ಸಾಹಸ, ಆಹಾರ, ಜೀವನ ಶೈಲಿ, ಮನರಂಜನೆ ಸೇರಿ 40ಕ್ಕೂ ಅಧಿಕ ಜಾನರ್‌ಗಳನ್ನು ಒಳಗೊಂಡಿರುವ ಈ ಫ್ಲಾಟ್‌ಪಾರ್ಮ್ ಬೆಲೆ ವಾರ್ಷಿಕ ರು. 299. 

ಮೈ ಲ್ಯಾಂಗ್‌ ಬುಕ್ಸ್‌- ಇದು ಚರಿತ್ರೆ ಸೃಷ್ಟಿಸೋ ಪ್ರಯತ್ನ!

ಮಾ. 23ರಂದು ರಾತ್ರಿ 8 ಗಂಟೆಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಜೊತೆ ಸೇರಿ ಮಾಡಿರುವ ‘ಇಂಟೂ ದಿ ವೈಲ್ಡ್‌ ವಿಥ್‌ ಬೇರ್‌ ಗ್ರಿಲ್ಸ್‌’ ಕಾರ್ಯಕ್ರಮ ಪ್ರಸಾರವಾಗುವುದರೊಂದಿಗೆ ಡಿಸ್ಕವರಿ ಪ್ಲಸ್‌ ಅಧಿಕೃತವಾಗಿ ಆರಂಭವಾಗಲಿದೆ. 

ಬಂದಿದೆ ವಿನೂತನ ಆ್ಯಪ್‌; ಸ್ಮಾರ್ಟ್‌ಫೋನಲ್ಲೇ ಬ್ಯಾಂಕ್, ಇನ್ಶೂರೆನ್ಸ್, ಸಾಲ!

Tap to resize

Latest Videos

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಕನ್ನಡ, ತೆಲುಗು, ತಮಿಳು, ಇಂಗ್ಲಿಷ್‌ ಸೇರಿ ಒಟ್ಟು 8 ಭಾಷೆಗಳಲ್ಲಿ ನವೀನ ರೀತಿಯ ಮನರಂಜನೆಯನ್ನು ಇಲ್ಲಿ ಪಡೆಯಬಹುದಾಗಿದೆ. ಇಲ್ಲಿ ಬರುವ ಇಡೀ ಕಾರ್ಯಕ್ರಮಗಳು ಭಾರತ ಕೇಂದ್ರಿತವಾಗಿರಲಿದ್ದು, ಪ್ರಮುಖ ವ್ಯಕ್ತಿ, ಸ್ಥಳ, ಭಾರತದ ಭೂ ವೈವಿದ್ಯಗಳ ಕುರಿತಾದ ಸಾಕ್ಷ್ಯ ಚಿತ್ರಗಳೂ ಇದರಲ್ಲಿ ಸೇರಿರಲಿವೆ.

click me!