
ಚಾಟ್ ಜಿಪಿಟಿ (ChatGPT) ಈಗ ಜನರ ಜೀವನದ ಒಂದು ಭಾಗವಾಗ್ತಿದೆ. ಜನರು ಏನೇ ಕೆಲ್ಸವಿದ್ರೂ ಚಾಟ್ ಜಿಪಿಟಿ ಮೊರೆ ಹೋಗ್ತಿದ್ದಾರೆ. ಹಣ ಉಳಿಸುವ ಟಿಪ್ಸ್ ನಿಂದ ಹಿಡಿದು ತೂಕ ಇಳಿಸುವವರೆಗೆ ಎಲ್ಲದರ ಬಗ್ಗೆಯೂ ಚಾಟ್ ಜಿಪಿಟಿ ಮಾಹಿತಿ ನೀಡ್ತಿದೆ. ಆದ್ರೆ ವರ್ಜೀನಿಯಾದ ಮಹಿಳೆಯೊಬ್ಬಳು ಚಾಟ್ ಜಿಪಿಟಿ ಸಹಾಯದಿಂದ ಲಾಟರಿ ಗೆದ್ದಿದ್ದಾಳೆ. ಕ್ಯಾರಿ ಎಡ್ವರ್ಡ್ಸ್ ಎಂಬ ಮಹಿಳೆ ಕೃತಕ ಬುದ್ಧಿಮತ್ತೆ (AI) ಬಳಸಿ 1.25 ಕೋಟಿ ರೂಪಾಯಿ ಗೆದ್ದಿದ್ದಾರೆ. ವಿಶೇಷ ಅಂದ್ರೆ ಈ ಗೆದ್ದ ಹಣವನ್ನು ದತ್ತಿ ಕಾರ್ಯಗಳಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ಎಐ ಸಹಾಯದಿಂದ 1.25 ಕೋಟಿ ಲಾಟರಿ ಗೆದ್ದ ಮಹಿಳೆ : ಇಷ್ಟು ದಿನ ಚಾಟ್ ಜಿಪಿಟಿ ಕೆಲ್ಸ ಹುಡುಕಲು ಸಹಾಯ ಮಾಡ್ತಿತ್ತು. ಈಗ ಹಣ ಗೆಲ್ಲಲೂ ಸಹಾಯ ಮಾಡ್ತಿದೆ. ವರ್ಜೀನಿಯಾದ ಮಿಡ್ಲೋಥಿಯನ್ ನಿವಾಸಿ ಕ್ಯಾರಿ ಎಡ್ವರ್ಡ್ಸ್ ಇದಕ್ಕೆ ಉದಾಹರಣೆ. ಸೆಪ್ಟೆಂಬರ್ 8 ರಂದು, ಅವರು ನಾಲ್ಕು ಸರಿಯಾದ ಸಂಖ್ಯೆಗಳು ಮತ್ತು ಪವರ್ಬಾಲ್ ಹೊಂದಿಸುವ ಮೂಲಕ ವರ್ಜೀನಿಯಾ ಲಾಟರಿ ಗೆದ್ದಿದ್ದಾರೆ. ಆರಂಭದಲ್ಲಿ, ಅವರು 50,000 ಯುಎಸ್ ಡಾಲರ್ ಅಂದ್ರೆ ಸುಮಾರು 4.2 ಮಿಲಿಯನ್ ಹಣ ಪಡೆಯಬೇಕಿತ್ತು. ಆದ್ರೆ ಪವರ್ ಪ್ಲೇ ಎಂಬ ಆಯ್ಕೆ ಆರಿಸಿಕೊಂಡು ಕೇವಲ ಒಂದು ಡಾಲರ್ ಸೇರಿಸುವ0 ಮೂಲಕ ಬಹುಮಾನದ ಮೊತ್ತವನ್ನು ಮೂರು ಪಟ್ಟು ಹೆಚ್ಚು ಮಾಡಿಕೊಂಡ್ರು. ಹಾಗಾಗಿ ಅವರು ಒಟ್ಟು 150,000 ಡಾಲರ್ ಅಂದ್ರೆ ಸುಮಾರು 1.25 ಕೋಟಿ ಹಣ ಪಡೆದಿದ್ದಾರೆ.
ದಸರಾ ಧಮಾಕಾ- ಜಿಎಸ್ಟಿ ಇಳಿಕೆ ಇಂದಿನಿಂದ ಜಾರಿ : 375 ಉತ್ಪನ್ನಗಳು ಅಗ್ಗ
ChatGPT ಅಪ್ಲಿಕೇಶನ್ ಮೂಲಕ ನಂಬರ್ ಆಯ್ಕೆ : ಕ್ಯಾರಿ ಸಾಮಾನ್ಯವಾಗಿ ಲಾಟರಿ ಆಡೋದಿಲ್ಲ. ಅವರು ತಮ್ಮ ಫೋನ್ ನಲ್ಲಿರುವ ಚಾಟ್ ಜಿಪಿಟಿಯಿಂದ ಹಾಗೆ ಸುಮ್ನೆ ಸಂಖ್ಯೆಗಳನ್ನು ಕೇಳಿದ್ದಾರೆ. ನಾನು ಚಾಟ್ ಜಿಪಿಟಿ ಜೊತೆ ಚಾಟ್ ಮಾಡ್ತಾ, ಯಾವುದಾದ್ರೂ ನಂಬರ್ ಕೊಡ್ತಿಯಾ ಅಂತ ಕೇಳಿದ್ದೆ ಎಂದು ಕ್ಯಾರಿ ಹೇಳಿದ್ದಾರೆ. ಅದಕ್ಕೆ ಚಾಟ್ ಜಿಪಿಟಿ ಪ್ರತಿಕ್ರಿಯೆ ನೀಡಿದ್ದಲ್ಲದೆ ನಂಬರ್ ನೀಡಿದೆ. ಎರಡು ದಿನಗಳ ನಂತ್ರ ಫೋನ್ ನಲ್ಲಿ ಲಾಟರಿ ಗೆದ್ದ ಮಾಹಿತಿ ಬಂದಿದೆ. ಇದೊಂದು ಸ್ಕ್ಯಾಮ್ ಅಂತ ಕ್ಯಾರಿ ಭಾವಿಸಿದ್ದಾಳೆ. ಆದ್ರೆ ಇದು ಸತ್ಯ ಎಂಬುದು ಗೊತ್ತಾದಾಗ ಕ್ಯಾರಿಗೆ ನಂಬೋದು ಕಷ್ಟವಾಯ್ತು. ಇದು ನನ್ನ ಜೀವನ ಬದಲಿಸ್ತು ಅಂತ ಕ್ಯಾರಿ ಹೇಳಿದ್ದಾರೆ.
ಕೇವಲ 2 ವರ್ಷದಲ್ಲಿ 900% ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್
ಎಲ್ಲ ಹಣವನ್ನು ದಾನ ಮಾಡಿದ ಕ್ಯಾರಿ : ಕ್ಯಾರಿ ಹಣವನ್ನು ಹಾಗೆ ಇಟ್ಕೊಳ್ಬಹುದಿತ್ತು. ಆದ್ರೆ ಲಾಟರಿ ಸ್ವೀಕರಿಸಿದ ತಕ್ಷಣ ಹಣವನ್ನು ಏನು ಮಾಡ್ಬೇಕು ಎಂಬುದು ಕ್ಯಾರಿಗೆ ಗೊತ್ತಿತ್ತು. ತನ್ನ ಬಳಿ ಇರುವ ಹಣಕ್ಕೆ ಕ್ಯಾರಿ ತೃಪ್ತಳಾಗಿದ್ದಳು. ಹಾಗಾಗಿ ಆ ಎಲ್ಲ ಹಣವನ್ನು ದಾನ ಮಾಡಲು ನಿರ್ಧರಿಸಿದ್ದಳು. ಕ್ಯಾರಿ ಎಡ್ವರ್ಡ್ಸ್ ಸಂಪೂರ್ಣ 150,000 ಡಾಲರ್ ಹಣವನ್ನು ದತ್ತಿ ಕಾರ್ಯಗಳಿಗೆ ನೀಡಿದ್ದಾರೆ. ಅವರು ಮೊದಲ ಭಾಗವನ್ನು 2024 ರಲ್ಲಿ ತನ್ನ ಗಂಡನನ್ನು ಕೊಂದ ರೋಗವನ್ನು ಸಂಶೋಧಿಸುವ ಅಸೋಸಿಯೇಷನ್ ಫಾರ್ ಫ್ರಂಟೋಟೆಂಪೊರಲ್ ಡಿಜೆನರೇಶನ್ ಎಂಬ ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಎರಡನೇ ಭಾಗವನ್ನು ಹಸಿವನ್ನು ನೀಗಿಸಲು ಕೆಲಸ ಮಾಡುವ ರಿಚ್ಮಂಡ್ನಲ್ಲಿರುವ ಸಾವಯವ ಫಾರ್ಮ್ ಶಾಲೋಮ್ ಫಾರ್ಮ್ಸ್ಗೆ ನೀಡಿದ್ದಾರೆ. ಮೂರನೇ ಭಾಗವನ್ನು ಅವರ ಹೃದಯಕ್ಕೆ ಹತ್ತಿರವಾದ ನೇವಿ-ಮೆರೈನ್ ಕಾರ್ಪ್ಸ್ ರಿಲೀಫ್ ಸೊಸೈಟಿಗೆ ನೀಡಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.