
ನವದೆಹಲಿ (ಆ.12) ಆ್ಯಪಲ್ ಕೈಗೆಟುಕುವ ದರದಲ್ಲಿ ಮ್ಯಾಕ್‌ಬುಕ್ ಉತ್ಪಾದನೆಗೆ ಮುಂದಾಗಿದೆ. ಸದ್ಯ ಆ್ಯಪಲ್ ಮ್ಯಾಕ್‌ಬುಕ್ ಆಕಂಭಿಕ ಬೆಲೆ 1 ಲಕ್ಷ ರೂಪಾಯಿ. ಆದರೆ ಇನ್ನು ಮುಂದೆ ಎಂಟ್ರಿ ಲೆವೆಲ್ ಮ್ಯಾಕ್ ಬುಕ್ ಕೇವಲ 52,000 ರೂಪಾಯಿಯಿಂದ ಆರಂಭಗೊಳ್ಳಲಿದೆ. ಐಫೋನ್ 16 ಪ್ರೋದಲ್ಲಿ ಬಳಕೆ ಮಾಡಿರುವ ಎ18 ಪ್ರೋ ಚಿಪ್ ಬಳಕೆ ಮಾಡಿ ಆ್ಯಪಲ್ ಹೊಸ ಎಂಟ್ರಿ ಲೆವೆಲ್ ಮ್ಯಾಕ್‌ಬುಕ್ ಉತ್ಪಾದನೆ ಮಾಡಲಿದೆ. ಇದರ ಬೆಲೆ ಕೇವಲ 52,000 ರೂಪಾಯಿ ಇರಲಿದೆ ಎಂದು ವರದಿಯಾಗಿದೆ.
ಆ್ಯಪಲ್ ಬಜೆಟ್ ಲ್ಯಾಪ್‌ಟಾಪ್ ಮೂಲಕ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈ ಸೆಗ್ಮೆಂಟ್‌ನಲ್ಲಿ ಗೂಗಲ್ ಕ್ರೋಮ್‌ಬುಕ್ಸ್, ವಿಂಡೋಸ್ ಪಿಸಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಹೀಗಾಗಿ ಕೈಗೆಟುಕುವ ಬೆಲೆಯಲ್ಲಿ ಎಂಟ್ರಿ ಲೆವೆಲ್ ಮ್ಯಾಕ್‌ಬುಕ್ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಆ್ಯಪಲ್ ಮುಂದಾಗಿದೆ ಎಂದು ವರದಿಯಾಗಿದೆ. ಇದರ ಬೆಲೆ 599 ಅಮೆರಿಕನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 52,000 ರೂಪಾಯಿ ಎಂದು ಡಿಜಿ ಟೈಮ್ಸ್ ವರದಿ ಮಾಡಿದೆ. ಈ ಕಡಿಮೆ ಬೆಲೆ ಲ್ಯಾಪ್‌ಟಾಪ್ ಬಿಡುಗಡೆಯಾದರೆ ಸದ್ಯ ಮಾರುಕಟ್ಟೆಯಲ್ಲಿರುವ ಹಲವು ಲ್ಯಾಪ್‌ಟಾಪ್‌ಗಳಿಗೆ ತೀವ್ರ ಪ್ರತಿಸ್ಪರ್ಧೆ ನೀಡಲಿದೆ.
ಆ್ಯಪಲ್ ಮ್ಯಾಕ್‌ಬುಕ್ ಅತೀ ಹೆಚ್ಚು ಮಾರಾಟ ಕಾಣುತ್ತಿರುವ ಲ್ಯಾಪ್‌ಟಾಪ್ ಎಂದು ಗುರುತಿಸಿಕೊಂಡಿದೆ. ಆ್ಯಪಲ್ ಲ್ಯಾಪ್‌ಟಾಪ್ ದುಬಾರಿಯಾದರೂ ಖರೀದಿ ಹಾಗೂ ಮಾರಾಟದಲ್ಲಿ ದಾಖಲೆ ಬರೆಯುತ್ತಿದೆ. ಭಾರತದಲ್ಲಿ ಆ್ಯಪಲ್ ಮ್ಯಾಕ್‌ಬುಕ್ ಆರಂಭಿಕ ಬೆಲೆ 99,900 ರೂಪಾಯಿ. ಇದೀಗ ಆ್ಯಪಲ್ ಹೊರತರಲು ಹೊರಟಿರುವ 52,000 ರೂಪಾಯಿ ಮ್ಯಾಕ್‌ಬುಕ್ ಹೊಸ ಜನರೇಶನ್ ಲ್ಯಾಪ್‌ಟಾಪ್ ಆಗಿರಲಿದೆ. ಎಲ್ಲಾ ಫೀಚರ್ಸ್ ಜೊತೆಗೆ ಅತ್ಯಂತ ಸುರಕ್ಷತೆ ಒದಗಿಸಲಿದೆ.
ಆ್ಯಪಲ್ ಉತ್ಪನ್ನಗಳು ಹೆಚ್ಚು ಸುರಕ್ಷಿತ. ಹೀಗಾಗಿಯೇ ಆ್ಯಪಲ್ ಐಫೋನ್ ಸೇರಿದಂತೆ ಎಲ್ಲಾ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೊಸ ಮ್ಯಾಕ್‌ಬುಕ್ ಈ ಬೇಡಿಕೆಯನ್ನು ದುಪ್ಪಟ್ಟು ಮಾಡುವ ಸಾಧ್ಯತೆ ಇದೆ. ಹೊಸ ಮ್ಯಾಕ್‌ಬುಕ್ ಸಿಲ್ವರ್, ಬ್ಲೂ, ಪಿಂಕ್, ಯೆಲ್ಲೋ ಬಣ್ಣದಲ್ಲಿ ಬಿಡುಗಡೆ ಮಾಡಲು ಆ್ಯಪಲ್ ಮುಂದಾಗಿದೆ. 12.9 ಇಂಚಿನ ಸ್ಕ್ರೀನ್ ಇರಲಿದೆ ಎಂದು ವರದಿಯಾಗಿದೆ. 2025ರ ಮೂರನೇ ತ್ರೈಮಾಸಿಕದಲ್ಲಿ ಈ ಮ್ಯಾಕ್‌ಬುಕ್ ಉತ್ಪಾದನೆಯಾಗುವ ಸಾಧ್ಯತೆ ಇದೆ. 2026ರಲ್ಲಿ ಹೊಸ ಆ್ಯಪಲ್ ಮ್ಯಾಕ್‌ಬುಕ್ ಬಿಡುಗಡೆಯಾಗುವ ಸಾಧ್ಯತೆ ಇದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.