ಕೇವಲ 7000 ರೂಪಾಯಿಗೆ ಬೆಸ್ಟ್ ಸ್ಮಾರ್ಟ್ ಫೋನ್ !

By Suvarna News  |  First Published Jan 13, 2020, 8:42 PM IST

ಪ್ರತಿ ದಿನ ಹೊಸ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾಗುತ್ತಿದೆ. ದಿನದಿಂದ ದಿನಕ್ಕೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಲಭ್ಯವಿರುವು ಫೋನ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ಕೇವಲ 7000 ರೂಪಾಯಿಗೆ ಬಹುತೇಕಾ ಎಲ್ಲಾ ಫೀಚರ್ಸ್ ಒಳಗೊಂಡಿರುವ ಅತ್ಯುತ್ತಮ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ವಿವರ ಇಲ್ಲಿದೆ.


ಮುಂಬೈ(ಜ.13):  ವಿವೋ ಫೋನು ತನ್ನನ್ನು ದೊಡ್ಡ ಬ್ರಾಂಡುಗಳ ನಡುವೆ ಗುರುತಿಸಿಕೊಳ್ಳಲು ಯತ್ನಿಸಿ ನಿರಾಸೆಯಿಂದ ಮರಳುತ್ತಿರುವ ಹೊತ್ತಿಗೆ, ಟೆಕ್ನೋ ನಿಧಾನವಾಗಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಸಾಗಿದಂತಿದೆ. ಕಡಿಮೆ ಬೆಲೆ, ಹೆಚ್ಚು ಅನುಕೂಲ, ಸೊಗಸಾದ ಹೊರನೋಟ, ಒಳ್ಳೆಯ ಬ್ಯಾಟರಿ, ಅಗಲ ಸ್ಕ್ರೀನ್‌ಗಳಿಂದ ಕೂಡಿದ ಫೋನುಗಳನ್ನು ಅದು ಒಂದರ ಹಿಂದೊಂದರಂತೆ ನೀಡುತ್ತಲೇ ಬಂದಿದೆ. 

ಇದನ್ನೂ ಓದಿ: ನೀವು ಗಮನಿಸಬಹುದಾದ ಟಾಪ್‌ 5 ವೈರ್‌ಲೆಸ್‌ ಚಾರ್ಜರ್‌ಗಳು

Tap to resize

Latest Videos

ಇದೀಗ ಟೆಕ್ನೋ ತಂದಿರುವ ಫೋನಿನ ಹೆಸರು ಟೆಕ್ನೋ ಗೋ ಸ್ಪಾರ್ಕ್ ಪ್ಲಸ್ 32ಜಿಬಿ ರಾಮ್  6.52 ಡಾಟ್ ನಾಚ್ ಡಿಸ್‌ಪ್ಲೇ, 4000 ಎಂಎಎಚ್ ಬ್ಯಾಟರಿ, 8 ಮೆಗಾಫಿಕ್ಸೆಲ್ ಫ್ರಂಟ್ ಮತ್ತು ರೇರ್ ಕೆಮರಾ, ಇತ್ತೀಚೆಗೆ ಅಪರೂಪ ಆಗುತ್ತಿರುವ ರೇರ್ ಫಿಂಗರ್‌ಪ್ರಿಂಟ್, ಫೇಸ್ ಅನ್‌ಲಾಕ್ ಕೂಡ ಇರುವ ಈ ಫೋನಿನ ಮೇಲೆ ಕೇವಲ 7000 ರುಪಾಯಿ ಮಾತ್ರ. 

ಇದರ ರಾಮ್ ಕಡಿಮೆಯಿದೆ. ಆಪರೇಟಿಂಗ್ ಸಿಸ್ಟಮ್ ಚೆನ್ನಾಗಿದೆ. ಸ್ಪೀಡು ಬೇಕಿದ್ದವರಿಗೆ ಇದು ನಿಧಾನಿಯೂ ಅಲ್ಲ, ವೇಗವಾಹಿಯೂ ಅಲ್ಲ. ಇದನ್ನೀಗ ನೀವು ಅಂಗಡಿಗಳಲ್ಲೂ ಕೊಳ್ಳಬಹುದು. ಆಫ್‌ಲೈನ್ ಸ್ಟೋರುಗಳಲ್ಲಿ ಇದು ಲಭ್ಯ. ಇದರ ಜತೆಗೆ 799  ರುಪಾಯಿ ಬೆಲೆಯ ಬ್ಲೂಟೂಥ್ ಇಯರ್‌ಪೀಸ್ ಉಚಿತವಾಗಿ ದೊರೆಯುತ್ತದೆ. ಎಂದಿನಂತೆ ವನ್ ಟೈಮ್ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಪಾಲಿಸಿಯೂ ಜಾರಿಯಲ್ಲಿದೆ. 

ಇದನ್ನೂ ಓದಿ: ನೋಕಿಯಾ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ!

ಮೂಲತಃ ಇದು ಬಿಗ್‌ಸ್ಕ್ರೀನ್ ಎಂಟರ್‌ಟೇನ್‌ಮೆಂಟ್ ಎಂಬ ಹೆಗ್ಗಳಿಕೆಯೊಂದಿಗೆ ಬರುತ್ತಿರುವ ಫೋನು 6.52 ಇಂಚಿನ ಎಚ್‌ಡಿ ಸ್ಕ್ರೀನಲ್ಲಿ ನೆಟ್‌ಫ್ಲಿಕ್ಸ್ ಮುಂತಾದ ಓಟಿಟಿ ಫ್ಲಾಟ್‌ಫಾರ್ಮಿ ಸಿನಿಮಾಗಳನ್ನು ನೋಡುವ ಸುಖಕ್ಕೆ ಈ ಫೋನು ಸಾಥ್ ನೀಡಲಿದೆ. ಡುಯೆಲ್ ನ್ಯಾನೋ ಸಿಮ್, ಬ್ಲೂಟೂಥ್, ವೈಫೈ -ಮುಂತಾದವುಗಳನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಈ ಬೆಲೆಗೆ ಇಂಥ ಅನುಕೂಲಗಳಿರುವ ಫೋನು ಸಿಗುವುದೇ ಇಲ್ಲ ಅಂತ ಹೇಳಲಾಗದು. 

ಬೇರೆ ಬ್ರಾಂಡುಗಳಲ್ಲಿ ಈ ಸೌಲಭ್ಯಗಳು ಇದೇ ಬೆಲೆಗೆ ಸಿಗಬಹುದು. ಆದರೆ ಟೆಕ್ನೋ ಕೊಡುವಂಥ ಕೆಲವು ಆಫ್ಟರ್‌ಸೇಲ್ ಆಫರ್‌ಗಳನ್ನು ಮತ್ಯಾರು ಕೊಡಲಾರರು.ಇದರ ಹಿಂದಿನ ಮಾಡೆಲ್ ಟೆಕ್ನೋ ಗೋ ಸ್ಪಾರ್ಕ್‌ನಲ್ಲಿ 3000 ಎಂಎಎಚ್ ಬ್ಯಾಟರಿ ಇತ್ತು. ಪ್ಲಸ್ ಬರುವ ಹೊತ್ತಿಗೆ ಅದು 4000 ಎಂಎಎಚ್ ಆಗಿದೆ. ಇಂಥ ಸಣ್ಣಪುಟ್ಟ ಅಭಿವೃದ್ಧಿಗಳು ಸಾಕಷ್ಟಿವೆ.

click me!