ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿರುವ ಟಿವಿಗಳು ; Oneplus Q1 ಮತ್ತು Oneplus Q1 Pro ನಲ್ಲಿ ಹೊಸ ಸೌಲಭ್ಯ ; ಖರೀದಿಸುವವರಿಗೆ ಕ್ಯಾಶ್‌ಬ್ಯಾಕ್ ಆಫರ್
ಒನ್‌ಪ್ಲಸ್ ತನ್ನ ಸ್ಮಾರ್ಟ್ ಟಿವಿಗಳಲ್ಲಿ ನೆಟ್‌ಫ್ಲಿಕ್ಸ್ ಸೌಲಭ್ಯವನ್ನು ಕಲ್ಪಿಸಿರುವುದಾಗಿ ಘೋಷಣೆ ಮಾಡಿದೆ. ನೆಟ್‌ಫ್ಲಿಕ್ಸ್ ಆ್ಯಪ್ ಟಿವಿಯಲ್ಲೇ ಪ್ರೀ-ಇನ್‌ಸ್ಟಾಲ್ ಆಗಿದ್ದು, ಹೊಸದಾಗಿ ಟಿವಿ ಖರೀದಿಸುವವರಿಗೆ ಬೆರಳ ತುದಿಯಲ್ಲೇ ಲಭ್ಯವಾಗಲಿದೆ.
Oneplus Q1 ಮತ್ತು Oneplus Q1 Pro ಟಿವಿಗಳಲ್ಲಿ ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ನೆಟ್‌ಫ್ಲಿಕ್ಸ್ ಪಡೆಯಬಹುದು.
ಇದನ್ನೂ ಓದಿ | ಬಂದಿದ್ದಾರೆ ರೋಬೋ ಜಡ್ಜ್, ನ್ಯಾಯಾಂಗ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪ್ರಯೋಗ!...
ಒನ್‌ಪ್ಲಸ್ ಟಿವಿಗಳ ರಿಮೋಟ್‌ನಲ್ಲಿ ನೆಟ್‌ಫ್ಲಿಕ್ಸ್ ಬಳಕೆಗೆಂದೇ ಪ್ರತ್ಯೇಕ ಬಟನ್ ಇರಲಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಒನ್‌ಪ್ಲಸ್ ಟಿವಿ ಖರೀದಿಸಿದರೆ 5,000 ರು.ವರೆಗೆ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್, ಅಮೇಝಾನ್ ಪೇನಲ್ಲಿ ಖರೀದಿಸುವವರಿಗೆ 6,000 ರು.ವರೆಗೆ ಕ್ಯಾಶ್‌ಬ್ಯಾಕ್ ಸಿಗಲಿದೆ.
ಪ್ರೀಮಿಯರ್ ಮೊಬೈಲ್ ಫೋನ್ ಗಳಿಗೆ ಪ್ರಸಿದ್ಧವಾಗಿರುವ Oneplus ತನ್ನ ಮೊತ್ತಮೊದಲ ಟಿವಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು
ಪಿಕ್ಚರ್ ಕ್ವಾಲಿಟಿ, ಸೌಂಡ್ ಕ್ವಾಲಿಟಿ ಮತ್ತು ವಿಭಿನ್ನ ವಿನ್ಯಾಸವುಳ್ಳ, ಯೂಸರ್ ಫ್ರೆಂಡ್ಲಿ ನೇವಿಗೇಶನ್ ಇರುವ Oneplus Q1 ಮತ್ತು Oneplus Q1 Pro ಎಂಬ ಎರಡು ವಿಧದ ಟಿವಿಗಳು ಬಿಡುಗಡೆಯಾಗಿತ್ತು.