ನಾಲ್ಕು ಹೊಸ ಮಾಡೆಲ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

By Suvarna NewsFirst Published Dec 21, 2020, 6:16 PM IST
Highlights

ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟ್ಯಾಪ್ ಉತ್ಪಾದನೆಯನ್ನು ಅಗ್ರಗಣ್ಯ ಎನಿಸಿರುವ ಸ್ಯಾಮ್ಸಂಗ್ ದಕ್ಷಿಣ ಕೊರಿಯಾದಲ್ಲಿ ನಾಲ್ಕು ಹೊಸ ಮಾದರಿ ಲ್ಯಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟ್ಯಾಪ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನಿಯಾಗಿರುವ ಸ್ಯಾಮ್ಸಂಗ್ ಇದೀಗ ಏಕ ಕಾಲಕ್ಕೆ ನಾಲ್ಕು ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟ್ಯಾಪ್‌ಗಳು ಬಿಡುಗಡೆಯಾಗಿರುವುದು ಭಾರತದಲ್ಲಿ ಅಲ್ಲ, ಬದಲಿಗೆ ದಕ್ಷಿಣ ಕೊರಿಯಾದಲ್ಲಿ.

55 ಇಂಚಿನ Mi QLED TV 4K ಟಿವಿ ಬಿಡುಗಡೆ, ಬೆಲೆ ಇಷ್ಟು

ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2, ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 5ಜಿ, ಗ್ಯಾಲಕ್ಸಿ ಬುಕ್ ಅಯಾನ್ 2 ಮತ್ತು ನೋಟ್‌ಬುಕ್ ಪ್ಲಸ್ 2 ಲ್ಯಾಪ್‌ಟ್ಯಾಪ್ ಮಾಡೆಲ್‌ಗಳನ್ನು ಸ್ಯಾಮ್ಸಂಗ್ ಬಿಡುಗಡೆ ಮಾಡಿದೆ. ಈ ನಾಲ್ಕೂ ಸ್ಯಾಮ್ಸಂಗ್‌ ಲ್ಯಾಪ್‌‌ಟ್ಯಾಪ್‌ಗಳಲ್ಲಿ ಜಿಫೋರ್ಸ್ ಎನ್‌ ಗ್ರಾಫಿಕ್ಸ್ ಕಾರ್ಡ್‌ಗಳು ಮತ್ತು 11ನೇ ತಲೆಮಾರಿನ ಟೈಗರ್ ಲೇಕ್ ಸಿಪಿಯುಗಳನ್ನು ಒಳಗೊಂಡಿದೆ. ಶಕ್ತಿಶಾಲಿ ಪ್ರದರ್ಶನ ಮತ್ತು ಸ್ಟೈಲೀಶ್ ವಿನ್ಯಾಸವನ್ನು ಪ್ರತಿನಿಧಿಸುತ್ತವೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 13.3 ಇಂಚ್ ಇದ್ದು ಮತ್ತು 15.6 ಇಂಚ್ ಮಾಡೆಲ್ ಬೆಲೆ 1.23 ಲಕ್ಷ ರೂಪಾಯಿ ಬೆಲೆ ಇದೆ.  ಮೈಸ್ಟಿಕ್ ಬ್ಲ್ಯಾಕ್ ಮತ್ತು ಮೈಸ್ಟಿಕ್ ಬ್ರಾಂಜ್ ಬಣ್ಣಗಳಲ್ಲಿ ಈ ಲ್ಯಾಪ್‌ಟ್ಯಾಪ್‌ಗಳು ಮಾರಾಟಕ್ಕೆ ಸಿಗಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 5ಜಿ ರಾಯಲ್ ಸಿಲ್ವರ್ ಬಣ್ಣದ ಆಯ್ಕೆಯಲ್ಲಿ ದೊರೆಯಲಿದ್ದು, 13.3 ಇಂಚ್ ಡಿಸ್‌ಪ್ಲೇ ಬೆಲೆ 1.83 ಲಕ್ಷ ರೂ. ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ ಅಯಾನ್ 2 ಬೆಲೆ 92,300 ರೂ.ನಿಂದ ಆರಂಭವಾಗಿ 1.63 ಲಕ್ಷ ರೂ.ವರೆಗೆ ಇದೆ.

ಇನ್ಸ್‌ಟಾಗ್ರಾಮ್‌ನಲ್ಲಿ ಮೂವೀ ನೋಡಲು ‘ವಾಚ್‌ ಟುಗೆದರ್’ ಫೀಚರ್!

ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2, ಟು ಇನ್ ಒನ್ ಲ್ಯಾಪ್‌ಟ್ಯಾಪ್ ಆಗಿದ್ದು, ಸ್ಯಾಮ್ಸಂಗ್ ಸ್ಮಾರ್ಟ್ ಪೆನ್‌ನೊಂದಿಗೆ ಬರಲಿದೆ. 15.6 ಇಂಚ್ ಡಿಸ್‌ಪ್ಲೇ ಹೊಂದಿದ್ದು, 11ನೇ ತಲೆಮಾರಿನ ಟೈಗರ್ ಲೇಕ್ ಪ್ರೊಸೆಸರ್ ಹಾಗೂ ಎನ್ವಿದಿಯಾ ಜಿಫೋರ್ಸ್ ಎಂಎಕ್ಸ್450 ಜಿಪಿಯು ಬೆಂಬಲವನ್ನು ಪಡೆದುಕೊಂಡಿದೆ. ನಾಲ್ಕನೇ ಜನರೇಷನ್ ಎಸ್ಎಸ್‌ಡಿ ಸ್ಟೋರೇಜ್ ಲಭ್ಯವಿದ್ದು, 13 ಮೆಗಾ ಪಿಕ್ಸೆಲ್ ಕ್ಯಾಮರಾ ಕೂಡ ಇದೆ. ಇದೇ ವೇಳೆ, 5ಜಿ ಮಾಡೆಲ್ ಸೆಲ್ಯಾಲರ್ ಕನೆಕ್ಟಿವಿಟಿಯೊಂದೆ ಒಂದೇ ತೆರನಾದ ಫೀಚರ್‌ಗಳನ್ನು ಒಳಗೊಂಡಿವೆ.

ಗ್ಯಾಲಕ್ಸಿ ಬುಕ್ ಅಯಾನ್ 2 ಲ್ಯಾಪ್‌ಟ್ಯಾಪ್ ಅಲ್ಟ್ರಾ ಸ್ಲಿಮ್ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. ವಿಸ್ತರಿತ ಮೆಮೋರಿ ಮ್ತತು ಎಸ್ಎಸ್‌ಡಿ ಸ್ಲಾಟ್‌ನೊಂದಿಗೆ 15.6 ಇಂಚ್ ಡಿಸ್‌ಪ್ಲೇ ಅನ್ನು ಈ ಲ್ಯಾಪ್‌ಟ್ಯಾಪ್ ಹೊಂದಿದೆ.

ಇನ್ನು ಸ್ಯಾಮ್ಸಂಗ್ ನೋಟ್‌ಬುಕ್ ಪ್ಲಸ್ 2 ಲ್ಯಾಪ್‌ಟ್ಯಾಪ್ 15.6 ಇಂಚ್‌ ಡಿಸ್‌ಪ್ಲೇ ಹೊಂದಿದೆ. ಮತ್ತು ಅಪ್‌ಗ್ರೇಡೆಡ್ ರ್ಯಾಮ್ ಮತ್ತು ಸ್ಟೋರೇಜ್ ಕೂಡ ಇದೆ.

ಆಕರ್ಷಕ ವಿನ್ಯಾಸದ ರೆಡ್‌ಮಿ ಕೆ40 ಇಮೇಜ್ ಸೋರಿಕೆ

 

click me!