ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಸಮಸ್ಯೆಗಳನ್ನು ತಪ್ಪಿಸಲು ನಿಯಮಿತವಾಗಿ ರೀಸ್ಟಾರ್ಟ್ ಮಾಡುವುದು ಅಗತ್ಯ. ರೀಸ್ಟಾರ್ಟ್ ಮಾಡುವುದರಿಂದ ಮೆಮೊರಿ ರಿಫ್ರೆಶ್ ಆಗಿ ಫೋನ್ ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.
ಮೊಬೈಲ್ ಫೋನ್ ಬಳಸದ ಜನರನ್ನು ಹುಡುಕೋದು ತುಂಬಾ ಕಷ್ಟದ ಕೆಲಸ. ಇಂದು ಎಲ್ಲರ ಬಳಿಯಲ್ಲಿಯೂ ಕನಿಷ್ಠ ಕೀಬೋರ್ಡ್ ಮೊಬೈಲ್‌ನ್ನಾದರೂ ಹೊಂದಿರುತ್ತಾರೆ. ಕಳೆದ ಒಂದು ದಶಕದಿಂದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಸದ್ಯ 5G ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದ್ದು, ಆದ್ರೆ ಬಳಕೆದಾರರು ಮೊಬೈಲ್ ಹೇಗೆ ಬಳಸಬೇಕು ಎಂಬುದರ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಈ ಚಿಕ್ಕ ವಿಷಯಗಳು ಸ್ಮಾರ್ಟ್‌ಫೋನ್‌ಗಳನ್ನು ದೀರ್ಘಾವಧಿಯವರೆಗೆ ಬಾಳಿಕೆ ಬರುತ್ತವೆ. ಕೆಲವರು ದಿನಕ್ಕೆ ಐದಾರು ಬಾರಿ ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡುತ್ತಿರುತ್ತಾರೆ. ಇನ್ನು ಒಂದಿಷ್ಟು ಜನರು ರೀಸ್ಟಾರ್ಟ್ ಮಾಡೋದೇ ಇಲ್ಲ. ಫೋನ್ ರೀಸ್ಟಾರ್ಟ್ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿದುಕೊಂಡಿರುತ್ತಾರೆ.
ಇಂದು ನಾವು ನಿಮಗೆ ಎಷ್ಟು ದಿನಕ್ಕೊಮ್ಮೆ ಸ್ಮಾರ್ಟ್‌ಫೋನ್ ರೀಸ್ಟಾರ್ಟರ್ ಮಾಡಬೇಕು ಎಂಬುದರ ಬಗ್ಗೆ ಹೇಳುತ್ತಿದ್ದೇವೆ. ರೀಸ್ಟಾರ್ಟ್ ಮಾಡುವದಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದರ ಕುರಿತ ಮಾಹಿತಿಯೂ ಈ ಲೇಖನದಲ್ಲಿದೆ. ರೀಸ್ಟಾರ್ಟ್ ಮಾಡುವದರಿಂದ ಸ್ಮಾರ್ಟ್‌ಫೋನ್ ಸ್ಲೋ ಅಥವಾ ಹ್ಯಾಂ ಗ್ ಆಗೋದು ತಪ್ಪಲಿದೆ. ನೀವು ಹೇಗೆ ಬಳಕೆ ಮಾಡುತ್ತೀರಿ ಎಂಬುದರ ಮೇಲೆ ಸ್ಮಾರ್ಟ್‌ಫೋನ್ ಎಷ್ಟು ದಿನ ಬಾಳಿಕೆ ಬರುತ್ತೆ ಎಂಬುವುದು ನಿರ್ಧರಿತವಾಗುತ್ತದೆ.
ಎಷ್ಟು ದಿನಕ್ಕೊಮ್ಮೆ ರೀಸ್ಟಾರ್ಟ್ ಮಾಡಬೇಕು?
ಸಾವಿರಾರು ರೂಪಾಯಿ ನೀಡಿ ಖರೀದಿಸಿರುವ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆ ಚೆನ್ನಾಗಿ ಮತ್ತು ದೀರ್ಘಕಾಲದವರೆಗೆ ಬರಬೇಕು ಅಂದ್ರೆ ವಾರಕ್ಕೊಮ್ಮೆಯಾದರೂ ರೀಸ್ಟಾರ್ಟ್ ಮಾಡುತ್ತಿರಬೇಕು. ಇಲ್ಲವಾದ್ರೆ ಮೊಬೈಲ್ ಕಾರ್ಯಕ್ಷಮತೆ ಕಡಿಮೆಯಾಗಿ ಸರಿಯಾಗಿ ಕಾರ್ಯನಿರ್ವಹಿಸಲ್ಲ. ಯಾವುದೇ ಆಪ್ ಒಪನ್ ಮಾಡೋಕೆ ಹೋದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ರೀಸ್ಟಾರ್ಟ್ ಮಾಡೋದರಿಂದ ಮೆಮೊರಿ, ಪ್ರೊಸೆಸರ್ ರಿಫ್ರೆಶ್ ಆಗಲು ಸಹಾಯ ಮಾಡಿದಂತಾಗುತ್ತದೆ. ಆದ್ದರಿಂದ ಕನಿಷ್ಠ ವಾರಕ್ಕೊಮ್ಮೆ ನಿಮ್ಮ ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡುತ್ತಿರಬೇಕು.
ಇದನ್ನೂ ಓದಿ: ಗೂಗಲ್‌ಗೆ 26 ಸಾವಿರ ಕೋಟಿ ರೂ. ದಂಡ, 15 ವರ್ಷಗಳ ಹೋರಾಟದಲ್ಲಿ ದಂಪತಿಗೆ ಜಯ
ಸ್ಮಾರ್ಟ್‌ಫೋನ್ ನಿಧಾನವಾಗಿ ವರ್ಕ್ ಆಗುತ್ತಿದ್ದರೆ, ಪದೇ ಪದೇ ಹ್ಯಾಂಗ್ ಆಗುತ್ತಿದ್ದರೆ, ಆಪ್‌ಗಳು ಓಪನ್ ಮಾಡಿದಾಗ ದಿಢೀರ್ ಅಂತ ಹೋಮ್ ಸ್ಕ್ರೀನ್‌ಗೆ ಬರೋದು, ನೆಟ್‌ವರ್ಕ್ ಆಫ್/ಆನ್ ಆಗುತ್ತಿದ್ದರೆ ಈ ಸಮಯದಲ್ಲಿ ರೀಸ್ಟಾರ್ಟ್ ಅವಶ್ಯಕತೆ ಇರುತ್ತದೆ. ಕೆಲವೊಮ್ಮೆ ಆಪ್‌ಗಳು ಕ್ರ್ಯಾಶ್ ಆಗುತ್ತವೆ. ಬ್ಯಾಟರಿ ಬ್ಯಾಕಪ್ ಸಹ ಕಡಿಮೆಯಾಗುತ್ತಿರುತ್ತದೆ. ಫೋನ್ ಸಹ ಒಂದು ಮಶೀನ್ ಆಗಿದ್ದು, ಅದಕ್ಕೆ ಕೂಲ್ ಆಗೋಕೆ ಸಮಯ ಬೇಕಾಗುತ್ತದೆ. ಆದ್ದರಿಂದ ರೀಸ್ಟಾರ್ಟ್ ಮಾಡುತ್ತಿರಬೇಕು. ವಾರಕ್ಕೆ ಒಂದು ಬಾರಿ ಫೋನ್ ರೀಸ್ಟಾರ್ಟ್ ಮಾಡುವದರಿಂದ ಮೇಲಿನ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳಲ್ಲ.
ಇದನ್ನೂ ಓದಿ: ಬಿಎಸ್‌ಎನ್‌ಎಲ್ ನೀಡ್ತಿರೋ ಹೆಚ್ಚುವರಿ ಡೇಟಾ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ?