Price Fall: ಎಸಿ ಖರೀದಿಸುವ ಪ್ಲ್ಯಾನ್‌ ಇದ್ಯಾ..? ಹಾಗಾದ್ರೆ, ಇದೇ ಬೆಸ್ಟ್‌ ಟೈಂ..!

By BK Ashwin  |  First Published Aug 29, 2022, 10:10 PM IST

ನಿಮ್ಮ ಮನೆಗೆ ಎಸಿ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ..? ಹಾಗಾದ್ರೆ, ಎಸಿ ಖರೀದಿಸಲು ಇದೇ ಸರಿಯಾದ ಸಮಯ. ಯಾಕಂದ್ರೆ, ಕಡಿಮೆ ಬೆಲೆಗೆ ಸ್ಪ್ಲಿಟ್‌ ಎಸಿ ದೊರೆಯುತ್ತಿದೆ. 


ಸದ್ಯ, ಹಲವೆಡೆ ಮಳೆ ಸುರಿಯುತ್ತಿದ್ದು, ಇನ್ನು ಕೆಲವೆಡೆ ಚಳಿಗಾಲದ ಆರಂಭವೂ ಆಗಿದೆ. ಈ ಹಿನ್ನೆಲೆ ನೀವು ಮನೆಯಲ್ಲೇ ಇದ್ದು ಬೆಚ್ಚಗೆ ಹೊತ್ತಿಕೊಂಡು ಮಲಗೋ ಸಮಯ ಬರ್ತಾ ಇದೆ. ಆದರೆ, ಈಗ್ಯಾಕಪ್ಪಾ ಎಸಿ ವಿಷಯ. ಈ ಚಳಿಯಲ್ಲಿ ಎಸಿ (Air Conditioners) ಯಾರಿಗೆ ಬೇಕು ಅಂತ ಯೋಚನೆ ಮಾಡ್ತಿದ್ದೀರಾ.?  ನಿಮ್ಮ ಮನೆಗೆ ಮುಂದಿನ ಬೇಸಿಗೆಗಾಲದ ವೇಳೆಗೆ ಎಸಿ ಖರೀದಿಸುವ ಪ್ಲ್ಯಾನ್‌ ಇದ್ಯಾ..? ಹಾಗಾದ್ರೆ, ಬೇಸಿಗೆವರೆಗೆ ಕಾಯೋದ್ಯಾಕೆ..? ಇದೇ ಸರಿಯಾದ ಸಮಯ. ಹೌದು, ನೀವು ಸ್ಪ್ಲಿಟ್ ಎಸಿ (Split AC) ಖರೀದಿಸಲು ಯೋಚಿಸುತ್ತಿದ್ದರೆ ಇದು ನಿಮಗೆ ಸರಿಯಾದ ಸಮಯ. ಏಕೆಂದರೆ ಚಳಿಗಾಲದ ಆರಂಭದಿಂದ 1.5 ಟನ್ ಸ್ಪ್ಲಿಟ್ ಎಸಿ ಬೆಲೆ ತೀವ್ರವಾಗಿ ಕುಸಿದಿದೆ. ಈ ಸಮಯದಲ್ಲಿ ಎಸಿಯ ಬೇಡಿಕೆ ಕುಸಿಯುವುದರಿಂದ ವ್ಯಾಪಾರವೂ ಕುಸಿಯುತ್ತದೆ. ಈ ಹಿನ್ನೆಲೆ  ಸಾಮಾನ್ಯವಾಗಿ ಕಂಪನಿಗಳು ಪ್ರತಿ ವರ್ಷ ಈ ಟೈಂನಲ್ಲಿ ಬೆಲೆ ಕಡಿಮೆ ಮಾಡಿ ಗ್ರಾಹಕರನ್ನು ಆಕರ್ಷಿಸುತ್ತವೆ.  ಹಾಗಾದ್ರೆ, ನೀವೂ ಎಸಿ ಖರೀದಿಸಬೇಕಾದ್ರೆ, ನೀವು ಆನ್‌ಲೈನ್‌ನಲ್ಲಿ ಸುಲಭವಾಗಿ ಖರೀದಿಸಬಹುದಾದ ಕೆಲವು ಸ್ಪ್ಲಿಟ್ ಎಸಿಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ:

1) ಪ್ಯಾನಸೋನಿಕ್ (Panasonic) 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ

Tap to resize

Latest Videos

undefined

ಪ್ಯಾನಸೋನಿಕ್‌ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC ಯ ಎಂಆರ್‌ಪಿ ರೂ. 55,400 ಆಗಿದೆ. ಆದರೆ, ಅದನ್ನು ನೀವು 33% ರಿಯಾಯಿತಿ ದರದಲ್ಲಿ ಅಂದರೆ ರೂ.36,990 ಕ್ಕೆ ಖರೀದಿಸಬಹುದು. ಇದರೊಂದಿಗೆ ಹಲವು ಬ್ಯಾಂಕ್ ಆಫರ್‌ಗಳು ಕೂಡ ಇದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 1 ಸಾವಿರ ರೂಪಾಯಿ ರಿಯಾಯಿತಿ ಪಡೆಯಬಹುದು. ಹಾಗೂ, ನೀವು SBI ಮಾಸ್ಟರ್ ಕಾರ್ಡ್ ಡೆಬಿಟ್ ಕಾರ್ಡ್‌ನೊಂದಿಗೆ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ.

Price Fall:ಎಸಿ, ಫ್ರಿಜ್, ವಾಷಿಂಗ್ ಮಷಿನ್ ಬೆಲೆ ಶೀಘ್ರದಲ್ಲೇ ಇಳಿಕೆ! ಅಗ್ಗವಾಗಲಿವೆಯಾ ಎಲೆಕ್ಟ್ರಾನಿಕ್ ಸಾಮಗ್ರಿಗಳು?

2) ವೋಲ್ಟಾಸ್ (Voltas) 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ
ವೋಲ್ಟಾಸ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿಯ ಎಂಆರ್‌ಪಿ ರೂ. 61,990 ಆಗಿದ್ದು, ಆದರೆ ನೀವು ಅದನ್ನು 45% ರಿಯಾಯಿತಿ ದರದಲ್ಲಿ ಅಂದರೆ ರೂ. 33,990 ಗೆ ಖರೀದಿಸಬಹುದು. ಇದರೊಂದಿಗೆ ಹಲವು ಬ್ಯಾಂಕ್ ಆಫರ್‌ಗಳು ಕೂಡ ಇದರ ಮೇಲೆ ಚಾಲ್ತಿಯಲ್ಲಿವೆ. ಎಸ್‌ಬಿಐ ಮಾಸ್ಟರ್ ಕಾರ್ಡ್‌ನೊಂದಿಗೆ ಪಾವತಿಯ ಮೇಲೆ ನೀವು 10% ತ್ವರಿತ ರಿಯಾಯಿತಿ ಪಡೆಯುತ್ತೀರಿ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಯ ಮೇಲೆ 5% ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ.

AC Effect: ಮೈ ಕೂಲಾಗಿಸುವ ಎಸಿಯಿಂದ ತಲೆನೋವು!

3) LG ಸೂಪರ್ ಕನ್ವರ್ಟಿಬಲ್ 5-ಇನ್-1 ಕೂಲಿಂಗ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿ
 LG ಸೂಪರ್ ಕನ್ವರ್ಟಿಬಲ್ 5-ಇನ್-1 ಕೂಲಿಂಗ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿಯ MRP ರೂ. 68,990 ಆಗಿದೆ. ಆದರೆ, ಅದನ್ನು ನೀವು 48% ರಿಯಾಯಿತಿ ದರದಲ್ಲಿ ಅಂದರೆ ರೂ.35,490 ಕ್ಕೆ ಖರೀದಿಸಬಹುದು. ಇದರೊಂದಿಗೆ ಹಲವು ಬ್ಯಾಂಕ್ ಆಫರ್‌ಗಳು ಕೂಡ ಇದರ ಮೇಲೆ ಇವೆ. ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ ನೀವು 1,500 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ನೀವು SBI ಮಾಸ್ಟರ್ ಕಾರ್ಡ್‌ನೊಂದಿಗೆ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

click me!