LG ಕಂಪನಿಯ ಎಲ್‌ಜಿ ಗ್ರಾಮ್ ಸರಣಿಯ ಸಪೂರ ಹಾಗೂ ಹಗುರ 4 ಲ್ಯಾಪ್‌ಟ್ಯಾಪ್!

Published : Aug 19, 2022, 09:23 PM IST
LG ಕಂಪನಿಯ ಎಲ್‌ಜಿ ಗ್ರಾಮ್ ಸರಣಿಯ ಸಪೂರ ಹಾಗೂ ಹಗುರ 4 ಲ್ಯಾಪ್‌ಟ್ಯಾಪ್!

ಸಾರಾಂಶ

ಹೊಸ ಆಕರ್ಷಕ ನಾಲ್ಕು ಲ್ಯಾಪ್ ಟಾಪ್ ಗಳಿವೆ. ಸಪೂರವಾಗಿದ್ದು, ಹಗುರವಾಗಿರುವುದೇ ಈ ಲ್ಯಾಪ್ ಟಾಪ್ ಗಳ ಸ್ಟೈಲ್ ಸ್ಟೇಟ್ ಮೆಂಟ್. ಅಂದಹಾಗೆ ಈ ಹೊಸ ಲ್ಯಾಪ್ ಟಾಪ್ ಸರಣಿಯ ಹೆಸರು ಎಲ್ ಜಿ ಗ್ರಾಮ್.

ವರ್ಷಕ್ಕೊಮ್ಮೆ ಪ್ರತೀ ಕಂಪನಿಗಳು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಮೈಚಳಿ ಬಿಟ್ಟು ಮಾರುಕಟ್ಟೆ ಆಳುವ ಪ್ರಯತ್ನ ಮಾಡುತ್ತವೆ. ಅದೇ ಥರ ಎಲ್ ಜಿ ಕಂಪನಿ ಕೂಡ ಹೊಸ ಹುರುಪಿನಲ್ಲಿದೆ. 2022ನೇ ಇಸವಿಗೆಂದೇ ಸಿದ್ಧಗೊಳಿಸಲಾದ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಅದರಲ್ಲಿ ಹೊಸ ಆಕರ್ಷಕ ಪ್ರೊಜೆಕ್ಟರ್, ಪೋರ್ಟಬಲ್ ಮಾನಿಟರ್, ಲ್ಯಾಪ್ ಟಾಪ್ ಗಳು ಸೇರಿದ್ದು, ಈ ಉತ್ಪನ್ನಗಳ ಪ್ರದರ್ಶನವನ್ನು ಇತ್ತೀಚೆಗೆ ಬೆಂಗಳೂರಲ್ಲಿ ನಡೆಸಲಾಯಿತು.  ಇಂಟರೆಸ್ಟಿಂಗ್ ಎಂದರೆ ಈ ಹೊಸ ಉತ್ಪನ್ನಗಳ ಸಾಲಿನಲ್ಲಿ ಹೊಸ ಆಕರ್ಷಕ ನಾಲ್ಕು ಲ್ಯಾಪ್ ಟಾಪ್ ಗಳಿವೆ. ಸಪೂರವಾಗಿದ್ದು, ಹಗುರವಾಗಿರುವುದೇ ಈ ಲ್ಯಾಪ್ ಟಾಪ್ ಗಳ ಸ್ಟೈಲ್ ಸ್ಟೇಟ್ ಮೆಂಟ್. ಅಂದಹಾಗೆ ಈ ಹೊಸ ಲ್ಯಾಪ್ ಟಾಪ್ ಸರಣಿಯ ಹೆಸರು ಎಲ್ ಜಿ ಗ್ರಾಮ್ ಎಂಬುದು. ಎಲ್ ಜಿ ಗ್ರಾಮ್ ಸರಣಿಯ ಹೊಸ ನಾಲ್ಕು ಲ್ಯಾಪ್ ಟಾಪ್ ಗಳ ಹೆಸರು ಕ್ರಮವಾಗಿ LG Gram 17 (model 17Z90Q), LG Gram 16 (model 16Z90Q), LG Gram 16 (model 16T90Q- 2in1), and LG Gram 14 (model 14Z90Q).
 
ಗ್ರಾಮ್ ಸರಣಿಯ ಲ್ಯಾಪ್ ಟಾಪ್ ಗಳ ಆರಂಭಿಕ ಬೆಲೆ ರು.94,999. 14 ಇಂಚಿನಿಂದ 17 ಇಂಚಿನವರೆಗಿನ ಲ್ಯಾಪ್ ಟಾಪ್ ಗಳು ಲಭ್ಯವಿದೆ. ಇದರಲ್ಲಿ ಗ್ರಾಮ್ 17 ಲ್ಯಾಪ್ ಟಾಪ್ 1,350 ಗ್ರಾಮ್ ತೂಗಿದರೆ, ಗ್ರಾಮ್ 16 ಮತ್ತು ಗ್ರಾಮ್ 14 ಕ್ರಮವಾಗಿ 1,199 ಮತ್ತು 999 ಗ್ರಾಮ್ ತೂಗುತ್ತವೆ. ಹಗುರವಾಗಿರುವುದಷ್ಟೇ ಅಲ್ಲ, ಸ್ಟೈಲಿಷ್ ಆಗಿರುವುದು ಇವುಗಳ ಪ್ಲಸ್ ಪಾಯಿಂಟು.

ನೆನಪಿಡಿ, ಇವುಗಳ ಮೇಲೆ ಹಣ ಹೂಡುವುದು ಇನ್ವೆಸ್ಟ್‌ಮೆಂಟ್ ಅಲ್ಲ!

ಗೇಮ್ ಆಡುವವರ ಕಡೆಗೆ ಲ್ಯಾಪ್ ಟಾಪ್ ತಯಾರಿಕಾ ಕಂಪನಿಗಳು ಹೆಚ್ಚಿನ ಆಸ್ಥೆ ವಹಿಸುವುದು ಹೊಸದೇನಲ್ಲ. ಎಲ್ ಜಿಯವರು ಕೂಡ ಎಲ್ ಜಿ ಗ್ರಾಮ್ ಉತ್ಪನ್ನಗಳನ್ನು ಗೇಮಿಂಗ್ ಫ್ರೆಂಡ್ಲಿ ಉತ್ಪನ್ನವಾಗಿ ರೂಪಿಸಿದ್ದಾರೆ. ಜೊತೆಗೆ ಈ ಲ್ಯಾಪ್ ಟಾಪ್ ಗಳು 12ನೇ ಜನರೇಷನ್ ಇಂಟೆಲ್ ಕೋರ್ ಟಿಎಂ, ಐ7 ಪ್ರೊಸೆಸರ್ ಹೊಂದಿದೆ. LPDDR 5 ರಾಮ್ ಮತ್ತು NVMe 4ನೇ ಜನರೇಷನ್ ಎಸ್ ಎಸ್ ಡಿ ಇರುವುದರಿಂದ ಪವರ್ ಫುಲ್ ಆಗಿರಲಿವೆ ಅನ್ನುವುದು ಎಲ್ ಜಿ ಕಂಪನಿ ನೀಡಿರುವ ಭರವಸೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಸ್ತುತ ಎಲ್ಲಾ ಗೆಜೆಟ್ ಗಳ ಆಧಾರ ಸ್ತಂಭ. ಈ ಲ್ಯಾಪ್ ಟಾಪ್ ಗಳಲ್ಲಿ ಸ್ವಲ್ಪ ಹೆಚ್ಚೇ ಎಐ ಬಳಸಲಾಗಿದೆ. ಎಐ ಆಧರಿತ ಅತ್ಯಾಧುನಿಕ ಫೀಚರ್ ಗಳೆಲ್ಲಾ ಈ ಲ್ಯಾಪ್ ನಲ್ಲಿ ಲಭ್ಯವಿದೆ. ಫೇಸ್ ಲಾಗಿನ್, ಎಐ ನಾಯ್ಸ್ ಕ್ಯಾನ್ಸಲೇಷನ್ ಅದರಲ್ಲಿ ಪ್ರಮುಖವಾದುದು.

ಇದರಲ್ಲಿ ಥಂಡರ್ ಬೋಲ್ಡ್ 4 ಫೀಚರ್ ಇರಲಿದ್ದು, ಯುಎಸ್ ಬಿ ಪೋರ್ಟ್ ಮೂಲಕವೇ ಡಾಟಾ ಟ್ರಾನ್ಸ್ ಫರ್ ಮಾಡಬಹುದು ಮತ್ತು ಯುಎಸ್ ಬಿ ಪೋರ್ಟ್ ಮೂಲಕವೇ ಲ್ಯಾಪ್ ಟಾಪ್ ಗಳನ್ನು ಚಾರ್ಜ್ ಕೂಡ ಮಾಡಬಹುದು. ಹೈ ರೆಸೆಲ್ಯೂಷನ್ ಡಿಸ್ ಪ್ಲೇ ಹೊಂದಿರುವುದರಿಂದ ಲ್ಯಾಪ್ ಟಾಪ್ ಬಳಕೆ ಖುಷಿ ಕೊಡಲಿದೆ ಎಂದು ಎಲ್ ಜಿ ಕಂಪನಿ ಹೇಳಿಕೊಂಡಿದೆ. ಈ ಹೊಸ ಲ್ಯಾಪ್ ಟಾಪ್ ಗಳನ್ನು ಎಲ್ ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾದ ನಿರ್ದೇಶಕ ಹಾಕ್ ಹ್ಯೂನ್ ಕಿಮ್ ಮತ್ತು ಅಮೆಜಾನ್ ಇಂಡಿಯಾದ ನಿರ್ದೇಶಕ ಅಕ್ಷಯ್ ಅಹುಜಾ ಬಿಡುಗಡೆ ಮಾಡಿದ್ದಾರೆ.

ಕೂತಲ್ಲೇ ಕೂತು ಕೆಲಸ ಮಾಡೋರು ಗಮನಿಸಲೇ ಬೇಕಾದ ವಿಷ್ಯಗಳಿವು!
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ