ಹೊಸ ರೂಪದಲ್ಲಿ ಬರುತ್ತಿವೆ ವ್ಯಾಕ್ಯೂಂ ಕ್ಲೀನರ್‌ಗಳು; ಡಿಜಿಟಲೀಕರಣಗೊಂಡ ವ್ಯಾಕ್ಯೂಂ ಕ್ಲೀನರ್‌ಗಳು; ಹೇಳಿದಂತೆ ಕೇಳುತ್ತದೆ ರೋಂಬಾ ಐ7 ವ್ಯಾಕ್ಯೂಂ ಕ್ಲೀನರ್!
ಹಳೆ ಬಟ್ಟೆ ಉಪಯೋಗಿಸಿ ಕೂತು ಮನೆ ಒರೆಸುವ ಕಾಲ ಯಾವತ್ತೋ ಹೋಗಿದೆ. ಆ ಸ್ಥಳವನ್ನು ಮಾಪ್‌ಗಳು ಆಕ್ರಮಿಸಿಕೊಂಡಿವೆ. ಅದರಲ್ಲೂ ಹೊಸ ಹೊಸ ಬಗೆಯ-ವಿನ್ಯಾಸದ ಮಾಪ್‌ಗಳು ಇವೆ.
ಸ್ವಲ್ಪ ಅನುಕೂಲಸ್ಥರು ಅಥವಾ ದೊಡ್ಡ ದೊಡ್ಡ ಕಚೇರಿ, ಆಸ್ಪತ್ರೆಗಳಲ್ಲಿ ವ್ಯಾಕ್ಯೂಮ್ ಕ್ಲೀನರ್‌ಗಳದ್ದೇ ಕಾರುಬಾರು. ವ್ಯಾಕ್ಯೂಮ್ ಕ್ಲೀನರ್ ಯಂತ್ರಗಳು ಡಿಜಿಟಲೀಕರಣವಾದ್ರೆ ಹೇಗಿರುತ್ತೆ? ಹೌದು, ಅದು ರೋಬೋಟ್ ಆಗ್ಬಿಡುತ್ತೆ!
ವ್ಯಾಕ್ಯೂಂ ಕ್ಲೀನರ್ ಬ್ರ್ಯಾಂಡ್ ಆದ ಐರೋಂಬಾ ಕಂಪನಿ ತನ್ನ ಐ7 ಉತ್ಪನ್ನದಲ್ಲಿ ಕೀಪ್ ಔಟ್ ಝೋನ್ಸ್ ಎಂಬ ಡಿಜಿಟಲ್ ವಿಶೇಷತೆಯನ್ನು ಅಳವಡಿಸಿಕೊಂಡಿದೆ.
ಇದನ್ನೂ ಓದಿ | ನೋಡುವುದಕ್ಕೆ, ಧರಿಸುವುದಕ್ಕೆ ಮೀ ಬ್ಯಾಂಡ್ 4 ಬೆಸ್ಟ್; ಇಲ್ಲಿದೆ ಫೀಚರ್ & ಬೆಲೆ...
ಈ ಫೀಚರ್ ಮೂಲಕ ಮನೆಯ ಯಾವ ಭಾಗವನ್ನು ಕ್ಲೀನ್ ಮಾಡಬೇಕು ಎಂಬುವುದನ್ನು ಈ ಉತ್ಪನ್ನದಲ್ಲಿ ಮೊದಲೇ ಫೀಡ್ ಮಾಡಿ ಇಡಬಹುದು. ಪ್ರತಿ ಬಾರಿ ಅದಕ್ಕೆ ತಿಳಿಸುವ ಅಗತ್ಯವಿರೋದಿಲ್ಲ!
ಅಷ್ಟೇ ಅಲ್ಲಾರೀ, ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮೂಲಕ ಇದಕ್ಕೆ ಕೆಲಸ ಸೂಚಿಸಬಹುದು. ಹೇಗಿದೆ ಐಡಿಯಾ? ಹೇ ಗೂಗಲ್, ಆ ಕಡೆ ಸ್ವಲ್ಪ ಒರಿಸ್ತಿಯಾ, ಅಂದ್ರೆ ಆಯ್ತು!