Mi Notebook 14 (IC) ಬಿಡುಗಡೆ, ಬೆಲೆ ಎಷ್ಟಿದೆ ಗೊತ್ತಾ?

By Suvarna News  |  First Published Jan 20, 2021, 3:24 PM IST

ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೇ ಲ್ಯಾಪ್‌ಟ್ಯಾಪ್‌ಗಳ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಶಿಯೋಮಿ ಇದೀಗ ತನ್ನ ಹೊಸ ಎಂಐ ನೋಟ್‌ಬುಕ್(ಐಸಿ) ಎಂಬ ಲ್ಯಾಪ್‌ಟ್ಯಾಪ್ ಅನ್ನು ಬಿಡುಗಡೆ ಮಾಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಲ್ಯಾಪ್‌ಟ್ಯಾಪ್ ನಿಮ್ಮ ವೈಯಕ್ತಿಕ ಮತ್ತು ಕಚೇರಿಯ ಕೆಲಸಗಳಿಗೆ ಸೂಕ್ತವಾಗಿದೆ.


ಭಾರತದ ಬಹುಬೇಡಿಕೆಯ ಬ್ರ್ಯಾಂಡ್ ಆಗಿರುವ ಚೀನಾ ಮೂಲದ ಶಿಯೋಮಿ ದೇಶಿಯ ಮಾರುಕಟ್ಟೆಗೆ ತನ್ನ ನೂತನ ಎಂಐ ನೋಟ್‌ಬುಕ್ 14(ಐಸಿ) ಲ್ಯಾಪ್‌ಟ್ಯಾಪ್ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟ್ಯಾಪ್ ಆರಂಭಿಕ ಬೆಲೆ 43,999 ರೂಪಾಯಿ.

ಈ ಲ್ಯಾಪ್‌ಟ್ಯಾಪ್ ಅನ್ನು ನೀವು Mi.com, Mi Homes, Amazon.in, Flipkart ಸೇರಿದಂತೆ ರಿಟೇಲ್‌ ಮಳಿಗೆಗಳಲ್ಲಿ ಖರೀದಿಸಬಹುದಾಗಿದೆ. ಎಂಐ ನೋಟ್‌ಬುಕ್ 14 ನಿಮಗೆ ಸಿಲ್ವರ್ ಕಲರ್‌ನಲ್ಲಿ ಮಾರಾಟಕ್ಕೆ ಸಿಗಲಿದೆ.

Latest Videos

undefined

ಒಪ್ಪೋ ರೆನೋ 5 ಪ್ರೋ 5ಜಿ ಬಿಡುಗಡೆ; ಸಿಕ್ಕಾಪಟ್ಟೆ ಕ್ಯಾಶ್‌ಬ್ಯಾಕ್, ಖರೀದಿಸಿ ಈಗಲೇ!

ಎಂಐ ನೋಟ್‌ಬುಕ್ ಸೀರಿಸ್ ಲ್ಯಾಪ್‌ಟ್ಯಾಪ್‌ಗಳನ್ನು ವ್ಯಾಪಕವಾಗಿ ಜನರು ಒಪ್ಪಿಕೊಂಡಿದ್ದಾರೆ ಮತ್ತು ಎಂಐ ಅಭಿಮಾನಿಗಳಿಂದಲೂ ವ್ಯಾಪಕ ಪ್ರಶಂಸೆ ದೊರೆತಿದೆ. ಎಂಐ ನೋಟ್‌ಬುಕ್ 14(ಐಸಿ) ಲ್ಯಾಪ್‌ಟ್ಯಾಪ್ ಬಿಡುಗಡೆಯ ಮೂಲಕ ನಾವು ಪ್ರದರ್ಶನದ ಗುರಿಯನ್ನು ಎನ್ನಷ್ಟು ಎತ್ತರಿಸುತ್ತಿದ್ದೇವೆ ಮತ್ತು ಮೈಲುಗಲ್ಲು ನೆಡುತ್ತಿದ್ದೇವೆ. ನಮ್ಮ ಪವರ್‌ಫುಲ್ ಮಷಿನ್‌ಗಳು ಮತ್ತು ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರ ಅಗತ್ಯತೆಗಳನ್ನು ಪೂರೈಸುವ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಉತ್ತಮ ಅನುಭವವನ್ನು ನೀಡಲು ನಾವು ಈ ಶ್ರೇಣಿಯನ್ನು ವಿಸ್ತರಿಸಿದ್ದೇವೆ ಎಂದು ಎಂಐ ಇಂಡಿಯಾದ ಮುಖ್ಯ ಬಿಸಿನೆಸ್ ಅಧಿಕಾರಿ ರಘು ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂಐ ನೋಟ್‌ಬುಕ್ 13(ಐಸಿ) ಲ್ಯಾಪ್‌ಟ್ಯಾಪ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಲ್ಯಾಪ್‌ಟ್ಯಾಪ್‌ ವಿಂಡೋಸ್ 10 ಹೋಮ್ ಎಡಿಷನ್ ಒಎಸ್ ಮತ್ತು ಫೀಚರ್‌ಗಳನ್ನು ಒಳಗೊಂಡಿದೆ. 178 ಡಿಗ್ರಿ ವೈಡ್ ದೃಷ್ಟಿಗೋಚರ ಕೋನ, 81.2 ಪರ್ಸೆಂಟ್ ಸ್ಕ್ರೀನ್ ಟು ಬಾಡಿ ರೇಷಿಯೋ 16:9 ಅನುಪಾತ ಸೇರಿದಂತೆ ಆಂಟಿ ಗ್ಲೇರ್ ಹಾಗೂ ಫುಲ್ ಎಚ್‌ಡಿ ಫೀಚರ್‌ಗಳನ್ನು ಒಳಗೊಂಡು 14 ಇಂಚಿನ ಸ್ಕ್ರೀನ್ ಇರಲಿದೆ.  1.6GHz Intel Core i5-10210U ಕ್ವಾಡ್ ಕೋರ್ ಪ್ರೊಸೆಸರ್ ಯುಎಚ್‌ಡಿ ಗ್ರಾಫಿಕ್ಸ್ 620ಯೊಂದಿಗೆ ಸಂಯೋಜನೆಗೊಂಡಿರುವ  ಪ್ರೊಸೆಸರ್ ಲ್ಯಾಪ್‌ನಲ್ಲಿದೆ. Nvidia GeForce MX250 ಗ್ರಾಫಿಕ್ಸ್ ಆಯ್ಕೆಯೂ ಇದೆ. 8 ಜಿಬಿ ರ್ಯಾಮ್ ಮತ್ತು 512ಜಿಬಿ ಎಸ್ಎಸ್ಡಿ ಸ್ಟೋರೇಜ್ ಸಿಗಲಿದೆ.

3,999 ರೂ. ಏರ್ಟೆಲ್ ಎಕ್ಸ್‌ಟ್ರೀಮ್ ಪ್ಲ್ಯಾನ್‌ನಲ್ಲಿ 1 ಜಿಬಿಪಿಎಸ್ ವೈ ಫೈ ರೂಟರ್!

ಈ ಲ್ಯಾಪ್‌ಟ್ಯಾಪ್‌ನಲ್ಲಿ 720ಜಿ ವೆಬ್ ಕ್ಯಾಮ್ ಮತ್ತು 2 ಸ್ಪೀಕರ್‌ಗಳೂ ಇವೆ.  1.5 ಕೆಜಿ ತೂಗುತ್ತದೆ ಈ ನೋಟ್‌ಬುಕ್. ಈ ಮೊದಲೇ ಹೇಳಿದಂತೆ ಎಂಐ ನೋಟ್‌ಬುಕ್(ಐಸಿ)  46Whr ಒಳಗೊಂಡಿದ್ದು, ಒಮ್ಮೆ ಚಾರ್ಜ್ ಮಾಡಿದರೆ 10 ಗಂಟೆಗಳವರೆಗೂ  ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.  ಜೊತೆಗೆ ನೀವು ಇದನ್ನು ಸೂಪರ್ ಫಾಸ್ಟ್ ಆಗಿ ಚಾರ್ಜ್ ಮಾಡಬಹುದು. ಯಾಕೆಂದರೆ ಇದು 65 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ ಬೆಂಬಲವನ್ನು ಹೊಂದಿದೆ. ಅರ್ಧ ಗಂಟೆಯಲ್ಲೇ ಶೇ.50ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಆಲ್ಯೂಮಿನಿಯಮ್ ಮತ್ತು ಮ್ಯಾಗ್ನಿಷಿಯಮ್ ಕೋಟೇಡ್ ಆಧರಿತ ಬಾಡಿಯನ್ನು ಈ ಲ್ಯಾಪ್‌ಟ್ಯಾಪ್ ಹೊಂದಿದೆ.

ಎಂಐ ನೋಟ್‌ಬುಕ್ 14(ಐಸಿ) ಲ್ಯಾಪ್‌ಟ್ಯಾಪ್‌ನಲ್ಲಿ ಎರಡು ಯುಎಸ್‌ಬಿ ಟೈಪ್ ಎ ಪೋರ್ಟ್ಸ್, ಒಂದು ಯುಎಸ್‌ಬಿ 2.0 ಪೋರ್ಟ್, ಒಂದು ಎಚ್‌ಡಿಎಂಐ ಪೋರ್ಟ್, ಒಂದು ಮೈಕ್, ಆಡಿಯೋ ಜಾಕ್ ಕಾಂಪೋ, ಒಂದು ಡಿಸಿ ಜಾಕ್‌ ಸೌಲಭ್ಯಗಳಿವೆ. ಕನೆಕ್ಟಿವಿಟಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಈ ಲ್ಯಾಪ್‌ಟ್ಯಾಪ್ ನಿಮಗೆ ಬ್ಲೂಟೂಥ್, ವಿ5, ವೈ ಫೈ ಎಸಿ. ಆಪ್ಷನ್‌ಗಳನ್ನು ಒದಗಿಸುತ್ತದೆ.

ಕೈಗೆಟುಕುವ ದರದ ಒನ್‌ಪ್ಲಸ್‌ 9 ಲೈಟ್ ಸ್ಮಾರ್ಟ್‌ಫೋನ್ ಶೀಘ್ರ ಮಾರುಕಟ್ಟೆಗೆ

ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಲ್ಯಾಪ್‌ಟ್ಯಾಪ್ ಅನ್ನು ಬಳಕೆದಾರರು ಎಂಐ ಜಾಲತಾಣದಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ತಕ್ಷಣವೇ ಶೇ.10 ರಿಯಾಯ್ತಿ ಸಿಗಲಿದೆ. ನಿಮ್ಮ ವೈಯಕ್ತಿಕ ಹಾಗೂ ಆಫೀಸ್ ಕೆಲಸಕ್ಕೆ ಈ ಲ್ಯಾಪ್‌ಟ್ಯಾಪ್ ಹೆಚ್ಚುಸೂಕ್ತವಾಗಿದೆ.

click me!