ಭಾರತದಲ್ಲಿ ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ 4 ಬಿಡುಗಡೆ!

By Suvarna News  |  First Published May 27, 2021, 11:01 PM IST
  • ಹೈಬ್ರೀಡ್ ಮಾದರಿ ಕೆಲಸ ನಿರ್ವಹಣೆ, ಮಿಂಚಿನ ವೇಗದಲ್ಲಿ ಕೆಲಸ
  • ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‍ಟಾಪ್ 4 ಬಿಡುಗಡೆ
  • ನೋ ಕಾಸ್ಟ್ EMI, ಕಡಿಮೆ ಕಂತಿನಲ್ಲಿ ಲಭ್ಯ

ಬೆಂಗಳೂರು(ಮೇ.27): ಮೈಕ್ರೋಸಾಫ್ಟ್ ಇಂಡಿಯಾ ಶೈಕ್ಷಣಿಕ ಗ್ರಾಹಕರು ಮತ್ತು ಅಧಿಕೃತ ರೀಟೇಲರ್‌ಗಳಿಗೆ ತನ್ನ ಸರ್ಫೇಸ್ ಲ್ಯಾಪ್‍ಟಾಪ್ 4 ಬಿಡುಗಡೆ ಮಾಡಿದೆ. ಮೈಕ್ರೋಸಾಫ್ಟ್ ವೈವಿಧ್ಯಮಯ ಉತ್ಪನ್ನಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಾಗಿದೆ. ಈ ಆವಿಷ್ಕಾರಕ ಮತ್ತು ವೈವಿಧ್ಯಮಯ ಲ್ಯಾಪ್‍ಟಾಪ್ ನಿರಂತರವಾಗಿ ಕೆಲಸ ಮಾಡುವುದು ಅಥವಾ ಕಲಿಕೆಯಲ್ಲಿ ತೊಡಗುವವರಿಗೆ ಅಥವಾ ಹೈಬ್ರೀಡ್ ಕೆಲಸ ಮಾಡುವ ಬಳಕೆದಾರರಿಗೆ ಹೇಳಿ ಮಾಡಿಸಿದ ಉತ್ಪನ್ನವಾಗಿದೆ.  ಈ ಲ್ಯಾಪ್‍ಟಾಪ್ ಅಮೆಜಾನ್.ಇನ್‍ನಲ್ಲಿ ಲಭ್ಯವಿದೆ.  ಈ ಲ್ಯಾಪ್‍ಟಾಪ್ ಅಮೆಜಾನ್‌ನಲ್ಲಿ ಲಭ್ಯವಿದೆ. 

ವಿದ್ಯಾರ್ಥಿಗಳಿಗೆ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್; 21,999 ರೂ.ನಿಂದ ಬೆಲೆ ಆರಂಭ

Latest Videos

undefined

ಭಾರತಕ್ಕೆ ಹೊಸ ಸರ್ಫೇಸ್ ಲ್ಯಾಪ್‍ಟಾಪ್ 4 ಅನ್ನು ಬಿಡುಗಡೆ ಮಾಡಲು ಸಂತಸವೆನಿಸುತ್ತಿದೆ.  ಗ್ರಾಹಕರು ಅಥವಾ ಬಳಕೆದಾರರು ಹೊಸ ಮಾರ್ಗಗಳಲ್ಲಿ ಹೈಬ್ರೀಡ್ ಮಾದರಿಯಲ್ಲಿ ಕೆಲಸ ನಿರ್ವಹಣೆ ಮತ್ತು ಕಲಿಕೆಯಲ್ಲಿ ತೊಡಗಬಹುದಾಗಿದೆ. ಸರ್ಫೇಸ್ ಲ್ಯಾಪ್‍ಟಾಪ್ 4 ಮೈಕ್ರೋಸಾಫ್ಟ್‍ನಿಂದ ಹೊಸ ಮೀಟಿಂಗ್ ಮತ್ತು ಸಹಯೋಗಿತ ಅಕ್ಸೆಸರಿಗಳನ್ನು ಹೊಂದಿದೆ. ಇದರಿಂದ ಬಳಕೆದಾರರನ್ನು ಹೈಬ್ರೀಡ್ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ಇತ್ತೀಚಿನ ಲೈನ್-ಅಪ್ ಮೊಬಿಲಿಟಿಯನ್ನು ಹೆಚ್ಚು ಮಾಡಲಿದ್ದರೆ, ಕಾರ್ಯದಕ್ಷತೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಿದೆ. ಅಲ್ಲದೇ ಎಂಟರ್‍ಪ್ರೈಸ್ ಗ್ರೇಡ್ ಸೆಕ್ಯೂರಿಟಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಆಧುನಿಕ ಯುಗದ ಬಳಕೆದಾರರು ಹೈಬ್ರೀಡ್ ಯುಗಕ್ಕೆ ರೂಪಾಂತರಗೊಳ್ಳಲು ನೆರವಾಗುತ್ತದೆ ಎಂದು ಮೈಕ್ರೋಸಾಫ್ಟ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ ರಾಜೀವ್ ಸೋಧಿ ಹೇಳಿದರು

ಈ ಸರ್ಫೇಸ್ ಲ್ಯಾಪ್‍ಟಾಪ್ 4 ಮೊಟ್ಟಮೊದಲ ಬಾರಿಗೆ ಮೈಕ್ರೋಸಾಫ್ಟ್ ಅನುಭವಗಳನ್ನು ನೀಡುತ್ತದೆ. ಇದು ತನ್ನ ಹಿಂದಿನ ಮಾದರಿಯ ಲ್ಯಾಪ್‍ಟಾಪ್‍ಗಳಲ್ಲಿರುವಂತೆ ಐಕಾನಿಕ್ ವಿನ್ಯಾಸಗಳು, ಡೀಟೇಲ್‍ಗಳು ಮತ್ತು ಉತ್ಪನ್ನಗಳನ್ನು ಒಳಗೊಂಡಿದೆ. ಇದರ 13.5 ಮತ್ತು 15 ಮಾದರಿಗಳು ಸಿಗ್ನೇಚರ್ 3:2 ಪಿಕ್ಸೆಲ್‍ಸೆನ್ಸ್ ಹೈ-ಕಾಂಟ್ರಾಸ್ಟ್ ಟಚ್‍ಸ್ಕ್ರೀನ್ ಡಿಸ್‍ಪ್ಲೇಯನ್ನು ಹೊಂದಿದೆ.

ದೇಶದಲ್ಲೇ ಲ್ಯಾಪ್‌ಟಾಪ್‌ ಉತ್ಪಾದಿಸಿದರೆ ಪ್ರೋತ್ಸಾಹಧನ!
 
ಇದರಲ್ಲಿ ಬಿಲ್ಟ್-ಇನ್ ಎಚ್‍ಡಿ ಫ್ರಂಟ್-ಫೇಸಿಂಗ್ ಕ್ಯಾಮೆರಾ ಇದ್ದು, ಅತ್ಯದ್ಭುತವಾಗಿದೆ. ಅಲ್ಲದೇ, ಇದು ಕಡಿಮೆ ಬೆಳಕಿನ ಸಾಮಥ್ರ್ಯವನ್ನು ಹೊಂದಿದ್ದು, ಸ್ಟುಡಿಯೋ ಮೈಕ್ರೋಫೋನ್ ಅನ್ನು ಹೊಂದಿದೆ. ಇದರ ಮೂಲಕ ಕೆಲಸದ ಸಂದರ್ಭದಲ್ಲಿ ಮೀಟಿಂಗ್ ಅನುಭವಗಳನ್ನು ಹೆಚ್ಚು ಮಾಡಲಿದೆ. ಇದಲ್ಲದೇ, ಇದರ ಲಾರ್ಜ್ ಟ್ರ್ಯಾಕ್‍ಪ್ಯಾಡ್ ಗೆಸ್ಚರ್ ಸಪೋರ್ಟ್ ಅನ್ನು ಹೊಂದಿದೆ. ಇದರಿಂದಾಗಿ ಬಳಕೆದಾರರು ತಮ್ಮ ಆದ್ಯತೆಯ ವರ್ಕ್‍ಫ್ಲೋ ಅನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.

ಗ್ರಾಹಕರ ಭದ್ರತಾ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಫೇಸ್ ಲ್ಯಾಪ್‍ಟಾಪ್ 4 ಅತ್ಯದ್ಭುತವಾದ ಸೆಕ್ಯೂರಿಟಿ ಔಟ್-ಆಫ್-ಬಾಕ್ಸ್ ಅನ್ನು ಒಳಗೊಂಡಿದೆ. ಇದರೊಂದಿಗೆ ಇಂಟಗ್ರೇಟೆಡ್ ಹಾರ್ಡ್‍ವೇರ್, ಫರ್ಮ್‍ವೇರ್, ಸಾಫ್ಟ್‍ವೇರ್ ಮತ್ತು ಐಡೆಂಟಿಟಿ ಪ್ರೊಟೆಕ್ಷನ್ ಇರಲಿದೆ. ಇವುಗಳು ರಿಮೂವೇಬಲ್ ಹಾರ್ಡ್ ಡ್ರೈವ್‍ನೊಂದಿಗೆ ಅತ್ಯಂತ ಸೂಕ್ಷ್ಮ ಮಾಹಿತಿಗಳ ಮೇಲೆ ನಿಯಂತ್ರಣ ಹೊಂದಿರುತ್ತವೆ. ಇದರ ಜತೆಗೆ ಡೇಟಾ ರಿಟೆನ್ಷನ್ ಮತ್ತು ಕ್ಲೌಡ್-ಫಸ್ಟ್ ಡಿವೈಸ್ ಡಿಪ್ಲಾಯ್‍ಮೆಂಟ್‍ನ ನಿಯಂತ್ರಣವನ್ನು ಹೊಂದಿರುತ್ತವೆ.

ಲಭ್ಯತೆ ಮತ್ತು ಬೆಲೆ
ಭಾರತದಲ್ಲಿನ ಎಲ್ಲಾ ಗ್ರಾಹಕರು ಸ್ಥಳೀಯ ಮಾರಾಟಗಾರರು, ರೀಟೇಲರ್‍ಗಳು ಅಥವಾ ಅಮೆಜಾನ್.ಇನ್‍ನಲ್ಲಿ ಈ ಹೊಸ ಸರ್ಫೇಸ್ ಲ್ಯಾಪ್‍ಟಾಪ್ 4 ಅನ್ನು ಆರ್ಡರ್ ಮಾಡಬಹುದಾಗಿದೆ. 9 ತಿಂಗಳವರೆಗಿನ ನೋ-ಕಾಸ್ಟ್ ಇಎಂಐ ಸೌಲಭ್ಯವು  ಲಭ್ಯವಿದೆ. ಇಎಂಐ ಮಾಸಿಕ 11,444 ರೂಪಾಯಿಗಳಿಂದ ಆರಂಭವಾಗಲಿದೆ.

click me!