ಮಾರುಕಟ್ಟೆಗೆ ಬಂತು ನೂತನ ಸ್ಮಾರ್ಟ್ ವಾಚ್-ಮೀಡಿಯಾ ಪ್ಯಾಡ್

Suvarna News   | Asianet News
Published : Mar 19, 2020, 06:24 PM ISTUpdated : Mar 19, 2020, 07:30 PM IST
ಮಾರುಕಟ್ಟೆಗೆ ಬಂತು ನೂತನ ಸ್ಮಾರ್ಟ್ ವಾಚ್-ಮೀಡಿಯಾ ಪ್ಯಾಡ್

ಸಾರಾಂಶ

ನಿಮಿಷ ನಿಮಿಷ್ಕಕೂ ಎಲೆಕ್ಟ್ರಾನಿಕ್ ಕ್ಷೇತ್ರ ಅಪ್‌ಗ್ರೇಡ್ ಆಗುತ್ತವೆ. ಇದೀಗ ಮಾರುಕಟ್ಟೆಗೆ ನೂತನ ಸ್ಮಾರ್ಟ್ ಫೋನ್ ಹಾಗೂ ಮೀಡಿಯಾ ಪ್ಯಾಡ್ ಬಿಡುಗಡೆಯಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ವಾಹ್‌ವೇನಿಂದ ಮೀಡಿಯಾ ಪ್ಯಾಡ್‌
ಒಂದು ವಾರದ ಹಿಂದೆ ಅಂದರೆ ಮಾ. 13ರಂದು ವಾಹ್‌ವೇ ತನ್ನ ಹೊಸ ಮೀಡಿಯಾ ಪ್ಯಾಡ್‌ ಎಂ5 ಲೈಟ್‌ 10 ಬಿಡುಗಡೆ ಮಾಡಿದೆ. ಇದು ಫ್ಲಿಪ್‌ಕಾರ್ಟ್‌ ಸೇರಿ ವಿವಿಧ ಆನ್‌ಲೈನ್‌ ವೇದಿಕೆಗಳಲ್ಲಿ ಈಗಾಗಲೇ ಲಭ್ಯವಿದೆ. ಸ್ಟ್ರಾಂಗ್‌ 8 ಕೋರ್‌ ಪ್ರೊಸೆಸರ್‌, 4ಜಿ ಹೈ ಸ್ಪೀಡ್‌ ಇಂಟರ್‌ನೆಟ್‌ ಕನೆಕ್ಷನ್‌, ಹರಮಾನ್‌ ಕಾರ್ಡಾನ್‌ ಕ್ವಾಡ್‌ ಸ್ಪೀಕ​ರ್‍ಸ್, ಕ್ಲಾರಿ ವಿಯು 5.0 ಡಿಸ್‌ಪ್ಲೇ, 13 ಗಂಟೆಗಳ ಬ್ಯಾಟರಿ ಲೈಫ್‌ ಇರುವ ಹುವೈ ಮೀಡಿಯಾ ಪ್ಯಾಡ್‌ ಹೆಚ್ಚು ಯೂತ್‌ಫುಲ್‌ ಆಗಿ ಇದೆ.

ಅತ್ಯುತ್ತಮ ವಿಡಿಯೋ, ಆಡಿಯೋ ಕ್ವಾಲಿಟಿ, ಗೇಮಿಂಗ್‌ ಸಪೋರ್ಟಿಂಗ್‌ ಅವಕಾಶಗಳೂ ಇದರಲ್ಲಿ ಇವೆ. 4ಜಿಬಿ ಪ್ಲಸ್‌ 64 ಜಿಬಿ ಸಾಮರ್ಥ್ಯದ ಈ ಮೀಡಿಯಾ ಪ್ಯಾಡ್‌ ಬೆಲೆ ರು. 22,990 ರು. ಇದರೊಂದಿಗೆ 3999ರು. ಮೌಲ್ಯದ ಸ್ಪೋರ್ಟ್‌ ಬ್ಲೂಟೂತ್‌ ಹೆಡ್‌ಫೋನ್‌ ಉಚಿತವಾಗಿ ಸಿಗಲಿದೆ.

ಟೈಮೆಕ್ಸ್‌ನಿಂದ ಸ್ಮಾರ್ಟ್‌ ವಾಚ್‌
ಟೈಮೆಕ್ಸ್‌ ಇಂಡಿಯಾ ಇದೀಗ ಸ್ಮಾರ್ಟ್‌ ವಾಚ್‌ ಪರಿಚಯಿಸಿದೆ. ಬ್ಲೆಂಡ್‌ ಆಫ್‌ ಕಟ್ಟಿಂಗ್‌ ಎಡ್ಜ್‌ ಟೆಕ್ನಾಲಜಿ ಹೊಂದಿರುವ ಸ್ಮಾರ್ಟ್‌ ವಾಚ್‌ಗಳು ಹತ್ತು ಹಲವು ನೂತನ ಫೀಚರ್‌ ಹೊಂದಿವೆ. 37 ಎಂಎಂ ಗ್ರಾಫಿಕಲ್‌ ಕಲರ್‌ ಡಿಸ್‌ಪ್ಲೇ, ಲೈಟ್‌ವೈಟ್‌, ಆಪ್ಟಿಕಲ್‌ ಹಾರ್ಟ್‌ ರೇಟ್‌ ಸೆನ್ಸಾರ್‌, ಹೆಲ್ತ್‌ ಆ್ಯಂಡ್‌ ಫಿಟ್ನೆಸ್‌ ಫೀಚ​ರ್‍ಸ್, ಸ್ಟೆಪ್‌ ಆ್ಯಂಡ್‌ ಡಿಸ್ಟೆನ್ಸ್‌ ಟ್ರ್ಯಾಕರ್‌, ಕ್ಯಾಲೊರಿಸ್‌ ಟ್ರ್ಯಾಕರ್‌, ಮ್ಯೂಸಿಕ್‌ ಕಂಟ್ರೋಲರ್‌, ಬ್ಲೂಟೂತ್‌ ಸೇರಿ ಹಲವು ನವೀನ ಆಯ್ಕೆಗಳು ಇದರಲ್ಲಿ ಇದ್ದು, ಬ್ಲಾಕ್‌, ಸಿಲ್ವರ್‌, ರೋಸ್‌ ಗೋಲ್ಡ್‌ ಮೊದಲಾದ ಬಣ್ಣಗಳಲ್ಲಿ ಲಭ್ಯವಿವೆ. ಇವುಗಳ ಪ್ರಾರಂಭಿಕ ಬೆಲೆ ರು. 4,995

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ