1,19,000 ರೂ. ಬೆಲೆಯ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ಟ್ಯಾಪ್ ಬಿಡುಗಡೆ

By Suvarna News  |  First Published Mar 24, 2021, 4:15 PM IST

ಲ್ಯಾಪ್‌ಟ್ಯಾಪ್ ಮತ್ತು ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿರುವ ಚೀನಾ ಮೂಲದ ಲೆನೆವೋ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಲ್ಯಾಪ್ ಟ್ಯಾಪ್ ಬಿಡುಗಡೆ ಮಾಡಿದೆ. ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಹೆಸರಿನ ಈ ಲ್ಯಾಪ್ ಟ್ಯಾಪ್ ಬೆಲೆ ಬರೋಬ್ಬರಿ 1,19,000 ರೂಪಾಯಿಯಾಗಿದೆ. ಇದೊಂದು ಪ್ರೀಮಿಯಂ ಲ್ಯಾಪ್ ಟ್ಯಾಪ್ ಆಗಿದೆ.


ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಾಗತಿಕವಾಗಿ ಬಿಡುಗಡೆ ಕಂಡಿದ್ದ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ ಟ್ಯಾಪ್ ಇದೀಗ  ಭಾರತೀಯ ಮಾರುಕಟ್ಟೆಗೆ  ಬಿಡುಗಡೆಯಾಗಿದೆ. ಈ ಲ್ಯಾಪ್ ‌ಟ್ಯಾಪ್ ಬೆಲೆ 1,19,000 ರೂಪಾಯಿ ಆಗಿರಲಿದೆ.

ಭಾರತಕ್ಕೆ ಲಗ್ಗೆ ಇಟ್ಟ ಸ್ಯಾಮ್ಸಂಗ್ ಗ್ಯಾಲಕ್ಸಿ ಎ52, ಎ72 ಸ್ಮಾರ್ಟ್‌ಫೋನ್

Tap to resize

Latest Videos

undefined

ಚೀನಾ ಮೂಲದ ಲೆನೆವೋ ಕಂಪನಿಯ ಈ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ ಟ್ಯಾಪ್‌ನಲ್ಲಿ 11ನೇ ಜೆನ್ ಇಂಟೆಲ್ ಟೈಗರ್ ಲೇಕ್ ಸಿಪಿಯು ಇದ್ದು, ಈಗಾಗಲೇ ಲ್ಯಾಪ್ ಟ್ಯಾಪ್ ಆಸ್ಟ್ರೇಲಿಯಾ, ಹಾಂಕಾಂಗ್, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆ ಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಕಂಪನಿ ಈ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್ ಟ್ಯಾಪ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ.

ಈ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ಟ್ಯಾಪ್ 13 ಇಂಚ್ ಕ್ಯೂಎಚ್‌ಡಿ ಡಿಸ್‌ಪ್ಲೇ ಒಳಗೊಂಡಿದೆ. ಈ ಡಿಸ್‌ಪ್ಲೇ 16:10 ರೇಷಿಯೋ ಮತ್ತು ಅಕ್ಯೂರೇಟ್ ಕಲರ್‌ ಫೀಚರ್‌ಗಳನ್ನು ಹೊಂದಿದೆ. ಕಂಪನಿಯು ಈ ಲೆನೆವೋ ಯೋಗಾ ಸ್ಲಿಮ್ ಕಾರ್ಬನ್ ಲ್ಯಾಪ್‌ಟ್ಯಾಪ್ ಅನ್ನು ಗ್ರಾಹಕರಿಗೆ ಎರಡು ಸಿಪಿಯು ಆಯ್ಕೆಗಳಲ್ಲಿ ಅಂದರೆ, 11ನೇ ಜೆನ್ ಕೋರ್ ಐ5 ಮತ್ತು 11ನೇ ಜೆನ್ ಕೋರ್ ಐ7 ಸಿಪಿಯು ಆಯ್ಕೆಗಳಲ್ಲಿ ಮಾರಾಟ ಮಾಡಲಿದೆ.

ಭಾರತದಲ್ಲಿ ಕಂಪನಿ ಈ ಲ್ಯಾಪ್ ಟ್ಯಾಪ್ ಅನ್ನು 1,19,000 ರೂಪಾಯಿಗೆ ಮಾರಾಟ ಮಾಡುತ್ತಿದೆ. ಮೂನ್ ವೈಟ್ ಬಣ್ಣದ ಆಯ್ಕೆಯಲ್ಲಿ ಈ ಲ್ಯಾಪ್ ಟ್ಯಾಪ್ ಸಿಗಲಿದೆ. ಜೊತೆಗೆ ಮಾರ್ಚ್ 25ರಿಂದ www.lenovo.com ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಸಿಗಲಿದೆ. ಅಷ್ಟು ಮಾತ್ರವಲ್ಲದೇ, ಲೆನೆವೋ ಎಕ್ಸ್‌ಕ್ಲೂಸಿವ್ ಸ್ಟೋರ್ಸ್ ಸೇರಿದಂತೆ ಇತರ ವೇದಿಕೆಗಳಲ್ಲೂ ಮಾರಾಟ ಕಾಣಲಿದೆ.

ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ತುಂಬಾ ಕಡಿಮೆ!

ಲೆನೆವೋ ಕಂಪನಿಯ ಯೋಗಾ ಸ್ಲಿಮ್ ಕಾರ್ಬನ್ 7ಐ ಲ್ಯಾಪ್ ಟ್ಯಾಪ್ ವಿಂಡೋಸ್ 10 ಹೋಮ್ ಓಎಸ್ ಆಧರಿತವಾಗಿದೆ. ಈ ಮೊದಲೇ ಹೇಳಿದಂತೆ 13 ಇಂಚಿನ್ ಡಿಸ್‌ಪ್ಲೇ ಇದ್ದು, ಡಾಲ್ಬಿ ವಿಷನ್ ಸಪೋರ್ಟ್, TUV Rheinland ಸರ್ಟಿಫಿಕೇಷನ್ ಫೀಚರ್‌ಗಳಿವೆ. ಲೆನೊವೊ ಎನ್‌ಟಿಎಸ್‌ಸಿಯ 72 ಪ್ರತಿಶತ ಮತ್ತು ಎಸ್‌ಆರ್‌ಜಿಬಿ ಬಣ್ಣದ ಹರವುಗಳ 100 ಪ್ರತಿಶತ ವ್ಯಾಪ್ತಿಯನ್ನು ಹೊಂದಿದೆ. 11ನೇ ಜೆನ್ Intel Core i7-1165G7 GPU  ಮತ್ತು ಇಂಟೆಲ್ ಐರಿಶ್ ಎಕ್ಸ್ಇ ಗ್ರಾಫಿಕ್ಸ್‌ನೊಂದಿಗೆ ಈ ಲ್ಯಾಪ್ ಟ್ಯಾಪ್ ಬರುತ್ತದೆ. ಹಾಗಾಗಿ ನೀವು 16 ಜಿಬಿ ರ್ಯಾಮ್ ಮತ್ತು 1 ಟಿಬಿವರೆಗೂ ಸ್ಟೋರೇಜ್ ಪಡೆದುಕೊಳ್ಳಬಹುದು.

ಇನ್ನು ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್ ಟ್ಯಾಪ್‌ನ ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, ಈ ಲ್ಯಾಪ್‌ಟ್ಯಾಪ್, ಇಂಟೆಲ್ 2x2 802.11ax Wi-Fi 6 ಒಳಗೊಂಡಿದೆ. ಜೊತೆಗೆ, ಬ್ಲೂಟೂಥ್ 5.9, ಎರಡು ಯುಎಸ್‌ಬಿ ಟೈಪ್-ಸಿ ಥಂಡರ್‌ಬೋಲ್ಟ್ ನಾಲ್ಕು  ಪೋರ್ಟ್‌ಗಳು, ಯುಎಸ್‌ಬಿ ಟೈಪ್-ಸಿ 3.0 ಜೆನ್ ಒಂದು ಪೋರ್ಟ್, ಆಡಿಯೋ ಜಾಕ್ ಕೂಡ ಸಿಗಲಿದೆ. ಡಾಲ್ಬಿ ಆಠ್ಮೋಸ್ ಸಪೋರ್ಟ್‍ನೊಂದಿಗೆ 2 ವ್ಯಾಟಿನ ರ್ಮನ್ ಕರ್ದಾನ್ ಸ್ಪೀಕರ್‌ಗಳು ಸಿಗಲಿವೆ. ಹಾಗೆಯೇ ಎರಡು ಡಿಜಿಟಲ್ ಮೈಕ್‌ಗಳೂ ಇವೆ. ಇನ್ನು 1080ಪಿ ವಿಡಿಯೋ ಪ್ಲೇ ಬ್ಯಾಕ್, 15 ಗಂಟೆಗಳ ಕಾಲ ಬಾಳಕೆ ಬಾರುವ ಬ್ಯಾಟರಿ ಕೂಡ ಈ ಲ್ಯಾಪ್‌ ಟ್ಯಾಪ್‌ನಲ್ಲಿದೆ.

ವಾಯ್ಸ್ ಕಮಾಂಡ್‌ಗೆ ಸಂಬಂಧಿಸಿದಂತೆ ಈ ಹೊಸ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ಟ್ಯಾಪ್‌ನಲ್ಲಿ ಕೋರ್ಟನಾ ಮತ್ತು ಅಲೆಕ್ಸಾಗಳನ್ನು ಎನೆಬಲ್ ಮಾಡಲಾಗಿದೆ. ಹಾಗೆಯೇ, ಸ್ಕ್ರೀನ್ ಅನ್ನು 180 ಡಿಗ್ರಿ ಕೋನ್‌ಗಳಲ್ಲಿ ಬದಲಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಈ ಲ್ಯಾಪ್ ಟ್ಯಾಪ್ ಅಂದಾಜು 966 ಗ್ರಾಮ್ ತೂಗುತ್ತದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್‌ಮಿ ಸ್ಮಾರ್ಟ್ ಟಿವಿಗಳು

ಈ ಲ್ಯಾಪ್‌ಟ್ಯಾಪ್‌ನ ಎಲ್ಲ ಫೀಚರ್‌ಗಳನ್ನು ಮತ್ತು ತಾಂತ್ರಿಕತೆಯನ್ನು ಗಮನಿಸಿದರೆ ಇದೊಂದು ಪ್ರೀಮಿಯಂ ಲ್ಯಾಪ್‌ಟ್ಯಾಪ್ ಎಂಬುದು ಮನದಟ್ಟಾಗುತ್ತದೆ.

click me!