ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್‌ಮಿ ಸ್ಮಾರ್ಟ್ ಟಿವಿಗಳು

By Suvarna News  |  First Published Mar 18, 2021, 9:39 AM IST

ಬಜೆಟ್ ಹಾಗೂ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ ಚೀನಾ ಮೂಲದ ಶಿಯೋಮಿ ಕಂಪನಿಯ ರೆಡ್‌ಮಿ ಇದೀಗ ಭಾರತೀಯ ಟಿವಿ ಮಾರುಕಟ್ಟೆಗೂ ಕಾಲಿಟ್ಟಿದೆ. ತುಸು ಅಗ್ಗ ಎನ್ನಬಹುದಾದ ಸ್ಮಾರ್ಟ್ ಟಿವಿಗಳನ್ನು ಲಾಂಚ್ ಮಾಡಿದೆ. ಮೂರು ಮಾದರಿಯಲ್ಲಿ ದೊರೆಯುವ ಟಿವಿಗಳು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿವೆ.


ಚೀನಾ ಮೂಲದ ಶಿಯೋಮಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಇದೇ ಕಂಪನಿಯ ಸಬ್ ಬ್ರ್ಯಾಂಡ್ ಆಗಿರುವ ರೆಡ್‌ಮಿ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟದ ಮೂಲಕ ಭಾರತೀಯ ಬಳಕೆದಾರರನ್ನು ತನ್ನತ್ತ ಸೆಳೆದುಕೊಂಡಿದೆ. ಇದೀಗ ಕಂಪನಿ ಟಿವಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಮಾ.23ಕ್ಕೆ ಒನ್‌ಪ್ಲಸ್9 ಸೀರೀಸ್ ಫೋನ್ ಜತೆಗೆ ಸ್ಮಾರ್ಟ್ ವಾಚ್ ಬಿಡುಗಡೆ

Tap to resize

Latest Videos

undefined

ಸ್ಮಾರ್ಟ್ ಟಿವಿ ಎಕ್ಸ್ ಸೀರೀಸ್ ಮೂಲಕ ರೆಡ್‌ಮಿ ಭಾರತೀಯ ಟೆಲಿವಿಷನ್ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಮುಂದಾಗಿದೆ. ಕಂಪನಿಯು ಮೂರು ಮಾದರಿಗಳಲ್ಲಿ ಈ ಟಿವಿಯನ್ನು ಮಾರುಕಟ್ಟೆಗೆ ಪರಿಚಿಯಿಸಿದೆ. ರೆಡ್‌ಮಿ  ಸ್ಮಾರ್ಟ್ ಟಿವಿಯು 65, 55 ಮತ್ತು 50 ಇಂಚುಗಳಲ್ಲಿ ಮಾರಾಟಕ್ಕೆ ದೊರೆಯಲಿದೆ. ಈ ಮೂರು ಮಾದರಿಯ ಟಿವಿಗಳು 4ಕೆ, ಡಾಲ್ಬಿ ವಿಶನ್ ಮತ್ತು ಡಾಲ್ಬಿ ಆಡಿಯೋ ತಂತ್ರಜ್ಞಾವನ್ನು ಹೊಂದಿವೆ.

ಶಿಯೋಮಿ ಸ್ಮಾರ್ಟ್‌ಪೋನ್ ಮೂಲಕ ಮಾತ್ರವಲ್ಲದೇ ಎಂಐ ಟಿವಿ ಬ್ರಾಂಡ್ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿದೆ. ಈಗ ರೆಡ್‌ಮಿ ಕೂಡ ಟಿವಿಗೆ ಮಾರುಕಟ್ಟೆಗೆ ನುಗ್ಗಿರುವುದರಿಂದ ಪೈಪೋಟಿ ಹೆಚ್ಚಾಗಲಿದೆ.

ಈ ರೆಡ್‌ಮಿ ಟಿವಿಗಳ ಬೆಲೆ ಎಷ್ಟು?
ರೆಡ್‌ಮಿ ಟಿವಿ ಎಕ್ಸ್ ಸೀರೀಸ್‌ ಪೈಕಿ 50 ಇಂಚ್ ಟಿವಿ ಬೆಲೆ 32,999 ರೂಪಾಯಿ, 55 ಇಂಚಿನ ಟಿವಿ ಬೆಲೆ 38,999 ರೂಪಾಯಿ ಇದ್ದರೆ 65 ಇಂಚಿನ ಟಿವಿ ಬೆಲೆ ಕೇವಲ 57,999 ರೂಪಾಯಿಯಾಗಿದೆ. ಅಂದರೆ, ಇತರೆ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಈ ಬೆಲೆಯೇನೂ ಹೆಚ್ಚೇನೂ ಅಲ್ಲ. ಈ ಹೊಸ ಟಿವಿಗಳು ಅಮೆಜಾನ್, Mi.com, ಎಂಐ ಹೋಮ್ ಮತ್ತು ಎಂಐ ಸ್ಟುಡಿಯೋಗಳಲ್ಲಿ ಮಾರ್ಚ್ 26 ಮಧ್ಯಾಹ್ನ 12 ಗಂಟೆಯಿಂದ ಮಾರಾಟಕ್ಕೆ ಲಭ್ಯ ಇರಲಿವೆ. ಜೊತೆಗೆ ಗ್ರಾಹಕರೇನಾದರೂ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಟಿವಿ ಖರೀದಿ ಮಾಡಿದರೆ 2000 ರೂ. ರಿಯಾಯ್ತಿ ಸಿಗಲಿದೆ.

ಚುನಾವಣೆ, ಆರ್ಥಿಕ ಮಾಹಿತಿ ನೀಡುವ BolSubol ಆಪ್ ಬಿಡುಗಡೆ

ವಿಶೇಷತೆಗಳೇನು?
ಈ ಮೂರು ಮಾದರಿಯ ಟಿವಿಗಳ ವಿಶೇಷತೆಗಳಲ್ಲಿ ಅಂಥ್ಯ ವ್ಯತ್ಯಾಸವೇನೂ ಇಲ್ಲ. ರೆಡ್‌ಮಿ ಟಿವಿ ಎಕ್ಸ್ ಸೀರೀಸ್ ಟಿವಿ ಒಂದೇ ತೆರನಾದ ವೈಶಿಷ್ಟ್ಯಗಳನ್ನು ಹೊಂದಿವೆ. ಗಾತ್ರದಲ್ಲಿ ಮಾತ್ರ ನೀವು ವ್ಯತ್ಯಾಸವನ್ನು ಕಾಣಬಹುದು. 4ಕೆ ಡಿಸ್‌ಪ್ಲೇ ಇರಲಿದೆ. 3840 x 2160 ಪಿಕ್ಸೆಲ್‌ ಸ್ಕ್ರೀನ್ ಜೊತೆಗೆ ಡಾಲ್ಬಿ ವಿಷನ್, ಎಚ್‌ಡಿಆರ್ 10 ಪ್ಲಸ್, ರಿಯಾಲ್ಟಿ ಫ್ಲೋ ಅಥವಾ ಎಂಇಎಂಸಿಗೆ ಸಪೋರ್ಟ್ ಮಾಡಲಿದೆ. ಜೊತೆಗೆ ಶಿಯೋಮಿಯ ಸ್ವಂತ ವಿವಿಡ್ ಪಿಕ್ಚರ್‌ಗೂ ಈ ಮೂರು ಟಿವಿಗಳು ಸಪೋರ್ಟ್ ಮಾಡಲಿವೆ.

ಡಿಟಿಎಸ್‌ ವರ್ಚುವಲ್  ಸಪೋರ್ಟ್‌ ಜತೆಗೆ ಆಡಿಯೋ     ಔಟ್‌ಪುಟ್ 30 ವ್ಯಾಟ್ ಇರಲಿದೆ ಮತ್ತು ವಾಯಾ e-ARC ಮೂಲಕ ಎಕ್ಸ್, ಡಿಟಿಎಸ್ ಎಚ್‌ಡಿ, ಡಾಲ್ಬಿ ಆಡಿಯೋ, ಡಾಲ್ಬಿ ಆಟ್ಮೋಸ್  ಕೂಡ ಸಪೋರ್ಟ್ ಸಿಗಲಿದೆ. 64 ಬಿಟ್ ಕ್ವಾಡ್ ಕೋರ್ ಎ55 ಸಿಪಿಯು ಆಧರಿತವಾಗಿದೆ. ಜೊತೆಗೆ Mali G52 MP2 ಸಪೋರ್ಟ್ ಇದೆ. 2 ಜಿಬಿ ರ್ಯಾಮ್ ಮತ್ತು 16 ಜಿಬಿ ಸ್ಟೋರೇಜ್ ಕೂಡ ಇರಲಿದೆ. ಗೇಮಿಂಗ್‌ಗೆ ಹೆಲ್ಪ್ ಆಗುವ ಆಟೋ ಲೋ ಲ್ಯಾಟೆನ್ಸಿ ಮೋಡ್‌ನೊಂದಿಗೆ ಈ ಟಿವಿ ಮಾರಾಟಕ್ಕೆ ಸಿಗಲಿದೆ.

ಮೇರಾ ರೇಷನ್ ಕಾರ್ಡ್ ಆಪ್‌ ಬಿಡುಗಡೆ: ಸಮೀಪದ ರೇಷನ್ ಅಂಗಡಿ ಎಲ್ಲಿದೆ ತಿಳಿಯಿರಿ

ಶಿಯೋಮಿಯ ಸ್ವಂತ ಪ್ಯಾಚ್‌ವಾಲ್ ಓಎಸ್‌ನೊಂದಿಗೆ ಆಂಡ್ರಾಯ್ಡ್ 10 ಸಾಫ್ಟ್‌ವೇರ್ ಆಧರಿತವಾಗಿವೆ ಈ ಟಿವಿಗಳು. ಈ ಆಪರೇಟಿಂಗ್ ಸಾಫ್ಟ್‌ವೇರ್‌ನಿಂದಾಗಿ ಗ್ರಾಹಕರಿಗೆ ಯುನಿವರ್ಸಲ್ ಸರ್ಚ್, ಕಿಡ್ಸ್ ಮೋಡ್, ಸ್ಮಾರ್ಟ್ ರೆಕ್ಮೆಂಡೇಷನ್ಸ್ ಇತ್ಯಾದಿ ಫೀಚರ್‌ಗಳು ಕೂಡ ಸಿಗಲಿವೆ. ಗೂಗಲ್ ಅಸಿಸ್ಟೆಂಟ್‌, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋಗಾಗಿಯೇ ಪ್ರತ್ಯೇಕ ಬಟನ್ ಇರಲಿದೆ. ಜೊತೆಗೆ ಕ್ರೋಮ್‌ಕಾಸ್ಟ್ ಬಿಲ್ಟ್ ಇನ್ ಆಗಿಯೇ ಸಿಗಲಿದೆ.

click me!