ಮಹಿಳಾ ಸಬಲೀಕರಣ ಹಾಗೂ ಸಮಗ್ರ ಬೆಳವಣಿಗೆಗಾಗಿ ರಿಲಾಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಹರ್ ಸರ್ಕಲ್ ಡಿಜಿಟಲ್ ವೇದಿಕೆ ಆರಂಭಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಈ ವಿಶೇಷ ಡಿಜಿಟಲ್ ವೇದಿಕೆಯನ್ನು ಮಹಿಳೆಯರಿಗೆ ಒದಗಿಸಲಾಗಿದೆ.
ಮುಂಬೈ(ಮಾ.07) : ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಮಹಿಳೆಯರ ಸಬಲೀಕರಣಕ್ಕಾಗಿ ಅವಳ ಸರ್ಕಲ್(ಹರ್ ಸರ್ಕಲ್) ಎಂಬ ವಿನೂತನ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದೆ. ರಿಲಾಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಕೇಶ್ ಅಂಬಾನಿ ಈ ಮಹಿಳೆಯ ಡಿಜಿಟಲ್ ವೇದಿಕೆಯನ್ನು ಮಹಿಳೆಯರಿಗಾಗಿ ಬಿಡುಗಡೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನ: ಮಹೀಂದ್ರ ಟ್ರಾಕ್ಟರ್ ಜಾಹೀರಾತಿಗೆ ದೇಶವೇ ಸಲಾಂ!..
ಡಿಜಿಟಲ್ ಕ್ರಾಂತಿಯ ಸಹಾಯದಿಂದ, ಮೊದಲ ಬಾರಿಗೆ ವಿಶ್ವ ಸಹೋದರಿಯ ಭಾವದಲ್ಲಿ ಮಹಿಳೆಯರಿಗೆ ಸುರಕ್ಷಿತ ತಾಣ ನೀಡುವುದು ಉದ್ದೇಶವಾಗಿದೆ. ಡಿಜಿಲಟ್ ವೇದಿಕೆಯ ಮೂಲಕ ಮಹಿಳೆಯರ ಸಬಲೀಕರಣಸಮನ್ವಯ, ಸಹಭಾಗಿತ್ವದ ಪಾಲ್ಗೊಳ್ಳುವಿಕೆಯನ್ನು ಸದೃಢಗೊಳಿಸುವ ಕಾರ್ಯಕ್ರಮ ಇದಾಗಿದೆ.
ಹರ್ ಸರ್ಕಲ್ ಹೆಸರೇ ಸೂಚಿಸುವಂತೆ ಇದು ಅವಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಜಾಗತಿಕ ವೇದಿಕೆಯಲ್ಲಿ ಯಾವುದೇ ಗಡಿಗಳ, ಎಲ್ಲೆಗಳ ಪರಿವೆಯೇ ಇಲ್ಲದೆ ಭಾರತೀಯ ಮಹಿಳೆಯರು ಎಲ್ಲರ ಜೊತೆಗೂಡಬಹುದಾಗಿದೆ. ಸಮಾಜದ ಎಲ್ಲ ಸ್ತರಗಳ ವರ್ಗಗಳ ಮಹಿಳೆಯರು ತಮ್ಮ ಆದೆ, ಆಕಾಂಕ್ಷೆ, ಕನಸು, ಕನವರಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ.
ಮಹಿಳೆಯರು ಮಹಿಳೆಯರೊಂದಿಗೆ ಒಗ್ಗೂಡಿ ಶ್ರಮಿಸಿದರೆ ಚಮತ್ಕಾರಿಕ, ಅತ್ಯದ್ಭುತವಾದುದನ್ನು ಸಾಧಿಸಬಹುದಾಗಿದೆ ಎಂಬುದು ನನಗೆ ತಿಳಿದಿದೆ. ನಾನು ನನ್ನ ಬದುಕಿಡೀ ಇಂತಹ ಸಬಲ ಮಹಿಳೆಯರ ನಡುವೆ ಇದ್ದೆ. ಅವರಿಂದ ಅಂತಃಕರುಣೆ, ಪರಸ್ಪರ ಗೌರವ ಹಾಗೂ ಸಕಾರಾತ್ಮಕ ಗುಣಗಳನ್ನೇ ಕಲಿತೆ. ಮತ್ತುಇದಕ್ಕೆ ಪ್ರತಿಯಾಗಿ ನಾನುನಕಲಿತಿದ್ದೆಲ್ಲವನ್ನೂ ಇತರರಿಗೆ ಕಲಿಸುತ್ತ ಸಾಗಿದೆ ಎಂದು ನೀತಾ ಅಂಬಾನಿ ಹೇಳಿದರು.
ಈಗ ಹರ್ ಸರ್ಕಲ್. ಇನ್ ಮೂಲಕ ಪ್ರತಿಮಹಿಳೆಗೂ ಅಗತ್ಯವಾದ ಬೆಂಬಲ ನೀಡುವ ವ್ಯವಸ್ಥೆಯನ್ನು ಆರಂಭಿಸಲು ಆನಂದವೆನಿಸುತ್ತಿದೆ. ಪ್ರತಿಮಹಿಳೆಯೂ ಈ ಸಮೂಹವನ್ನು ಸೇರ್ಪಡೆಯಾಗಲಿ. ಸ್ವಯಂ ನಿರ್ಮಾಣದಲ್ಲಿ ತೊಡಗಿಕೊಳ್ಳಲಿ. ಜಾಗತಿಕ ತಾಣವಾಗಿರುವ ಇದರಲ್ಲಿ ಪ್ರತಿದಿನ ಪ್ರತಿಕ್ಷಣವೂ ಹೊಸ ಯೋಚನೆಗಳನ್ನು, ಹೊಸ ಯೋಜನೆಗಳನ್ನು ಸ್ವಾಗತಿಸುತ್ತದೆ. ಪ್ರತಿ ಸಂಸ್ಕೃತಿಗಳ, ಸಮುದಾಯಗಳ, ದೇಶಗಳ ಮಹಿಳೆಯರು ಸ್ವತಂತ್ರವಾಗಿ ಪಾಲ್ಗೊಳ್ಳಲಿ. ಈ ವೇದಿಕೆಯ ಮೂಲಕ ವಿಶ್ವ ಸಹೋದರಿ ತತ್ವ ಮುಂಚೂಣಿಗೆ ಬರುತ್ತದೆ. ಎಲ್ಲರಿಗಾಗಿ ಎಲ್ಲರೂ ಬೆಂಬಲಿಸುವಂತಾಗುತ್ತದೆ.
ಖಾಸಗಿ, ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ, ಸುರಕ್ಷಿತ:
ವಿಡಿಯೊ ಹಾಗು ಲೇಖನಗಳಿಗೆ ಸಂಬಂಧಿಸಿದಂತೆ ಸರ್ವರಿಗು ಮುಕ್ತವಾಗಿರುತ್ತವೆ.ಈ ವೇದಿಕೆ ಕೇವಲ ಮಹಿಳೆಯರಿಗೆ ಮಾತ್ರ ಮೀಸಲಾಗಿರುತ್ತದೆ. ಸಾಮಾಜಿಕ ಕೊಂಡಿಗಳೂ ಅವಳ ಸುರಕ್ಷೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತವೆ. ಮಹಿಳೆಯರಿಗಾಗಿ ಮಾತ್ರ ಇರುವುದರಿಂದ ಸಮಾನ ಮನಸ್ಕ ರು, ಸಮಾನವಯಸ್ಕರರು, ತಮ್ಮ ಆಸಕ್ತಿ ಅಭಿರುಚಿ ಗೆ ಅನುಗುಣವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಸ್ನೇಹವಲಯವನ್ನು ಬೆಳೆಸಿಕೊಳ್ಳಬಹುದಾಗಿದೆ. ಆರೋಗ್ಯ ಹಾಗೂ ಹಣಕಾಸಿನಂಥ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಾಸನೀಯ ಪರಿಣತರೊಂದಿಗೆ ವೈಯಕ್ತಿಕ ಚಾಟ್ ರೂಮುಗಳ ಮೂಲಕ ಸಮಾಲೋಚಿಸಬಹುದಾಗಿದೆ.
ಉತ್ತಮ ಹವ್ಯಾಸಗಳ ಆ್ಯಪ್:
ಸುರಕ್ಷಿತ ಸಮಾಲೋಚನೆ, ಸಂತೋಷನೀಡುವ ಸಾಂಗತ್ಯ, ಸಮಾನಮನಸ್ಕರ ಸಹಚರ್ಯ ನೀಡುವುದರೊಂದಿಗೆ ನಿಮ್ಮ ಹವ್ಯಾಸ ಹಾಗೂ ಚಟುವಟಿಕೆಗಳ ನಿಗಾವಹಿಸುವ ಆ್ಯಪ್ ಸಹ ನೀಡಲಾಗುತ್ತದೆ. ಹಣಕಾಸಿನ ಬಗೆಗೆ ನಿಗಾ ವಹಿಸುವ, ಋತುಚಕ್ರದ ಸಾಧ್ಯತೆಗಳನ್ನು ತಿಳಿಸುವ,ಮುಟ್ಟಿನ ಅವಧಿಯನ್ನ ಗಮನದಲ್ಲಿರಿಸುವ, ಮುಟ್ಟಿನ ಅವಧಿಯ ಲೆಕ್ಕಾಚಾರ, ಫಲವಂತಿಕೆಯ ದಿನಗಳಿದ್ದಾಗ ಎಚ್ಚರಿಸುವ, ಗರ್ಭಾವಸ್ಥೆಯ ಮಾರ್ಗಸೂಚಿಗಳನ್ನೂ ನೀಡಲಾಗುತ್ತದೆ.