LGಯಿಂದ ಹೊಸ ಟಿವಿ ಮಾರುಕಟ್ಟೆಗೆ: ವೀಕ್ಷಣೆ ಜೊತೆ ಗೇಮಿಂಗ್ ಮಜಾ

By Suvarna News  |  First Published Mar 3, 2021, 2:29 PM IST

ದಕ್ಷಿಣ ಕೊರಿಯಾದ ಮೂಲದ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕಂಪನಿ ಭಾರತೀಯ ಮಾರುಕಟ್ಟೆಗೆ ಹೊಸ ಟಿವಿಯೊಂದನ್ನು ಬಿಡುಗಡೆ ಮಾಡಿದೆ. ಈ ಟಿವಿಯು ಗೇಮಿಂಗ್ ಮತ್ತು ಸಿನಿಮಾ ನೋಡುವ ಅನುಭವವನ್ನು ಹೆಚ್ಚಿಸುತ್ತದೆ. ಭಾರತದ ಮಾರಕಟ್ಟೆಯಲ್ಲಿ ಈ ಟಿವಿ 1,99,990 ರೂಪಾಯಿಗೆ ಸಿಗಲಿದೆ. ಈ ಟಿವಿ ಅತ್ಯಾಧುನಿಕ ಎಲ್ಲ ಫೀಚರ್‌ಗಳನ್ನು ಒಳಗೊಂಡಿದೆ.


ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಪ್ರಾವೀಣ್ಯ ಸಾಧಿಸಿರುವ ಎಲ್‌ಜಿ ತನ್ನ ಬಳಕೆದಾರರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದೆ. ಎಲ್‌ಜಿ ಟಿವಿಗಳನ್ನು ಇಷ್ಟಪಡೋರಿಗೆ ಇದು ಖುಷಿಯ ವಿಚಾರವಾಗಿದೆ. ಎಲ್‌ಜಿ ಕಂಪನಿ ಒಎಲ್‌ಇಡಿ ವ್ಯಾಪ್ತಿಯಲ್ಲಿ ಮತ್ತೊಂದು ಹೊಸ ಟಿವಿ ಒಎಲ್ಇಡಿ 48ಸಿಎಕ್ಸ್‌ಟಿವಿ 48 ಇಂಚ್ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಗೇಮಿಂಗ್ ಉತ್ಸಾಹಿಗಳಿಗೆ ಟಿವಿಯಲ್ಲಿ ಸಿನಿಮಾ ನೋಡುವ ಅನುಭವವನ್ನು ನೀರಿಕ್ಷಿಸುವವರಿಗೆ ಈ ಹೊಸ ಟಿವಿ ವರದಾನವಾಗಿದೆ. ಕಂಪನಿಯು ಈ ಓಎಲ್ಇಡಿ ತಂತ್ರಜ್ಞಾನವನ್ನು ಚಿಕ್ಕ ಟಿವಿಗೆ ತಂದಿದೆ. ದೊಡ್ಡ ಟಿವಿಗಳು ನೀಡುವ 8 ಮಿಲಿಯನ್ ಪಿಕ್ಸೆಲ್‌ಗಳಿಗಿಂತ ತೀಕ್ಷ್ಣವಾದ ಪಿಕ್ಚರ್‌ಗಳನ್ನು ಈ ಟಿವಿ ಒದಗಿಸುತ್ತದೆ.

Tap to resize

Latest Videos

undefined

ಶೀಘ್ರ ಸ್ಯಾಮ್ಸಂಗ್ ಗ್ಯಾಲಕ್ಸಿ A32 ಫೋನ್ ಬಿಡುಗಡೆ: ಕ್ಯಾಮೆರಾ, ಬ್ಯಾಟರಿ ಸೂಪರ್!

ದಕ್ಷಿಣ ಕೊರಿಯಾ ಮೂಲದ ಈ ಎಲ್‌ಜಿ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್‌ಜಿ ಒಎಲ್ಇಡಿ 48ಸಿಎಂ ಟಿವಿ, ಎಲ್‌ಜಿ ವೆಬ್ಒಎಸ್ ಆಧರಿತ ಸ್ಮಾರ್ಟ್ ಟಿವಿಯಾಗಿದೆ. ಈ ಟಿವಿ AMD FreeSync ಮತ್ತು Nvidia G-Sync ಸಪೋರ್ಟ್‌ನೊಂದಿಗೆ ಬರುತ್ತದೆ.  48 ಇಂಚಿನ ಈ ಟಿವಿಯ ಅಲ್ಫಾ 9 ಜೆನ್ 3 ಪ್ರೊಸೆಸರ್, ಆಡಿಯೋಗಾಗಿ ಎಐ ಆಕುಸ್ಟಿಕ್ ಟ್ಯೂನಿಂಗ್, ಎಲ್‌ಜಿಯ ಎಚ್‌ಡಿಆರ್ ಪ್ರೋ ಸಪೋರ್ಟ್ ಮತ್ತು 4ಕೆ ರೆಸೂಲೇಷನ್‌ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಎಲ್‌ಜಿ ಒಎಲ್‌ಇಡಿ 48 ಸಿಎಕ್ಸ್ ಟಿವಿ 1,99,990 ರೂಪಾಯಿಗೆ ದೊರೆಯಲಿದೆ. ಸೆಲ್ಫಿ ಲಿಟ್ ಒಎಲ್ಇಡಿ ಪ್ಯಾನೆಲ್ ಹೊಂದಿರುವ ಎಲ್ ಜಿ ಒಎಲ್ಇಡಿ 48ಸಿಎಕ್ಸ್ ಟಿವಿಯು 48 ಇಂಚಿನದ್ದಾಗಿದ್ದು, 4ಕೆ ರೆಸೂಲೇಷನ್ ಹೊಂದಿದೆ. ಇಷ್ಟು ಮಾತ್ರವಲ್ಲದೇ, ಈ ಟಿವಿಯು ಡಾಲ್ಬಿ ವಿಷನ್‌ನ  ಐಕ್ಯೂ ಮತ್ತು ಬ್ರೈಟ್ನೆಶ್ ರೂಮ್‌ನೊಂದಿಗೆ ಡಾಲ್ಬಿ ವಿಷನ್ ಕಂಟೆಂಟ್ ಅನ್ನು ಆಪ್ಟಿಮೈಸ್ ಮಾಡುವ ಆಟ್ಮೋಸ್ ಸೌಲಭ್ಯವನ್ನು ಒಳಗೊಂಡಿದೆ.

ಪವರ್‌ಫುಲ್ ಬ್ಯಾಟರಿಯ ಜಿಯೋನಿ ಮ್ಯಾಕ್ಸ್ ಪ್ರೋ ಫೋನ್ ಬಿಡುಗಡೆ

ಈ ಟಿವಿಯಲ್ಲಿ ಎಐ ಆಧರಿತ ಟ್ಯೂನಿಂಗ್ ಇದ್ದು ಇದು ಒಟ್ಟಾರೆ ಟಿವಿ ನೋಡುವ ಅನುಭವವನ್ನು ಹೆಚ್ಚಿಸುತ್ತದೆ. ವೈರ್‌ಲೆಸ್ ಸೌಂಡ್ ಫೀಚರ್ ಮೂಲಕ ಬಳಕೆದಾರರು ವೈರ್‌ಲೆಸ್ ಆಗಿ ಬ್ಲೂಟೂತ್ ಹೆಡ್ ಸೆಟ್ ಅಥವಾ ಸೌಂಡ್ ಬಾರ್‌ ಅನ್ನು ಟಿವಿಗೆ ಕನೆಕ್ಟ್ ಮಾಡಬಹುದು. ಈ ಟಿವಿಯಲ್ಲಿ ಅಲ್ಫಾ 9 ಜೆನ್ 3 ಪ್ರೊಸೆಸರ್ ಅಳವಡಿಸಲಾಗಿದೆ.

ಎಲ್‌ಜಿ ಕಂಪನಿಯ ಪ್ರಕಾರ, ಈ ಟಿವಿಯು ವೆರಿಯಬಲ್ ರಿಫ್ರೆಸ್  ರೇಟ್(ವಿಆರ್‌ಆರ್)ಗೆ ಸಪೋರ್ಟ್ ಮಾಡುವುದರಿಂದ ಬಳಕೆದಾರರು ಯಾವುದೇ ಅಡಚಣೆ ಇಲ್ಲದೇ ಗೇಮಿಂಗ್ ಅನುಭವವನ್ನು ಪಡೆದುಕೊಳ್ಳಬಹುದು. ಗೇಮಿಂಗ್ ವೇಳೆ ಕಾನ್ಸೂಲ್ ಅಥವಾ ಕಂಪ್ಯೂಟರ್ ನೀಡುವ ಪರಿಣಾಮವನ್ನೇ ಈ ಟಿವಿಯ ರಿಫ್ರೆಶ್ ರೇಟ್ ಒದಗಿಸುತ್ತದೆ.

ತಮಿಳುನಾಡು, ಕೇರಳದಲ್ಲಿ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ BSNL!

ಈ ಟಿವಿಯು ಎಚ್‌ಡಿಆರ್ 10 ಪ್ರೋಗೆ ಸಪೋರ್ಟ್ ಮಾಡುತ್ತದೆ. ಇದರಿಂದ ಬಳಕೆದಾರರು ಎಚ್‌ಡಿಆರ್ ಕಂಟೆಂಟ್ ನೋಡಬಹುದಾಗಿದೆ. ಈ ಟಿವಿ ಒದಗಿಸುವ ಇನ್ನಿತರ ಗೇಮಿಂಗ್ ಫೀಚರ್‌ಗಳೆಂದರೆ- ಆಟೋ ಲೋ ಲ್ಯಾಟೆನ್ಸಿ(ಎಎಲ್ಎಲ್ಎಂ), ಎಚ್‌ಡಿಎಂಐ 2.1 ಸಪೋರ್ಟ್ ಮಾಡುವ ಎನಾಹನ್ಸ್ಡ್ ಆಡಿಯೋ ರಿಟರ್ನ್ ಚಾನೆಲ್(ಇಎಆರ್‌ಸಿ). ಹಾಗೆಯೇ ಸ್ವಯಂ ಆಗಿ ಹೊಂದಾಣಿಕೆಯಾಗಬಲ್ಲ ಕಾನ್ಸೋಲ್ ಸಂಪರ್ಕಕ್ಕೆ ಬಂದಕೂಡಲೇ ಈ ಟಿವಿಯು ಆಟೋಮ್ಯಾಟಿಕ್ ಆಗಿ ಲೋ ಲ್ಯಾಗ್ ಗೇಮ್ ಮೋಡ್‌ಗೆ ಬದಲಾಗುತ್ತದೆ.

ಈ ಟಿವಿಯ ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ ಅಂತರ್ಗತವಾಗಿಯೇ ವೈಫೈ ಮತ್ತು ಬ್ಲೂಟೂತ್ ವಿ5.0 ಇದೆ. ಹಾಗೆಯೇ 3 ಯುಎಸ್‌ಬಿ ಪೋರ್ಟ್ಸ್,  4 ಎಚ್‌ಡಿಎಂಐ ವಿ2.1 ಪೋರ್ಟ್ಸ್, 1 ಇದರ್ನೇಟ್, 1 ಹೆಡ್‌ಫೋನ್ ಔಟ್, 1 ಆರ್‌ಎಫ್ ಇನ್‌ಪುಟ್ ಮತ್ತು ಡಿಜಿಟಲ್ ಆಡಿಯೋ ಔಟ್(ಆಪ್ಟಿಕಲ್) ಸೌಲಭ್ಯಗಳಿವೆ. ಇದು 2.2 ಚಾನೆಲ್‌ ಸೌಂಡ್ ಇನ್‌ಬಿಲ್ಟ್ ಹೊಂದಿದ್ದು, 20 ವ್ಯಾಟ್ ಸಬ್‌-ವೂಫರ್‌ನೊಂದಿಗೆ 40 ವ್ಯಾಟ್ ಔಟ್ ಪುಟ್ ನೀಡುತ್ತದೆ.

click me!