ಮಕ್ಕಳ ಹೋಮ್‌ವರ್ಕ್ನಿಂದ ಹಿಡಿದು, ಫೋಟೋ ಪ್ರಿಂಟಿಂಗ್ ತನಕ ಪ್ರಿಂಟಿಂಗ್ ಅಗತ್ಯಗಳೂ ಹೆಚ್ಚಿವೆ. ಮನೆಗೆ, ಡಿಸೈನರುಗಳಿಗೆ, ಆಫೀಸಿಗೆ ಬೇಕಾಗುವ ಪುಟ್ಟದಾದ ಆದರೆ ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಂಕ್‌ಟ್ಯಾಂಕ್ ಫೋಟೋ ಪ್ರಿಂಟರನ್ನು ಎಪ್ಸನ್ ಬಿಡುಗಡೆ ಮಾಡಿದೆ
Tech Desk: ಪ್ರಿಂಟರುಗಳ ಬಳಕೆ ಇವತ್ತು ವ್ಯಾಪಕ. ಮನೆ ಮನೆಗೂ ಪ್ರಿಂಟರುಗಳು ಬಂದಿವೆ. ಮಕ್ಕಳ ಹೋಮ್‌ವರ್ಕ್ನಿಂದ (Home Work) ಹಿಡಿದು, ಫೋಟೋ ಪ್ರಿಂಟಿಂಗ್ ತನಕ ಪ್ರಿಂಟಿಂಗ್ ಅಗತ್ಯಗಳೂ ಹೆಚ್ಚಿವೆ. ಮನೆಗೆ, ಡಿಸೈನರುಗಳಿಗೆ, ಆಫೀಸಿಗೆ ಬೇಕಾಗುವ ಪುಟ್ಟದಾದ ಆದರೆ ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಂಕ್‌ಟ್ಯಾಂಕ್ ಫೋಟೋ ಪ್ರಿಂಟರನ್ನು (InkTank Photo Printer) ಎಪ್ಸನ್ ಬಿಡುಗಡೆ ಮಾಡಿದೆ. ಫೋಟೋಗಳನ್ನು ಸ್ಟುಡಿಯೋ ಗುಣಮಟ್ಟದಲ್ಲಿ (Studio) ಫೋಟೋ ಪ್ರಿಂಟಿಂಗ್ ಪೇಪರ್ ಮೇಲೆ ವರ್ಣರಂಜಿತವಾಗಿ ಮುದ್ರಿಸುವ ಈ ಎಪ್ಸನ್ ಎಲ್8180 ಬೆಲೆ .54,999 ರುಪಾಯಿ.
ಇದು ಎ3 ಫೋಟೋ ಪ್ರಿಂಟರ್. ಆರು ಬಣ್ಣಗಳ ಇಂಕುಗಳು ಫೋಟೋವನ್ನು ಸ್ಟುಡಿಯೋ ಗುಣಮಟ್ಟದಲ್ಲಿ ಮುದ್ರಿಸುತ್ತವೆ. ಆಯ್ಕೆಗಳನ್ನು ಮಾಡಿಕೊಳ್ಳುವುದಕ್ಕೆ ಟಚ್‌ಸ್ಕ್ರೀನ್ ಇದೆ. ಬ್ಲೂಟೂಥ್, ವೈಫೈ, ಯುಎಸ್‌ಬಿ ಸ್ಲಾಟ್‌ಗಳ ಮೂಲಕ ಫೋಟೋಗಳನ್ನು ಪ್ರಿಂಟರಿಗೆ ಕಳಿಸಬಹುದು. ಪ್ರಿಂಟ್, ಸ್ಕಾನ್, ಕಾಪಿ ಮಾಡುವ ವ್ಯವಸ್ಥೆಯೂ ಇದೆ.
ಈ ಪ್ರಿಂಟರಿನ ವಿಶೇಷವೆಂದರೆ ಮನೆಯಲ್ಲೇ ಕಡಿಮೆ ಖರ್ಚಿನಲ್ಲಿ ಫೋಟೋ ಪ್ರಿಂಟ್ ತೆಗೆಯಬಹುದು. ಇಂಕ್ ಕೂಡ ಬಾಳಿಕೆ ಬರುತ್ತದೆ. ಸಣ್ಣ ಸ್ಟುಡಿಯೋ ಇಟ್ಟುಕೊಂಡವರಿಗೆ, ಗ್ರಾಫಿಕ್ ವರ್ಕ್ ಮಾಡುವವರಿಗೆ ಇದು ಅನುಕೂಲಕರ.
ಇದನ್ನೂ ಓದಿ: Budget 2022 LIVE: ಮೋದಿ ಸರಕಾರದ ಲೆಕ್ಕ, ನಿರ್ಮಲಾ ಮಂಡಿಸ್ತಾರೆ ಪಕ್ಕಾ
ಈ ಪುಟ್ಟಪ್ರಿಂಟರು ಟೇಬಲ್ಲಿನ ಮೇಲೆ ಪುಟ್ಟದಾಗಿ ಕೂರುತ್ತದೆ. ಬೇಡದೇ ಇದ್ದಾಗ ಮಡಿಚಿಟ್ಟುತೊಂಡು ಬೇಕಾದ ಕೆಲಸ ಮಾಡಬಹುದು. ಅರ್ಜೆಂಟಿಗೆ ಫೋಟೋಕಾಪಿ ತೆಗೆಯಬಹುದಾದರೂ ಇದು ಕಲರ್ ಪ್ರಿಂಟಿಗೇ ಹೇಳಿ ಮಾಡಿಸಿದ್ದು. ಒಂದು ಪ್ರಿಂಟ್ ಖರ್ಚು ಏಳೆಂಟು ರುಪಾಯಿ ತಗಲುತ್ತದೆ ಅನ್ನುವುದು ಅಂದಾಜು. ನೀವು ಬಳಸುವ ಪ್ರಿಂಟಿಂಗ್ ಪೇಪರಿನ ಮೇಲೆ ಅದು ಅವಲಂಬಿತ. ಎ3 ಮತ್ತು ಎ4 ಅಲ್ಲದೇ ವಿಸಿಟಿಂಗ್ ಕಾರ್ಡು, ಎನ್ವಲಪ್ ಕೂಡ ಪ್ರಿಂಟ್ ಮಾಡಲಿಕ್ಕೆ ವ್ಯವಸ್ಥೆಯುಂಟು.
ಈ ಪ್ರಿಂಟರ್ ಅಷ್ಟೇನೂ ಯೂಸರ್ ಫ್ರೆಂಡ್ಲಿ ಅಲ್ಲ. ಅದನ್ನು ಬಳಸಲಿಕ್ಕೆ ಕೈಪಿಡಿ ಬೇಕು. ಇಂಕು ಎಷ್ಟುಸುರಿಸಬೇಕು, ಯಾವ ಬಣ್ಣ ಎಷ್ಟುಕಲೆಸಬೇಕು ಅನ್ನುವುದನ್ನೆಲ್ಲ ಪ್ರಿಂಟರಿನ ಮೆದುಳು ನಿರ್ಧರಿಸುತ್ತದೆ. ಅದನ್ನು ಮೊದಲೇ ಹೊಂದಿಸಿಕೊಂಡಿದ್ದರೆ ಕೆಲಸ ಸುಲಭ.
ಇದನ್ನೂ ಓದಿ: Redmi Smart TV X43: ಫೆ.9ಕ್ಕೆ ಭಾರತದಲ್ಲಿ ಆ್ಯಂಡ್ರಾಯ್ಡ್ ಟಿವಿ ಲಾಂಚ್, ಬೆಲೆ ಎಷ್ಟು? ಏನೆಲ್ಲ ವಿಶೇಷತೆ?
ಪ್ರಿಂಟ್ ಮಾಡುವ ಹೊತ್ತಿಗೆ ತಾನಾಗಿಯೇ ಟ್ರೇ ತೆರೆದುಕೊಳ್ಳುತ್ತದೆ. ಎ4 ಸೈಜಿನ ಪ್ರಿಂಟುಗಳನ್ನು ಕಾಗದದ ಎರಡೂ ಬದಿಯಲ್ಲೂ ತೆಗೆಯಲಿಕ್ಕೆ ಅವಕಾಶ ಉಂಟು. ಎ3 ಒಂದೇ ಬದಿ. ಒಂಚೂರು ಹೆಚ್ಚುಕಮ್ಮಿ ಆದರೆ ಇಂಕು ಜಾಸ್ತಿ ಸುರಿಯುತ್ತದೆ. ಕಲಸಿಹೋಗಿ ಕಲಾತ್ಮಕ ಚಿತ್ರದಂತೆ ಆಗುತ್ತದೆ. ಅದು ಪ್ರಿಂಟರ್ ಸಮಸ್ಯೆಯಲ್ಲ, ಅದನ್ನು ಬಳಸುವವರ ಸಮಸ್ಯೆ.