boAt Airdopes 111: 28 ಗಂಟೆ ಬ್ಯಾಟರಿ ಲೈಫ್‌ನೊಂದಿಗೆ ರೂ. 1499 ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆ!

By Suvarna News  |  First Published Jan 29, 2022, 10:51 AM IST

ಕಂಪನಿಯು ಭಾರತದಲ್ಲಿ boAt Airdopes 111 ಅನ್ನು ಬಿಡುಗಡೆ ಮಾಡಿದ್ದು ಇಯರ್‌ಬಡ್‌ಗಳು 13mm ಡ್ರೈವರ್, 28-ಗಂಟೆಗಳ ಬ್ಯಾಟರಿ ಬಾಳಿಕೆ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತವೆ.


Tech Desk: ಜನಪ್ರಿಯ ಧರಿಸಬಹುದಾದ ಸಾಧನಗಳ (wearables) ಬ್ರ್ಯಾಂಡ್ ಬೋಟ್ ತನ್ನ ಪೋರ್ಟ್‌ಫೋಲಿಯೊಗೆ ಮತ್ತೊಂದು ಬಜೆಟ್ ಇಯರ್‌ಬಡ್‌ಗಳನ್ನು ಸೇರಿಸಿದೆ. ಕಂಪನಿಯು ಭಾರತದಲ್ಲಿ boAt Airdopes 111 ಅನ್ನು ಬಿಡುಗಡೆ ಮಾಡಿದೆ. ಇಯರ್‌ಬಡ್‌ಗಳು 13mm ಡ್ರೈವರ್, 28-ಗಂಟೆಗಳ ಬ್ಯಾಟರಿ ಬಾಳಿಕೆ, ಬ್ಲೂಟೂತ್ 5.1 ಮತ್ತು IWP ತಂತ್ರಜ್ಞಾನ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಬೋಟ್ ಈ ಹಿಂದೆ Airdopes 181, Airdopes 601 ಮತ್ತು Airdopes 201 ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು.

ಕೈಗೆಟುಕುವ ದರದಲ್ಲಿ ಹಲವು ವೈಶಿಷ್ಟ್ಯಗಳ ಜತೆಗೆ ಉತ್ಪನ್ನಗಳಿಗೆ ಬೋಟ್ ಹೆಸರುವಾಸಿಯಾಗಿದೆ.‌BoAt Airdopes 111, Apple AirPods Pro ನಿಂದ ಪ್ರೇರಿತವಾಗಿದ್ದು ಇದು  ಸಿಲಿಕೋನ್  ತುದಿಗಳೊಂದಿಗೆ ಸ್ಟೆಮ್ ವಿನ್ಯಾಸವನ್ನು ಹೊಂದಿದೆ. ಚಾರ್ಜಿಂಗ್ ಕೇಸ್ ಆಯತಾಕಾರದ ಆಕಾರದಲ್ಲಿದ್ದು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. 

Tap to resize

Latest Videos

ಇದನ್ನೂ ಓದಿ: Philips 2022 Audio Range: 2 ಇಯರ್‌ಫೋನ್‌, ಸ್ಪೋರ್ಟ್ಸ್ ಹೆಡ್‌ಫೋನ್‌, 2 ಪಾರ್ಟಿ ಸ್ಪೀಕರ್ಸ್‌ ಲಾಂಚ್!

boAt Airdopes 111: ಭಾರತದಲ್ಲಿ ಬೆಲೆ & ಲಭ್ಯತೆ: boAt Airdopes ಅನ್ನು ಭಾರತದಲ್ಲಿ ರೂ 1499 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇಯರ್‌ಬಡ್‌ಗಳನ್ನು ಬೋಟ್ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.  ಅಮೆಝಾನ್‌ನಲ್ಲಿ ಇಯರ್‌ಬಡ್‌ಗಳನ್ನು ರೂ.1299 ಬೆಲೆಯಲ್ಲಿ ಲಭ್ಯವಿದೆ. Airdopes 111 ಅನ್ನು ಸಾಗರ  ocean blue, sand pearl, carbon Black ಮತ್ತು snow white ಸೇರಿದಂತೆ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ.

boAt Airdopes 111: Specifications: Crystal clear ಧ್ವನಿ ಗುಣಮಟ್ಟಕ್ಕಾಗಿ boAt Airdopes 13mm ಡ್ರೈವರ್‌ಗಳನ್ನು ಹೊಂದಿದೆ. ಇದು ಬ್ಲೂಟೂತ್ 5.1 ಬೆಂಬಲದೊಂದಿಗೆ ಬರುತ್ತದೆ ಮತ್ತು ಇಯರ್‌ಬಡ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ನಡುವೆ ತಡೆರಹಿತ ಸಂಪರ್ಕವನ್ನು ನೀಡುವ IWP ತಂತ್ರಜ್ಞಾನವನ್ನು ಹೊಂದಿದೆ. ಇಯರ್‌ಬಡ್‌ಗಳು ಕರೆಗಳಿಗಾಗಿ ಅಂತರ್ನಿರ್ಮಿತ (In Built) ಮೈಕ್ರೊಫೋನ್‌ನೊಂದಿಗೆ ಸಹ ಬರುತ್ತವೆ. ವಾಲ್ಯೂಮನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು, ಹಾಡುಗಳನ್ನು ಸ್ಕಿಪ್‌ ಮಾಡಲು ಮತ್ತು ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ವಾಯ್ಸ್‌ ಅಸಿಸ್ಟೆಂಟ್‌ ಬಳಕೆಗೆ ಇದು ಟಚ್ ನಿಯಂತ್ರಣಗಳನ್ನು‌ (Touch Control) ಒಳಗೊಂಡಿದೆ.

ಇದನ್ನೂ ಓದಿ: Smartwatch ವಾಯ್ಸ್ ಕಂಟ್ರೋಲ್ ಫೀಚರ್ಸ್ ಹೊಂದಿದ ಮೊದಲ ಸ್ಮಾರ್ಟ್‌ವಾಚ್ Garmin ಬಿಡುಗಡೆ!

ಬ್ಯಾಟರಿಯ ವಿಷಯದಲ್ಲಿ, ಒಂದೇ ಚಾರ್ಜ್‌ನಲ್ಲಿ ಸಾಧನವು 7 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳುತ್ತದೆ. ಚಾರ್ಜಿಂಗ್ ಕೇಸ್ ಸಾಧನವನ್ನು 28 ಗಂಟೆಗಳವರೆಗೆ ಚಾಲನೆಯಲ್ಲಿ ಇರಿಸಬಹುದು. ಬಜೆಟ್ ಶ್ರೇಣಿಯ ಸಾಧನವಾಗಿದ್ದರೂ, Airdopes 111 ತ್ವರಿತ ಚಾರ್ಜಿಂಗನ್ನು ಬೆಂಬಲಿಸುವ ಟೈಪ್-ಸಿ ಪೋರ್ಟನ್ನು ಒಳಗೊಂಡಿದೆ. 10 ನಿಮಿಷಗಳ ಕಾಲ ಇಯರ್‌ಬಡ್‌ಗಳನ್ನು ಚಾರ್ಜ್ ಮಾಡಿದರೆ, ಅದು  45 ಗಂಟೆಗಳ ಪ್ಲೇ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

click me!