Redmi Smart TV X43: ಫೆ.9ಕ್ಕೆ ಭಾರತದಲ್ಲಿ ‌ಆ್ಯಂಡ್ರಾಯ್ಡ್ ಟಿವಿ ಲಾಂಚ್, ಬೆಲೆ ಎಷ್ಟು? ಏನೆಲ್ಲ ವಿಶೇಷತೆ?

By Suvarna NewsFirst Published Jan 31, 2022, 4:25 PM IST
Highlights

*ರೆಡ್ ಮಿ ನೋಟ್ 11 ಎಸ್ ಸ್ಮಾರ್ಟ್‌ಫೋನ್ ಜತೆಗೆ ಬಿಡುಗಡೆಯಾಗಲಿದೆ ಈ ರೆಡ್‌ಮಿ ಸ್ಮಾರ್ಟ್ ಟಿವಿ
*ಈ ಟಿವಿಯು 4ಕೆ ಡಿಸ್‌ಪ್ಲೇ, ಡಾಲ್ಬಿ ವಿಷನ್ 30 ವ್ಯಾಟ್ ಸ್ಪೀಕರ್‌ಗಳೊಂದಿಗೆ ಬರಲಿದೆ
*ಕಂಪನಿಯ ಎಕ್ಸ್‌ ಸೀರೀಸ್‌ನಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾಲ್ ಸೆಗ್ಮೆಂಟ್ ಟಿವಿ ಇದು
 

Tech Desk: ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿರುವ ಶಿಯೊಮಿಯ ಸಬ್ ಬ್ರ್ಯಾಂಡ್ ರೆಡ್‌ಮಿ ತನ್ನ ಸ್ಮಾರ್ಟ್‌ಫೋನ್, ಸ್ಮಾರ್ಟ್‌ ಟಿವಿ ಮೂಲಕ  ಭಾರತೀಯ ಮಾರುಕಟ್ಟೆಯಲ್ಲಿ ತನ್ನದ ಪಾಲನ್ನು ಹೊಂದಿದೆ. ಇದೀಗ ಕಂಪನಿಯು ಮತ್ತೊಂದು ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ. ಕಂಪನಿಯು ಫೆಬ್ರವರಿ 9ರಂದು ರೆಡ್‌ಮಿ ಸ್ಮಾರ್ಟ್‌ ಟಿವಿ ಎಕ್ಸ್43 (Redmi Smart TV X43) ಲಾಂಚ್ ಮಾಡಲಿರುವ ವಿಷಯವನ್ನು ಖಚಿತಪಡಿಸಿದೆ. ಈ ಟಿವಿ 43 ಇಂಚ್ ಪ್ರದರ್ಶಕ ಮತ್ತು 4ಕೆ ರೆಸುಲೂಷನ್ ಹೊಂದಿದೆ.

ವಿಶೇಷ ಎಂದರೆ, ಈ ರೆಡ್‌ಮಿ ಸ್ಮಾರ್ಟ್ ಟಿವಿ ಎಕ್ಸ್ 43, ಮುಂಬರುವ ರೆಡ್‌ಮಿ ನೋಟ್ 11ಎಸ್ ಮತ್ತು ರೆಡ್ ಮಿ ಸ್ಮಾರ್ಟ್ ಬಾಂಡ್ ಪ್ರೋ ಜತೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ರೆಡ್ ಮಿ ಈಗಾಗಲೇ ಭಾರತೀಯರಿಗೆ ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್50 (Redmi Smart TV X50), ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್ 55 (Redmi Smart TV X55), ಮತ್ತು ರೆಡ್‌ಮಿ ಸ್ಮಾರ್ಟ್ ಟಿವಿ ಎಕ್ಸ್65 (Redmi Smart TV X65) ಟಿವಿಗಳನ್ನು ಮಾರಾಟ ಮಾಡುತ್ತಿದೆ. 43 ಇಂಚ್ ಟಿವಿ ಬಿಡುಗಡೆ ಮಾಡುವ ಮೂಲಕ ಚಿಕ್ಕ ಗಾತ್ರ ಟಿವಿ ಸೆಗ್ಮೆಂಟ್‌ನಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಹೊರಟಿದೆ.

ಇದನ್ನೂ ಓದಿ: Second Hand Smartphoneಗಳಿಗೆ ಸಿಕ್ಕಾಪಟ್ಟೆ ಬೇಡಿಕೆ, 2025ರ ಹೊತ್ತಿಗೆ 34 ಸಾವಿರ ಕೋಟಿ ವಹಿವಾಟು!

Full HD+ ಡಿಸ್‌ಪ್ಲೇ: ರೆಡ್‌ಮಿ ಎಕ್ಸ್ ಸೀರೀಸ್‌ನಲ್ಲಿ ಬಿಡುಗಡೆ ಮಾಡುತ್ತಿರುವ ಟಿವಿಗಳ ಸಾಲಿಗೆ ರೆಡ್ ಮಿ ಟಿವಿ ಎಕ್ಸ್ 43 ಹೊಸ ಸೇರ್ಪಡೆಯಾಗಿದೆ. ಫೆಬ್ರವರಿ 9ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಈ ರೆಡ್ ಮಿ ಸ್ಮಾರ್ಟ್ ಟಿವಿ 43 ಲಾಂಚ್ ಆಗುವುದನ್ನು ಶಿಯೋಮಿ ಕಂಪನಿಯು ಖಚಿತಪಡಿಸಿದೆ. ರೆಡ್ ಮಿ ಎಕ್ಸ್‌ ಸೀರೀಸ್‌ನಲ್ಲಿ ಕಡಿಮೆ ಗಾತ್ರ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಟಿವಿಯು ಫುಲ್ ಎಚ್ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿರುವ ಇವೆಂಟ್ ಪುಟದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ರೆಡ್‌ಮಿ ಟಿವಿ ಎಕ್ಸ್ 43 ಟಿವಿಯು 4ಕೆ ಎಚ್‌ಡಿಆರ್ ಮತ್ತು ಡಾಲ್ಬಿ ವಿಶನ್‌ನೊಂದಿಗೆ ಗ್ರಾಹಕರಿಗೆ ಮಾರಾಟಕ್ಕೆ ಸಿಗಲಿದೆ. 

ರೆಡ್‌ಮಿ ಸ್ಮಾರ್ಟ್ ಟಿವಿ ಎಕ್ಸ್ 43 (Redmi TV X43) ಟಿವಿ ಶಕ್ತಿ ಒದಗಿಸುವ ಪ್ರೊಸೆಸರನ್ನು ಯಾವುದು ಬಳಸಲಾಗಿದೆ ಎಂಬ ಮಾಹಿತಿಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಈವೆಂಟ್ ಪುಟದಲ್ಲಿ ಭವಿಷ್ಯದ ಸಿದ್ಧ ಪ್ರಮುಖ ಕಾರ್ಯಕ್ಷಮತೆ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಹಾಗಾಗಿ, Redmi's ಈ ಹಿಂದೆ ಬಿಡುಗಡೆ ಮಾಡಲಾದ X-ಸರಣಿಯ ಸ್ಮಾರ್ಟ್ ಟಿವಿಗಳಾದ Redmi Smart TV X55, ವೈಶಿಷ್ಟ್ಯ ಕ್ವಾಡ್-ಕೋರ್ MediaTek SoC ಜೊತೆಗೆ Mali G52 GPU ಜೊತೆಗೆ 2GB RAM ನೊಂದಿಗೆ ಜೋಡಿಸಲಾಗಿದೆ. ಹಾಗಾಗಿ, ಈ ಹೊಸ ಟಿವಿಯಲ್ಲಿ ಇದೇ ಮಾದರಿಯನ್ನು ನಿರೀಕ್ಷಿಸಲಾಗುತ್ತಿದೆ. ಕಂಪನಿಯ ಪ್ರಕಾರ, Redmi Smart TV X43 Dolby Audio ಗೆ ಬೆಂಬಲದೊಂದಿಗೆ 30W ಸ್ಪೀಕರ್ ಸೆಟಪ್ ಅನ್ನು ಹೊಂದಿರುತ್ತದೆ.

 ಇದನ್ನೂ ಓದಿNo.1 Smartpone ಒಪ್ಪೋ, ವಿವೋ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್, 6 ವರ್ಷದ ಬಳಿಕ ಚೀನಾದಲ್ಲಿ ಮೋಡಿ!

ಫೆಬ್ರವರಿ 9ರಂದು ಬಿಡುಗಡೆಯಾಗಲಿರುವ Redmi Smart TV X43 ಟಿವಿಯು ಆಂಡ್ರಾಯ್ಡ್ ಟಿವಿ ಒಎಸ್ ಮೇಲೆ ರನ್ ಆಗಲಿದ್ದು, ಕಂಪನಿ ಹೊಸ PatchWall  ಸಾಫ್ಟ್‌ವೇರ್ ಆಧರಿತವಾಗಿರಲಿದೆ. ಇದರ ಜತೆಗೆ ಐಎಂಡಿಬಿ ಇಂಟ್ರಿಗ್ರೇಷನ್ ಇರಲಿದೆ. PatchWall  ಶಿಯೋಮಿಯ  ಲಾಂಚರ್ ಆಗಿದ್ದು, ಇದು ವಿವಿಧ ಓವರ್-ದಿ-ಟಾಪ್ (OTT) ಪ್ಲಾಟ್‌ಫಾರ್ಮ್‌ಗಳಿಂದ ಕ್ಯುರೇಟೆಡ್ ವಿಷಯದೊಂದಿಗೆ ಪರ್ಯಾಯ ಬಳಕೆದಾರ ಇಂಟರ್ಫೇಸ್ ಅನ್ನು ನೀಡುತ್ತದೆ ಮತ್ತು ಸ್ಮಾರ್ಟ್ ಲೈಟ್‌ಗಳು ಮತ್ತು Mi ಏರ್ ಪ್ಯೂರಿಫೈಯರ್‌ನಂತಹ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸಲು ಸಪೋರ್ಟ್ ಮಾಡುತ್ತದೆ. ಈ ರೆಡ್ ಮಿ ಸ್ಮಾರ್ಟ್‌ ಟಿವಿ ಎಕ್ಸ್ 43 ಬೆಲೆ ಎಷ್ಟೆಂದು ಗೊತ್ತಾಗಿಲ್ಲ. ಆದರೂ, ತೀರಾ ದುಬಾರಿಯಾಗಿರಲಿಕ್ಕಿಲ್ಲ ಎಂದು ನಿರೀಕ್ಷಿಸಲಾಗುತ್ತಿದೆ.

click me!