ಡಿಝೋ ವಾಚ್ ಆರ್ ಮೂಲ ಬೆಲೆ ರೂ 3,999 ಆಗಿದ್ದು ವಿಶೇಷ ಬಿಡುಗಡೆ ಬೆಲೆ ರೂ 3,499 ನಲ್ಲಿ ಲಭ್ಯವಿರಲಿದೆ. Dizo Buds Z Pro ನ ಮೂಲ ಬೆಲೆ ರೂ 2,999 ಆಗಿದ್ದು ವಿಶೇಷ ಬಿಡುಗಡೆ ಬೆಲೆ ರೂ 2,299 ನಲ್ಲಿ ಲಭ್ಯವಿದೆ
Tech Desk: Realme TechLife ಬ್ರ್ಯಾಂಡ್ Dizo 2022 ಹೊಸ ವರ್ಷದಲ್ಲಿ ಹೊಸ ಉತ್ಪನ್ನದೊಂದಿಗೆ ಮರಳಿದೆ. ಡಿಜೊ ಹೊಸ ಸ್ಮಾರ್ಟ್ ವಾಚ್, ಡಿಜೊ ವಾಚ್ ಆರ್ ಮತ್ತು ಹೊಸ ಟ್ರು ವೈರ್‌ಲೆಸ್ ಇಯರ್‌ಬಡ್‌ಗಳಾದ ಡಿಜೊ ಬಡ್ಸ್ ಝಡ್ ಪ್ರೊ ಅನ್ನು ಬಿಡುಗಡೆ ಮಾಡಿದೆ. ಎರಡೂ ಹೊಸ ಉತ್ಪನ್ನಗಳು ಕಳೆದ ವರ್ಷ ಬಿಡುಗಡೆಯಾದ ಡಿಜೊ ವಾಚ್ 2 ಮತ್ತು ಬಡ್ಸ್ Zನ ಅಪ್‌ಡೇಟ್‌ಗಳಾಗಿವೆ. ಹೊಸ Dizo Watch R ನ ಅತಿ ದೊಡ್ಡ ಹೈಲೈಟ್ AMOLED ಡಿಸ್ಪ್ಲೇ ಆಗಿದೆ, ಇದು ಈ ಬೆಲೆ ವಿಭಾಗದಲ್ಲಿ ಅತಿ ದೊಡ್ಡದಾಗಿದೆ ಎಂದು ಕಂಪನಿ ಹೇಳಿದೆ Dizo Buds Z Pro ಶಬ್ದ ರದ್ದತಿ (Noise Cancelation) ವೈಶಿಷ್ಟ್ಯದೊಂದಿಗೆ ಬರುತ್ತದೆ.
ಭಾರತದಲ್ಲಿ Dizo Watch R ಮತ್ತು Dizo Buds Z Pro ಬೆಲೆ
undefined
Dizo Watch R ಬೆಲೆ ಮೂಲತಃ ರೂ 3,999 ಆಗಿದ್ದು ಆದರೆ ವಿಶೇಷ ಬಿಡುಗಡೆ ಬೆಲೆ ರೂ 3,499 ನಲ್ಲಿ ಲಭ್ಯವಿರುತ್ತದೆ. ಇದು ಕ್ಲಾಸಿಕ್ ಬ್ಲಾಕ್, ಗೋಲ್ಡನ್ ಪಿಂಕ್ ಮತ್ತು ಸಿಲ್ವರ್ ಗ್ರೇ ಬಣ್ಣಗಳಲ್ಲಿ ಬರುತ್ತದೆ ಮತ್ತು ಜನವರಿ 11 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. Dizo Buds Z Pro ನ ಮೂಲ ಬೆಲೆ ರೂ 2,999 ಆಗಿದ್ದು ವಿಶೇಷ ಬಿಡುಗಡೆ ಬೆಲೆ ರೂ 2,299 ನಲ್ಲಿ ಲಭ್ಯವಿದೆ. ಇಯರ್‌ಬಡ್‌ಗಳು ಆರೆಂಜ್ ಬ್ಲ್ಯಾಕ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಬರುತ್ತವೆ ಮತ್ತು ಜನವರಿ 13 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತವೆ.
Dizo Buds Z Pro Specifications
Dizo ನಿಂದ ಮುಂಬರುವ ವೈರ್‌ಲೆಸ್ ಇಯರ್‌ಬಡ್‌ಗಳು ಬಡ್ಸ್ Z ನ ಅಪ್‌ಗ್ರೇಡ್ ರೂಪಾಂತರವಾಗಿದೆ. ಆದ್ದರಿಂದ, ಹಿಂದಿನದಕ್ಕೆ ಹೋಲಿಸಿದರೆ ವೈಶಿಷ್ಟ್ಯವನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ. Dizo Buds Z Pro ಅನ್ನು ಸಕ್ರಿಯ ಶಬ್ದ ರದ್ದತಿ ವೈಶಿಷ್ಟ್ಯ (Noise Cancelation) ಮತ್ತು ಉತ್ತಮ ಧ್ವನಿ ಪ್ರೂಫಿಂಗ್‌ಗಾಗಿ ಇನ್-ಇಯರ್ ವಿನ್ಯಾಸದೊಂದಿಗೆ ಪ್ರಾರಂಭಿಸಲಾಗಿದೆ. ಅದರ ಮುಂಬರುವ ಇಯರ್‌ಬಡ್‌ಗಳಿಗೆ 25 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: Noise Colorfit Caliber: ದೇಹದ ಉಷ್ಣತೆಯನ್ನೂಅಳೆಯುವ ಸ್ಮಾರ್ಟ್‌ವಾಚ್ ಜನವರಿ 6ರಂದು ಬಿಡುಗಡೆ!
ಇಯರ್‌ಬಡ್‌ಗಳ ಒಳಗೆ, 10mm ಡೈನಾಮಿಕ್ ಡ್ರೈವರ್ ಇದೆ, ಅದು ಡಿಜೊದ ಬಾಸ್ ಬೂಸ್ಟ್+ ವೈಶಿಷ್ಟ್ಯಗಳನ್ನು ಸ್ಪಷ್ಟ ಧ್ವನಿಗಾಗಿ ಬಳಸಲ್ಪಡುತ್ತದೆ. ಇಯರ್‌ಬಡ್‌ಗಳು ಗೇಮ್ ಮೋಡ್ ಅನ್ನು ಸಹ ಬೆಂಬಲಿಸುತ್ತದೆ.Dizo Buds Z Pro ವಿನ್ಯಾಸ, ವೈಶಿಷ್ಟ್ಯಗಳು ಮತ್ತು ವಿಶೇಷಣಗಳ ವಿಷಯದಲ್ಲಿ Realme Buds Air 2 ಅನ್ನು ಹೋಲುತ್ತದೆ, ಆದರೆ ಸ್ವಲ್ಪ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
Dizo Watch R Specifications
ಡಿಜೊ ವಾಚ್ R 1.3-ಇಂಚಿನ ವೃತ್ತಾಕಾರದ (360x360 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದ್ದು, AMOLED ಪ್ಯಾನೆಲ್‌ನೊಂದಿಗೆ ಅಂಚುಗಳಲ್ಲಿ ವಕ್ರವಾಗಿರುತ್ತದೆ. ಇದರ ಗರಿಷ್ಠ ಹೊಳಪು 550 ನಿಟ್‌ಗಳು. ಡಿಸ್ಪ್ಲೇಯು Anti Fingerprint ಕೋಟಿಂಗ್ ಹೊಂದಿದ್ದು ಇದು ವಾಚ್ ಸ್ವಚ್ಛ ಮತ್ತು ಪ್ರಕಾಶಮಾನವಾಗಿರಿಸುವಲ್ಲಿ ಸಹಯಾ ಮಾಡಲಿದೆ ಎಂದು ಡಿಜೊ ಹೇಳಿದೆ. ಡಯಲ್ 9.9 ಎಂಎಂ ದಪ್ಪವಾಗಿದೆ, ಇದು ಈ ವಿಭಾಗದಲ್ಲಿ ತೆಳುವಾದ ಪ್ರೊಫೈಲ್ ಎಂದು ಕಂಪನಿ ಹೇಳುತ್ತದೆ. ಸ್ಮಾರ್ಟ್ ವಾಚ್ 5ATM ಒತ್ತಡವನ್ನು ತಡೆದುಕೊಳ್ಳಬಲ್ಲ ವಾಟರ್‌ಫ್ರೂಫ್ ಬಾಡಿಯೊಂಡಿಗೆ ಬರುತ್ತದೆ.
ಇದನ್ನೂ ಓದಿ: Boult ProBass ZCharge: 40 ಗಂಟೆಗಳ ಬ್ಯಾಟರಿ ಲೈಫ್‌ನೊಂದಿಗೆ ನೆಕ್‌ಬ್ಯಾಂಡ್ ಇಯರ್‌ಫೋನ್ ಬಿಡುಗಡೆ!
Dizo Watch Rಲ್ಲಿ ಉತ್ತಮ ಫೀಚರ್‌ಗಳು
ಸ್ಮಾರ್ಟ್ ವಾಚ್ ಹೃದಯ ಬಡಿತ ಮಾನಿಟರ್, ರಕ್ತದ ಆಮ್ಲಜನಕದ ಮಾಪನಕ್ಕಾಗಿ SpO2 ಸೆನ್ಸರ್, ನಿದ್ರೆಯ ಟ್ರ್ಯಾಕರ್, ಕ್ಯಾಲೋರಿ ಕೌಂಟರ್ ಮತ್ತು ನೀರಿನ ಸೇವನೆ ಮತ್ತು ದೀರ್ಘಕಾಲ ಕುಳಿತುಕೊಂಡರೆ ರಿಮೈಂಡರ್ ನೀಡುವ ವೈಶಿಷ್ಟ್ಯ ಒಳಗೊಂಡಿದೆ. ವಾಚ್‌ನಲ್ಲಿ ಪರ್ವತಾರೋಹಣ, ಈಜು, ಫುಟ್‌ಬಾಲ್, ಯೋಗ ಸೇರಿದಂತೆ 110 ಕ್ಕೂ ಹೆಚ್ಚು ಸ್ಪೋರ್ಟ್ಸ ಮೋಡಗಳಿವೆ. ಇದು 280mAh ಬ್ಯಾಟರಿಯನ್ನು ಹೊಂದಿದೆ, ಇದು ಒಂದೇ ಚಾರ್ಜ್‌ನಲ್ಲಿ 60 ದಿನಗಳ ಸ್ಟ್ಯಾಂಡ್‌ಬೈ ಸಮಯದೊಂದಿಗೆ 12 ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ. ನೀವು ಡಿಜೊ ಅಪ್ಲಿಕೇಶನ್ ಆವೃತ್ತಿ 2.0 ಬಳಸಿಕೊಂಡು ಸ್ಮಾರ್ಟ್ ವಾಚ್ ಅನ್ನು ಕಸ್ಟಮೈಸ್ ಮಾಡಬಹುದು.