Samsung Big TV Festival 2022: ಸ್ಮಾರ್ಟ್ ಟಿವಿ ಖರೀದಿ ಮೇಲೆ ₹95 ಸಾವಿರದ ಸೌಂಡ್‌ಬಾರ್ ಫ್ರಿ!

By Suvarna News  |  First Published Jan 4, 2022, 11:15 PM IST

2022 ರ ಸ್ಯಾಮ್‌ಸಂಗ್ ಬಿಗ್ ಟಿವಿ ಫೆಸ್ಟಿವಲ್ ಸೇಲ್ ಆರಂಭವಾಗಿದೆ. ಒಂದು ತಿಂಗಳ ಅವಧಿಯ ಈ ಮಾರಾಟವು ವರ್ಷದ ಮೊದಲ ದಿನದಂದು ಪ್ರಾರಂಭವಾಗಿದ್ದು ಜನವರಿ 31ರ ವರೆಗೆ ನಡೆಯಲಿದೆ


Tech Desk: 2022 ರ ಸ್ಯಾಮ್‌ಸಂಗ್ ಬಿಗ್ ಟಿವಿ ಫೆಸ್ಟಿವಲ್ ಸೇಲ್ ಆರಂಭವಾಗಿದೆ. ಒಂದು ತಿಂಗಳ ಅವಧಿಯ ಈ ಮಾರಾಟವು ವರ್ಷದ ಮೊದಲ ದಿನದಂದು ಪ್ರಾರಂಭವಾಗಿದ್ದು ಜನವರಿ 31ರ ವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್  ಸ್ಮಾರ್ಟ್ ಟಿವಿಗಳ QLED ಮತ್ತು UHD ಶ್ರೇಣಿಯ ಮೇಲೆ ರಿಯಾಯಿತಿ ಸಿಗಲಿದೆ. ರಿಯಾಯಿತಿ ದರಗಳ ಜೊತೆಗೆ, ಆಯ್ದ ಸ್ಮಾರ್ಟ್ ಟಿವಿಗಳ ಜತೆಗೆ ಸ್ಯಾಮ್‌ಸಂಗ್ Q-ಸರಣಿಯ ಸೌಂಡ್‌ಬಾರ್ ಅಥವಾ Galaxy Tab A7 LTE ಟ್ಯಾಬ್ಲೆಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಬಿಗ್ ಟಿವಿ ಫೆಸ್ಟಿವಲ್ ಸೇಲ್ 2022 ರ ಭಾಗವಾಗಿ ಸ್ಯಾಮ್‌ಸಂಗ್ ಹೆಚ್ಚುವರಿ ವಾರಂಟಿಯನ್ನು ಸಹ ನೀಡುತ್ತಿದೆ.

ಸ್ಯಾಮ್‌ಸಂಗ್ ತನ್ನ ಬಿಗ್ ಟಿವಿ ಫೆಸ್ಟಿವಲ್ ಸೇಲ್ 2022 ಕ್ಕೆ ಪುನರಾರಂಭಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸೇಲ್‌ 55-ಇಂಚಿನ ಅಥವಾ ದೊಡ್ಡ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿಗಳಿಗೆ ಅನ್ವಯಿಸುತ್ತದೆ. ಮೊದಲೇ ಹೇಳಿದಂತೆ, ಮಾರಾಟವು ಜನವರಿ 1 ರಂದು ಲೈವ್ ಆಗಿದೆ ಮತ್ತು ಜನವರಿ 31 ರಂದು ಕೊನೆಗೊಳ್ಳುತ್ತದೆ. 

Tap to resize

Latest Videos

undefined

20 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್!

ಸೇಲ್‌ ಸಮಯದಲ್ಲಿ, ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯನ್ನು ಖರೀದಿಸುವುದರೊಂದಿಗೆ ಗ್ರಾಹಕರು 20 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಮಾರಾಟವು Samsung ನ Neo QLED, QLED ಮತ್ತು UHD ಸ್ಮಾರ್ಟ್ ಟಿವಿ ಲೈನ್‌ಅಪ್‌ಗಳಲ್ಲಿ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ.

ಇದನ್ನೂ ಓದಿ: OnePlus Smart TV: ಭಾರತದಲ್ಲಿ ಒನ್‌ಪ್ಲಸ್‌ನಿಂದ 32, 43 ಇಂಚ್ ಸ್ಮಾರ್ಟ್‌ಟಿವಿ ಲಾಂಚ್ ಸಾಧ್ಯತೆ!

ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳೊಂದಿಗೆ ಗ್ರಾಹಕರು ವಿಸ್ತೃತ ವಾರಂಟಿಯನ್ನು (Extended Warranty) ಸಹ ಪಡೆಯುತ್ತಾರೆ. ಹಾಗಾಗಿ ಒಂದು ವರ್ಷದ ವಿಸ್ತೃತ ವಾರಂಟಿ ಜೊತೆಗೆ ಒಂದು ವರ್ಷದ ಸಾಮಾನ್ಯ ವಾರಂಟಿ ಜತೆಗೆ ಒಟ್ಟು ಎರಡು ವರ್ಷ ವಾರಂಟಿ ಪಡೆಯಬಹುದು. QLED ಶ್ರೇಣಿಯಿಂದ ಸ್ಮಾರ್ಟ್ ಟಿವಿಯನ್ನು ಖರೀದಿಸಿದಾಗ, ಗ್ರಾಹಕರು 10 ವರ್ಷಗಳ ನೋ-ಸ್ಕ್ರೀನ್ ಬರ್ನ್-ಇನ್ ವಾರಂಟಿಯನ್ನು ಪಡೆಯುತ್ತಾರೆ. ‌

1,990 ರೂ.ನಿಂದ EMI ಪ್ರಾರಂಭ!

ಹೆಚ್ಚುವರಿಯಾಗಿ, ಗ್ರಾಹಕರು 1,990 ರೂ.ನಿಂದ ಪ್ರಾರಂಭವಾಗುವ EMI ಗಳನ್ನು ಕೂಡ ಪಡೆಯಬಹುದು.  ಸ್ಯಾಮ್‌ಸಂಗ್ ಬಿಗ್ ಟಿವಿ ಫೆಸ್ಟಿವಲ್ 2022 ಆಫರ್‌ಗಳನ್ನು ದೇಶಾದ್ಯಂತದ ಎಲ್ಲಾ ಆಫ್‌ಲೈನ್ ರಿಟೇಲ್ ವ್ಯಾಪಾರಿಗಳಲ್ಲಿ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಸ್ಮಾರ್ಟ್‌ ಟಿವಿ ಖರೀದಿ ಮೇಲೆ ಸೌಂಡ್‌ಬಾರ್, ಟ್ಯಾಬ್‌ ಫ್ರಿ!

ಬಿಗ್ ಟಿವಿ ಫೆಸ್ಟಿವಲ್ 2022 ರ ಸಮಯದಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಖರೀದಿ ಮೇಲೆ ಇತರ ಕೊಡುಗೆಗಳನ್ನು ನೀಡಲಾಗಿದೆ. 75-ಇಂಚಿನ ಮತ್ತು 85-ಇಂಚಿನ Samsung Neo QLED 8K ಟಿವಿಗಳ ಖರೀದಿಯೊಂದಿಗೆ    ಗ್ರಾಹಕರು ರೂ. 94,990 ಮೌಲ್ಯದ ಸ್ಯಾಮ್‌ಸಂಗ್ ಕ್ಯೂ-ಸರಣಿ ಸೌಂಡ್‌ಬಾರ್ ಅನ್ನು ಉಚಿತವಾಗಿ ಪಡೆಯುತ್ತಾರೆ.

ಇದನ್ನೂ ಓದಿNoise Colorfit Caliber: ದೇಹದ ಉಷ್ಣತೆಯನ್ನೂಅಳೆಯುವ ಸ್ಮಾರ್ಟ್‌ವಾಚ್ ಜನವರಿ 6ರಂದು ಬಿಡುಗಡೆ!

ಪರ್ಯಾಯವಾಗಿ, 65-ಇಂಚಿನ ನಿಯೋ QLED 8K ಟಿವಿ, 75-ಇಂಚಿನ UHD ಟಿವಿ, 55- ಅಥವಾ 65-ಇಂಚಿನ ನಿಯೋ QLED ಟಿವಿ, ಅಥವಾ 55- ಅಥವಾ 65-ಇಂಚಿನ QLED ಟಿವಿಗಳನ್ನು ಖರೀದಿಸುವ ಗ್ರಾಹಕರು ರೂ. 21,999 ಮೌಲ್ಯದ Samsung Galaxy Tab A7 LTE ಟ್ಯಾಬ್ಲೆಟ್ ಅನ್ನು ಪಡೆಯುತ್ತಾರೆ. 

click me!