ಕೂಲ್‌ಪ್ಯಾಡ್ ಕಂಪನಿಯು ತನ್ನ ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಸಾಧನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವರ್ಷ ಪೂರ್ತಿ ಸ್ಮಾರ್ಟ್‌ಫೋನ್‌ಗಳಿಗೆ ಬೇಕಾಗುವ ಹಲವು ಸಾಧನಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಬಡ್ಸ್ ವಿಶಿಷ್ಟವಾಗಿದ್ದು, ನೋಡಲು ಅತ್ಯಾಕರ್ಷಕವಾಗಿವೆ.
ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರಾಟದ ಮೂಲಕ ಗಮನ ಸೆಳೆಯುತ್ತಿರುವ ಕೂಲ್‌ಪ್ಯಾಡ್ ಬಗ್ಗೆ ಗೊತ್ತೇ ಇದೆ. ಈ ಕಂಪನಿ ಇದೀಗ ಭಾರತದಲ್ಲಿ, ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್(Coolpad Cool Bass Buds) ಬಿಡುಗಡೆ ಮಾಡಲಾಗಿದೆ.
ಬ್ಲೂಟೂಥ್ ವಿ.50 ಆಧರಿತ ಮತ್ತು ಡಿಜಿಟಲ್ ಬ್ಯಾಟರಿ ಇಂಡಿಕೇಟರ್‌ಗಳನ್ನು ಒಳಗೊಂಡಿರುವ ಈ ಕೂಲ್‌ಪ್ಯಾಡ್ ಬಾಸ್ ಡಬ್ಸ್ ವಿಶಿಷ್ಟವಾಗಿದ್ದು, ಗಮನ ಸೆಳೆಯುತ್ತಿದೆ. ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರುವ ಟಿಡಬ್ಲ್ಯೂಎಸ್(The true wireless stereo) ಇಯರ್‌ಫೋನ್ ಅನ್ನು 15 ನಿಮಿಷ ಚಾರ್ಜ್ ಮಾಡಿದರೆ ಮೂರು ಗಂಟೆಗಳವರೆಗೆ ಮ್ಯೂಸಿಕ್ ಪ್ಲೇ ಮಾಡಬಹುದು. ಅಷ್ಟು ಕ್ವಿಕ್ ಚಾರ್ಜಿಂಗ್ ಫೀಚರ್ ಅನ್ನು ಈ ಬಡ್ ಒಳಗೊಂಡಿವೆ. ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಅಸೆಸಿಸ್ಟೆಂಟ್‌ಗೆ ಈ ಕೂಲ್‌ಪ್ಯಾಡ್ ಕೂಲ್ ಬಡ್ಸ್ ಸಪೋರ್ಟ್ ಮಾಡುತ್ತವೆ. ಹಾಗಾಗಿ, ನೀವು ಈ ಕೂಲ್ ಪ್ಯಾಡ್ ಬಡ್ಸ್ ಅನ್ನು ಎಐ ರೀತಿಯ ಫೀಚರ್‌ಗಳನ್ನು ಒಳಗೊಂಡಿರುವ ಸಾಧನ ಎಂದು ಗುರುತಿಸಬಹುದು. ಈ ಬಡ್ಸ್ ಡಿಜಿಟಲ್ ಡಿಸ್‌ಪ್ಲೇ ಕೇಸ್ ಮತ್ತು 13 ಎಂಎಂ ಡೈನಾಮಿಕ್ ಡ್ರೈವರ್ಸ್ ಒಳಗೊಂಡಿದೆ.
undefined
ದೊಡ್ಡ ಕಂಪನಿಗಳಿಗೆ ಪೋಕೋ ಶಾಕ್, ಆನ್‌ಲೈನ್ ಸ್ಮಾರ್ಟ್ ಫೋನ್ ಬ್ರ್ಯಾಂಡ್‌ನಲ್ಲಿ 3ನೇ ಸ್ಥಾನ
ಸ್ಮಾರ್ಟ್‌ಫೋನ್ ಅಸ್ಸೆಸರೀಸ್ ಸೆಗ್ಮೆಂಟ್‌ನಲ್ಲಿ ಇಯರ್‌ಬಡ್ ಮೂಲಕ ಕೂಲ್‌ಪ್ಯಾಡ್ ಎಂಟ್ರಿ ಕೊಟ್ಟಿದೆ. ಈ ಬಗ್ಗೆ ಮಾತನಾಡಿರುವ ಕೂಲ್‌ಪ್ಯಾಡ್ ಇಂಡಿಯಾ ಸಿಇಒ, ಫಿಶರ್ ಯುವಾನ್, 2021ರ ವರ್ಷ ಪೂರ್ತಿಯೂ ಕಂಪನಿಯು ಸ್ಮಾರ್ಟ್‌ಫೋನ್‌ಗಳಿಗಾಗಿ ಹಲುವಾರ ಪರಿಕರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಬಿಡುಗಡೆ ವೇಳಿ ತಿಳಿಸಿದ್ದಾರೆ. ಈ ಬಡ್ಸ್‌ಗಳನ್ನು ನೀವು ಅಮೆಜಾನ್ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಪಡೆದುಕೊಳ್ಳಬಹುದು. ಭಾರತದಲ್ಲಿ ಈ ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಬೆಲೆಯನ್ನು 1,199 ರೂಪಾಯಿಗೆ ನಿಗದಿಗೊಳಿಸಲಾಗಿದೆ.
ಈ ಇಯರ್ ಬಡ್‌ಗಳು ನಿಮಗೆ ಕಂಪನಿ ಕಪ್ಪು ಮತ್ತು ನೀಲಿ ಬಣ್ಣಗಳ ಮಾದರಿಯಲ್ಲಿ ಮಾರಾಟ ಮಾಡುತ್ತಿದೆ. ಈ ಬಣ್ಣಗಳಿಂದಾಗಿ ಬಡ್ಸ್‌ಗೆ ವಿಶಿಷ್ಟವಾದ ಲುಕ್ ಬಂದಿದ್ದು ನಿಮ್ಮನ್ನು ಅತ್ಯಾಕರ್ಷಿಸುತ್ತವೆ. ಫೀಚರ್‌ಗಳಷ್ಟೇ ನೋಡಲೂ ಈ ಬಡ್‌ಗಳು ಆಕರ್ಷಕವೂ ಆಗಿವೆ.
ಬಿಸ್ಸೆನ್ನೆಲ್‌ನ 599 ರೂ. ಪ್ಲ್ಯಾನ್‌ನಲ್ಲಿ ನಿತ್ಯ 5 ಜಿಬಿ ಡೇಟಾ!
ಈ ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಇನ್-ಇಯರ್ ವಿನ್ಯಾಸವನ್ನು ಹೊಂದಿವೆ. 13 ಎಂಎಂ ಡೀಪ್ ಬಾಸ್ ಡೈನಾಮಿಕ್ ಡ್ರೈವರ್‌ಗಳನ್ನು ಈ ಬಡ್ಸ್ ಹೊಂದಿವೆ. ಕೂಲ್‌ಪ್ಯಾಡ್ ಕಂಪನಿಯು ಯುಎಸ್‌ಪಿ ಟೈಪ್ ಸಿ ಪೋರ್ಟ್ ಒದಗಿಸುತ್ತದೆ. ಈ ಪೋರ್ಟ್ ಮೂಲಕವೇ ನೀವು ಚಾರ್ಜಿಂಗ್ ಮಾಡಲು ಸಾಧ್ಯವಾಗುತ್ತದೆ. ಈ ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಚಾರ್ಜಿಂಗ್ ಕೇಸ್‌ನಲ್ಲಿ ಎಲ್ಇಡಿ ಸ್ಕ್ರೀನ್ ಇದ್ದು, ಅದು ಬ್ಯಾಟರಿ ಲೈಫ್ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ ಮತ್ತು ಬ್ಯಾಟರಿ ಖಾಲಿಯಾಗುತ್ತಿದ್ದರೆ ತಿಳಿಸುತ್ತದೆ. ಈ ಇಯರ್ ಬಡ್‌ಗಳಲ್ಲ ಅಂತರ್ಗತವಾಗಿಯೇ ಮೈಕ್ ಬರುತ್ತದೆ. ಈ ಮೈಕ್ ಅನ್ನು ಗ್ರಾಹಕರು ಕರೆ ಮಾಡುವ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಾರೆ.
ಈ ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್‌ನಲ್ಲಿ 40 ಎಂಎಂಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಪ್ರತಿ ಬಡ್ ನಿಮಗೆ 4.5 ಗಂಟೆಗಳ ಮ್ಯೂಸಿಕ್ ಆಲಿಸಲು ನೆರವಾಗುತ್ತವೆ ಎಂದು ಕಂಪನಿ ಹಳಿಕೊಂಡಿದೆ. ಈ ಬ್ಯಾಟರಿ ಸಾಮರ್ಥ್ಯವು ಹೆಚ್ಚಿರುವುದರಿಂದ ಚಾರ್ಜಿಂಗ್ ಸಾಮರ್ಥ್ಯವೂ 20 ಗಂಟೆಗಳಿಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಡಾಲ್ಫಿನ್ ಡಿಸೈನ್ 2.0 ಕಾಲ್ಸ್ ವಿನ್ಯಾಸ ಹೊಂದಿದೆ ಮತ್ತು ಈ ಬಡ್‌ಗಳು ಹಗುರವಾಗಿದ್ದು 50 ಗ್ರಾಮ್ ತೂಗುತ್ತವೆ. ಜೊತೆಗೆ ಇವು ಬೆವರು ನಿರೋಧಕವೂ ಆಗಿವೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಸಾಂಪ್ರದಾಯಿಕ ಇಯರ್ ಫೋನ್‌ಗಳ ಬದಲಿಗೆ ಬಡ್ಸ್‌ಗಳಿಗೆ ಹೆಚ್ಚು ಮಾರು ಹೋಗುತ್ತಿದ್ದಾರೆ. ಹಾಗಾಗಿ, ಪ್ರತಿಯೊಂದು ಸ್ಮಾರ್ಟ್‌ಫೋನ್ ಉತ್ಪಾದನಾ ಕಂಪನಿಯು ಇಯರ್‌ಬಡ್ಸ್ ಉತ್ಪಾದಿಸುತ್ತಿವೆ ಮತ್ತು ಚಿಕ್ಕ ಸಾಧನದಲ್ಲೇ ಹುಬ್ಬೇರಿಸುವ ಫೀಚರ್‌ಗಳನ್ನು ಅಳವಡಿಸುತ್ತಿವೆ.
New Sensation: ವಾಟ್ಸಾಪ್ ಹಿಂದಿಕ್ಕುವ ಸಿಗ್ನಲ್