Realme Watch S ಮತ್ತು Watch S Pro ಬಿಡುಗಡೆ, ಮಾರಾಟ ಶುರು

Suvarna News   | Asianet News
Published : Dec 27, 2020, 09:17 AM IST
Realme Watch S ಮತ್ತು Watch S Pro ಬಿಡುಗಡೆ, ಮಾರಾಟ ಶುರು

ಸಾರಾಂಶ

ಭಾರತದಲ್ಲಿ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿರುವ ರಿಯಲ್‌ಮೀ ಇದೀಗ ಪ್ರೀಮಿಯಂ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿದ ಸ್ಮಾರ್ಟ್‌ವಾಚ್‌ಗಳಿಗೆ ಅತ್ಯುತ್ತಮ ಪ್ರಕ್ರಿಯೆ ದೊರೆತ ಬೆನ್ನಲ್ಲೇ ಇದೀಗ 4,999 ರೂ. ಮತ್ತು 9,999 ರೂ. ಬೆಲೆ ವೀಯರ್‌ಬಲ್ ಗ್ಯಾಜೆಟ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ.  

ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಜಾಗ ಮಾಡಿಕೊಂಡಿರುವ ರಿಯಲ್‌ಮೀ, ಇದೀಗ ಅತ್ಯಾಧುನಿಕ ಸ್ಮಾರ್ಟ್‌ವಾಚ್‌ಗಳ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯಲು ಹೊರಟಿದೆ. ರಿಯಲ್ ಮೀ ಎರಡು ದಿನಗಳ ಹಿಂದೆ ರಿಯಲ್ ವಾಚ್ ಎಸ್(Realme Watch S) ಮತ್ತು ರಿಯಲ್ ವಾಚ್ ಎಸ್ ಪ್ರೊ(Realme Watch S Pro) ಸ್ಮಾರ್ಟ್‌ವಾಚ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗೂಗಲ್, ಮೈಕ್ರೋಸಾಫ್ಟ್‌ ಜತೆ ಸ್ಪರ್ಧೆ, ಝೂಮ್‌ನಿಂದಲೂ ಇ-ಮೇಲ್ ಸೇವೆ?

ರಿಯಲ್ ಮೀ ಕಂಪನಿ ಈ ಹಿಂದೆ ಬಿಡುಗಡೆ ಮಾಡಿದ್ದ ರಿಯಲ್ ಮೀ ಸ್ಮಾರ್ಟ್ ವಾಚ್ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿತ್ತು. 2020ರ ಮೊದಲನೇ ಹಾಗೂ ಎರಡನೇ  ತ್ರೈಮಾಸಿಕ ಅವಧಿಯಲ್ಲಿ ಸತತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕೌಂಟರ್‌ಪಾಯಿಂಟ್ ಕ್ಯೂ2 ಇಂಡಿಯಾ ಹಿಯರಬಲ್ಸ್ ರಿಪೋರ್ಟ್ ಪ್ರಕಾರ, 2020ರ ಎರಡನೇ ತ್ರೈಮಾಸಿಕದಲ್ಲಿ ರಿಯಲ್ ಮೀ ಶೇ.22ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಟಿಡಬ್ಲ್ಯೂಎಸ್‌ ಸ್ಥಾನವನ್ನು ಆಕ್ರಮಸಿಕೊಂಡಿದೆ. ರಿಯಲ್ ಮೀ ಎಸ್ ಸರಣಿ ವಾಚ್‌ಗಳ ಮೂಲಕ ಪ್ರೀಮಿಯಂ ಸ್ಮಾರ್ಟ್‌ವಾಚ್ ಸೆಗ್ಮೆಂಟ್‌ಗೆ ಪ್ರವೇಶ ಪಡೆಯುತ್ತಿದ್ದೇವೆ ಮತ್ತು ನಮ್ಮ ಹೊಸ ಪ್ರಯತ್ನವನ್ನು ಗ್ರಾಹಕರು ಅಭಿನಂದಿಸುತ್ತಾರೆಂಬ ವಿಶ್ವಾಸ ನಮಗಿದೆ ಎಂದು ರಿಯಲ್ ಮೀ ಇಂಡಿಯಾ ಮತ್ತು ಯುರೋಪ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ರಿಯಲ್ ಮೀ ವೈಸ್ ಪ್ರೆಸಿಡೆಂಟ್ ಮಾಧವ್ ಸೇಠ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಿಯಲ್‌ಮೀ ತನ್ನ ವಾಚ್ ಎಸ್ ಪ್ರೋ ಸ್ಮಾರ್ಟ್‌ವಾಚ್‌ಗೆ 9,999 ರೂಪಾಯಿ ಬೆಲೆ ನಿಗದಿ ಮಾಡಿದೆ. ಈ ವಾಚ್ ಮಾರಾಟ ಡಿಸೆಂಬರ್ 29ರಿಂದ ಆರಂಭವಾಗಲಿದೆ. ಇದೇ ವೇಳೆ, ವಾಚ್ ಎಸ್ ಸ್ಮಾರ್ಟ್‌ವಾಚ್ ಬೆಲೆ 4,999 ರೂಪಾಯಿ ಎಂದು ಹೇಳಲಾಗಿದೆ. ಈ ವಾಚ್ ಮಾರಾಟವು ಡಿಸೆಂಬರ್ 28ರಿಂದಲೇ ಆರಂಭವಾಗಲಿದೆ. ರಿಯಲ್‌ಮೀ ವಾಚ್ ಎಸ್ ಮಾಸ್ಟರ್ ಎಡಿಷನ್ ಬೆಲೆ 5,999 ರೂ. ಇದ್ದು, ಕೂಡಲೇ ಮಾರಾಟಕ್ಕೆ ಲಭ್ಯವಾಗಲಿದೆ. ವಾಚ್ ಎಸ್ ಮತ್ತು ವಾಚ್ ಎಸ್ ಪ್ರೋ ಸ್ಮಾರ್ಟ್‌ವಾಚ್‌ಗಳ ಪ್ರೀಬುಕಿಂಗ್ ಆರಂಭವಾಗಿದೆ. ಈ ಎಲ್ಲ ಉತ್ಪನ್ನಗಳನ್ನು ನೀವು ಆನ್‌ಲೈನ್ ಕಮರ್ಷಿಯಲ್ ತಾಣ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮೀ ಆನ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬಹುದು. ಇಷ್ಟು ಮಾತ್ರವಲ್ಲದೇ, ಕಂಪನಿ ರಿಯಲ್‌ಮೀ ಬಸ್ ಏರ್ ಪ್ರೋ ಮಾಸ್ಟರ್ ಎಡಿಷನ್ ಇಯರ್‌ಫೋನ್ ಕೂಡ ಬಿಡುಗಡೆ ಮಾಡಿದ್ದು, ಈ ಗ್ಯಾಜೆಟ್‌ ಮಾರಾಟವು ಶೀಘ್ರವೇ ಶುರುವಾಗಲಿದೆ.

ನಾಲ್ಕು ಹೊಸ ಮಾಡೆಲ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

ರಿಯಲ್‌ಮೀ ವಾಚ್ ಎಸ್ 1.3 ಇಂಚ್ ಆಟೋ ಬ್ರೈಟ್ನೆಸ್ ಟಚ್‌ಸ್ಕ್ರೀನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಈ ವಾಚ್‌ನಲ್ಲಿ 16 ಸ್ಪೋರ್ಟ್ ಮೋಡ್‌ಗಳಿವೆ. ಔಟ್‌ಡೋರ್ ರನ್, ವಾಕ್, ಇಂಡೋರ್ ರನ್, ಔಟ್‌ಡೋರ್ ಸೈಕಲ್, ಏರೋಬಿಕ್ ಕೆಪ್ಯಾಸಿಟಿ, ಸ್ಟ್ರೆಂತ್ ಟ್ರೇನಿಂಗ್, ಫುಟ್ಬಾಲ್ ಇತ್ಯಾದಿ ಸ್ಪೋರ್ಟ್ಸ್ ಮೋಡ್‌ಗಳಿವೆ. ರಿಯಲ್‌ಮೀ ವಾಚ್ ಎಸ್‌ನಲ್ಲಿ 390 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ನೀವು 15 ದಿನಗಳವರೆಗೆ ಬಳಸಬಹುದು.

ಇನ್ನು ರಿಯಲ್ ಮೀ ವಾಚ್ ಎಸ್‌ ಪ್ರೋ ಕೂಡ 1.39 ಇಂಚ್ ಸರ್ಕೂಲರ್ ಎಎಂಎಲ್ಇಡಿ ಡಿಸ್‌ಪ್ಲೇ ಒಳಗೊಂಡಿದೆ.  ಈ ಪ್ರೀಮಿಯಮ್ ಸ್ಮಾರ್ಟ್ ವಾಚ್ ಕೂಡ 15 ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲಿಸುತ್ತದೆ. ಔಟ್‌ಡೋರ್ ರನ್, ವಾಕ್, ಇಂಡೋರ್ ರನ್, ಔಟ್‌ಡೋರ್ ಸೈಕಲ್, ಏರೋಬಿಕ್ ಕೆಪ್ಯಾಸಿಟಿ, ಸ್ಟ್ರೆಂತ್ ಟ್ರೇನಿಂಗ್, ಫುಟ್ಬಾಲ್ ಇತ್ಯಾದಿ ಸ್ಪೋರ್ಟ್ಸ್ ಮೋಡ್‌ಗಳಿವೆ. ರಿಯಲ್‌ಮೀ ವಾಚ್ ಎಸ್‌ನಲ್ಲಿ 420 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ನೀವು 14 ದಿನಗಳವರೆಗೆ ಬಳಸಬಹುದು.

ರಿಯಲ್ ಮೀ ವಾಚ್ ಎಸ್ ಪ್ರೋ ಸ್ಮಾರ್ಟ್‌ವಾಚ್‌ನಲ್ಲಿ ಹಾರ್ಟ್ ರೇಟ್ ಮಾನಿಟರ್, ಬ್ಲಡ್ ಆಕ್ಸಿಜೆನ್ ಲೆವಲ್ ಮಾನಿಟರ್, ಬಿಲ್ಟ್ ಜಿಪಿಎಸ್ ಸೇರಿದಂತೆ ಪ್ರಮುಖ ಫೀಚರ್‌ಗಳಿವೆ.

55 ಇಂಚಿನ Mi QLED TV 4K ಟಿವಿ ಬಿಡುಗಡೆ, ಬೆಲೆ ಇಷ್ಟು

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ನಾನು ಬದುಕಿದ್ದೇನೆ, ಎರಡು ದಿನ ಬಟನ್ ಒತ್ತಿಲ್ಲ ಅಂದ್ರೆ ... ಚೀನಾದಲ್ಲಿ ಫೇಮಸ್ ಆಗ್ತಿದೆ Are you dead ಆಪ್
ಬೆಂಗಳೂರು ಸೇರಿ ಪ್ರಮುಖ ನಗರದಲ್ಲಿ ಡೆಲ್ ಟೆಕ್‌ ಆನ್‌ ವೀಲ್ಸ್‌ ಆರಂಭ, ಮನೆಬಾಗಿಲಲ್ಲೆ ಪರಿಹಾರ