ASUS TUF Dash F15 Review: ಟಫ್‌ ಮತ್ತು ಡ್ಯಾಶಿಂಗ್‌ ಗೇಮಿಂಗ್‌ ಲ್ಯಾಪ್‌ಟಾಪ್‌!

By Kannadaprabha News  |  First Published Sep 13, 2022, 3:35 PM IST

ASUS TUF Dash F15: ನೀವೂ ಏಸೂಸ್‌ನ ಹಳೇ ಮಾಡೆಲ್‌ಗಳನ್ನು ಬಳಸುತ್ತಿದ್ದರೆ, ಇದು ಅವೆಲ್ಲಕ್ಕಿಂತ ಪವರ್‌ಫುಲ್‌. 


ಬೆಂಗಳೂರು (ಸೆ. 13): ಗೇಮಿಂಗ್‌ ಲ್ಯಾಪ್‌ಟಾಪ್‌! ಅದು ಇವತ್ತಿನ ಟ್ರೆಂಡ್‌. ಕೆಲಸ ಮಾಡಲಿಕ್ಕೆ ಬಳಸುವ ಲ್ಯಾಪ್‌ಟಾಪ್‌ಗಳಿಗಿಂತ ಹೆಚ್ಚಿನ ಕ್ಷಮತೆ, ದಕ್ಷತೆ ಇರುವ ಈ ಲ್ಯಾಪ್‌ಟಾಪ್‌ಗಳ ಶೈಲಿಯೇ ಬೇರೆ. ಅಂಥ ಲ್ಯಾಪ್‌ಟಾಪ್‌ಗಳನ್ನು ರೂಪಿಸುವುದರಲ್ಲಿ ಏಸೂಸ್‌ ಹೆಸರುವಾಸಿ. ಅದನ್ನು ಗೇಮಿಂಗ್‌ ಮೆಷೀನ್‌ (Gaming Machine) ಅಂತ ಕರೆಯುತ್ತಾರೆ. ಇಂಥ ಲ್ಯಾಪ್‌ಟಾಪುಗಳಲ್ಲಿ ಮುಖ್ಯವಾಗುವುದು ಥರ್ಮಲ್‌ ಮ್ಯಾನೇಜ್‌ಮೆಂಟ್‌. ಗಂಟೆಗಟ್ಟಲೆ, ದಿನಗಟ್ಟಲೆ ಲ್ಯಾಪ್‌ಟಾಪನ್ನು ಬಳಸುತ್ತಿದ್ದರೂ ಅದು ಬಿಸಿಯಾಗದಂತೆ ತಡೆಯಲು ಏನೇನು ಮಾಡಬೇಕು ಅನ್ನುವುದು ಏಸೂಸ್‌ಗೆ ಚೆನ್ನಾಗಿ ಗೊತ್ತು.

ಏಸೂಸ್‌ ಟಫ್‌ ಡ್ಯಾಶ್‌ ಗೇಮಿಂಗ್‌ ಎಫ್‌15 ಲ್ಯಾಪ್‌ಟಾಪ್‌ನ (ASUS TUF Dash F15) ಮೇಲ್ಮೆ ಮೆಟಲ್‌, ಕೆಳಭಾಗ ಪ್ಲಾಸ್ಟಿಕ್‌. ಬದಿಯಲ್ಲಿ ಗಾಳಿಯಾಡಲು, ಬಿಸಿಯನ್ನು ಹೊರಹಾಕಲು ಹತ್ತಾರು ಪುಟ್ಟಕಿಂಡಿಗಳು. ರಾತ್ರಿಯೂ ಲೈಟ್‌ ಆಫ್‌ ಮಾಡಿ ಆಡಲಿಕ್ಕೆಂದೇ ಬ್ಯಾಕ್‌ಲಿಟ್‌ ಕೀಬೋರ್ಡು, ಕೈಯಾಡಿಸಲು ಬೇಕಾದಷ್ಟು ಜಾಗ ಇರುವಂಥ ದೊಡ್ಡ ಕೀಬೋರ್ಡ್‌ (Keyboard) ಲೇಔಟಿನ ಜತೆಗೇ ನಂಬರ್‌ ಪ್ಯಾಡ್‌ ಕೂಡ ಇದೆ. ಬ್ಯಾಟರಿ ಲೈಫ್‌ (Battery Life) ಅದ್ಭುತ, ನೋಡಲಿಕ್ಕೂ ಟಫ್‌ ಅನ್ನಿಸುವಂಥ ವಿನ್ಯಾಸ.

Tap to resize

Latest Videos

undefined

ಏಸೂಸ್‌ ಗೇಮಿಂಗ್‌ ಲ್ಯಾಪ್‌ಟಾಪ್‌ (Gaming Laptop) ಎಂದಾಕ್ಷಣ ಮನಸ್ಸಿಗೆ ಬರುವುದು ಆರ್‌ಓಜಿ- ಅಂದರೆ ರಿಪಬ್ಲಿಕ್‌ ಆಫ್‌ ಗೇಮರ್ಸ್‌. ಅದನ್ನು ಮೀರಿಸುವ ಒಂದು ವೇರಿಯಂಟ್‌ ಬರಲು ಸಾಧ್ಯವೇ ಎಂದು ಕೇಳುವವರಿಗಾಗಿಯೇ ಬಂದಿದೆ ಟಫ್‌.

ಇದರಲ್ಲಿ ಏನುಂಟು ಎಂದು ಕೇಳುವಂತಿಲ್ಲ. ನೀವೂ ಏಸೂಸ್‌ನ ಹಳೇ ಮಾಡೆಲ್‌ಗಳನ್ನು ಬಳಸುತ್ತಿದ್ದರೆ, ಇದು ಅವೆಲ್ಲಕ್ಕಿಂತ ಪವರ್‌ಫುಲ್‌. ಹಿಂದಿನ ಲ್ಯಾಪ್‌ಟಾಪುಗಳಿಂದ ತೆಳ್ಳಗಿದೆ, ಹಗುರವಾಗಿದೆ. ಇದು ಇಂಟೆಲ್‌ ವಿಶಿಷ್ಟ ವಿನ್ಯಾಸ ಹೊಂದಿದೆ ಕೂಡ.

Work from Home: Laptop ಸ್ಪೀಡ್ ಕಡಿಮೆಯಾದ್ರೆ ಟೆನ್ಷನ್ ಬೇಡ, ಇಲ್ಲಿವೆ ಟಿಪ್ಸ್

ASUS TUF Dash F15 Specifications: ಕೈಗೆಟುಕುವ ಬೆಲೆ, ಅತ್ಯುತ್ತಮ ವಿನ್ಯಾಸ, 2021 ಜನರೇಷನ್‌ ಲ್ಯಾಪ್‌ಟಾಪ್‌ಗಿಂತ ಶಕ್ತಿಶಾಲಿಯಾದ ಇದರ ಏಕೈಕ ಕಿರಿಕಿರಿಯೆಂದರೆ ಎಲ್ಲಾ ಪೋರ್ಟ್‌ಗಳೂ ಒಂದೇ ಬದಿಯಲ್ಲಿ ಇಡಿಕಿರಿದಿವೆ. ಮಿಕ್ಕಂತೆ 15.6 ಇಂಚ್‌ ಡಿಸ್‌ಪ್ಲೇ, ಇಂಟೆಲ್‌ ಆಲ್ಡರ್‌ ಲೇಕ್‌ ಕೋರ್‌ ಐ7-12650ಎಚ್‌ ಪ್ರಾಸೆಸರ್‌, ಇಂಟೆಲ್‌ ಯುಎಚ್‌ಡಿ ಮತ್ತು ಎನ್‌ವಿಡಿಯಾ ಜಿಇಫೋರ್ಸ್‌ ಆರ್‌ಟಿಎಕ್ಸ್‌ 3060 ಲ್ಯಾಪ್‌ಟಾಪ್‌ 6ಜಿಬಿ ವಿಡಿಯೋ, 16 ಜಿಬಿ ಮೆಮರಿ- ಹೀಗೆ ಇದರ ಸ್ಪೆಸಿಫಿಕೇಷನ್‌ ಕೂಡ ವಿಶಿಷ್ಟವಾಗಿದೆ.

ಇದು ಬಿಳಿ ಮತ್ತು ಕಪ್ಪು- ಎರಡು ವರ್ಣಗಳಲ್ಲಿ ಲಭ್ಯ. ಬೆಳ್ಳಗಿರುವುದು ಚೆಂದ ಕಂಡರೂ ಸಾಕುವುದು ಕಷ್ಟ. ಆದರೆ ಲ್ಯಾಪ್‌ಟಾಪ್‌ ಗಟ್ಟಿಮುಟ್ಟು. ಎಷ್ಟೇ ದುಡಿಸಿದರೂ ಸುಮ್ಮನೆ ದುಡಿಯುತ್ತದೆಯೇ ಹೊರತು ಕೈ ಕೊಡುವುದಿಲ್ಲ, ಸುಸ್ತಾಗುವುದೂ ಇಲ್ಲ. ವಿಡಿಯೋ ಮತ್ತು ಗ್ರಾಫಿಕ್‌ (Video and Graphics) ಕೆಲಸ ಮಾಡುವವರಿಗೂ ಇದು ಅಚ್ಚುಮೆಚ್ಚಾದೀತು.

ಸುಮಾರು ಎರಡು ಕೇಜಿ ತೂಗುವ ಇದರ ಹೆಚ್ಚಿನ ಫಂಕ್ಷನ್‌ಗಳು ಕೀ ಬೋರ್ಡಿನಲ್ಲಿಯೇ ಇವೆ. ಇದರ ಕ್ಲಿಕ್‌ಪ್ಯಾಡ್‌ ಕೂಡ ಅಚ್ಚುಕಟ್ಟಾಗಿದೆ. ಅಷ್ಟುನಯವೂ ಅಲ್ಲದ ದೊರಗೂ ಅಲ್ಲದ ಕ್ಲಿಕ್‌ಪ್ಯಾಡನ್ನು ಸರಾಗವಾಗಿ ಬಳಸಬಹುದು.

ಅಕ್ಟೋಬರ್ 6ರಂದು ಗೂಗಲ್ ಪಿಕ್ಸೆಲ್ 7 ಅನಾವರಣ; ಏನಿದರ ವಿಶೇಷತೆ

ಇದರ ವಿಸ್ತಾರವಾದ ಸಮೀಕ್ಷೆಯನ್ನು ಕೆಲವು ದಿನಗಳ ಬಳಕೆಯಿಂದ ನಿರ್ಧರಿಸುವುದು ಸಾಧ್ಯವಿಲ್ಲ. ಯಾವುದೇ ಲ್ಯಾಪ್‌ಟಾಪ್‌ ತನ್ನ ಗುಣಾವಗುಣಗಳನ್ನು ಬಿಟ್ಟು ಕೊಡಲು ಐದಾರು ತಿಂಗಳಾದರೂ ಬೇಕು. ಆದರೆ ಏಸೂಸ್‌ನ ಬ್ರಾಂಡ್‌ವ್ಯಾಲ್ಯೂ ನಂಬಿ ಹೇಳುವುದಾದರೆ ಇದು ನಿಜಕ್ಕೂ ಗೇಮಿಂಗ್‌ಗೆ ವರ. ಇದರ ಬೆಲೆ (Price) ಒಂದು ಲಕ್ಷದ ಆಸುಪಾಸು. ಆನ್‌ಲೈನ್‌ ಬೆಲೆ ದಿನದಿನಕ್ಕೂ ಬದಲಾಗುವುದರಿಂದ ನೀವದನ್ನು ಆನ್‌ಲೈನಿನಲ್ಲೇ ನೋಡುವುದು ವಾಸಿ.

click me!