ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಕೇವಲ 7,599 ರೂ. ಸಿಗ್ತಿದೆ 79,900 ರೂ. ಮೌಲ್ಯದ ಆ್ಯಪಲ್ ಐಫೋನ್ 13

By Vinutha Perla  |  First Published Jan 31, 2024, 2:50 PM IST

ಐಪೋನ್‌ ತಗೊಳ್ಬೇಕು ಅಂತ ತುಂಬಾ ಮಂದಿ ಪ್ಲಾನ್ ಮಾಡ್ತಾರೆ. ಆದ್ರೆ ಸಿಕ್ಕಾಪಟ್ಟೆ ಕಾಸ್ಟ್ಲೀ ಅನ್ನೋ ಕಾರಣಕ್ಕೆ ಖರೀದಿಸೋದಕ್ಕೆ ಹೋಗೋದಿಲ್ಲ. ಆದ್ರೆ ಈ ಬಾರಿಯ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಐಫೋನ್ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.


ಆ್ಯಪಲ್ ಐಫೋನ್ 13 ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಆ್ಯಪಲ್ ಐಫೋನ್‌ ಮಾದರಿಗಳಲ್ಲಿ ಒಂದಾಗಿದೆ.ಆ್ಯಪಲ್ ಐಫೋನ್‌ 13 ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ. ಆ್ಯಪಲ್ ಐಫೋನ್‌ 13ನ್ನು 2021ರಲ್ಲಿ 79,900 ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಲಾಯಿತು. ಪ್ರಸ್ತುತ ಇದು ಆ್ಯಪಲ್ Storeನಲ್ಲಿ 59,900 ರೂ. ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಆ್ಯಪಲ್ ಐಫೋನ್ 13 ಅನ್ನು ಫ್ಲಿಪ್‌ಕಾರ್ಟ್‌ನಿಂದ ಕಡಿಮೆ ಬೆಲೆಗೆ ಅಂದರೆ ಕೇವಲ 7,599 ರೂಗಳಲ್ಲಿ ಖರೀದಿಸಬಹುದು.

ಆ್ಯಪಲ್ ಐಫೋನ್‌ 13ಗಿಂತ ಬಜೆಟ್‌ನಲ್ಲಿ ಪ್ರೀಮಿಯಂ ಆ್ಯಪಲ್ ಐಫೋನ್‌ನ್ನು ಖರೀದಿಸಲು ಯೋಜಿಸುತ್ತಿದ್ದರೆ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಭಾರಿ ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಪ್ರೀಮಿಯಂ ಪ್ರಮುಖ ಮಟ್ಟದ ಮೊಬೈಲ್ ಖರೀದಿಸಲು ಯೋಜಿಸುತ್ತಿದ್ದರೆ, Apple iPhone 13 ನಿಸ್ಸಂದೇಹವಾಗಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. 

Tap to resize

Latest Videos

undefined

ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಭರ್ಜರಿ ಆಫರ್, ಅತೀ ಕಡಿಮೆ ಬೆಲೆಗೆ ಸಿಗ್ತಿದೆ ಐಫೋನ್‌!

ಆ್ಯಪಲ್ ಐಫೋನ್‌ 13 ಈಗ ಆಪಲ್ ಅಧಿಕೃತ ಅಂಗಡಿಯಲ್ಲಿ ಲಭ್ಯವಿರುವ ಅಗ್ಗದ ಫ್ಲ್ಯಾಗ್‌ಶಿಪ್ ಆಗಿದೆ. ಆ್ಯಪಲ್ ಐಫೋನ್‌ 13 ಫ್ಲಿಪ್‌ಕಾರ್ಟ್‌ನಲ್ಲಿ 6,901 ರೂಪಾಯಿಗಳ ರಿಯಾಯಿತಿಯ ನಂತರ 52,999 ರೂಪಾಯಿಗಳಿಗೆ ಲಭ್ಯವಿದೆ. ಇದರ ಜೊತೆಗೆ, ಖರೀದಿದಾರರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 1000 ರೂ. ರಿಯಾಯಿತಿಯಿಂದ 51,999 ರೂ.ಗೆ ಪಡೆಯಬಹುದು. 

ಇದಲ್ಲದೇ, ಖರೀದಿದಾರರು ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ 44,400 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ಖರೀದಿದಾರರು ಆ್ಯಪಲ್ ಐಫೋನ್‌ 13 ಅನ್ನು ಫ್ಲಿಪ್‌ಕಾರ್ಟ್ ಮಾರಾಟದಿಂದ ಕೇವಲ 7,599 ರೂಗಳಲ್ಲಿ ಪಡೆಯಬಹುದು.

Flipkart Winter Sale: ಹಳೆಯ ಸ್ಮಾರ್ಟ್‌ಫೋನ್‌ ಕೊಡಿ ಸಾಕು, ಅತೀ ಕಡಿಮೆ ಬೆಲೆಗೆ ಸಿಗುತ್ತೆ ಐಫೋನ್‌

ಆ್ಯಪಲ್ ಐಫೋನ್‌ 13, 4K Dolby Vision HDR ರೆಕಾರ್ಡಿಂಗ್ ಜೊತೆಗೆ 12MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ನೈಟ್ ಮೋಡ್‌ನೊಂದಿಗೆ 12MP TrueDepth ಫ್ರಂಟ್ ಕ್ಯಾಮೆರಾವನ್ನು ಸಹ ಪಡೆಯುತ್ತದೆ. ಐಫೋನ್‌ 17 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

ಆ್ಯಪಲ್ ಐಫೋನ್‌ 13 ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಐಫೋನ್ ಮಾದರಿಗಳಲ್ಲಿ ಒಂದಾಗಿದೆ. 2022ರ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಆ್ಯಪಲ್ ಐಫೋನ್‌ 13 ಅತಿ ಹೆಚ್ಚು ಮಾರಾಟಗೊಂಡ ಮೊಬೈಲ್ ಎಂದು ಗುರುತಿಸಿಕೊಂಡಿದೆ. ಆ್ಯಪಲ್ ಐಫೋನ್‌ 15 ಸರಣಿಯ ಬಿಡುಗಡೆಯೊಂದಿಗೆ, ಆ್ಯಪಲ್ ಐಫೋನ್‌ 13ರ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಮತ್ತು ಇದು ಹಿಂದೆಂದಿಗಿಂತಲೂ ಅಗ್ಗವಾಗಿದೆ.

click me!